ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Salman Khan: ಸಲ್ಮಾನ್ ಖಾನ್‌ಗೆ ಮತ್ತೆ ಕೊಲೆ ಬೆದರಿಕೆ; ಅಪರಿಚಿತ ವ್ಯಕ್ತಿ ವಿರುದ್ಧ ದೂರು ದಾಖಲು

ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅವರಿಗೆ ಹೊಸದಾಗಿ ಮತ್ತೊಂದು ಜೀವ ಬೆದರಿಕೆ ಬಂದಿದೆ. ವರ್ಲಿ ಆರ್‌ಟಿಒ ಆಫೀಸಿನ ವಾಟ್ಸಾಪ್ ಸಂಖ್ಯೆಗೆ ಆರೋಪಿ ಸಂದೇಶ ಕಳುಹಿಸಿ ಸಲ್ಮಾನ್‌ ಖಾನ್‌ಗೆ ಬೆದರಿಕೆ ಹಾಕಿದ್ದಾನೆ. ಕಳುಹಿಸಲಾದ ಸಂದೇಶದಲ್ಲಿ, ನಟನ ಮನೆಗೆ ಪ್ರವೇಶಿಸಿ ಹತ್ಯೆ ಮಾಡುವುದಾಗಿ ಮತ್ತು ಅವರ ಕಾರಿನಲ್ಲಿ ಬಾಂಬ್ ಇಡುವುದಾಗಿ ಬೆದರಿಕೆ ಹಾಕಲಾಗಿದೆ.

ಸಲ್ಮಾನ್ ಖಾನ್‌ಗೆ ಮತ್ತೆ ಕೊಲೆ ಬೆದರಿಕೆ

Profile Vishakha Bhat Apr 14, 2025 11:16 AM

ಮುಂಬೈ: ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅವರಿಗೆ ಹೊಸದಾಗಿ ಮತ್ತೊಂದು ಜೀವ ಬೆದರಿಕೆ ಬಂದಿದೆ. ವರ್ಲಿ ಆರ್‌ಟಿಒ ಆಫೀಸಿನ ವಾಟ್ಸಾಪ್ ಸಂಖ್ಯೆಗೆ ಆರೋಪಿ ಸಂದೇಶ ಕಳುಹಿಸಿ ಸಲ್ಮಾನ್‌ ಖಾನ್‌ಗೆ ಬೆದರಿಕೆ ಹಾಕಿದ್ದಾನೆ. ಕಳುಹಿಸಲಾದ ಸಂದೇಶದಲ್ಲಿ, ನಟನ ಮನೆಗೆ ಪ್ರವೇಶಿಸಿ ಹತ್ಯೆ ಮಾಡುವುದಾಗಿ ಮತ್ತು ಅವರ ಕಾರಿನಲ್ಲಿ ಬಾಂಬ್ ಇಡುವುದಾಗಿ ಬೆದರಿಕೆ ಹಾಕಲಾಗಿದೆ. ವರ್ಲಿ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು , ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶಂಕಿತನನ್ನು ಪತ್ತೆಹಚ್ಚಲು ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಲ್ಮಾನ್‌ ಖಾನ್‌ಗೆ ಜೀವ ಬೆದರಿಕೆ ಬರುತ್ತಿರುವುದು ಇದೇ ಮೊದಲೇನಲ್ಲ. ಕಳೆದ ವರ್ಷ ಎಪ್ರಿಲ್‌ನಲ್ಲಿ ಇಬ್ಬರು ದುಷ್ಕರ್ಮಿಗಳು ಬಾಂದ್ರಾದಲ್ಲಿರುವ ಸಲ್ಮಾನ್‌ ಖಾನ್‌ ಅವರ ಮನೆ ಮೇಲೆ ಗುಂಡಿನ ದಾಳಿ ನಡೆಸಿದ್ದರು. ದಾಳಿಕೋರರನ್ನು ಲಾರೆನ್ಸ್‌ ಬಿಷ್ಣೋಯ್‌ ಗ್ಯಾಂಗ್‌ನ ಸದಸ್ಯರು ಎಂದು ಹೇಳಲಾಗಿತ್ತು. ನವಿ ಮುಂಬೈ ಪೊಲೀಸರ ನಂತರದ ತನಿಖೆಯಲ್ಲಿ, ಖಾನ್ ಅವರು ತಮ್ಮ ಪನ್ವೇಲ್ ತೋಟದ ಮನೆಗೆ ಪ್ರಯಾಣಿಸುತ್ತಿದ್ದಾಗ ಅವರನ್ನು ಗುರಿಯಾಗಿಸಲು ಬಿಷ್ಣೋಯ್ ಗ್ಯಾಂಗ್ ಮಾಡಿದ ವಿಸ್ತೃತ ಯೋಜನೆಯನ್ನು ಅವರು ತೆರೆದಿಟ್ಟಿದ್ದರು.

