ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chhatrapati Sambhajinagar: ಔರಂಗಾಬಾದ್ ರೈಲು ನಿಲ್ದಾಣಕ್ಕೆ 'ಛತ್ರಪತಿ ಸಂಭಾಜಿನಗರ' ಹೆಸರು

Aurangabad railway station: ಔರಂಗಾಬಾದ್ ರೈಲು ನಿಲ್ದಾಣದ ಹೆಸರನ್ನು ಅಧಿಕೃತವಾಗಿ ಬದಲಾಯಿಸಲಾಗಿದೆ. ರೈಲು ನಿಲ್ದಾಣಕ್ಕೆ ಛತ್ರಪತಿ ಸಂಭಾಜಿ ಎಂದು ಹೆಸರಿಡಲಾಗಿದೆ. ಏಕನಾಥ್ ಶಿಂಧೆ ನೇತೃತ್ವದ ಅಂದಿನ ಸರ್ಕಾರ ಔರಂಗಾಬಾದ್ ನಗರವನ್ನು ಛತ್ರಪತಿ ಸಂಭಾಜಿನಗರ ಎಂದು ಔಪಚಾರಿಕವಾಗಿ ಮರುನಾಮಕರಣ ಮಾಡಿತ್ತು. ಇದಾದ ಸುಮಾರು 3 ವರ್ಷಗಳ ಬಳಿಕ ಈ ಹೆಸರನ್ನು ಅಧಿಕೃತ ಮಾಡಲಾಗಿದೆ.

ಔರಂಗಾಬಾದ್: ಛತ್ರಪತಿ ಸಂಭಾಜಿನಗರ (Chhatrapati Sambhajinagar) ಎಂದು ಔರಂಗಾಬಾದ್ ನಗರವನ್ನು (Aurangabad city) ಮರುನಾಮಕರಣ ಮಾಡಿದ ಮೂರು ವರ್ಷಗಳ ಬಳಿಕ ಔರಂಗಾಬಾದ್ ರೈಲು ನಿಲ್ದಾಣದ ಹೆಸರನ್ನುಅಧಿಕೃತವಾಗಿ "ಛತ್ರಪತಿ ಸಂಭಾಜಿನಗರ ರೈಲು ನಿಲ್ದಾಣ" (Chhatrapati Sambhajinagar railway station) ಎಂದು ಮರುನಾಮಕರಣ ಮಾಡಲಾಗಿದೆ. ದಕ್ಷಿಣ ಮಧ್ಯ ರೈಲ್ವೆಯ ನಾಂದೇಡ್ ವಿಭಾಗದ ಅಡಿಯಲ್ಲಿ ಬರುವ ಹೊಸ ನಿಲ್ದಾಣದ ಕೋಡ್ `CPSN' ಆಗಿರುತ್ತದೆ ಎಂದು ಕೇಂದ್ರ ರೈಲ್ವೆ (Central Railway) ಶನಿವಾರ ತಿಳಿಸಿದೆ.

ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರವು ಅಕ್ಟೋಬರ್ 15 ರಂದು ಔರಂಗಾಬಾದ್ ರೈಲು ನಿಲ್ದಾಣದ ಹೆಸರನ್ನು ಬದಲಾಯಿಸಲು ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿತ್ತು. ಏಕನಾಥ್ ಶಿಂಧೆ ನೇತೃತ್ವದ ಹಿಂದಿನ ಸರ್ಕಾರವು ಔರಂಗಾಬಾದ್ ನಗರವನ್ನು ಛತ್ರಪತಿ ಸಂಭಾಜಿನಗರ ಎಂದು ಔಪಚಾರಿಕವಾಗಿ ಮರುನಾಮಕರಣ ಮಾಡಿದ ಸುಮಾರು ಮೂರು ವರ್ಷಗಳ ಅನಂತರ ರೈಲು ನಿಲ್ದಾಣದ ಹೆಸರು ಬದಲಾವಣೆ ಮಾಡಲಾಗಿದೆ.

ಈ ಹಿಂದೆ ಮೊಘಲ್ ಚಕ್ರವರ್ತಿ ಔರಂಗಜೇಬನ ಹೆಸರಿಡಲಾಗಿದ್ದ ಈ ನಗರವು ಛತ್ರಪತಿ ಶಿವಾಜಿ ಮಹಾರಾಜರ ಪುತ್ರ ಮತ್ತು ಮರಾಠಾ ರಾಜ್ಯದ ಎರಡನೇ ದೊರೆ ಛತ್ರಪತಿ ಸಂಭಾಜಿಗೆ ಗೌರವ ಸಲ್ಲಿಸುವ ಸಲುವಾಗಿ ಹೊಸ ಹೆಸರನ್ನು ನೀಡಲಾಗಿದೆ. ಔರಂಗಾಬಾದ್ ರೈಲು ನಿಲ್ದಾಣವನ್ನು 1900 ರಲ್ಲಿ ಹೈದರಾಬಾದ್‌ನ 7ನೇ ನಿಜಾಮ್ ಮೀರ್ ಉಸ್ಮಾನ್ ಅಲಿ ಖಾನ್ ಆಳ್ವಿಕೆಯಲ್ಲಿ ತೆರೆಯಲಾಗಿತ್ತು. ಪ್ರವಾಸಿ ಕೇಂದ್ರವು ಆಗಿರುವ ಛತ್ರಪತಿ ಸಂಭಾಜಿನಗರಕ್ಕೆ ಸಮೀಪವಾಗಿ ಅಜಂತಾ, ಎಲ್ಲೋರಾ ಗುಹೆಗಳು ಸೇರಿದಂತೆ ಅನೇಕ ಐತಿಹಾಸಿಕ ಸ್ಮಾರಕಗಳಿವೆ. ಇವೆರಡೂ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿವೆ.

