Brij Bhushan Singh: 10 ಸಾವಿರ ಬೆಂಬಲಿಗರು, 100 ಕಾರುಗಳು... ಕೇಸ್ ಖುಲಾಸೆ ಬೆನ್ನಲ್ಲೇ ಭರ್ಜರಿ ರೋಡ್ ಶೋ ನಡೆಸಿದ ಬ್ರಿಜ್ ಭೂಷಣ್!
ಭಾರತೀಯ ಕುಸ್ತಿಪಟು ನಿಗಮದ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Singh) ಅವರಿಗೆ ದೆಹಲಿ ನ್ಯಾಯಾಲಯದಿಂದ (Delhi Court) ಖುಲಾಸೆಗೊಂಡಿದ್ದಾರೆ. ನವದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯವು ಬ್ರಿಜ್ ಭೂಷಣ್ ಸಿಂಗ್ ವಿರುದ್ಧದ ಪೋಕ್ಸೋ ಪ್ರಕರಣದಲ್ಲಿ ದೆಹಲಿ ಪೊಲೀಸರ ಅಂತಿಮ ವರದಿಯನ್ನು ಸ್ವೀಕರಿಸಿ ಪ್ರಕರಣವನ್ನು ಖುಲಾಸೆಗೊಳಿಸಿದೆ.


ನವದೆಹಲಿ: ಭಾರತೀಯ ಕುಸ್ತಿಪಟು ನಿಗಮದ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Singh) ಅವರಿಗೆ ದೆಹಲಿ ನ್ಯಾಯಾಲಯದಿಂದ (Delhi Court) ಖುಲಾಸೆಗೊಂಡಿದ್ದಾರೆ. ನವದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯವು ಬ್ರಿಜ್ ಭೂಷಣ್ ಸಿಂಗ್ ವಿರುದ್ಧದ ಪೋಕ್ಸೋ ಪ್ರಕರಣದಲ್ಲಿ ದೆಹಲಿ ಪೊಲೀಸರ ಅಂತಿಮ ವರದಿಯನ್ನು ಸ್ವೀಕರಿಸಿ ಪ್ರಕರಣವನ್ನು ಖುಲಾಸೆಗೊಳಿಸಿದೆ. ಇತ್ತ ಸಿಂಗ್ ಮೇಲಿದ್ದ ಪ್ರಕರಣ ಖುಲಾಸೆಗೊಂಢ ಕೂಡಲೇ ಅವರ ಅಭಿಮಾನಿಗಳು ಸಂತಸವನ್ನು ವ್ಯಕ್ತಪಡಿಸಿದರು. ಮಂಗಳವಾರ ಆಯೋಧ್ಯಾ ವಿಮಾನ ನಿಲ್ದಾಣದಲ್ಲಿ ಸಾವಿರಾರು ಬೆಂಬಲಿಗರು ಮತ್ತು ಅಭಿಮಾನಿಗಳು ಭರ್ಜರಿಯಾಗಿ ರೋಡ್ ಶೋ ಮಾಡಿ ಸ್ವಾಗತಿಸುವ ಮೂಲಕ ಸಿಂಗ್ ಅವರನ್ನು ಬರಮಾಡಿಕೊಂಡರು.
ನಂತರ ಆಯೋಧ್ಯೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಂಗ್ ನಾನು ಹನುಮಾನ್ ದೇವರ ಮೇಲೆ ನಂಬಿಕೆ ಇಟ್ಟಿದ್ದೆ. ಜನವರಿ 18, 2023 ರಂದು ನನ್ನ ವಿರುದ್ಧ ಆರೋಪಗಳು ಬಂದಾಗಲೇ ನಾನು ಅದು ಸುಳ್ಳು ಎಂದು ಹೇಳಿದ್ದೆ. ಸುರಕ್ಷತೆಗೆ ನೀಡಲಾದ ಕಾನೂನನ್ನ ದುರುಪಯೋಗ ಮಾಡಿಕೊಳ್ಳಲಾಗುತ್ತದೆ. ಇದನ್ನು ಕಡಿಮೆ ಮಾಡಬೇಕು. ನಾನು ತಪ್ಪಿತಸ್ಥ ಎಂದು ಸಾಬೀತಾದರೆ ನಾನು ನನ್ನನ್ನು ನೇಣಿಗೆ ಹಾಕಿಕೊಳ್ಳುತ್ತೇನೆ ಎಂದು ಹೇಳಿದ್ದೆ. ಆದರೆ ನಾನು ತಪ್ಪಿತಸ್ಥ ಅಲ್ಲ ನ್ಯಾಯಾಂಗ ವ್ಯವಸ್ಥೆಗೆ ನಾನು ಚಿರಋಣಿ ಎಂದಿದ್ದಾರೆ.
