ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Central Government: ಜೈಲುಗಳಿಂದ ನಡೆಯುತ್ತಿರುವ ಭಯೋತ್ಪಾದಕ ಕೃತ್ಯಕ್ಕೆ ಬ್ರೇಕ್ ಹಾಕಲು ಕೇಂದ್ರದಿಂದ ಮಾಸ್ಟರ್ ಪ್ಲಾನ್

Terror Network: ಭಾರತೀಯ ಜೈಲುಗಳಿಂದ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಹಾಗೂ ಅಪರಾಧ ಜಾಲಗಳ ಎಡೆಮುರಿ ಕಟ್ಟಲು ಕೇಂದ್ರ ಸರ್ಕಾರ ಶೀಘ್ರದಲ್ಲೇ ಪ್ರಮುಖ ಕ್ರಮ ಕೈಗೊಳ್ಳಲಿದೆ. ಭಯೋತ್ಪಾದಕ ಸಂಘಟನೆಗಳು ಮತ್ತು ಸಂಘಟಿತ ಅಪರಾಧ ಗುಂಪುಗಳ ನಡುವಿನ ಸಂಪರ್ಕವನ್ನು ವಿನಾಶಗೊಳಿಸುವಲ್ಲಿ ಕೇಂದ್ರ ಸರ್ಕಾರ ಹೊಸ ತಂತ್ರ ರೂಪಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ನವದೆಹಲಿ: ಭಾರತೀಯ ಜೈಲುಗಳಿಂದ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ(Terror) ಜಾಲಕ್ಕೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ(Central Government ) ಶೀಘ್ರದಲ್ಲೇ ಮಹತ್ವದ ಕ್ರಮ ಕೈಗೊಳಲಿದೆ ಎಂದು ತಿಳಿದುಬಂದಿದೆ. ಭಯೋತ್ಪಾದಕ ಸಂಘಟನೆಗಳು ಮತ್ತು ಸಂಘಟಿತ ಅಪರಾಧ ಜಾಲಗಳ ನಡುವೆ ಹೆಚ್ಚುತ್ತಿರುವ ಸಂಬಂಧವನ್ನು ಮುರಿಯುವ ಉದ್ದೇಶದಿಂದ ಕೇಂದ್ರ ಸರ್ಕಾರ "ಹೊಸ ತಂತ್ರ” ರೂಪಿಸುತ್ತಿದೆ.

ಏನಿದು ಕೇಂದ್ರದ ಹೊಸ ಪ್ಲಾನ್?

ಉನ್ನತ ಸರ್ಕಾರಿ ಮೂಲಗಳ ಪ್ರಕಾರ, ಈ ಯೋಜನೆಯಡಿಯಲ್ಲಿ ಜೈಲುಗಳೊಳಗಿಂದಲೇ ಅಪರಾಧ ಅಥವಾ ಭಯೋತ್ಪಾದಕ ಜಾಲವನ್ನು ನಡೆಸುತ್ತಿರುವ ಕೈದಿಗಳನ್ನು ದೇಶದ ಬೇರೆ ಜೈಲುಗಳಿಗೆ ವರ್ಗಾಯಿಸಲಾಗುತ್ತದೆ. ಅಸ್ತಿತ್ವದಲ್ಲಿರುವ ಭಯೋತ್ಪಾದಕರ ಸಂಪರ್ಕ ಹಾಗೂ ಪ್ರಭಾವದ ಸರಪಳಿಯನ್ನು ಕತ್ತರಿಸುವುದೇ ಇದರ ಮುಖ್ಯ ಉದ್ದೇಶವಾಗಿದೆ.

ವಿವಿಧ ಕಾನೂನು ಜಾರಿ ಮತ್ತು ಗುಪ್ತಚರ ಇಲಾಖೆಗಳು, ರಾಜ್ಯ ಪೊಲೀಸ್ ಹಾಗೂ ಕೇಂದ್ರ ಏಜೆನ್ಸಿಗಳ ಸಹಯೋಗದಲ್ಲಿ, ಅತಿ ಅಪಾಯಕಾರಿ ಕೈದಿಗಳನ್ನು ಗುರುತಿಸಲಿವೆ. "ಈ ಕೈದಿಗಳನ್ನು ಅವರ ನೆಟ್‌ವರ್ಕ್ ಇಲ್ಲದ ರಾಜ್ಯಗಳು ಅಥವಾ ಪ್ರದೇಶಗಳ ಜೈಲುಗಳಿಗೆ ವರ್ಗಾಯಿಸಲಾಗುವುದು. "ಈ ಅಪಾಯಕಾರಿ ಕೈದಿಗಳು ಇತರ ಕೈದಿಗಳ ಮೇಲೆ ಪ್ರಭಾವ ಬೀರುವುದನ್ನು ತಪ್ಪಿಸುವುದೇ ಇದರ ಮುಖ್ಯ ಉದ್ದೇಶ," ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೇಂದ್ರ ಗೃಹ ಸಚಿವಾಲಯದ ಮೇಲ್ವಿಚಾರಣೆಯಲ್ಲಿ ದೇಶದಾದ್ಯಂತ ಈ ಹೊಸ ಉಪಕ್ರಮ ಜಾರಿಗೆ ಬರಲಿದೆ. ಇದನ್ನು ಕಾರ್ಯ ರೂಪಕ್ಕೆ ತರಲು ಒಂದು ಗುಪ್ತಚರ ಸಂಸ್ಥೆ ಮತ್ತು ಒಂದು ತನಿಖಾ ಸಂಸ್ಥೆಯನ್ನು ನಿಯೋಜಿಸಲಾಗುತ್ತದೆ.

