ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dilip Ghosh: 60ನೇ ವರ್ಷದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಬಿಜೆಪಿ ನಾಯಕ ದಿಲೀಪ್‌ ಘೋಷ್‌; ವಧು ಯಾರು?

Rinku Majumdar: ಶ್ಚಿಮ ಬಂಗಾಳ ಬಿಜೆಪಿ ನಾಯಕ ದಿಲೀಪ್‌ ಘೋಷ್‌ ತಮ್ಮ 60ನೇ ವರ್ಷದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದಾರೆ. ಬಿಜೆಪಿ ನಾಯಕಿ ರಿಂಕು ಮಜುಂದಾರ್‌ ಅವರನ್ನು ಸರಳವಾಗಿ ವಿವಾಹವಾಗಲಿದ್ದಾರೆ. ಬಿಜೆಪಿ ನಾಯಕನ ಮದುವೆ ಇದೀಗ ದೇಶದ ಗಮನ ಸೆಳೆದಿದೆ

60ನೇ ವರ್ಷದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಬಿಜೆಪಿ ನಾಯಕ

ರಿಂಕು ಮಜುಂದಾರ್‌ ಮತ್ತು ದಿಲೀಪ್‌ ಘೋಷ್‌.

Profile Ramesh B Apr 18, 2025 6:10 PM

ಕೋಲ್ಕತಾ: ಪಶ್ಚಿಮ ಬಂಗಾಳ ಬಿಜೆಪಿ ನಾಯಕ ದಿಲೀಪ್‌ ಘೋಷ್‌ (Dilip Ghosh) ತಮ್ಮ 60ನೇ ವರ್ಷದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದಾರೆ. ಬಿಜೆಪಿ ನಾಯಕಿ ರಿಂಕು ಮಜುಂದಾರ್‌ (Rinku Majumdar) ಅವರನ್ನು ಸರಳವಾಗಿ ವಿವಾಹವಾಗಲಿದ್ದಾರೆ. ಪಶ್ಚಿಮ ಬಂಗಾಳದ ಬಿಜೆಪಿ ಮುಖ್ಯಸ್ಥರಾಗಿದ್ದ ದಿಲೀಪ್‌ ಘೋಷ್‌ ಏ. 18ರ ಸಂಜೆ ಕೋಲ್ಕತಾದ ನ್ಯೂ ಟೌನ್‌ನ ತಮ್ಮ ನಿವಾಸದಲ್ಲಿ ʼವೇದಿಕ್‌ʼ ಆಚರಣೆಯ ಮೂಲಕ ಸರಳವಾಗಿ ಹಸೆಮಣೆಗೇರಲಿದ್ದಾರೆ. 60 ವರ್ಷದ ಬಿಜೆಪಿ ನಾಯಕನ ಮದುವೆ ಇದೀಗ ದೇಶದ ಗಮನ ಸೆಳೆದಿದೆ

ರಿಂಕು ಮತ್ತು ದಿಲೀಪ್‌ ಘೋಷ್‌ 2021ರಲ್ಲಿ ಪರಿಚಿತರಾದರು. ಅದಾದ ಬಳಿಕ ವಾಕಿಂಗ್‌ ಮಾಡುವ ವೇಳೆ ಭೇಟಿಯಾಗುತ್ತಿದ್ದ ಇವರ ಮಧ್ಯೆ ಕ್ರಮೇಣ ಸ್ನೇಹ ಬೆಳೆಯಿತು. ಇದೀಗ ಮದುವೆ ಹಂತಕ್ಕೂ ಬಂದಿದೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ರಿಂಕು ಮಜುಂದಾರ್‌ ನ್ಯೂಸ್‌18 ಬಾಂಗ್ಲಾ ಚಾನಲ್‌ ಜತೆ ಮಾತನಾಡಿದ್ದಾರೆ.

ಈ ಸುದ್ದಿಯನ್ನೂ ಓದಿ: Next BJP President: ಈ ಮಾಸಾಂತ್ಯಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ನೇಮಕ; ಸಚಿವ ಸಂಪುಟಕ್ಕೂ ಸರ್ಜರಿ

ರಿಂಕು ಹೇಳಿದ್ದೇನು?

ರಿಂಕು ಮಾತನಾಡಿ, ʼʼ2013ರಿಂದ ನಾನು ಬಿಜೆಪಿಯಲ್ಲಿ ಸಕ್ರಿಯವಾಗಿದ್ದೇನೆ. ದಿಲೀಪ್‌ ಘೋಷ್‌ ಶಾಸಕ, ಸಂಸದ ಆಗಿದ್ದಾಗ ನಾನು ಅವರೊಂದಿಗೆ ಮಾತನಾಡಿರಲಿಲ್ಲ. ಮೊದಲ ಬಾರಿ ನಾವು ಭೇಟಿಯಾಗಿದ್ದು 2021ರಲ್ಲಿ. ಈ ವೇಳೆ ನಾನು ಬ್ಲಾಕ್‌ ಮಟ್ಟದಲ್ಲಿ ನಾಯಕಿಯಾಗಿದ್ದೆ. ಈ ವೇಳೆ ನಾನು ಸ್ವಲ್ಪ ಹೊತ್ತು ಮಾತ್ರ ಅವರೊಂದಿಗೆ ಮಾತನಾಡಿದ್ದೆ. ಅದಾದ ಬಳಿಕ ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆ ವೇಳೆ ಸಾಕಷ್ಟು ಚರ್ಚೆ ನಡೆಸಿದೆವು. ಇದು ಪಕ್ಷದ ಕುರಿತಾದ ಮಾತುಕತೆಯಾಗಿತ್ತು ವಿನಾಃ ವೈಯಕ್ತಿಕವಾಗಿ ಏನೂ ಮಾತನಾಡಿರಲಿಲ್ಲʼʼ ಎಂದು ವಿವರಿಸಿದ್ದಾರೆ.

