ನವದೆಹಲಿ: 2005ರಲ್ಲಿ ತೆರೆಕಂಡ ಬಾಲಿವುಡ್ ಸಿನಿಮಾ 'ನೋ ಎಂಟ್ರಿ' (No Entry Movie) ಬ್ಲಾಕ್ ಬ್ಲಸ್ಟರ್ ಎನಿಸಿಕೊಂಡಿತ್ತು. ಇದೀಗ ಅದರ ಮುಂದುವರಿದ ಭಾಗ ತೆರೆಗೆ ಬರಲು ಸಜ್ಜಾಗಿದೆ. ಅರ್ಜುನ್ ಕಪೂರ್, ವರುಣ್ ಧವನ್ ಜತೆಗೆ ದಿಲ್ಜಿತ್ ದೋಸಾಂಜ್ (Diljit Dosanjh) ʼನೋ ಎಂಟ್ರಿʼ ಸೀಕ್ವೆಲ್‌ನಲ್ಲಿ ಭರ್ಜರಿ ಕಿಕ್ ನೀಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇದೀಗ ನಿರ್ದೇಶಕ ಅನೀಸ್ ಬಾಜ್ಮಿ ಮತ್ತು ನಟ ದಿಲ್ಜಿತ್ ದೋಸಾಂತ್ ಅವರ ನಡುವೆ ವೈಮನಸ್ಸು ಉಂಟಾಗಿದೆ. ಹೀಗಾಗಿ ʼನೋ ಎಂಟ್ರಿ 2ʼ ಸಿನಿಮಾದಿಂದ ನಟ ದಿಲ್ಜಿತ್ ಹೊರಗುಳಿದಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಈ ಬಗ್ಗೆ ʼನೋ ಎಂಟ್ರಿ 2ʼ ಸಿನಿಮಾ ನಿರ್ಮಾಪಕ ಬೋನಿ ಕಪೂರ್ ಸ್ಪಷ್ಟನೆ ನೀಡಿದ್ದಾರೆ.
ಕಾಮಿಡ್ ಕಿಕ್ ನೀಡುವ ಬಾಲಿವುಡ್‌ನ ʼನೋ ಎಂಟ್ರಿ 2ʼ ಸಿನಿಮಾ ಇತ್ತೀಚಿನ ದಿನದಲ್ಲಿ ವಿವಿಧ ಕಾರಣದಿಂದಾಗಿ ಹೆಚ್ಚು ಸುದ್ದಿಯಲ್ಲಿದೆ. ನಿರ್ದೇಶಕ ಅನೀಸ್ ಬಾಜ್ಮಿ ಅವರ ಶೂಟಿಂಗ್ ದಿನಾಂಕಕ್ಕೆ ನಟ ದಿಲ್ಜಿತ್ ದೋಸಾಂಜ್ ಅವರ ಡೇಟ್ ಹೊಂದಿಕೆಯಾಗುತ್ತಿಲ್ಲ. ಹಾಗಾಗಿ ಅವರು ಈ ಸಿನಿಮಾದಿಂದ ಹೊರಗುಳಿಯುತ್ತಾರೆ ಎನ್ನಲಾಗಿತ್ತು. ಆದರೆ ಅಂತಹ ಯಾವುದೇ ಸಮಸ್ಯೆ ಇಲ್ಲ, ʼನೋ ಎಂಟ್ರಿʼ ಟೀಮ್‌ಗೆ ಕಲಾವಿದರ ಆಯ್ಕೆ ಆಗಿದ್ದು ಅವರೆಲ್ಲ ಇದ್ದೇ ಇರುತ್ತಾರೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಪನೆ ನೀಡಿದ್ದಾರೆ.
ಈ ಸಿನಿಮಾಕ್ಕೆ ಕಲಾವಿದರ ಬಳಿ ನಾನು ಸಂಪೂರ್ಣ ಮಾತನಾಡಿದ್ದ ಬಳಿಕವೇ ಚಿತ್ರೀಕರಣಕ್ಕೆ ಮುಂದಾಗಿದ್ದು. ನನಗೆ ಯಾವುದೇ ಕಲಾವಿದರ ನಡುವೆ ವೈಮನಸ್ಸು ಇಲ್ಲ. ಈ ಸಿನಿಮಾವನ್ನು ಮಾಡಲು ಬಹಳ ಖುಷಿಯಿಂದ ಒಪ್ಪಿದ್ದೇನೆ ಎಂದು ನಿರ್ದೇಶಕ ಅನೀಸ್ ಬಾಜ್ಮಿ ಸ್ಪಷ್ಟೀಕರಣ ನೀಡಿದ್ದಾರೆ. ಕಲಾವಿದರ ನಡುವೆ ಶೂಟಿಂಗ್ ಡೇಟ್ ಸಮಸ್ಯೆ ಬಂದಾಗಲೂ ನಿರ್ದೇಶಕ ಅನೀಸ್ ಬಾಜ್ಮಿ ಬಹಳ ತಾಳ್ಮೆಯಿಂದಲೇ ವರ್ತಿಸಿದ್ದಾರಂತೆ. ಇದನ್ನು ಸರಿಪಡಿಸಲು ನಾನು ಸಾಕಷ್ಟು ಪ್ರಯತ್ನಿಸಿದ್ದೆ. ನಿರ್ದೇಶಕರಿಗೆ ಕಲಾವಿದರ ಸಮಸ್ಯೆ ತಿಳಿದಿದ್ದ ಕಾರಣ ಹೊಂದಿಕೊಂಡು ಹೋಗುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಬೋನಿ ಕಪೂರ್ ತಿಳಿಸಿದ್ದಾರೆ.
ಇದನ್ನು ಓದಿ: The Devil Movie: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ʼದಿ ಡೆವಿಲ್ʼ ಚಿತ್ರದ ಹೊಸ ಪೋಸ್ಟರ್ ರಿಲೀಸ್
ಸದ್ಯ ನಟ ದಿಲ್ಜಿತ್ ದೋಸಾಂಜ್ ʼಬಾರ್ಡರ್ 3ʼ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇದರಿಂದ ʼನೋ ಎಂಟ್ರಿ 2ʼ ಸಿನಿಮಾಕ್ಕೆ ಸಮಸ್ಯೆಯಾಗಿದೆ ಎನ್ನಲಾಗಿದೆ. ಶೀಘ್ರವೇ ʼನೋ ಎಂಟ್ರಿ 2' ಸಿನಿಮಾ ಶೂಟಿಂಗ್ ಕೆಲಸ ಮುಗಿಸಿ ತೆರೆ ಮೇಲೆ ತರಲು ಚಿತ್ರತಂಡ ಸಾಕಷ್ಟು ಪ್ರಯತ್ನ ನಡೆಸುತ್ತಿದೆ. ʼಭೂಲ್ ಭುಲೈಯಾ 3ʼ, ವೆಲ್‌ಕಂʼನಂತಹ ಹಿಟ್ ಸಿನಿಮಾ ನೀಡಿದ್ದ ಅನೀಸ್ ಬಾಜ್ಮಿ ʼನೋ ಎಂಟ್ರಿ 2ʼ ಅನ್ನು ಕೂಡ ವಿಭಿನ್ನವಾಗಿ ತೆರೆ ಮೇಲೆ ತರಲಿದ್ದಾರೆ ಎಂಬ ನಿರೀಕ್ಷೆ ಅಭಿಮಾನಿಗಳದ್ದು.