ಮುಂಬೈ: ದೀಪಾವಳಿ ಸಂಭ್ರಮಕ್ಕೆ ಇನ್ನೇನು ಕೆಲವೇ ದಿನ ಬಾಕಿ ಉಳಿದಿದ್ದು ಈಗಾಗಲೇ ಹಬ್ಬದ ಸಿದ್ಧತೆ ನಡೆಯುತ್ತಿದೆ. ಇನ್ನು ಕೆಲವೆಡೆ ಹಬ್ಬಕ್ಕೆ ಮುನ್ನವೇ ಪಾರ್ಟಿ ಜೋರಾಗಿ ನಡೆಯುತ್ತಿವೆ. ಅಂತೆಯೇ ಮುಂಬೈಯಲ್ಲಿ ನಿರ್ಮಾಪಕ ರಮೇಶ್ ತೌರಾನಿ (Ramesh Taurani) ಅವರ ಮನೆಯಲ್ಲಿ ದೀಪಾವಳಿಗೂ ಮುನ್ನವೇ ಪಾರ್ಟಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಜಹೀರ್ ಇಕ್ಬಾಲ್ (Zaheer Iqbal) ಮತ್ತು ಸೋನಾಕ್ಷಿ ಸಿನ್ಹಾ (Sonakshi Sinha) ದಂಪತಿ ಭಾಗಿಯಾಗಿದ್ದಾರೆ. ಸೋನಾಕ್ಷಿ ಗರ್ಭಿಣಿಯಾಗಿದ್ದಾರೆ ಎಂಬರ್ಥದಲ್ಲಿ ಅವರ ಪತಿ ತಮ್ಮ ಪತ್ನಿಯ ಹೊಟ್ಟೆಯ ಮೇಲೆ ಕೈ ಇಟ್ಟು ಫೋಟೊಗೆ ಪೋಸ್ ನೀಡಿದ್ದಾರೆ. ಇದನ್ನು ಕಂಡ ನೆಟ್ಟಿಗರು ಆಶ್ಚರ್ಯಗೊಂಡಿದ್ದು ಸೋನಾಕ್ಷಿ ಈಗ ಗರ್ಭಿಣಿಯೇ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ರಮೇಶ್ ತೌರಾನಿ ಅವರ ಮನೆಯಲ್ಲಿ ನಡೆದ ಔತಣಕೂಟದಲ್ಲಿ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಪಾಲ್ಗೊಂಡ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಸೋನಾಕ್ಷಿ ಗರ್ಭಿಣಿಯಾಗಿದ್ದಾರೆ ಎಂಬರ್ಥದಲ್ಲಿ ಅವರ ಪತಿ ತಮ್ಮ ಪತ್ನಿಯ ಹೊಟ್ಟೆಯ ಮೇಲೆ ಕೈ ಇಟ್ಟು ಫೋಟೊಗೆ ಪೋಸ್ ನೀಡಿದ್ದಾರೆ. ಅದನ್ನು ಕಂಡ ಸೋನಾಕ್ಷಿ ಕೂಡ ನಾಚಿಕೆಯಿಂದ ತಮಾಷೆ ಮಾಡಿ ನಕ್ಕಿದ್ದಾರೆ. ಈ ವದಂತಿಗೆ ಜಹೀರ್ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ನಟಿ ಸೋನಾಕ್ಷಿ ಕೂಡ ಇದೆಲ್ಲ ತಮಾಷೆಗಾಗಿ ಮಾಡಿದ್ದು ಅಷ್ಟೇ (ಮಜಕ್ ಕರ್ ರಹೇ ಹೈ) ಎಂದು ಅವರು ಹೇಳಿದ್ದಾರೆ.
