ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

YouTuber Jyoti Malhotra: ಬಗೆದಷ್ಟು ಬಯಲಾಗುತ್ತಿದೆ ದೇಶದ್ರೋಹಿಯ ಕತೆ; ಪಹಲ್ಗಾಮ್ ದಾಳಿಗೂ ಮುನ್ನ ಪಾಕಿಸ್ತಾನ, ಚೀನಾಕ್ಕೆ ತೆರಳಿದ್ದ ಜ್ಯೋತಿ ಮಲ್ಹೋತ್ರಾ

YouTuber Jyoti Malhotra: ಹಿಸಾರ್‌ನ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಅವರನ್ನು ಬೇಹುಗಾರಿಕೆ ಆರೋಪದ ಮೇಲೆ ಬಂಧಿಸಿದ ಎರಡು ದಿನಗಳ ನಂತರ, ಹಿಸಾರ್ ಎಸ್‌ಪಿ ಶಶಾಂಕ್ ಕುಮಾರ್ ಸಾವನ್ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ, ಪಾಕಿಸ್ತಾನದ ಗುಪ್ತಚರರುಜ್ಯೋತಿಯನ್ನು ತಮ್ಮ ಅಸ್ತ್ರವನ್ನಾಗಿ ಬಳಸಲು ತರಬೇತಿಗೊಳಿಸುತ್ತಿದ್ದರು ಎಂದು ಸ್ಪೋಟಕ ಮಾಹಿತಿ ನೀಡಿದ್ದಾರೆ. ಜ್ಯೋತಿ ಪಾಕಿಸ್ತಾನಕ್ಕೆ ಹಲವಾರು ಬಾರಿ ಭೇಟಿ ನೀಡಿದ್ದಾರೆ, ಅದರಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಮೊದಲಿನ ಒಂದು ಪ್ರವಾಸವೂ ಸೇರಿದೆ. ಇದರ ಜೊತೆಗೆ ಚೀನಾಕ್ಕೂ ಪ್ರಯಾಣಿಸಿದ್ದಾರೆ ಎಂದು ಎಸ್‌ಪಿ ತಿಳಿಸಿದ್ದಾರೆ.

ಪಹಲ್ಗಾಮ್​ ದಾಳಿಗೂ ಜ್ಯೋತಿ ಮಲ್ಹೋತ್ರಾಗೂ ಇದೆಯಾ ಲಿಂಕ್?

ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ

Profile Sushmitha Jain May 19, 2025 12:18 PM

ಹಿಸಾರ್: ಹಿಸಾರ್‌ನ (Hisar) ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ (YouTuber Jyoti Malhotra) ಬೇಹುಗಾರಿಕೆ (Espionage) ಆರೋಪದ ಮೇಲೆ ಬಂಧಿಸಿದ ಎರಡು ದಿನಗಳ ನಂತರ, ಹಿಸಾರ್ ಎಸ್‌ಪಿ ಶಶಾಂಕ್ ಕುಮಾರ್ ಸಾವನ್ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ, ಪಾಕಿಸ್ತಾನದ ಗುಪ್ತಚರರು (Pakistani Intelligence Operatives) ಜ್ಯೋತಿಯನ್ನು ತಮ್ಮ ಅಸ್ತ್ರವನ್ನಾಗಿ ಬಳಸಲು ತರಬೇತಿಗೊಳಿಸುತ್ತಿದ್ದರು ಎಂದು ಸ್ಪೋಟಕ ಮಾಹಿತಿ ನೀಡಿದ್ದಾರೆ. ಜ್ಯೋತಿ ಪಾಕಿಸ್ತಾನಕ್ಕೆ (Pakistan) ಹಲವಾರು ಬಾರಿ ಭೇಟಿ ನೀಡಿದ್ದಾಳೆ, ಅದರಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಮೊದಲಿನ ಒಂದು ಪ್ರವಾಸವೂ ಸೇರಿದೆ. ಇದರ ಜೊತೆಗೆ ಚೀನಾಕ್ಕೂ ಪ್ರಯಾಣಿಸಿದ್ದಳು ಎಂದು ಎಸ್‌ಪಿ ತಿಳಿಸಿದ್ದಾರೆ.

