ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Anant Joshi: ಯೋಗಿ ಆದಿತ್ಯನಾಥ್‌ ಪಾತ್ರದಲ್ಲಿ ಗಮನ ಸೆಳೆದ ಅನಂತ್‌ ಜೋಶಿ; ಯಾರಿವರು? ಏನಿವರ ಹಿನ್ನೆಲೆ?

Ajey: The Untold Story of a Yogi Movie: ಸದ್ಯ ಬಾಲಿವುಡ್‌ನಲ್ಲಿ ಗಮನ ಸೆಳೆದ ಚಿತ್ರಗಳಲ್ಲಿ ʼಅಜೇಯ್‌: ದಿ ಅನ್‌ಟೋಲ್ಡ್‌ ಸ್ಟೋರಿ ಆಫ್‌ ಎ ಯೋಗಿʼ ಕೂಡ ಪ್ರಮುಖವಾದುದು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಜೀವನಾಧಾರಿತ ಈ ಸಿನಿಮಾದಲ್ಲಿ ನಾಯಕನಾಗಿ ಅನಂತ್‌ ಜೋಶಿ ನಟಿಸುತ್ತಿದ್ದಾರೆ. ಅವರ ಹಿನ್ನೆಲೆ ಏನು? ಇಲ್ಲಿದೆ ವಿವರ.

ಯೋಗಿ ಆದಿತ್ಯನಾಥ್‌ ಪಾತ್ರದಲ್ಲಿ ಗಮನ ಸೆಳೆದ ಅನಂತ್‌ ಜೋಶಿ

Ramesh B Ramesh B Jul 22, 2025 5:32 PM

ಮುಂಬೈ: ಉತ್ತರ ಪ್ರದೇಶ ಮುಖ್ಯಮಂತ್ರಿ, ಹಿಂದೂ‌ ಫೈರ್‌ ಬ್ರ್ಯಾಂಡ್‌ ಯೋಗಿ ಆದಿತ್ಯನಾಥ್‌ (Yogi Adityanath) ರಾಷ್ಟ್ರ ರಾಜಕೀಯದಲ್ಲಿ ಗಮನ ಸೆಳೆದಿದ್ದಾರೆ. ಮುಖ್ಯಮಂತ್ರಿಯಾದ ಬಳಿಕ ಆಡಳಿತದಲ್ಲಿ ಸುಧಾರಣೆ ತರುವ ಮೂಲಕ ಉತ್ತರ ಪ್ರದೇಶದಲ್ಲಿ ಭಾರಿ ಬದಲಾವಣೆ ತಂದಿದ್ದಾರೆ. ಅವರು ಮುಖ್ಯಮಂತ್ರಿಯಾದ ಬಳಿಕ ರೌಡಿಗಳನ್ನು ಮಟ್ಟ ಹಾಕಲಾಗಿದ್ದು, ಅಪರಾಧಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಇದೀಗ ಅವರ ಜೀವನ ಚರಿತ್ರೆ ಸಿನಿಮಾ ಆಗಿ ತೆರೆ ಮೇಲೆ ಬರಲು ಸಜ್ಜಾಗಿದೆ. ಬಾಲಿವುಡ್‌ನಲ್ಲಿ ತಯಾರಾಗುತ್ತಿರುವ ಈ ಸಿನಿಮಾಕ್ಕೆ ʼಅಜೇಯ್‌: ದಿ ಅನ್‌ಟೋಲ್ಡ್‌ ಸ್ಟೋರಿ ಆಫ್‌ ಎ ಯೋಗಿʼ (Ajey: The Untold Story of a Yogi) ಎಂದು ಹೆಸರಿಡಲಾಗಿದೆ. ಆಗಸ್ಟ್‌ 1ರಂದು ಸಿನಿಮಾ ತೆರೆ ಕಾಣಲಿದ್ದು, ಇದೀಗ ಟೀಸರ್‌ ರಿಲೀಸ್‌ ಆಗಿದೆ. ಚಿತ್ರದಲ್ಲಿ ಯೋಗಿ ಆದಿತ್ಯನಾಥ್‌ ಪಾತ್ರದಲ್ಲಿ ಬಾಲಿವುಡ್‌ ನಟ ಅನಂತ್‌ ಜೋಶಿ (Anant Joshi) ನಟಿಸುತ್ತಿದ್ದು, ನೆಟ್ಟಿಗರ ಗಮನ ಸೆಳೆದಿದ್ದಾರೆ. ಹಾಗಾದರೆ ಯಾರು ಈ ಅನಂತ್‌ ಜೋಶಿ? ಏನಿವರ ಹಿನ್ನೆಲೆ? ಇಲ್ಲಿದೆ ವಿವರ.

ಟೀಸರ್‌ನಲ್ಲಿ 35 ವರ್ಷದ ಜೋಶಿ ಮೇಲ್ನೋಟಕ್ಕೆ ಯೋಗಿ ಆದಿತ್ಯನಾಥ್‌ ಅವರಂತೆಯೇ ಕಂಡುಬಂದಿದ್ದಾರೆ. ಉತ್ತರ ಪ್ರದೇಶದ ಆಗ್ರಾದಲ್ಲಿ ಜನಿಸಿದ ಜೋಶಿ ಈಗಾಗಲೇ ವೆಬ್‌ ಸೀರೀಸ್‌, ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿದ್ದಾರೆ. ʼಅಜೇಯ್‌: ದಿ ಅನ್‌ಟೋಲ್ಡ್‌ ಸ್ಟೋರಿ ಆಫ್‌ ಎ ಯೋಗಿʼ ಅವರ ವೃತ್ತಿ ಬದುಕಿಗೆ ತಿರುವು ನೀಡುವ ಸಾಧ್ಯತೆ ಇದೆ.

