ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ashoka Emblem: ಮಸೀದಿಯ ಅಡಿಗಲ್ಲಿನ ಮೇಲೆ ಅಶೋಕ ಲಾಂಛನ ಕೆತ್ತನೆ; ಧರ್ಮಕ್ಕೆ ವಿರುದ್ಧ ಎಂದು ಧ್ವಂಸಗೊಳಿಸಿದ ಜನ!

ಜಮ್ಮು ಕಾಶ್ಮೀರದ (Jammu Kashmir) ಹಜರತ್‌ಬಾಲ್ ಮಸೀದಿಯಲ್ಲಿ ಶುಕ್ರವಾರ ಭಾರೀ ವಿವಾದ ಭುಗಿಲೆದ್ದಿದ್ದು, ಪವಿತ್ರ ಸ್ಥಳಗಳಲ್ಲಿನ ಸಾಂಕೇತಿಕ ಚಿತ್ರಣಗಳು ಇಸ್ಲಾಮಿಕ್ ತತ್ವಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಅಶೋಕ ಲಾಂಛನ ಕೆತ್ತಿದ ನವೀಕರಣ ಫಲಕವನ್ನು ಗುಂಪೊಂದು ಕಲ್ಲುಗಳಿಂದ ಒಡೆದಿದೆ.

ಶ್ರೀನಗರ: ಜಮ್ಮು ಕಾಶ್ಮೀರದ (Jammu Kashmir) ಹಜರತ್‌ಬಾಲ್ ಮಸೀದಿಯಲ್ಲಿ ಶುಕ್ರವಾರ ಭಾರೀ ವಿವಾದ ಭುಗಿಲೆದ್ದಿದ್ದು, ಪವಿತ್ರ ಸ್ಥಳಗಳಲ್ಲಿನ ಸಾಂಕೇತಿಕ ಚಿತ್ರಣಗಳು ಇಸ್ಲಾಮಿಕ್ ತತ್ವಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಅಶೋಕ ಲಾಂಛನ ಕೆತ್ತಿದ ನವೀಕರಣ ಫಲಕವನ್ನು ಗುಂಪೊಂದು ಕಲ್ಲುಗಳಿಂದ ಒಡೆದಿದೆ. ಪ್ರವಾದಿ ಮುಹಮ್ಮದ್ ಅವರ ಅವಶೇಷವಿರುವ ಶ್ರೀನಗರ ಮಸೀದಿಯ ಫಲಕದ ಮೇಲೆ ಲಾಂಛನವನ್ನು ಸೇರಿಸಿದ್ದು ಸ್ಥಳೀಯ ನಾಯಕರು ಮತ್ತು ಆರಾಧಕರಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ.

ಮುಸ್ಲಿಮರು ಶುಕ್ರವಾರ-ಕಾಶ್ಮೀರ ವಕ್ಸ್ ಬೋರ್ಡ್‌ ವಿರುದ್ಧ ಪ್ರತಿಭಟನ ನಡೆಸಿದರು. ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಅಶೋಕ ಲಾಂಛನವನ್ನು ಹೊಂದಿದ್ದ ಅಡಿಪಾಯದ ಹಲಗೆಯನ್ನು ಪ್ರತಿಭಟನಕಾರರು ಕಿತ್ತುಹಾಕಿದರು. ವಕ್ಸ್ ಬೋರ್ಡ್ ಅಧ್ಯಕ್ಷ, ಬಿಜೆಪಿಯ ಮಾಜಿ ನಾಯಕ ದಾರಾಕ್ಷನ್ ಅಂದ್ರಾಬಿ ಮತ್ತು ಇತರರು ಮುಸ್ಲಿಂ ಧಾರ್ಮಿಕ ಭಾವನೆಗೆ ಗಾಸಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದು ಮುಸ್ಲಿಂ ಆಚರಣೆಗಳ ಸ್ಪಷ್ಟ ಉಲ್ಲಂಘನೆಯಾಗಿದೆ, ಅಧಿಕಾರಿಗಳು ಹೊಣೆ ಹೊರಬೇಕು ಎಂದು ಆಗ್ರಹಿಸಿದ್ದಾರೆ.

