ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Crime News: ನಿಲ್ಲಿಸಿದ್ದ ಕಾರಿನೊಳಗೆ 9, 5 ವರ್ಷದ ಇಬ್ಬರು ಮಕ್ಕಳ ಮೃತದೇಹ ಪತ್ತೆ

ಬಿಹಾರದ ಪಾಟ್ನಾದ ಇಂದ್ರಪುರಿ ಪ್ರದೇಶದಲ್ಲಿ ಶುಕ್ರವಾರ ಸಂಜೆ ಒಂದು ಕಾರಿನೊಳಗೆ ಇಬ್ಬರು ಮಕ್ಕಳ ಶವಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ. ಪೊಲೀಸರ ಪ್ರಕಾರ, ಒಂಬತ್ತು ವರ್ಷದ ಬಾಲಕಿ ಮತ್ತು ಐದು ವರ್ಷದ ಬಾಲಕ ಈ ದುರಂತದಲ್ಲಿ ಮೃತಪಟ್ಟಿದ್ದಾರೆ.

ಸಾಂಧರ್ಬಿಕ ಚಿತ್ರ

ಪಾಟ್ನಾ: ಬಿಹಾರದ (Bihar) ಪಾಟ್ನಾದ (Patna) ಇಂದ್ರಪುರಿ ಪ್ರದೇಶದಲ್ಲಿ ಶುಕ್ರವಾರ ಸಂಜೆ ಒಂದು ಕಾರಿನೊಳಗೆ (Car) ಇಬ್ಬರು ಮಕ್ಕಳ ಶವಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ. ಪೊಲೀಸರ (Police) ಪ್ರಕಾರ, ಒಂಬತ್ತು ವರ್ಷದ ಬಾಲಕಿ ಮತ್ತು ಐದು ವರ್ಷದ ಬಾಲಕ ಈ ದುರಂತದಲ್ಲಿ ಮೃತಪಟ್ಟಿದ್ದಾರೆ. ಇಂದ್ರಪುರಿಯಲ್ಲಿ ಕಾರಿನೊಳಗೆ ಇಬ್ಬರು ಮಕ್ಕಳ ಶವಗಳು ಕಂಡುಬಂದಿವೆ ಎಂಬ ಮಾಹಿತಿಯ ಮೇರೆಗೆ ಪೊಲೀಸರು ಸ್ಥಳಕ್ಕೆ ಧಾವಿಸಿ ಶವಗಳನ್ನು ವಶಪಡಿಸಿಕೊಂಡಿದ್ದಾರೆ.

ಮಕ್ಕಳ ಗುರುತನ್ನು ಪತ್ತೆಹಚ್ಚಲು ಪ್ರಯತ್ನ ನಡೆಸಲಾಗುತ್ತಿದೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪಾಟ್ನಾ (ಸೆಂಟ್ರಲ್) ಎಸ್‌ಪಿ ದಿಕ್ಷಾ ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಯ ನಂತರವೇ ಸಾವಿನ ನಿಖರ ಕಾರಣ ತಿಳಿಯಲಿದೆ ಎಂದು ದಿಕ್ಷಾ ಸ್ಪಷ್ಟಪಡಿಸಿದ್ದಾರೆ.

ತನಿಖೆಯ ಪ್ರಗತಿ

ಕಾನೂನು ಮತ್ತು ಸುವ್ಯವಸ್ಥೆ ಡಿಎಸ್‌ಪಿ 2 ಮುಹಿಬುಲ್ಲಾ ಅನ್ಸಾರಿ, “112ಕ್ಕೆ ಕರೆ ಬಂದಾಗ, ಪೊಲೀಸರು ಸ್ಥಳಕ್ಕೆ ತೆರಳಿದರು. ಆಗ ಒಂದು ಮಗು ಜೀವಂತವಿತ್ತು. ಆದರೆ ಆಸ್ಪತ್ರೆಗೆ ಕೊಂಡೊಯ್ಯುವಾಗ ಆ ಮಗುವೂ ಸಾವನ್ನಪ್ಪಿತು. ಕಾರಿನ ಮಾಲೀಕರ ಬಗ್ಗೆ ತನಿಖೆ ಮಾಡುತ್ತಿದ್ದೇವೆ” ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನು ಓದಿ: Viral Video: ಕಾರಿನಲ್ಲಿ ಕುಳಿತಿದ್ದ ನಾಯಿಯ ಕೆನ್ನೆಗೆ ಬಾರಿಸಿದ ಮುಸ್ಲಿಂ ವ್ಯಕ್ತಿ; ವಿಡಿಯೋ ನೋಡಿ

ಮತ್ತೊಂದು ದುರಂತ

ಇದಕ್ಕೂ ಮೊದಲು 2025ರ ಜುಲೈ 31ರಂದು ಪಾಟ್ನಾದ ಜಾನಿಪುರ ಪ್ರದೇಶದ ಮನೆಯೊಂದರಲ್ಲಿ ಒಡಹುಟ್ಟಿದ ಇಬ್ಬರು ಮಕ್ಕಳಾದ ಅಂಜಲಿ ಕುಮಾರಿ (15) ಮತ್ತು ಅಂಶುಲ್ ಕುಮಾರ್ (10) ಅವರ ಶವಗಳು ಪತ್ತೆಯಾಗಿದ್ದವು. ಪೊಲೀಸರ ಪ್ರಕಾರ, ಮಕ್ಕಳು ಒಂದೇ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಅವರಿದ್ದ ಹಾಸಿಗೆಯೂ ಸುಟ್ಟುಹೋಗಿತ್ತು. ಕುಟುಂಬವು ಮಕ್ಕಳನ್ನು ಕೊಂದು ಬೆಂಕಿಗೆ ಎಸೆಯಲಾಗಿದೆ ಎಂದು ಆರೋಪಿಸಿತ್ತು. ಈ ಘಟನೆಯಿಂದ ಕುಪಿತರಾದ ಜನರು ಫುಲ್ವಾರಿಶರೀಫ್ ರಸ್ತೆಯನ್ನು ತಡೆದು ಕ್ರಮಕ್ಕೆ ಆಗ್ರಹಿಸಿದ್ದರು.

ಸಿಟಿ ಎಸ್‌ಪಿ ಭಾನು ಪ್ರತಾಪ್ ಸಿಂಗ್, “ಎಲ್ಲ ಸಂಭಾವನೀಯ ಸಾಧ್ಯತೆಗಳನ್ನು ಪರಿಗಣಿಸಿ ತನಿಖೆ ನಡೆಸುತ್ತಿದ್ದೇವೆ” ಎಂದು ಹೇಳಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.