ಕೇಂದ್ರ ಗುಪ್ತಚರ ಸಂಸ್ಥೆಗಳು, ಪಾಕ್ ಗುಪ್ತಚರ ಕಾರ್ಯಕರ್ತರು ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌‌ಗಳನ್ನು ಮೃದು ದೋರಣೆಗಳನ್ನು ಉತ್ತೇಜಿಸಲು ನೇಮಕ ಮಾಡುತ್ತಿರುವ ಬಗ್ಗೆ ಹರಿಯಾಣ ಪೊಲೀಸರಿಗೆ ಮಾಹಿತಿ ನೀಡಿವೆ. ಶುಕ್ರವಾರ ಬಂಧಿತಳಾದ ಜ್ಯೋತಿಯನ್ನು ಐದು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. “ಜ್ಯೋತಿಯನ್ನು ಹರಿಯಾಣ ಪೊಲೀಸರು, ಕೇಂದ್ರ ಏಜೆನ್ಸಿಗಳ ಸಹಕಾರದೊಂದಿಗೆ ವಿಚಾರಣೆ ನಡೆಸುತ್ತಿದ್ದಾರೆ. ಅವರ ಹಣಕಾಸು ವ್ಯವಹಾರಗಳು ಮತ್ತು ಟ್ರಾವೆಲ್ ಹಿಸ್ಟರಿಗಳನ್ನು ವಿಶ್ಲೇಷಿಸಲಾಗುತ್ತಿದೆ. ಆಕೆ ಆದಾಯ ಮೂಲಗಳು ವಿದೇಶಿ ಪ್ರವಾಸಗಳಿಗೆ ಸಾಕಾಗುವಂತಿಲ್ಲ. ಹೊರಗಿನ ಧನಸಹಾಯದ ಶಂಕೆಯಿದೆ. ಮೇಲ್ನೋಟಕ್ಕೆ ಆಕೆ ಕೇವಲ ಟ್ರಾವೆಲ್ ಬ್ಲಾಗರ್ ಆಗಿದ್ದರು” ಎಂದು ಎಸ್‌ಪಿ ಸಾವನ್ ಹೇಳಿದ್ದಾರೆ.

ಭಾರತವು ‘ಪರ್ಸೋನಾ ನಾನ್ ಗ್ರಾಟಾ’ ಎಂದು ಘೋಷಿಸಿದ ವ್ಯಕ್ತಿಗಳನ್ನೂ ಸೇರಿದಂತೆ ಪಾಕ್ ಗುಪ್ತಚರ ಅಧಿಕಾರಿಗಳೊಂದಿಗೆ ಜ್ಯೋತಿ ನೇರ ಸಂಪರ್ಕದಲ್ಲಿದ್ದಳು. ಭಾರತ-ಪಾಕಿಸ್ತಾನದ ನಡುವೆ ಉದ್ವಿಗ್ನತೆಯ ಸಂದರ್ಭದಲ್ಲಿ ಅವರ ಸಂವಹನ “ಆತಂಕಕಾರಿಯಾಗಿತ್ತು” ಎಂದು ಎಸ್‌ಪಿ ದೃಢಪಡಿಸಿದ್ದಾರೆ. “ಪಾಕಿಸ್ತಾನ ಭೇಟಿಯ ಸಂದರ್ಭದಲ್ಲಿ ಜ್ಯೋತಿ ಹಲವಾರು ಉನ್ನತ ವ್ಯಕ್ತಿಗಳೊಂದಿಗೆ ಸಂವಾದ ನಡೆಸಿದ್ದಳು. ಇತ್ತೀಚೆಗೆ ಬಂಧನವಾದರೂ, ಗುಪ್ತಚರ ಏಜೆನ್ಸಿಗಳು ಅವರ ಚಟುವಟಿಕೆಗಳನ್ನು ಹಿಂದಿನಿಂದಲೇ ಗಮನಿಸುತ್ತಿದ್ದವು” ಎಂದು ಎಸ್‌ಪಿ ಸಾವನ್ ತಿಳಿಸಿದ್ದಾರೆ. ನಿಖಾಧಿಕಾರಿಗಳು ಜ್ಯೋತಿಯ ಭಾರತೀಯ ಸಂಪರ್ಕಗಳನ್ನು, ಅವರನ್ನು ಪಾಕ್ ಗುಪ್ತಚರ ಅಧಿಕಾರಿಗಳಿಗೆ ಪರಿಚಯಿಸಿದವರನ್ನು ಮತ್ತು ವಿದೇಶಿ ಪ್ರವಾಸಗಳಿಗೆ ಸಹಾಯ ಮಾಡಿದವರನ್ನು ಪರಿಶೀಲಿಸುತ್ತಿದ್ದಾರೆ.

