ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Atheist Krishna Death: ಫೋಟೋಶಾಪ್ ಮೀಮ್‌ ಮೂಲಕ ಮೋದಿಯನ್ನೂ ನಗಿಸಿದ್ದ ನಾಸ್ತಿಕ ಕೃಷ್ಣ ಇನ್ನಿಲ್ಲ

ಹಾಸ್ಯ ಪ್ರಧಾನ ಫೋಟೊಶಾಪ್ ಮೀಮ್‌ಗಳಿಗೆ ಹೆಸರುವಾಸಿಯಾಗಿದ್ದ, ಪ್ರಧಾನಿ ನರೇಂದ್ರ ಮೋದಿ ಅವರನ್ನೂ ನಗುವಂತೆ ಮಾಡಿದ್ದ ಜನಪ್ರಿಯ ಕಲಾವಿದ ನಾಸ್ತಿಕ ಕೃಷ್ಣ ನ್ಯುಮೋನಿಯಾದಿಂದ ನಿಧನರಾಗಿದ್ದಾರೆ. ಇವರ ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಇನ್ನು ಇವರ ನಿಧನದ ಸುದ್ದಿ ಕೇಳಿ ಅನೇಕ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದಾರೆ.

ಪ್ರಧಾನಿ ಮೋದಿಯನ್ನು ನಗುವಂತೆ ಮಾಡಿದ್ದ ನಾಸ್ತಿಕ ಕೃಷ್ಣ ನಿಧನ

ನವದೆಹಲಿ: ಹಾಸ್ಯ ಪ್ರಧಾನ ಫೋಟೋಶಾಪ್ ಮೀಮ್ (Hilarious Photoshop memes)ಗಳಿಗೆ ಹೆಸರುವಾಸಿಯಾಗಿದ್ದ, ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನೂ ನಗುವಂತೆ ಮಾಡಿದ್ದ ಜನಪ್ರಿಯ ಕಲಾವಿದ ನಾಸ್ತಿಕ ಕೃಷ್ಣ (Atheist Krishna) ನ್ಯುಮೋನಿಯಾದಿಂದ (Pneumonia) ನಿಧನರಾಗಿದ್ದಾರೆ. ಇವರ ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಕಲಾವಿದ ನಾಸ್ತಿಕ ಕೃಷ್ಣ ಅವರ ಕಲೆಯನ್ನು ಪ್ರಧಾನಿ ನರೇಂದ್ರ ಮೋದಿ, ಬಾಲಿವುಡ್ ನಟ (Bollywood actor) ಅಕ್ಷಯ್ ಕುಮಾರ್ (Akshay kumar) ಮೆಚ್ಚಿ ಪ್ರಶಂಸೆ ವ್ಯಕ್ತಪಡಿಸಿದ್ದರು.

ಹಾಸ್ಯಮಯ ಮೀಮ್‌ಗಳಿಗೆ ಹೆಸರುವಾಸಿಯಾಗಿದ್ದ ನಾಸ್ತಿಕ ಕೃಷ್ಣ ವಿಷಯವನ್ನು ತಾವೇ ರಚಿಸಿ ಖ್ಯಾತಿಯನ್ನು ಗಳಿಸಿದ್ದರು. ಇವರ ನಿಧನದ ಸುದ್ದಿ ಕೇಳಿ ಅನೇಕ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದಾರೆ. ಅನೇಕರು ಸಾಮಾಜಿಕ ಮಾಧ್ಯಮದ ಮೂಲಕ ತಮ್ಮ ಸಂತಾಪ ಸೂಚಿಸುತ್ತಿದ್ದಾರೆ.

ಅವರ ನಿಧನ ಕುರಿತು ಮಾಹಿತಿ ಹಂಚಿಕೊಂಡ ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಹೇಳಿರುವುದು ಹೀಗೆ...ʼʼಕೃಷ್ಣ ಅವರಿಗೆ ನ್ಯುಮೋನಿಯಾ ಬಂದಿತ್ತು. ಶ್ವಾಸಕೋಶದಲ್ಲಿ ನೀರು ಇದೆ ಮತ್ತು ಶಸ್ತ್ರಚಿಕಿತ್ಸೆ ಮಾಡಬೇಕಾಗಿದೆ ಎನ್ನುವ ಸಂದೇಶ ಕಳುಹಿಸಿದ್ದರು. ಅಲ್ಲದೇ ಅವರು ನಾನು ಇದರಿಂದ ಬದುಕುಳಿದರೆ ಅದು ಪವಾಡ ಎಂದು ಹೇಳಿದ್ದರು. ಆದರೆ ಅವರ ಸಹೋದರ ಇಂದು ಅವರ ನಿಧನರಾಗಿರುವ ಸುದ್ದಿಯನ್ನು ಕಳುಹಿಸಿದ್ದಾರೆʼʼ ಎಂದು ತಿಳಿಸಿದ್ದಾರೆ.