ಕೆಲ ವಾರಗಳ ಹಿಂದೆಯಷ್ಟೇ ಹಜರತ್‌ಬಾಲ್ ದರ್ಗಾದ ನವೀಕರಣ ಕಾರ್ಯವನ್ನು ಮಾಡಲಾಗಿತ್ತು. ಬಿಜೆಪಿ ನಾಯಕಿ ಮತ್ತು ಜೆ & ಕೆ ವಕ್ಫ್ ಮಂಡಳಿಯ ಅಧ್ಯಕ್ಷೆ ದರಾಕ್ಷನ್ ಅಂದ್ರಾಬಿ ಅವರು ನವೀಕರಣವನ್ನು ಉದ್ಘಾಟಿಸಿದ್ದರು. ಈ ವೇಳೆ ಮಾತನಾಡಿದ ದರಾಕ್ಷನ್ ಅಂದ್ರಾಬಿ, ದರ್ಗಾ ನವೀಕರಣಕ್ಕಾಗಿ ಯಾವುದೇ ಹಣದ ಸಹಾಯ ಪಡೆದುಕೊಳ್ಳಲಾಗಿಲ್ಲ. ಮಂಡಳಿಯೇ ಎಲ್ಲಾ ಹಣಕಾಸಿನ ವೆಚ್ಚಗಳನ್ನು ನಿರ್ವಹಿಸಿದೆ ಎಂದು ಹೇಳಿದ್ದರು. ಇದೇ ಮೊದಲ ಬಾರಿಗೆ ಉದ್ಘಾಟನೆಯ ನೆನಪಿಗಾಗಿ ದರ್ಗಾ ಮುಂಭಾಗ ಶಿಲಾಫಲಕವನ್ನು ಅಳವಡಿಸಲಾಗಿತ್ತು.

ದೀಗ ಈ ಶಿಲಾಫಲಕದಲ್ಲಿರುವ ರಾಷ್ಟ್ರೀಯ ಲಾಂಭನವನ್ನು ಕಲ್ಲಿನಿಂದ ಜಜ್ಜಿ ವಿರೂಪಗೊಳಿಸಲಾಗಿದೆ. ಹಜರತ್‌ಬಾಲ್ ದೇಗುಲದಲ್ಲಿರುವ ಅಶೋಕ ಲಾಂಛನವನ್ನು ನಾಶ ಮಾಡಿರೋದನ್ನು "ಭಯೋತ್ಪಾದಕ ಕೃತ್ಯ ಎಂದು ಬಿಜೆಪಿ ಆರೋಪಿಸಿದೆ. ಕಲ್ಲಿನ ಮೂಲಕ ಲಾಂಛನ ವಿರೂಪದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ದೇಶವಾಸಿಗಳ ಕೆಂಗಣ್ಣಿಗೆ ಗುರಿಯಾಗಿದೆ. ರಾಷ್ಟ್ರೀಯ ಲಾಂಛನ ಚಿತ್ರ ನಾಶ ಮಾಡಿದವರನ್ನು ಬಂಧಿಸಬೇಕು ಎಂದು ದರಾಕ್ಷನ್ ಅಂದ್ರಾಬಿ ಆಗ್ರಹಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Landslide: ಜಮ್ಮು-ಕಾಶ್ಮೀರದಲ್ಲಿ ಭಾರೀ ಭೂ ಕುಸಿತ; ಸಾವಿನ ಸಂಖ್ಯೆ 30ಕ್ಕೆ ಏರಿಕೆ

ದೇವಾಲಯದ ಫಲಕದ ಮೇಲೆ ಲಾಂಛನವನ್ನು ಸೇರಿಸುವ ಅಗತ್ಯವನ್ನು ಮುಖ್ಯಮಂತ್ರಿ ಅಬ್ದುಲ್ಲಾ ಪ್ರಶ್ನಿಸಿದರು ಮತ್ತು ವಿಧ್ವಂಸಕ ಕೃತ್ಯದಲ್ಲಿ ಭಾಗಿಯಾಗಿರುವವರ ವಿರುದ್ಧ ಸಾರ್ವಜನಿಕ ಸುರಕ್ಷತಾ ಕಾಯ್ದೆ (ಪಿಎಸ್ಎ) ಹೇರುವುದನ್ನು ಟೀಕಿಸಿದ್ದಾರೆ. ಮೊದಲಿಗೆ ಲಾಂಛನ ಮತ್ತು ಕಲ್ಲಿನ ಅಗತ್ಯ ಏನಿತ್ತು? ಕೆಲಸ ಈಗಾಗಲೇ ಸಾಕಾಗಿರಲಿಲ್ಲವೇ?" ಎಂದು ಅವರು ಕೇಳಿದರು. ಪಿಎಸ್ಎಯನ್ನು ಉಲ್ಲೇಖಿಸುತ್ತಾ ಅವರು, "ಮೊದಲು, ನೀವು ಜನರ ಧಾರ್ಮಿಕ ಭಾವನೆಗಳನ್ನು ನೋಯಿಸಿದ್ದೀರಿ, ಮತ್ತು ನಂತರ ನೀವು ಇದನ್ನು ಮಾಡುತ್ತೀರಿ. ಇದರ ಅರ್ಥವೇನು? ಎಂದು ಹೇಳಿದ್ದಾರೆ.