ವರದಿಯ ಪ್ರಕಾರ, ಒಡಿಶಾದ ಪುರಿ ಮೂಲದ ಯೂಟ್ಯೂಬರ್‌ ಜೊತೆ ಸಂಪರ್ಕದ ಬಗ್ಗೆ ಒಡಿಶಾ ಪೊಲೀಸರು ತಮ್ಮದೇ ತನಿಖೆ ಆರಂಭಿಸಿದ್ದಾರೆ. ಪುರಿ ಎಸ್‌ಪಿ ವಿನೀತ್ ಅಗರವಾಲ್, ಜ್ಯೋತಿ 2024ರ ಸೆಪ್ಟೆಂಬರ್‌ನಲ್ಲಿ ಪುರಿಗೆ ಭೇಟಿ ನೀಡಿ, ಇತ್ತೀಚೆಗೆ ಪಾಕಿಸ್ತಾನದ ಕರ್ತಾರಪುರ ಸಾಹಿಬ್‌ಗೆ ಪ್ರವಾಸ ಮಾಡಿದ್ದ ಮಹಿಳೆಯನ್ನು ಭೇಟಿಯಾಗಿದ್ದರು ಎಂದು ದೃಢಪಡಿಸಿದ್ದಾರೆ. “ಹರಿಯಾಣ ಪೊಲೀಸರು ತನಿಖೆಯನ್ನು ಮುನ್ನಡೆಸುತ್ತಿದ್ದಾರೆ, ನಾವು ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ” ಎಂದು ಅಗರವಾಲ್ ಹೇಳಿದ್ದಾರೆ.

33 ವರ್ಷದ ಜ್ಯೋತಿ, Travel with JO ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದು, ಇದಕ್ಕೆ 3.77 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. ಹಿಸಾರ್ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್‌ಐಆರ್ ಪ್ರಕಾರ, 2023ರಲ್ಲಿ ವೀಸಾಕ್ಕಾಗಿ ಪಾಕಿಸ್ತಾನ ಹೈಕಮಿಷನ್‌ಗೆ ಭೇಟಿ ನೀಡಿದಾಗ ಜ್ಯೋತಿ, ಇಹ್ಸಾನ್-ಉರ್-ರಹೀಮ್ ಉರ್ಫ್ ಡ್ಯಾನಿಶ್ ಎಂಬಾತನನ್ನು ಭೇಟಿಯಾಗಿದ್ದರು. ಡ್ಯಾನಿಶ್ ಅವರನ್ನು ಅಲಿ ಅಹ್ವಾನ್‌ಗೆ ಪರಿಚಯಿಸಿದ್ದು, ಇವರು ಜ್ಯೋತಿಯ ವಸತಿ ಮತ್ತು ಪಾಕಿಸ್ತಾನದ ಭದ್ರತಾ ಅಧಿಕಾರಿಗಳಾದ ಶಾಕಿರ್ ಮತ್ತು ರಾಣಾ ಶಹಬಾಜ್ ಜೊತೆ ಭೇಟಿ ಏರ್ಪಡಿಸಿದ್ದರು. “ಶಾಕಿರ್‌ನ ನಂಬರ್ ಅನ್ನು ಜ್ಯೋತಿ ‘ಜಟ್ ರಾಂಧವಾ’ ಎಂದು ಸೇವೆ ಮಾಡಿಕೊಂಡಿದ್ದರು,” ಎಂದು ಎಫ್‌ಐಆರ್ ತಿಳಿಸಿದೆ.

