ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ram Charan: ಅವಳಿ ಮಕ್ಕಳ ನಿರೀಕ್ಷೆಯಲ್ಲಿ ರಾಮ್‍ ಚರಣ್-ಉಪಾಸನಾ; ವಿಡಿಯೊ ಮೂಲಕ ಗುಡ್‌ನ್ಯೂಸ್‌ ಹಂಚಿಕೊಂಡ ಗ್ಲೋಬಲ್‌ ಸ್ಟಾರ್‌

Ram Charan sharing video: ಟಾಲಿವುಡ್ ನಟ ರಾಮ್‍ ಚರಣ್ ಮತ್ತು ಅವರ ಪತ್ನಿ ಉಪಾಸನಾ ಕಾಮಿನೇನಿ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಖುಷಿಯ ಕ್ಷಣದ ವಿಡಿಯೊವನ್ನು ನಟ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಅಭಿಮಾನಿಗಳು ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ.

ಹೈದರಾಬಾದ್: ಟಾಲಿವುಡ್ ನಟ, ಗ್ಲೋಬಲ್‌ ಸ್ಟಾರ್‌ ರಾಮ್‍ ಚರಣ್ (Ram Charan) ಮತ್ತು ಅವರ ಪತ್ನಿ ಉಪಾಸನಾ ಕಾಮಿನೇನಿ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಖುಷಿಯ ಕ್ಷಣದ ವಿಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಹಂಚಿಕೊಳ್ಳಲಾಗಿದ್ದು, ಭಾರಿ ವೈರಲ್ (Viral Video) ಆಗಿದೆ. ಅತಿಥಿಗಳು ಉಡುಗೊರೆಗಳೊಂದಿಗೆ ಬಂದು ಪತ್ನಿ ಉಪಾಸನಾಗೆ ಆಶೀರ್ವಾದ ಮಾಡುತ್ತಿರುವ ಸಮಾರಂಭವನ್ನು ತೋರಿಸುವ ವಿಡಿಯೊವನ್ನು ರಾಮ್‍ಚರಣ್ ಹಂಚಿಕೊಂಡಿದ್ದಾರೆ.

ಈ ದೀಪಾವಳಿಯಂದು ದ್ವಿಗುಣಗೊಂಡ ಆಚರಣೆ, ಪ್ರೀತಿ ಮತ್ತು ಆಶೀರ್ವಾದ ಎಂದು ವಿಡಿಯೊಗೆ ಶೀರ್ಷಿಕೆ ನೀಡಲಾಗಿದೆ. ವಿಡಿಯೊವು ಹೊಸ ಆರಂಭ ಎಂಬ ಪದಗಳೊಂದಿಗೆ ಕೊನೆಗೊಳ್ಳುತ್ತದೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟ ಹಾಗೂ ಅವರ ಪತ್ನಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ. ಎಲ್ಲರೂ ಕೂಡ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ದಂಪತಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.

ವಿಡಿಯೊ ವೀಕ್ಷಿಸಿ:



ರಾಮ್‍ ಚರಣ್ ಮತ್ತು ಉಪಾಸನಾ 2023ರ ಜೂನ್ 20ರಂದು ಹೈದರಾಬಾದ್‌ನಲ್ಲಿ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದರು. ನಂತರ ಅವರು ತಮ್ಮ ಮಗಳ ನಾಮಕರಣ ಸಮಾರಂಭದ ಚಿತ್ರಗಳನ್ನು ಹಂಚಿಕೊಂಡಿದ್ದರು. ಆಕೆಗೆ ಕ್ಲಿನ್ ಕಾರ ಕೊನಿಡೇಲಾ ಎಂದು ಹೆಸರಿಡಲಾಗಿದೆ. ಈ ಹೆಸರನ್ನು ಲಲಿತಾ ಸಹಸ್ರನಾಮದಿಂದ ಆಯ್ಕೆ ಮಾಡಲಾಗಿದೆ. ಈ ಹೆಸರು ಆಧ್ಯಾತ್ಮಿಕ ಜಾಗೃತಿಯನ್ನು ತರುವ ಪರಿವರ್ತಕ, ಶುದ್ಧೀಕರಣ ಶಕ್ತಿಯನ್ನು ಸೂಚಿಸುತ್ತದೆ.

ಇದನ್ನೂ ಓದಿ: Viral Video: ಕ್ಯಾಬ್ ಚಾಲಕನ ಮೇಲೆ ಪೊಲೀಸಪ್ಪನ ದರ್ಪ! ನಡುರಸ್ತೆಯಲ್ಲೇ ಕಪಾಳಕ್ಕೆ ಬಾರಿಸಿ ಅಟ್ಟಹಾಸ

ಸಿನಿಮಾ ವಿಚಾರಕ್ಕೆ ಬಂದರೆ ಸದ್ಯ ರಾಮ್‍ ಚರಣ್ ಬಹು ನಿರೀಕ್ಷಿತ ʼಪೆದ್ದಿʼ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ವರ್ಷಾರಂಭದಲ್ಲಿ ತೆರೆಕಂಡ ರಾಮ್‍ ಚರಣ್ ನಟನೆಯ ʼಗೇಮ್ ಚೇಂಜರ್‌ʼ ಪ್ಯಾನ್‌ ಇಂಡಿಯಾ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಮಕಾಡೆ ಮಲಗಿದೆ. ಜನವರಿ 10ರಂದು ಬಿಡುಗಡೆಯಾದ ಚಿತ್ರದಲ್ಲಿ ಅವರು ದ್ವಿಪಾತ್ರಗಳನ್ನು ನಿರ್ವಹಿಸಿದ್ದರು. ಕಿಯಾರಾ ಅಡ್ವಾಣಿ, ಅಂಜಲಿ ಮತ್ತಿತರರು ನಟಿಸಿದ್ದರೂ ನಿರೀಕ್ಷಿತ ಮಟ್ಟ ತಲುಪುವಲ್ಲಿ ವಿಫಲವಾಗಿತ್ತು.

ಶಂಕರ್ ನಿರ್ದೇಶನದ ಈ ಚಿತ್ರವು ಆರಂಭಿಕ ದಿನದ ಭಾರಿ ಕಲೆಕ್ಷನ್‌ನ ಹೊರತಾಗಿಯೂ, ಇದು ಮಿಶ್ರ ವಿಮರ್ಶೆಗಳನ್ನು ಪಡೆಯಿತು. ಶಂಕರ್ ಅವರ ಎರಡನೇ ಪ್ರಮುಖ ಬಾಕ್ಸ್ ಆಫೀಸ್ ವೈಫಲ್ಯ ಎಂದು ಈ ಸಿನಿಮಾ ಗುರುತಿಸಲ್ಪಟ್ಟಿದೆ. ಹೀಗಾಗಿ ರಾಮ್‌ ಚರಣ್‌ ಅವರಿಗೆ ತುರ್ತಾಗಿ ಗೆಲುವೊಂದು ಬೇಕಾಗಿದೆ. ಹೀಗಾಗಿ ʼಪೆದ್ದಿʼ ಚಿತ್ರದ ಮೇಲೆ ನಿರೀಕ್ಷೆ ಗರಿಗೆದರಿದೆ.