ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಚಲಿಸುತ್ತಿದ್ದ ಬೈಕ್ ಮೇಲೆ ಜಿಗಿದ ಚಿರತೆ; ಡ್ಯಾಶ್‍ಕ್ಯಾಮ್‍ನಲ್ಲಿ ಸೆರೆಯಾಯ್ತು ಭೀಕರ ದೃಶ್ಯ!

Leopard jumps onto moving bike: ವೇಗವಾಗಿ ಸಾಗುತ್ತಿದ್ದ ಬೈಕ್‍ಗೆ ಚಿರತೆ ಡಿಕ್ಕಿ ಹೊಡೆದಿರುವ ಘಟನೆ ಶುಕ್ರವಾರ ಸಂಜೆ 7 ಗಂಟೆಯ ಸುಮಾರಿಗೆ ಆಂಧ್ರಪ್ರದೇಶದ ಅಲಿಪಿರಿಯ ಜೂ ಪಾರ್ಕ್ ರಸ್ತೆಯಲ್ಲಿ ಸಂಭವಿಸಿದೆ. ಅದೃಷ್ಟವಶಾತ್ ಬೈಕ್ ಸವಾರ ಅಪಾಯದಿಂದ ಪಾರಾಗಿದ್ದರೂ, ಈ ಘಟನೆ ತಿರುಮಲ ಭಕ್ತರಲ್ಲಿ ಕಳವಳವನ್ನುಂಟುಮಾಡಿದೆ.

ಚಲಿಸುತ್ತಿದ್ದ ಬೈಕ್ ಮೇಲೆ ಜಿಗಿದ ಚಿರತೆ; ಇಲ್ಲಿದೆ ವಿಡಿಯೊ

Priyanka P Priyanka P Jul 27, 2025 4:58 PM

ತಿರುಪತಿ: ಆಂಧ್ರಪ್ರದೇಶದ ತಿರುಪತಿ ಹಾಗೂ ಅದರ ಸುತ್ತಮುತ್ತ ಇತ್ತೀಚೆಗೆ ಚಿರತೆ ಕಾಣಿಸಿಕೊಳ್ಳುತ್ತಿರುವ ಘಟನೆಗಳು, ಸ್ಥಳೀಯ ನಿವಾಸಿಗಳು ಮತ್ತು ಭಕ್ತರಲ್ಲಿ ಆತಂಕವನ್ನು ಹೆಚ್ಚಿಸಿವೆ. ಇದೀಗ ವೇಗವಾಗಿ ಸಾಗುತ್ತಿದ್ದ ಬೈಕ್‍ಗೆ ಚಿರತೆ ಡಿಕ್ಕಿ ಹೊಡೆದಿರುವ ಘಟನೆ ಶುಕ್ರವಾರ ಸಂಜೆ 7 ಗಂಟೆಯ ಸುಮಾರಿಗೆ ಅಲಿಪಿರಿಯ ಜೂ ಪಾರ್ಕ್ ರಸ್ತೆಯಲ್ಲಿ ಸಂಭವಿಸಿದೆ. ಈ ಘಟನೆ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral Video) ಆಗಿದೆ.

ವೇಗವಾಗಿ ಸಾಗುತ್ತಿದ್ದ ಬೈಕ್‌ ಸವಾರನತ್ತ ಏಕಾಏಕಿ ಚಿರತೆಯೊಂದು ಜಿಗಿದಿದೆ. ಅದೃಷ್ಟವಶಾತ್ ಬೈಕ್ ಸವಾರ ಅಪಾಯದಿಂದ ಪಾರಾಗಿದ್ದರೂ, ಈ ಘಟನೆ ಭಕ್ತರಲ್ಲಿ ಕಳವಳವನ್ನುಂಟುಮಾಡಿದೆ. ತಿರುಮಲ ಹತ್ತುವ ಮಾರ್ಗವಾದ ಈ ಪ್ರದೇಶದ ಸುರಕ್ಷತೆಯ ಬಗ್ಗೆ ಇದೀಗ ಗಂಭೀರ ಪ್ರಶ್ನೆಗಳು ಎದ್ದಿವೆ. ಇದೇ ವೇಳೆ, ಪ್ರಮುಖ ಶಿಕ್ಷಣ ಸಂಸ್ಥೆಗಳ ಬಳಿ ಹಾಗೂ ಸಮೀಪದ ಕಾಡು ಪ್ರದೇಶಗಳಲ್ಲಿ ಚಿರತೆಗಳ ಚಲವಲನ ಕಂಡುಬಂದಿರುವುದು ಸಿಸಿಟಿವಿ ಮೂಲಕ ದೃಢಪಡಲಾಗಿದೆ. ಇದರಿಂದ ಆತಂಕ ಮತ್ತಷ್ಟು ಹೆಚ್ಚಾಗಿದೆ.

