Viral Video: ಕಾರಿನಲ್ಲಿ ಕುಳಿತಿದ್ದ ನಾಯಿಯ ಕೆನ್ನೆಗೆ ಬಾರಿಸಿದ ಮುಸ್ಲಿಂ ವ್ಯಕ್ತಿ; ವಿಡಿಯೋ ನೋಡಿ
man slapped a dog: ಪಾಕ್ ಸ್ವಾತಂತ್ರ್ಯ ದಿನಾಚರಣೆ ವೇಳೆಯಲ್ಲಿ ಕೆಲವು ಯುವಕರು ರಸ್ತೆಯಲ್ಲಿ ಸಂಭ್ರಮಾಚರಣೆ ಮಾಡಿದ್ದಾರೆ. ಈ ವೇಳೆ ಕಾರಿನೊಳಗೆ ಕುಳಿತಿದ್ದ ಸಾಕುಶ್ವಾನವೊಂದು ಕಿಟಕಿಯಿಂದ ಇಣುಕಿ ನೋಡಿದೆ. ಈ ವೇಳೆ ವ್ಯಕ್ತಿಯೊಬ್ಬ ಬೈಕ್‍ನಿಂದ ಇಳಿದು ಬಂದು ಮೋಜಿಗಾಗಿ ನಾಯಿಯ ಕೆನ್ನೆಗೆ ಹೊಡೆದು ಕ್ರೂರತೆ ಮೆರೆದಿದ್ದಾನೆ. ಈ ವಿಡಿಯೊ ವೈರಲ್ ಆಗಿದ್ದು, ನೆಟ್ಟಿಗರು ಕಿಡಿಕಾರಿದ್ದಾರೆ.
-
Priyanka P
Aug 16, 2025 4:46 PM
ಕ್ವೆಟ್ಟಾ: ಭಾರತ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆ ಆಚರಿಸಿಕೊಂಡರೆ ಪಾಕಿಸ್ತಾನ (Pakistan) 14 ರಂದು ಆಚರಿಸಿಕೊಳ್ಳುತ್ತದೆ. ಪಾಕ್ ಸ್ವಾತಂತ್ರ್ಯ ದಿನಾಚರಣೆ ವೇಳೆಯಲ್ಲಿ ನಡೆದ ದೃಶ್ಯವೊಂದರ ವಿಡಿಯೊವೊಂದು ವೈರಲ್ ಆಗಿದ್ದು, ನೆಟ್ಟಿಗರು ಇದರ ವಿರುದ್ಧ ಕಿಡಿಕಾರಿದ್ದಾರೆ. ಪಾಕಿಸ್ತಾನದ ಕ್ವೆಟ್ಟಾದಲ್ಲಿ ಸ್ವಾತಂತ್ರ್ಯ ದಿನಾಚರಣೆಯ (Independence Day) ಸಂದರ್ಭದಲ್ಲಿ ಕಾರಿನಲ್ಲಿ ಕುಳಿತಿದ್ದ ನಾಯಿಯ ಮೇಲೆ ಕಪಾಳಮೋಕ್ಷ ಮಾಡಲಾಗಿದೆ.
ವೈರಲ್ ವಿಡಿಯೊದಲ್ಲಿ (Viral Video) ವ್ಯಕ್ತಿಗಳ ಗುಂಪೊಂದು ರಸ್ತೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದೆ. ಈ ವೇಳೆ ಸಾಕುಪ್ರಾಣಿ ಸೈಬೀರಿಯನ್ ಹಸ್ಕಿ ಕಾರಿನ ಹಿಂಭಾಗದಲ್ಲಿ ತಲೆ ಹೊರಗೆ ಇರಿಸಿ ಕುಳಿತಿರುವುದನ್ನು ತೋರಿಸಲಾಗಿದೆ. ಕೆಲವರು ದ್ವಿಚಕ್ರ ವಾಹನದಲ್ಲಿ ತೆರಳುತ್ತಾ ಸ್ವಾತಂತ್ರ್ಯೋತ್ಸವವನ್ನು ಆಚರಿಸಿದ್ದಾರೆ. ರಸ್ತೆಯಲ್ಲಿ ಆಚೀಚೆ ಓಡುತ್ತಾ, ಬೈಕ್‍ನಲ್ಲಿ ಸವಾರಿ ಮಾಡುತ್ತಾ ಜೋರಾಗಿ ಬೊಬ್ಬೆ ಹಾಕುತ್ತಾ ಕೆಲವರು ಸ್ವತಂತ್ರ ದಿನವನ್ನು ಆಚರಿಸಿದ್ದಾರೆ.