ಈ ಸುದ್ದಿಯನ್ನು ಓದಿ: Viral Video: ದೀಪ ಬೆಳಗಿಸಿ, ರಸ್ತೆ ಗುಂಡಿಗಳಿಗೆ ಹೂವಿನ ಅಲಂಕಾರ ; ವಿನೂತನ ಪ್ರತಿಭಟನೆಯ ವಿಡಿಯೋ ವೈರಲ್‌

ಉದ್ದೇಶ ಮತ್ತು ಪರಿಣಾಮಗಳು

  • ಅಧಿಕಾರಿಗಳ ಪ್ರಕಾರ, ಈ ಕ್ರಮದಿಂದ ಜೈಲುಗಳಿಂದಲೇ ಕಾರ್ಯನಿರ್ವಹಿಸುತ್ತಿರುವ ಅಪಾಯಕಾರಿ ಅಪರಾಧಿ–ಭಯೋತ್ಪಾದಕ ಜಾಲಗಳನ್ನು ಕಿತ್ತುಹಾಕಲು ಸಹಾಯಕವಾಗುತ್ತದೆ.
  • ಇದರಿಂದಾಗಿ ಅಂತಾರಾಜ್ಯ ಮಟ್ಟದಲ್ಲಿ ಗ್ಯಾಂಗ್‌ಗಳು ಹಾಗೂ ಭಯೋತ್ಪಾದಕ ಸಂಘಟನೆಗಳ ಸಂಯೋಜನೆ ಮತ್ತು ಸಂಪರ್ಕಕ್ಕೆ ಬ್ರೇಕ್ ಬೀಳಲಿದೆ.
  • ಈ ಕ್ರಮವು ಜೈಲುಗಳನ್ನು ಸಂಘಟಿತ ಅಪರಾಧ ಮತ್ತು ಉಗ್ರಗಾಮಿ ಚಟುವಟಿಕೆಗಳ ನಿಯಂತ್ರಣ ಕೇಂದ್ರಗಳಾಗಿ ಬಳಸಿಕೊಳ್ಳುವುದನ್ನು ತಡೆಯುವ ದೊಡ್ಡ ಆಂತರಿಕ ಭದ್ರತಾ ಯೋಜನೆಯ ಭಾಗವಾಗಿದೆ.
  • ಮುಖ್ಯವಾಗಿ ಉತ್ತರ ಭಾರತದ ಜೈಲುಗಳು, ವಿಶೇಷವಾಗಿ ಪಂಜಾಬ್ ಮತ್ತು ಜಮ್ಮು–ಕಾಶ್ಮೀರ, ಈ ಯೋಜನೆಯ ಕೇಂದ್ರಬಿಂದುವಾಗಿವೆ.

ಇನ್ನೂ, ಸೆಪ್ಟೆಂಬರ್‌ನ ಕೊನೆಯ ವಾರದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯು (NIA) ಪಂಜಾಬ್, ದೆಹಲಿ, ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನ, ಉತ್ತರಾಖಂಡ್ ಮತ್ತು ಚಂಡೀಗಢ ಸೇರಿದಂತೆ ಒಟ್ಟು 53 ಸ್ಥಳಗಳಲ್ಲಿ ಭಯೋತ್ಪಾದಕ, ಗ್ಯಾಂಗ್‌ಸ್ಟರ್ ಹಾಗೂ ಮಾದಕ ವಸ್ತು ಕಳ್ಳಸಾಗಣೆದಾರರ ವಿರುದ್ಧ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಭಯೋತ್ಪಾದಕ ಅರ್ಷ್ ದಲ್ಲಾ ಮತ್ತು ಹಲವಾರು ಗ್ಯಾಂಗ್‌ಸ್ಟರ್‌ಗಳೊಂದಿಗೆ ಸಂಬಂಧ ಹೊಂದಿದ್ದ ಅನೇಕ ಶಂಕಿತರನ್ನು ಬಂಧಿಸಲಾಗಿತ್ತು.

ಈ ವೇಳೆ “ವಿವಿಧ ರಾಜ್ಯಗಳ ಜೈಲುಗಳಲ್ಲಿ ಸಂಚುಗಳು ರೂಪಿಸಿದ ಬಗ್ಗೆ ಮತ್ತು ವಿದೇಶಗಳಲ್ಲಿ ನೆಲಸಿರುವ ಸಂಘಟಿತ ಜಾಲದ ಮೂಲಕ ಅವುಗಳನ್ನು ನಿರ್ವಹಿಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ," ಎಂದು NIA ತಿಳಿಸಿದೆ. ಈ ಸಂಚುಗಳಲ್ಲಿ ಪ್ರಮುಖವಾಗಿ ಮಹಾರಾಷ್ಟ್ರದ ನಿರ್ಮಾಪಕ ಸಂಜಯ್ ಬಿಯಾನಿ, ಗಣಿಗಾರಿಕಾ ವ್ಯಾಪಾರಿ ಮೆಹಲ್ ಸಿಂಗ್, ಮತ್ತು ಅಂತರರಾಷ್ಟ್ರೀಯ ಕಬಡ್ಡಿ ಆಟಗಾರ ಸಂದೀಪ್ ನಾಂಗಲ್ ಅಂಬಿಯಾ ಅವರ ಕೊಲೆ ಪ್ರಕರಣಗಳು ಸೇರಿವೆ.