Game Changer Movie: ರಾಮ್‌ಚರಣ್ ಅಭಿನಯದ ಗೇಮ್ ಚೇಂಜರ್ ಸಿನಿಮಾ ಯಾವಾಗ OTTಯಲ್ಲಿ ಬರುತ್ತೆ?
ರಾಮ್ ಚರಣ್, ಕಿಯಾರಾ ಅಡ್ವಾಣಿ, ಎಸ್.ಜೆ. ಸೂರ್ಯ ಮುಂತಾದವರು ನಟಿಸಿದ ‘ಗೇಮ್ ಚೇಂಜರ್’ ಸಿನಿಮಾದ ಒಟಿಟಿ ರಿಲೀಸ್ ದಿನಾಂಕ ಹೊರಬಿದ್ದಿದ್ದು, ಬಾಕ್ಸ್ ಆಫೀಸ್‌ನಲ್ಲಿ ಸೋತ ಸಿನಿಮಾ ಈಗ ಒಟಿಟಿಗೆ ಬರುತ್ತಿದೆ. ಫೆ.7ರಿಂದ ತೆಲುಗು, ತಮಿಳು ಮತ್ತು ಕನ್ನಡದಲ್ಲಿ ಈ ಸಿನಿಮಾ ಪ್ರಸಾರ ಆಗಲಿದೆ.
ಬೆಂಗಳೂರು; ರಾಮ್ ಚರಣ್ ಮತ್ತು ಕಿಯಾರಾ ಅಡ್ವಾಣಿ ನಟಿಸಿರುವ ಬಹುನಿರೀಕ್ಷಿತ ರಾಜಕೀಯ ಆಕ್ಷನ್ ಚಿತ್ರ 'ಗೇಮ್ ಚೇಂಜರ್' ಜನವರಿ 10 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಶಂಕರ್ ನಿರ್ದೇಶನದ ಈ ಚಿತ್ರ ಅಭಿಮಾನಿಗಳಿಂದ ಹಾಗೂ ಸಿನಿ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆಯನ್ನು ಪಡೆದಿತ್ತು. ಚಿತ್ರದ ಕಥಾಹಂದರ, ಆಕ್ಷನ್ ದೃಶ್ಯಗಳು ಮತ್ತು ನಟರ ಅಭಿನಯವನ್ನು ಅಭಿಮಾನಿಗಳು ಶ್ಲಾಘಿಸಿದ್ದರು, ಕೆಲ ವರ್ಗದ ಜನರಿಗೆ ಈ ಸಿನೆಮಾ ರೀಚ್ ಆಗುವುದರಲ್ಲಿ ಸೋತಿತ್ತು. ಇದೀಗ ಚಿತ್ರಮಂದಿರಗಳಲ್ಲಿ ತಕ್ಕ ಮಟ್ಟಿಗೆ ಕಮಾಯಿ ಮಾಡಿದ ಈ ಚಿತ್ರ ಒಟಿಟಿ (OTT)ಗೆ ಬರಲು ಸಜ್ಜಾಗಿದ್ದು, ಫೆಬ್ರವರಿ 7 ರಂದು ಸ್ಟ್ರೀಮಿಂಗ್ ಶುರುವಾಗಲಿದೆ.
ಹೌದು ಜನವರಿ 10 ರಂದು ಬಿಡುಗಡೆಯಾದ ಈ ಸಿನೆಮಾ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ 51 ಕೋಟಿ ರೂ. ಕಲೆಕ್ಷನ್ ಮಾಡಿದ್ದು, 2ನೇ ದಿನದಿಂದಲೇ ಬಾಕ್ಸ್ ಆಫೀಸ್‌ನಲ್ಲಿ ಕುಸಿತ ಕಂಡಿತ್ತು. ಬಿಗ್ ಬಜೆಟ್ ಮತ್ತು ಹಬ್ಬದ ಸಂದರ್ಭ ಬಿಡುಗಡೆಯಾಗಿರುವುದರ ಹೊರತಾಗಿಯೂ, ಗೇಮ್ ಚೇಂಜರ್ ಆರಂಭದ ಆ ಸ್ಪೀಡ್ ಕಾಯ್ದುಕೊಳ್ಳಲು ಪರದಾಡಿತ್ತು. ವಾರಾಂತ್ಯ ಗಳಿಕೆಯಲ್ಲಿ ತೀವ್ರ ಇಳಿಕೆಯಾಗಿದ್ದು, ಸಿನಿಮಾ ತನ್ನ ಬಂಡವಾಳವನ್ನೂ ವಾಪಸ್ ಪಡೆಯೋದು ಕಷ್ಟ ಎನ್ನುವಂತ ಪರಿಸ್ಥಿತಿ ಎದುರಿಸಿತ್ತು.
ಈ ನಡುವೆಯೂ 'ಗೇಮ್ ಚೇಂಜರ್' ಚಿತ್ರದ ಓಟಿಟಿ ಹಾಗೂ ಸ್ಯಾಟಲೈಟ್ ರೈಟ್ಸ್ ಅನ್ನು ಅಮೇಜಾನ್ ಪ್ರೈಂ ಭಾರೀ ಮೊತ್ತಕ್ಕೆ ಖರೀದಿಸಿದ್ದು, 5 ಭಾಷೆಗಳ ಓಟಿಟಿ ರೈಟ್ಸ್ ಅನ್ನು ಸ್ವಂತ ಮಾಡಿಕೊಂಡಿದೆ. ಅಲ್ಲದೇ ಜೀ ಸಂಸ್ಥೆ ತೆಲುಗು, ತಮಿಳು, ತಮಿಳು, ಮಲಯಾಳಂ ಟಿವಿ ರೈಟ್ಸ್ ತೆಕ್ಕೆಗೆ ಸೇರಿದೆ.ಸ್ಟಾರ್ ಗೋಲ್ಡ್ ವಾಹಿನಿಯಲ್ಲಿ ಹಿಂದಿ ವರ್ಷನ್ ಪ್ರೀಮಿಯರ್ ಆಗಲಿದೆ.