1998 ರಲ್ಲಿ ಜೋಧ್‌ಪುರದಲ್ಲಿ ಸಲ್ಮಾನ್‌ ನಟನೆಯ ಹಮ್‌ ಸಾಥ್‌ ಸಾಥ್‌ ಹೇ ಸನಮ್‌ ಚಿತ್ರೀಕರಣದ ಸಮಯದಲ್ಲಿ ಸಲ್ಮಾನ್‌ ಖಾನ್‌ ಬಿಷ್ಣೋಯ್‌ ಸಮಾಜವು ಪೂಜಿಸುವ ಕೃಷ್ಣ ಮೃಗವನ್ನು ಕೊಂದ ಆರೋಪ ಎದುರಿಸುತ್ತಿದ್ದಾರೆ. ಆ ಘಟನೆಯ ನಂತರ ಬಿಷ್ಣೋಯ್‌ ಸಮಾಜ ಸಲ್ಮಾನ್‌ ಖಾನ್‌ ಅವರನ್ನು ದ್ವೇಷಿಸುತ್ತಾ ಬಂದಿದೆ. ಸದ್ಯ ಇದೇ ಘಟನೆಗೆ ಸಂಬಂಧಿಸಿದಂತೆ ಲಾರೆನ್ಸ್‌ ಬಿಷ್ಣೋಯ್‌ ಗ್ಯಾಂಗ್‌ ಸಲ್ಮಾನ್‌ ಖಾನ್‌ ಬೆನ್ನು ಬಿದ್ದಿದೆ. ಕಳೆದ ಅಕ್ಟೋಬರ್‌ನಲ್ಲಿ ಇದೇ ಗ್ಯಾಂಗ್‌ ಸಲ್ಮಾನ್‌ ಆತ್ಮೀಯ ಹಾಗೂ ಎನ್‌ಸಿಪಿ ನಾಯಕ ಬಾಬಾ ಸಿದ್ಧಿಕ್‌ ಅವರನ್ನು ಗುಂಡಿಕ್ಕಿ ಕೊಂದಿತ್ತು. ಸಲ್ಮಾನ್‌ ನಮ್ಮ ಬಳಿ ಕ್ಷಮೆ ಕೇಳದೆ ಇದ್ದರೆ ಆತನನ್ನೂ ಇದೇ ರೀತಿಯಲ್ಲಿ ಹೊಡೆದು ಹಾಕುತ್ತೇವೆ ಎಂದು ಬೆದರಿಕೆ ಹಾಕಿತ್ತು.

ಈ ಸುದ್ದಿಯನ್ನೂ ಓದಿ: AR Murugadoss: ಸಲ್ಮಾನ್‌-ರಶ್ಮಿಕಾ ನಟನೆಯ ʼಸಿಕಂದರ್‌ʼ ರಿಮೇಕ್‌ ಚಿತ್ರವ? ನಿರ್ದೇಶಕ ಎ.ಆರ್‌.ಮುರುಗದಾಸ್‌ ಹೇಳಿದ್ದೇನು?

ನಿರಂತರ ಬೆದರಿಕೆಗಳಿಂದಾಗಿ ಸಲ್ಮಾನ್ ಖಾನ್ ತಮ್ಮ ಭದ್ರತೆಯನ್ನು ಗಮನಾರ್ಹವಾಗಿ ಹೆಚ್ಚಿಸಿಕೊಂಡಿದ್ದಾರೆ. ವೈಯಕ್ತಿಕ ರಕ್ಷಣೆಗಾಗಿ ಅವರಿಗೆ ಬಂದೂಕು ಪರವಾನಗಿ ನೀಡಲಾಗಿದೆ. ಅವರ ಮನೆಗೆ ಪೊಲೀಸರು ವಿಶೇಷ ಭದ್ರತೆ ಒದಗಿಸಿದ್ದಾರೆ. ಹೆಚ್ಚಿನ ಭದ್ರತೆಗಾಗಿ ಅವರು ಬುಲೆಟ್‌ ಫ್ರೂಪ್‌ ಕಾರನ್ನು ತೆಗೆದುಕೊಂಡಿದ್ದಾರೆ. ಅವರ ಮನೆ ಎದುರು ಬುಲೆಟ್‌ ಫ್ರೂಫ್‌ ಗಾಜುಗಳನ್ನು ಅಳವಡಿಸಲಾಗಿದೆ. ಇವೆಲ್ಲದರ ಹೊರತಾಗಿಯೂ ನಟ ಸಿನಿಮಾಗಳಲ್ಲಿ ತೊಡಗಿದ್ದಾರೆ. ಅವರ ನಟನೆಯ, ಎ.ಆರ್. ಮುರುಗದಾಸ್ ನಿರ್ದೇಶನದ ಮತ್ತು ರಶ್ಮಿಕಾ ಮಂದಣ್ಣ, ಸತ್ಯರಾಜ್, ಕಾಜಲ್ ಅಗರ್ವಾಲ್ ಮತ್ತು ಶರ್ಮಾನ್ ಜೋಶಿ ನಟಿಸಿರುವ ಈದ್ 2025 ರ ಆಕ್ಷನ್ ಚಿತ್ರ ಸಿಕಂದರ್‌ ಇತ್ತೀಚೆಗೆ ಬಿಡುಗಡೆ ಹೊಂದಿದೆ.