ಆಂಧ್ರಪ್ರದೇಶದ ತಿರುಪತಿ ಮತ್ತು ಸುತ್ತಮುತ್ತ ಇತ್ತೀಚೆಗೆ ಚಿರತೆ ಕಾಣಿಸಿಕೊಂಡಿರುವುದು ನಿವಾಸಿಗಳು ಮತ್ತು ಭಕ್ತರಲ್ಲಿ ಕಳವಳವನ್ನು ಹೆಚ್ಚಿಸಿದೆ. ಬೈಕ್ ಸವಾರನ ಮೇಲೆ ದಾಳಿ ಮತ್ತು ಪ್ರಮುಖ ಶಿಕ್ಷಣ ಸಂಸ್ಥೆಗಳ ಬಳಿ ಚಿರತೆ ಪತ್ತೆಯಾದ ನಂತರ, ಅಲಿಪಿರಿಯ ಮೃಗಾಲಯ ಪಾರ್ಕ್ ರಸ್ತೆಯಲ್ಲಿ ಈ ಘಟನೆ ನಡೆದಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಈ ಭಯಾನಕ ಘಟನೆಯನ್ನು ಹಿಂದೆ ಬರುತ್ತಿದ್ದ ಕಾರಿನ ಡ್ಯಾಶ್‌ಕ್ಯಾಮ್ ಸೆರೆಹಿಡಿದಿದ್ದು, ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ವಿಡಿಯೊ ವೀಕ್ಷಿಸಿ:





ವೇಗವಾಗಿ ಸಾಗುತ್ತಿದ್ದ ಬೈಕ್‍ನತ್ತ ಚಿರತೆ ಜಿಗಿದಿದೆ. ಬೈಕ್ ಸವಾರ ಮುಂದೆ ಸಾಗಿದ್ದಾನೆ. ಚಿರತೆ ಕೂಡ ಎದ್ದು ಹಿಂದಕ್ಕೆ ಓಡುವುದನ್ನು ವಿಡಿಯೊದಲ್ಲಿ ನೋಡಬಹುದು. ಈ ಘಟನೆಯ ವೈರಲ್ ವಿಡಿಯೊದ ಕುರಿತು ಅಧಿಕಾರಿಗಳು ಯಾವುದೇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲವಾದರೂ, ಪರಿಸ್ಥಿತಿಯನ್ನು ನಿರ್ವಹಿಸಲು ಹಾಗೂ ಮಾನವರು ಮತ್ತು ಚಿರತೆಗಳ ನಡುವಿನ ಮುಂದಿನ ಮುಖಾಮುಖಿಗಳನ್ನು ತಡೆಯಲು ಅರಣ್ಯ ಇಲಾಖೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ.

ಈ ಸುದ್ದಿಯನ್ನೂ ಓದಿ: International Yoga Day:‌ ಸಿಕ್ಕಾಪಟ್ಟೆ ವೈರಲ್‌ ಆಯ್ತು ಶ್ವಾನದ ಈ ಯೋಗಾಸನ; ವಿಡಿಯೊ ವೈರಲ್!

ಇನ್ನು ಅದೇ ರಾತ್ರಿ, ಮಧ್ಯರಾತ್ರಿಯ ಸುಮಾರಿಗೆ, ಕಣ್ಣಿನ ಆಸ್ಪತ್ರೆಯೊಂದರ ಬಳಿ ಸ್ಥಳೀಯರು ಮತ್ತೆ ಚಿರತೆಯನ್ನು ನೋಡಿದ್ದಾರೆ. ಇದು ನಿವಾಸಿಗಳ ಭಯವನ್ನು ಮತ್ತಷ್ಟು ಹೆಚ್ಚಿಸಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಈ ಪ್ರದೇಶದಲ್ಲಿ ಕನಿಷ್ಠ ಮೂರು ಚಿರತೆಗಳು ಇರುವಿಕೆಯ ಬಗ್ಗೆ ಗುರುತಿಸಿದ್ದಾರೆ. ಅವುಗಳ ಚಲನವಲನಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಸೆರೆಹಿಡಿಯಲು ಅನುಕೂಲವಾಗುವಂತೆ, ಮೂರು ವಿಭಿನ್ನ ಸ್ಥಳಗಳಲ್ಲಿ 14 ಟ್ರ್ಯಾಪ್ ಕ್ಯಾಮರಾಗಳು ಮತ್ತು ಬೆಟ್ ಸ್ಟೇಷನ್‌ಗಳನ್ನು ಕಾರ್ಯತಂತ್ರವಾಗಿ ಇರಿಸಲಾಗಿದೆ.

ಹಾಗೆಯೇ, ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯ (ಎಸ್‌ವಿಯು) ಮತ್ತು ಶ್ರೀ ವೆಂಕಟೇಶ್ವರ ವೇದ ವಿಶ್ವವಿದ್ಯಾಲಯದ ಸುತ್ತಮುತ್ತಲಿನ ದಟ್ಟವಾದ ಮುಳ್ಳು ಪೊದೆಗಳನ್ನು ತೆರವುಗೊಳಿಸಲು ಅಧಿಕಾರಿಗಳು ಶಿಫಾರಸು ಮಾಡಿದ್ದಾರೆ. ಈ ಕ್ರಮವು ಚಿರತೆಗಳ ಅಡಗಿಕೊಳ್ಳುವ ಸ್ಥಳಗಳನ್ನು ಕಡಿಮೆ ಮಾಡಬಹುದು.