ಇದನ್ನೂ ಓದಿ: Viral Video: ಪ್ರಧಾನಿ ಮೋದಿಯ ಕಾರು ಫುಟ್‌ಪಾತ್‌ನಲ್ಲಿ ವಾಶ್‌- ಇದೇನಾ ಸೆಕ್ಯೂರಿಟಿ ಎಂದ ನೆಟ್ಟಿಗರು!

ರೈಲ್ವೆ ಹಳಿ ಸ್ಫೋಟದ ಆರೋಪಿ ಬಲಿ

ಮಾವೋವಾದಿಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ವ್ಯಕ್ತಿಯೊಬ್ಬ ಪೊಲೀಸರ ಗುಂಡಿಗೆ ಬಲಿಯಾಗಿರುವ ಘಟನೆ ಶನಿವಾರ ಅಸ್ಸಾಂನ ಕೊಕ್ರಜಾರ್​​ ಜಿಲ್ಲೆಯಲ್ಲಿ ನಡೆದಿದೆ. ಮೃತನನ್ನು ಐಪಿಲ್ ಮುರ್ಮು ಅಲಿಯಾಸ್ ರೋಹಿತ್ ಮುರ್ಮು ಎಂದು ಗುರುತಿಸಲಾಗಿದೆ. ರೋಹಿತ್ ಮುರ್ಮು ಇತ್ತೀಚೆಗೆ ಜಿಲ್ಲೆಯಲ್ಲಿ ನಡೆದ ರೈಲ್ವೆ ಹಳಿ ಸ್ಫೋಟದ ಪ್ರಮುಖ ಆರೋಪಿಗಳಲ್ಲಿ ಒಬ್ಬ. ಅಲ್ಲದೆ ಕಳೆದ ವರ್ಷ ಜಾರ್ಖಂಡ್‌ನಲ್ಲಿ ನಡೆದ ಇದೇ ರೀತಿಯ ಸ್ಫೋಟ ಪ್ರಕರಣದಲ್ಲಿಯೂ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆತನನ್ನು ಬಂಧಿಸಲು ಜಾರ್ಖಂಡ್ ಪೊಲೀಸ್ ತಂಡ ಇತ್ತೀಚೆಗೆ ಅಸ್ಸಾಂಗೆ ಭೇಟಿ ನೀಡಿ ಸ್ಥಳೀಯ ಅಧಿಕಾರಿಗಳೊಂದಿಗೆ ಕಾರ್ಯಾಚರಣೆ ನಡೆಸಿತು. ಕಾರ್ಯಾಚರಣೆಯ ಬಳಿಕ ಪೊಲೀಸರು ಎನ್‌ಕೌಂಟರ್ ನಡೆದ ಸ್ಥಳದಿಂದ 1 ಪಿಸ್ತೂಲ್, ಗ್ರೆನೇಡ್, ಮತದಾರರ ಗುರುತಿನ ಚೀಟಿ ಮತ್ತು ಜಾರ್ಖಂಡ್‌ನಲ್ಲಿ ನೀಡಲಾದ ಆಧಾರ್ ಕಾರ್ಡ್ ವಶಪಡಿಸಿಕೊಂಡಿದ್ದಾರೆ.

ಕಳೆದ ವರ್ಷ ಜಾರ್ಖಂಡ್‌ನಲ್ಲಿ ಸ್ಫೋಟ ನಡೆಸಿದ ನಂತರ ಮುರ್ಮು ಅಸ್ಸಾಂಗೆ ಪರಾರಿಯಾಗಿದ್ದ. ಜಾರ್ಖಂಡ್‌ನಲ್ಲಿಆತ ರೋಹಿತ್ ಮುರ್ಮು ಎಂಬ ಹೆಸರಿನಿಂದ ಗುರುತಿಸಿಕೊಂಡಿದ್ದ. ಅಸ್ಸಾಂನಲ್ಲಿ ಈತನ ಹೆಸರು ಐಪಿಲ್ ಮುರ್ಮು ಎಂದು ಕೊಕ್ರಜಾರ್​​ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಪುಷ್ಪರಾಜ್ ಸಿಂಗ್ ಹೇಳಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author