ಕಾನೂನಿನ ದುರುಪಯೋಗವನ್ನು ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರ್ಕಾರವನ್ನು ಒತ್ತಾಯಿದ ಸಿಂಗ್ "ನಾನು ಕಾನೂನನ್ನು ವಿರೋಧ ಮಾಡುವುದಿಲ್ಲ ಆದರೆ ಜೀವನವನ್ನು ಹಾಳುಮಾಡಲು ಮತ್ತು ವೈಯಕ್ತಿಕ ದ್ವೇಷಗಳನ್ನು ತೀರಿಸಿಕೊಳ್ಳಲು ಅವುಗಳನ್ನು ಬಳಸುವ ಪ್ರವೃತ್ತಿ ಹೆಚ್ಚುತ್ತಿದೆ ನಾನು ಕಾನೂನನ್ನು ರದ್ದುಗೊಳಿಸುವ ಬಗ್ಗೆ ಮಾತಾನಾಡುತ್ತಿಲ್ಲ, ಆದರೆ ಅದರ ಬಳಕೆ ಹೇಗೆ ಆಗುತ್ತಿದೆ ಎನ್ನುವಂತಹ ಪರಿಶೀಲನೆಯ ಅಗತ್ಯ ಇದೆ " ಎಂದು ಹೇಳಿದರು. ಲೈಂಗಿಕ ಕಿರುಕುಳ ಕಾನೂನುಗಳ ದುರುಪಯೋಗವನ್ನು ನಿಲ್ಲಿಸಲು ಸರ್ಕಾರ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Physical Abuse: ಅಣ್ಣಾ ವಿಶ್ವವಿದ್ಯಾಲಯದ ಲೈಂಗಿಕ ದೌರ್ಜನ್ಯ ಪ್ರಕರಣ; ಆರೋಪಿಯನ್ನು ಅಪರಾಧಿ ಎಂದು ಘೋಷಿಸಿದ ಕೋರ್ಟ್
ಕೆಲ ವರ್ಷಗಳ ಹಿಂದೆ ಮಹಿಳಾ ಕುಸ್ತಿಪಟುಗಳು ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಶೋಷಣೆ ಆರೋಪ ಮಾಡಿದ್ದರು. ಇದಾದ ನಂತರ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್, ವಿನೇಶ್ ಫೋಗಟ್, ಬಜರಂಗ್ ಪೂನಿಯಾ ಮತ್ತು ಇತರರು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಜಂತರ್ ಮಂತರ್‌ನಲ್ಲಿ ದೀರ್ಘಕಾಲ ಪ್ರತಿಭಟನೆ ನಡೆಸಿದ್ದರು. ಆದಾಗ್ಯೂ, ಬ್ರಿಜ್ ಭೂಷಣ್ ಶರಣ್ ಸಿಂಗ್ ಆರಂಭದಿಂದಲೂ ತಮ್ಮ ವಿರುದ್ಧದ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದರು. "ಆರೋಪಗಳು ನಿಜವೆಂದು ಸಾಬೀತಾದರೆ, ನನ್ನನ್ನು ಗಲ್ಲಿಗೇರಿಸಬೇಕೆಂದು" ಸಹ ಅವರು ಒಮ್ಮೆ ಹೇಳಿದ್ದರು.