ನಟಿ ಸೋನಾಕ್ಷಿ ವಿಡಿಯೊ ಇಲ್ಲಿದೆ:
ಅಕ್ಟೋಬರ್ 14ರಂದು ಮುಂಬೈಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸೋನಾಕ್ಷಿ ಗೋಲ್ಡ್ ಬಣ್ಣದ ಸಾಂಪ್ರದಾಯಿಕ ಉಡುಗೆಯಲ್ಲಿ ತುಂಬಾ ಆಕರ್ಷಕವಾಗಿ ಕಂಡಿದ್ದಾರೆ. ಜಹೀರ್ ಕೂಡ ಬ್ಲ್ಯಾಕ್ ಬಣ್ಣದ ಶೇರ್ವಾನಿಯಲ್ಲಿ ಮಿಂಚಿದ್ದಾರೆ. ಆದರೂ ಕೂಡ ಸೋನಾಕ್ಷಿ ಗರ್ಭಿಣಿ ಇರಬೇಕು ಎಂದು ನೆಟ್ಟಿಗರು ಅನುಮಾನಗೊಂಡಿದ್ದು ಮಿನಿ ಪ್ರಿನ್ಸೆಸ್ ಶೀಘ್ರವೇ ಬರಬಹುದು ಎಂದು ಶುಭ ಹಾರೈಸುತ್ತಿದ್ದಾರೆ.
ಇದನ್ನು ಓದಿ:Koragajja Movie: 'ಕಾಂತಾರ ಚಾಪ್ಟರ್ 1' ಚಿತ್ರದ ಬಳಿಕ 'ಕೊರಗಜ್ಜ' ಸಿನಿಮಾ ಆರು ಭಾಷೆಗಳಲ್ಲಿ ಬಿಡುಗಡೆ!
ಈ ಹಿಂದೆ ಜುಲೈಯಲ್ಲಿ ಇವರಿಬ್ಬರು ಒಟ್ಟಿಗೆ ಕಾಣಿಸಿಕೊಂಡಾಗ ಸೋನಾಕ್ಷಿ ಪ್ರಗ್ನೆಂಟ್ ಇರಬೇಕು ಎಂಬ ವದಂತಿ ಹರಿದಾಡಿತ್ತು. ಆಗ ಅವರು ಯಾವಾಗಲೂ ನನ್ನನ್ನು ಕಂಡು 'ಗರ್ಭಿಣಿ' ಎಂದು ಏಕೆ ಭಾವಿಸುತ್ತಾರೆ ಎಂಬ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಹಾಗೆಂದ ಮಾತ್ರಕ್ಕೆ ನಮ್ಮ ನಡುವೆ ಭಿನ್ನಾಭಿಪ್ರಾಯ ಬಂದಿದೆ ಎಂದಲ್ಲ ನಾನು ಜಹೀರ್ ಜತೆ ಚೆನ್ನಾಗಿದ್ದೇವೆ ಎಂದು ಬರೆದುಕೊಂಡಿದ್ದು ಅವರಿಬ್ಬರ ವಾಟ್ಸ್‌ಆ್ಯಪ್ ಸ್ಕ್ರೀನ್ ಶಾಟ್ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ನಟಿ ಸೋನಾಕ್ಷಿ ಹಂಚಿಕೊಂಡಿದ್ದರು. ನಾನು ಗರ್ಭಿಣಿ ಎಂದು ಎಲ್ಲರೂ ಭಾವಿಸುದನ್ನು ನಿಲ್ಲಿಸುವಂತೆ ಕೂಡ ಬರೆದುಕೊಂಡು ತಮ್ಮ ಪತಿ ಜಹೀರ್ ಅವರನ್ನು ಟ್ಯಾಗ್ ಮಾಡಿ ಪೋಸ್ಟ್ ಹಂಚಿಕೊಂಡಿದ್ದರು.
2024ರ ಜೂನ್ 23ರಂದು ಮುಂಬೈಯ ಬಾಂದ್ರಾದಲ್ಲಿ ನಟಿ ಸೋನಾಕ್ಷಿ ಮತ್ತು ಜಹೀರ್ ತಮ್ಮ ಕುಟುಂಬ ಮತ್ತು ಆಪ್ತ ಸಮ್ಮುಖದಲ್ಲಿ ಬಹಳ ಸರಳವಾಗಿ ವಿವಾಹವಾದರು. ಅನಂತರ ಹಲವು ಬಾಲಿವುಡ್ ಸೆಲೆಬ್ರಿಟಿಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ವಿವಾಹ ಆರತಕ್ಷತೆ ಕೂಡ ನೆರವೇರಿತ್ತು. ಅಂದಿನಿಂದ ಇಂದಿನವರೆಗೂ ಈ ದಂಪತಿ ತಮ್ಮಿಬ್ಬರ ಫೋಟೊ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಲೇ ಇದ್ದಾರೆ.