ಈ ಸುದ್ದಿಯನ್ನು ಓದಿ; Chaser Movie: ಸುಮಂತ್ ಶೈಲೇಂದ್ರ ಅಭಿನಯದ ʼಚೇಸರ್ʼ ಚಿತ್ರದ ಟೀಸರ್ ಶೀಘ್ರದಲ್ಲೇ ರಿಲೀಸ್
ರಾಜಕೀಯ ಭ್ರಷ್ಟಾಚಾರದ ವಿರುದ್ಧ ಹೋರಾಡಿ, ಆಡಳಿತವನ್ನು ಬದಲಾಯಿಸುವ ಪ್ರಾಮಾಣಿಕ ಐಎಎಸ್( IAS ) ಅಧಿಕಾರಿಯ ಕಥೆಯೇ ಈ ಚಿತ್ರದ ಸ್ಟೋರಿ ಲೈನ್ ಆಗಿದ್ದು, ಈ ಸಿನೆಮಾದಲ್ಲಿ ರಾಮ್ ಚರಣ್ ಅವರು ಜಿಲ್ಲಾಧಿಕಾರಿ ಪಾತ್ರ ಮಾಡಿದ್ದಾರೆ. ಅವರಿಗೆ ಜೋಡಿಯಾಗಿ ಕಿಯಾರಾ ಅಡ್ವಾಣಿ ಅವರು ನಟಿಸಿದ್ದು, ಎಸ್.ಜೆ. ಸೂರ್ಯ, ಸುನಿಲ್, ಜಯರಾಮ್, ಶ್ರೀಕಾಂತ್, ಅಂಜಲಿ ಸೇರಿದಂತೆ ಹೆಸರಾಂತ ತಾರ ಬಳಗ ಈ ಸಿನಿಮಾದಲ್ಲಿದೆ. ಹಾಡುಗಳನ್ನು ಅದ್ದೂರಿಯಾಗಿ ಚಿತ್ರೀಕರಿಸಲಾಗಿದ್ದು, ಐಎಎಸ್ ಅಧಿಕಾರಿಯಾಗಿರುವ ರಾಮ್ ಚರಣ್, ಭ್ರಷ್ಟಾಚಾರದಿಂದ ತುಂಬಿರುವ ರಾಜಕೀಯ ವ್ಯವಸ್ಥೆಯನ್ನು ಹೇಗೆ ಬದಲಾಯಿಸುತ್ತಾರೆ ಎಂಬುದನ್ನು ಅನಿರೀಕ್ಷಿತ ತಿರುವುಗಳೊಂದಿಗೆ ಶಂಕರ್ ನಿರ್ದೇಶಿಸಿದ್ದಾರೆ. ದಿಲ್ ರಾಜು ನಿರ್ಮಿಸಿರುವ ಈ ಚಿತ್ರದಲ್ಲಿ SJ ಸೂರ್ಯ, ಶ್ರೀಕಾಂತ್, ಅಂಜಲಿ, ಸಮುದ್ರಖಣಿ, ಜಯರಾಮ್ ಮತ್ತು ಸುನಿಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಸೇರಿದಂತೆ ಪ್ಯಾನ್ ಇಂಡಿಯಾ ಚಿತ್ರವಾಗಿ ಈ ಚಿತ್ರ ಬಿಡುಗಡೆಯಾಗಿದೆ.
ಈ ಚಿತ್ರದ ಬಾಕ್ಸ್ ಆಫೀಸ್ ಲೆಕ್ಕದ ಬಗ್ಗೆ ತಪ್ಪು ಮಾಹಿತಿ ನೀಡಿದ್ದಕ್ಕಾಗಿ ನಿರ್ಮಾಪಕರನ್ನು ಟ್ರೋಲ್ ಮಾಡಲಾಗಿತ್ತು. ಆ ಬಗ್ಗೆ ರಾಮ್ ಗೋಪಾಲ್ ವರ್ಮಾ ಕೂಡ ಟೀಕೆ ಮಾಡಿದ್ದರು. ಇನ್ನು ರಾಮ್ ಚರಣ್ ತಮ್ಮ ಮುಂದಿನ ಯೋಜನೆಯಾದ RC16 ಚಿತ್ರದಲ್ಲಿ ನಿರ್ದೇಶಕ ಬುಚ್ಚಿ ಬಾಬು ಸನಾ ಅವರೊಂದಿಗೆ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಜಾಹ್ನವಿ ಕಪೂರ್ ಅವರ ಜೋಡಿಯಾಗಿ ನಟಿಸುತ್ತಿದ್ದಾರೆ. ಕಿಯಾರಾ ಅಡ್ವಾಣಿ, ಹೃತಿಕ್ ರೋಷನ್ ಮತ್ತು ಜೂನಿಯರ್ ಎನ್ ಟಿಆರ್ ಜೊತೆಗೆ 'ವಾರ್ 2' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಯಾನ್ ಮುಖರ್ಜಿ ನಿರ್ದೇಶಿಸಿರುವ ಈ ಚಿತ್ರವು ಆಗಸ್ಟ್ 2025 ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.