ʼಅಜೇಯ್‌: ದಿ ಅನ್‌ಟೋಲ್ಡ್‌ ಸ್ಟೋರಿ ಆಫ್‌ ಎ ಯೋಗಿʼ ಚಿತ್ರದ ಟೀಸರ್‌ ಇಲ್ಲಿದೆ:



ಈ ಸುದ್ದಿಯನ್ನೂ ಓದಿ: Ajey: The Untold Story of a Yogi: ಯೋಗಿ ಆದಿತ್ಯನಾಥ್‌ ಜೀವನಾಧಾರಿತ ಚಿತ್ರಕ್ಕೆ ನೋಟಿಸ್!

ಎಎಲ್‌ಟಿ ಬಾಲಾಜಿಯಲ್ಲಿ 2019–2020ಲ್ಲಿ ಪ್ರಸಾರವಾಗುತ್ತಿದ್ದ ʼವರ್ಜಿನ್‌ ಭಾಸ್ಕರ್‌ʼ ವೆಬ್‌ ಸೀರೀಸ್‌ ಮೂಲಕ ಜೋಶಿ ಜನಪ್ರಿಯರಾದರು. ಇದರಲ್ಲಿ ಅವರು ನಾಚಿಗೆ ಸ್ವಭಾವದ ಕಥೆಗಾರನ ಪತ್ರದಲ್ಲಿ ನಟಿಸಿದ್ದರು. ಇದರ ಜತೆಗೆ ʼಯೆ ಕಾಲಿ ಅಂಖೇನ್‌ʼ (2022), ʼಕಾದಲ್‌ʼ (2023), ʼಮಾಮ್ಲ ಲೀಗಲ್‌ ಹೆʼ (2024) ಮುಂತಾದ ವೆಬ್‌ ಸೀರೀಸ್‌ನಲ್ಲಿನ ಜೋಶಿ ಅಭಿನಯ ಪ್ರೇಕ್ಷಕರ ಗಮನ ಸೆಳೆದಿದೆ.

ಬ್ರೇಕ್‌ ನೀಡಿದ ಬಾಲಿವುಡ್‌ನ ʼ12th ಫೇಲ್‌ʼ

2023ರಲ್ಲಿ ತೆರೆಕಂಡ ʼ12th ಫೇಲ್‌ʼ ಚಿತ್ರ ಅನಂತ್‌ ಜೋಶಿ ಅವರಿಗೆ ಬಾಲಿವುಡ್‌ನಲ್ಲಿ ಬಹುದೊಡ್ಡ ಬ್ರೇಕ್‌ ನೀಡಿತು. ವಿಧು ವಿನೋದ್‌ ಚೋಪ್ರಾ ನಿರ್ದೇಶನದ ಈ ಸಿನಿಮಾದಲ್ಲಿ ಜೋಶಿ ಪ್ರೀತಂ ಪಾಂಡೆ ಪಾತ್ರದಲ್ಲಿ ನಟಿಸಿದ್ದರು. ಇದರಲ್ಲಿನ ಅವರ ಅಭಿನಯ ಪ್ರೇಕ್ಷಕರ ಜತೆಗೆ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದೆ. ವಿಕ್ರಾಂತ್‌ ಮಾಸ್ಸೆ ನಾಯಕನಾಗಿ ನಟಿಸಿದ ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ 70 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್‌ ಮಾಡಿದೆ.

ಶಂತನು ಗುಪ್ತಾ ಬರೆದ ʼದಿ ಮಾಂಕ್‌ ಹೂ ಬಿಕೇಮ್‌ ಚೀಫ್‌ ಮಿನಿಸ್ಟರ್‌ʼ ಕೃತಿ ಆಧಾರದಲ್ಲಿ ರವೀಂದ್ರ ಗೌತಮ್‌ ʼಅಜೇಯ್‌: ದಿ ಅನ್‌ಟೋಲ್ಡ್‌ ಸ್ಟೋರಿ ಆಫ್‌ ಎ ಯೋಗಿʼ ಚಿತ್ರವನ್ನು ನಿರ್ದೇಶಿಸಿದ್ದಾರೆ. ಅನಂತ್‌ ಜೋಶಿ ಜತೆಗೆ ಪರೇಶ್‌ ರಾವೆಲ್‌, ದಿನೇಶ್‌ ಲಾಲ್‌ ಯಾದವ್‌ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಆಧ್ಯಾತ್ಮಿಕ ನಾಯಕರಾಗಿದ್ದ ಯೋಗಿ ಆದಿತ್ಯನಾಥ್‌ ಮುಖ್ಯಮಂತ್ರಿ ಹುದ್ದೆಗೇರಿದವರೆಗಿನ ಪಯಣವನ್ನು ಈ ಚಿತ್ರದಲ್ಲಿ ವಿವರಿಸಲಾಗಿದೆ.