ಹೈದರಾಬಾದ್: ನಟ ರಾಮ್ ಚರಣ್(Actor Ram Charan) ಅವರ ಮುಂಬರುವ ಚಿತ್ರ 'ದಿ ಇಂಡಿಯಾ ಹೌಸ್'(The India House) ಸೆಟ್‌ಗಳಲ್ಲಿ ಒಂದು ದೊಡ್ಡ ಅವಘಡವೊಂದು ಸಂಭವಿಸಿದೆ. ಸೆಟ್‌ನಲ್ಲಿದ್ದ ನೀರಿನ ಟ್ಯಾಂಕ್ ಒಂದು ಒಡೆದು ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಚಿತ್ರೀಕರಣದ ಸಮಯದಲ್ಲಿ ಈ ಘಟನೆ ನಡೆದಿದ್ದು, ಹಲವರಿಗೆ ಗಂಭೀರ ಗಾಯಗಳಾಗಿವೆ. ಏಕಾಏಕಿ ನೀರಿನ ಟ್ಯಾಂಕ್ ಬ್ಲಾಸ್ಟ್ ಆಗಿದೆ ಎನ್ನಲಾಗಿದ್ದು, ಇದಕ್ಕೆ ಕಾರಣ ಏನೆಂಬುದು ತಿಳಿದು ಬಂದಿಲ್ಲ. ಈ ಅಪಘಾತದಿಂದಾಗಿ ಸೆಟ್‌ಗಳಲ್ಲಿ ಪ್ರವಾಹದಂತಹ ಪರಿಸ್ಥಿತಿ ಉಂಟಾಗಿ ಉಪಕರಣಗಳಿಗೆ ಹಾನಿಯಾಗಿದೆ. ವರದಿಯ ಪ್ರಕಾರ, ಸಹಾಯಕ ಛಾಯಾಗ್ರಾಹಕ ಮತ್ತು ಇತರ ಹಲವಾರು ಸಿಬ್ಬಂದಿ ಸದಸ್ಯರು ಈ ಘಟನೆಯಲ್ಲಿ ಗಾಯಗೊಂಡಿದ್ದಾರೆ.
ಗಾಯಗೊಂಡ ಸಿಬ್ಬಂದಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅವರಿಗೆ ಪ್ರಸ್ತುತ ಚಿಕಿತ್ಸೆ ನೀಡಲಾಗುತ್ತಿದೆ. ಅವಘಡದ ಸಮಯದಲ್ಲಿ ರಾಮ್ ಚರಣ್ ಕೂಡ ಸೆಟ್‌ನಲ್ಲಿದ್ದಾರೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲವಾದರೂ, ಚಿತ್ರದ ಚಿತ್ರೀಕರಣವನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಇನ್ನು ಈ ದುರಂತದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಿಡಿಯೊದಲ್ಲಿ ಇಡಿ ಸೆಟ್‌ನಲ್ಲಿ ನೀರು ತುಂಬಿರುವುದನ್ನು ಕಾಣಬಹುದಾಗಿದೆ. ಅಲ್ಲದೇ ಸಿಬ್ಬಂದಿ ಕ್ಯಾಮೆರಾಗಳು ಮತ್ತು ಇತರ ಅಗತ್ಯ ಉಪಕರಣಗಳನ್ನು ಸುರಕ್ಷಿರ ಜಾಗಕ್ಕೆ ಸ್ಥಳಾಂತರಿಸಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದಾಗಿದೆ. ಅಲ್ಲದೇ ಇಡೀ ಸೆಟ್ ಸಂಪೂರ್ಣವಾಗಿ ಜಲಾವೃತವಾಗಿರುವುದು ವಿಡಿಯೊದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ.
ವೈರಲಾಗ್ತಿರುವ ವಿಡಿಯೊ ಇಲ್ಲಿದೆ
ಈ ಸುದ್ದಿಯನ್ನೂ ಓದಿ: Game Changer Movie: ರಾಮ್‌ಚರಣ್ ಅಭಿನಯದ ಗೇಮ್ ಚೇಂಜರ್ ಸಿನಿಮಾ ಯಾವಾಗ OTTಯಲ್ಲಿ ಬರುತ್ತೆ?
ಸಹಾಯಕ ಛಾಯಾಗ್ರಾಹಕ ಸೇರಿದಂತೆ ಗಾಯಗೊಂಡ ತಂತ್ರಜ್ಞರನ್ನು ತಕ್ಷಣ ಹೈದರಾಬಾದ್ನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ನಂತರ, ಚಿತ್ರೀಕರಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಮತ್ತು ಟ್ಯಾಂಕ್ ವೈಫಲ್ಯ ಹೇಗೆ ಸಂಭವಿಸಿತು ಮತ್ತು ಸುರಕ್ಷತಾ ಪ್ರೋಟೋಕಾಲ್ಗಳನ್ನು ಸಮರ್ಪಕವಾಗಿ ಅನುಸರಿಸಲಾಗಿದೆಯೇ ಎಂದು ನಿರ್ಧರಿಸಲು ಆಂತರಿಕ ತನಿಖೆ ನಡೆಯುತ್ತಿದೆ.
ರಾಮ್ ಚರಣ್ ಅವರ ದಿ ಇಂಡಿಯಾ ಹೌಸ್ ಅನ್ನು 2023 ರಲ್ಲಿ ಘೋಷಿಸಲಾಯಿತು. ನಟನೆ ಜೊತೆ ನಿರ್ಮಾಣಕ್ಕೆ ಮೊದಲ ಬಾರಿಗೆ ಎಂಟ್ರಿ ಕೊಟ್ಟಿರುವ ರಾಮ್ ಚರಣ್ ಅವರ ಈ ಚಿತ್ರದ ಟೀಸರ್ ಇತ್ತೀಚೆಗೆ ರಿಲೀಸ್ ಆಗಿತ್ತು. ಸ್ವಾತಂತ್ರ್ಯ ಫೂರ್ವದ ಯುಗವನ್ನು ಆಧಾರಿತ ಸಿನಿಮಾ ಇದು ಎನ್ನಲಾಗಿದೆ.