ವಿಡಿಯೊ ವೀಕ್ಷಿಸಿ:
Celebration of Freedom in Quetta pic.twitter.com/8iJP3YEdgW
— Bismillah Jan (@khialay) August 14, 2025
ಬೈಕ್‍ನ ಹಿಂಭಾಗದಲ್ಲಿ ಕುಳಿತಿದ್ದ ಒಬ್ಬ ಯುವಕ ಬೈಕಿನಿಂದ ಇಳಿದು ಕಾರಿನ ಕಡೆಗೆ ನಡೆದುಕೊಂಡು ಹೋಗಿದ್ದಾನೆ. ಯಾವುದೇ ರೀತಿಯ ಪ್ರಚೋದನೆ ತೋರದ ನಾಯಿಯ ಕೆನ್ನೆಗೆ ಸುಖಾಸುಮ್ಮನೆ ಬಾರಿಸಿದ್ದಾನೆ. ನಾಯಿಗೆ ಹೊಡೆದುದಲ್ಲದೆ ಕ್ರೂರವಾಗಿ ನಕ್ಕಿದ್ದಾನೆ. ಅನಿರೀಕ್ಷಿತ ದಾಳಿಯಿಂದ ನಾಯಿ ದಿಗ್ಭ್ರಮೆಗೊಂಡಂತೆ ಕಾಣುತ್ತದೆ. ಕಾರಿನೊಳಗೆ ಕುಳಿತಿದ್ದ ವ್ಯಕ್ತಿಯೊಬ್ಬರು ಕೋಪದಿಂದ ಪ್ರತಿಕ್ರಿಯಿಸುತ್ತಾ ಗುಂಪನ್ನು ಎದುರಿಸಲು ಹೊರಗೆ ಬಾಗಿ ನೋಡುತ್ತಾರೆ. ಆದರೆ ದುಷ್ಕರ್ಮಿಗಳು ನಗುತ್ತಲೇ ಇರುತ್ತಾರೆ. ಅಷ್ಟೇ ಅಲ್ಲ ವಾಹನದ ಮೇಲೆ ಪ್ಲಾಸ್ಟಿಕ್ ಬಾಟಲಿಯನ್ನು ಎಸೆದು ದುಷ್ಕೃತ್ಯ ಮೆರೆದಿದ್ದಾರೆ.
ಈ ವಿಡಿಯೊ ಆಗಸ್ಟ್ 13 ಮತ್ತು 14 ರ ಮಧ್ಯರಾತ್ರಿಯದ್ದಾಗಿದೆ ಎಂದು ವರದಿಯಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಿಡಿಕಾರಿದ್ದಾರೆ. ಆ ನಾಯಿ ಇಡೀ ದೇಶಕ್ಕಿಂತ ಹೆಚ್ಚು ಪ್ರಬುದ್ಧವಾಗಿತ್ತು ಎಂದು ಬಳಕೆದಾರರೊಬ್ಬರು ಹೇಳಿದರು. ಪಾಕಿಸ್ತಾನಿಗಳಿಂದ ಏನನ್ನು ನಿರೀಕ್ಷಿಸಲು ಸಾಧ್ಯ ಎಂದು ಮತ್ತೊಬ್ಬ ಬಳಕೆದಾರರು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: Viral Story: ವಿಮಾನದ ಕಾಕ್‍ಪಿಟ್ ಬಾಗಿಲು ಓಪನ್; ಪ್ರಯಾಣಿಕರು ಗಲಿಬಿಲಿ, ಪೈಲಟ್ ಅಮಾನತು; ನಡೆದಿದ್ದೇನು?