"ಮದುವೆಯಾಗುವ ಹುಡುಗ ನ್ಯೂ ಟೌನ್‌ನವನೇ ಆಗಿರಬೇಕು ಮತ್ತು ನನ್ನ ರಾಜಕೀಯ ವೃತ್ತಿ ಜೀವನವನ್ನು ಒಪ್ಪಿಕೊಳ್ಳಬೇಕು ಎನ್ನುವುದು ನನ್ನ ನಿಲುವಾಗಿತ್ತು. ಈ ಬಗ್ಗೆ ಯೋಚಿಸುವಾಗ ದಿಲೀಪ್‌ ಘೋಷ್‌ ಉತ್ತಮ ಸಂಗಾತಿಯಾಗಬಲ್ಲರು ಎನಿಸಿತು. ಹೀಗಾಗಿ ಸೆಪ್ಟೆಂಬರ್ ಮಧ್ಯದಲ್ಲಿ ನಾನೇ ಪ್ರಪೋಸ್ ಮಾಡಿದೆ. ಅವರು ಸಾಮಾನ್ಯ ರಾಜಕೀಯ ವ್ಯಕ್ತಿಗಳಂತೆ ಅಲ್ಲ. ಅವರು ಪ್ರಾಮಾಣಿಕ ನಾಯಕ. ನಾನು ಈ ಗುಣಗಳನ್ನು ಇಷ್ಟಪಟ್ಟು ಮುಂದಿನ ಜೀವನ ಅವರೊಂದಿಗೆ ಕಳೆಯಲು ನಿರ್ಧರಿಸಿದೆʼʼ ಎಂದು ಹೇಳಿದ್ದಾರೆ.

ಆರಂಭದಲ್ಲಿ ನಿರಾಕರಿಸಿದ್ದ ದಿಲೀಪ್‌

ದಿಲೀಪ್ ಘೋಷ್ ತಮ್ಮ ಮದುವೆ ಪ್ರಸ್ತಾವವನ್ನು ಆರಂಭದಲ್ಲಿ ಒಪ್ಪಿಕೊಂಡಿರಲಿಲ್ಲ ಎಂಬ ಸಂಗತಿಯನ್ನೂ ರಿಂಕು ಬಹಿರಂಗಪಡಿಸಿದ್ದಾರೆ. ʼʼಆರಂಭದಲ್ಲಿ ಅವರು ಮದುವೆ ಬಗ್ಗೆ ಆಸಕ್ತಿ ತೋರಿಸಲಿಲ್ಲ. ತಾಯಿಯೊಂದಿಗೆ ಸಮಾಲೋಚನೆ ನಡೆಸಿದ ಅವರು 3 ತಿಂಗಳ ನಂತರ ಒಪ್ಪಿಗೆ ಸೂಚಿಸಿದರುʼʼ ಎಂದು ತಿಳಿಸಿದ್ದಾರೆ.

ದಿಲೀಪ್ ಘೋಷ್ ಅವರನ್ನು ಏಕೆ ಆಯ್ಕೆ ಮಾಡಿದ್ದೀರಿ ಎಂದು ಕೇಳಿದಾಗ ಉತ್ತರಿಸಿದ ರಿಂಕು, "ನನಗೆ ಈ ಹಿಂದೆ ಮದುವೆಯಾಗಿದ್ದು, ಓರ್ವ ಮಗನಿದ್ದಾನೆ. ನಾನು ನನ್ನ ಇಡೀ ಜೀವನವನ್ನು ಅವನಿಗೆ ಅರ್ಪಿಸಿದ್ದೇನೆ. 17 ವರ್ಷಗಳಿಂದ ನಾನು ನನ್ನ ಎಲ್ಲ ಕರ್ತವ್ಯಗಳನ್ನು ನಿರ್ವಹಿಸಿದ್ದೇನೆ. ಇದೀಗ ನನ್ನ ಜೀವನದ ಬಗ್ಗೆ ಆಲೋಚಿಸುವ ಸಮಯ ಬಂದಿದೆ. ಹಾಗಾದರೆ ನನಗೆ ಹೊಂದುವ ವ್ಯಕ್ತಿ ಯಾರು? ಎಂದು ಚಿಂತನೆ ನಡೆಸುವಾಗ ಎಲ್ಲ ರೀತಿಯಿಂದಲೂ ದಿಲೀಪ್‌ ಹೊಂದಿಕೆಯಾಗುತ್ತಾರೆ ಎನಿಸಿತುʼʼ ಎಂದು ಹೇಳಿದ್ದಾರೆ.

ಮುಂದಿನ ವರ್ಷ ನಡೆಯುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ದಿಲೀಪ್‌ ಪ್ರಮುಖ ಪಾತ್ರ ವಹಿಸಲಿದ್ದಾರೆ.