ಇನ್ನೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು ಕೃಷ್ಣ ಅವರ ನಿಧನದ ಸುದ್ದಿ ಕೇಳಿ ಎಚ್ಚರವಾಯಿತು. ಈ ವೇದಿಕೆಯಲ್ಲಿ ನಾನು ಭೇಟಿಯಾದ ಅತ್ಯಂತ ದಯಾಳು ಜನರಲ್ಲಿ ಅವರು ಒಬ್ಬರು. ಜುಲೈ 10ರಂದು ಅವರು ಅಸ್ವಸ್ಥರಾಗಿದ್ದಾರೆ ಮತ್ತು ಶಸ್ತ್ರಚಿಕಿತ್ಸೆ ಮಾಡಬೇಕಾಗಿದೆ ಎಂದು ನನಗೆ ಹೇಳಿದ್ದರು ಎಂದು ತಿಳಿಸಿದ್ದಾರೆ.



ಒಡಿಶಾದವರಾದ ನಾಸ್ತಿಕ ಕೃಷ್ಣ ವಿಶಾಖಪಟ್ಟಣ ಮತ್ತು ಹೈದರಾಬಾದ್‌ನಲ್ಲಿ ನೆಲೆಸಿದ್ದರು. 2024ರ ಲೋಕಸಭಾ ಚುನಾವಣೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ವೇದಿಕೆಯಲ್ಲಿ ನೃತ್ಯ ಮಾಡುತ್ತಿರುವ ಅಣಕು ವಿಡಿಯೊವೊಂದನ್ನು ಮಾಡಿದ್ದರು. ಇದನ್ನು ಸ್ವತಃ ಪ್ರಧಾನಿ ಮೋದಿ ತಮ್ಮ ಎಕ್ಸ್ ಖಾತೆಯಿಂದ ಹಂಚಿಕೊಂಡಿದ್ದು ಬಳಿಕ ಕೃಷ್ಣ ಜನಪ್ರಿಯತೆ ಗಳಿಸಿದ್ದರು.

ಬಳಿಕ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಒಳಗೊಂಡ ಇದೇ ರೀತಿಯ ವಿಡಿಯೊವೊಂದನ್ನು ಅವರು ಮಾಡಿದ್ದರು.

ಇದನ್ನೂ ಓದಿ: Extramarital Relationship: ಅತಿ ಹೆಚ್ಚು ಅಕ್ರಮ ಸಂಬಂಧ ಪ್ರಕರಣಗಳಿಗೆ ಕುಖ್ಯಾತಿ ಪಡೆದಿರುವ ರಾಜ್ಯ ಇದೇ ಅಂತೆ!

ಕೃಷ್ಣ ಅವರ ಕುರಿತು ಬಾಲಿವುಡ್ ನಟ ಅಕ್ಷಯ್ ಕುಮಾರ್ ಹೇಳಿರುವುದು ಹೀಗೆ...ನಿʼʼಮ್ಮ ಅದ್ಭುತ ಕೆಲಸವು ಜನರ ಮುಖಗಳಲ್ಲಿ ನಗುವನ್ನು ತಂದಿದೆ. ಶುದ್ಧ ಹಾಸ್ಯದಿಂದ ನಿಮ್ಮ ಕೆಲಸವನ್ನು ಮುಂದುವರಿಸಿ. ಶುದ್ಧ ಮತ್ತು ಪ್ರಾಮಾಣಿಕ ಹಾಸ್ಯದಿಂದ ಜನರ ಮುಖದಲ್ಲಿ ನಗುವನ್ನು ತರುತ್ತಲೇ ಇರಿ. ನಿಮಗೆ ಬಹಳಷ್ಟು ಆಶೀರ್ವಾದಗಳು ಸಿಗುತ್ತವೆ. ಹೀಗೆಯೇ ಮುಂದುವರಿಸಿʼʼ ಎಂದು ಹೇಳಿದ್ದರು.

ಕೃಷ್ಣ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ನಟಿ ಮತ್ತು ಬಿಜೆಪಿ ನಾಯಕಿ ರೂಪಾಲಿ ಗಂಗೂಲಿ, ʼʼಇಂದು ಕೃಷ್ಣ ಅವರ ಟೈಮ್‌ಲೈನ್ ಖಾಲಿಯಾಗಿದೆ. ಅವರು ಕೇವಲ ದೃಶ್ಯ ವಿಡಂಬನೆಯ ಮಾಸ್ಟರ್ ಆಗಿರಲಿಲ್ಲ. ಅವರ ಫೋಟೋಶಾಪ್ ಜೋಕ್‌ಗಳು ನಮ್ಮನ್ನು ನಗುವಂತೆ ಮಾಡಿತು. ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ ಕೃಷ್ಣʼʼ ಎಂದು ಹೇಳಿದ್ದಾರೆ.