ಈ ಸುದ್ದಿಯನ್ನು ಓದಿ: Jyoti Malhotra: ಪಾಕಿಸ್ತಾನಕ್ಕೆ ರಹಸ್ಯ ಮಾಹಿತಿ ಸೋರಿಕೆ ಮಾಡುತ್ತಿದ್ದ ಯುಟ್ಯೂಬರ್‌ ಜ್ಯೋತಿ ಮಲ್ಹೋತ್ರಾ ಸೆರೆ; ಯಾರಳಿವಳು? ಏನಿವಳ ಹಿನ್ನೆಲೆ?

ಭಾರತಕ್ಕೆ ಮರಳಿದ ನಂತರ, ಜ್ಯೋತಿ ವಾಟ್ಸಾಪ್, ಟೆಲಿಗ್ರಾಮ್, ಮತ್ತು ಸ್ನ್ಯಾಪ್‌ಚಾಟ್‌ನಂತಹ ಎನ್‌ಕ್ರಿಪ್ಟೆಡ್ ಆ್ಯಪ್‌ಗಳ ಮೂಲಕ ಸಂಪರ್ಕ ಮುಂದುವರೆಸಿದ್ದಳು. ಡ್ಯಾನಿಶ್‌ನೊಂದಿಗೆ ದೆಹಲಿಯ ಪಾಕ್ ಹೈಕಮಿಷನ್‌ನಲ್ಲಿ ಹಲವು ಬಾರಿ ಭೇಟಿಯಾಗಿದ್ದಳು. ಜ್ಯೋತಿ, ಹರಿಯಾಣ ಮತ್ತು ಪಂಜಾಬ್‌ನಾದ್ಯಂತ ಕಾರ್ಯನಿರ್ವಹಿಸುವ ಗೂಢಚಾರಿಕೆ ಜಾಲದ ಭಾಗವಾಗಿದ್ದಳು ಎಂದು ಎಫ್‌ಐಆರ್ ಆರೋಪಿಸಿದೆ.

ಡ್ಯಾನಿಶ್‌ಗೆ ‘ಪರ್ಸೋನಾ ನಾನ್ ಗ್ರಾಟಾ’ ಘೋಷಣೆ

ಮೇ 13ರಂದು, ಭಾರತ ಸರ್ಕಾರವು ಡ್ಯಾನಿಶ್‌ನನ್ನು ಅವರ ರಾಜತಾಂತ್ರಿಕ ಸ್ಥಾನಮಾನಕ್ಕೆ ವಿರುದ್ಧವಾದ ಚಟುವಟಿಕೆಗಳಿಗಾಗಿ ‘ಪರ್ಸೋನಾ ನಾನ್ ಗ್ರಾಟಾ’ ಎಂದು ಘೋಷಿಸಿ, 24 ಗಂಟೆಗಳ ಒಳಗೆ ದೇಶ ತೊರೆಯಲು ಆದೇಶಿಸಿತು. ಎರಡು ದಿನಗಳ ಹಿಂದೆ, ಪಂಜಾಬ್ ಪೊಲೀಸರು ಡ್ಯಾನಿಶ್‌ಗೆ ಸಂಬಂಧಿಸಿದ ಪ್ರಕರಣದಲ್ಲಿ ಮಲೇರ್ಕೋಟ್ಲಾದಿಂದ ಮಹಿಳೆ ಸೇರಿದಂತೆ ಇಬ್ಬರನ್ನು ಬಂಧಿಸಿದ್ದರು.

ಜ್ಯೋತಿಯ ತಂದೆ, ಈ ಆರೋಪಗಳನ್ನು ಕುಟುಂಬವನ್ನು ಅಪಮಾನಿಸಲು ರೂಪಿಸಿದ ಪಿತೂರಿ ಎಂದು ಕರೆದು ನಿರಾಕರಿಸಿದ್ದಾರೆ. ಪಾಕ್ ಗುಪ್ತಚರರೊಂದಿಗೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಕೈತಾಲ್‌ನ 25 ವರ್ಷದ ಸ್ನಾತಕೋತ್ತರ ವಿದ್ಯಾರ್ಥಿ ದೇವೇಂದರ್ ಸಿಂಗ್ ಅವರನ್ನು ಬಂಧಿಸಿದ ಒಂದು ದಿನದ ನಂತರ ಜ್ಯೋತಿಯನ್ನು ಬಂಧಿಸಲಾಗಿದೆ. ಅದಕ್ಕೂ ಮೊದಲು, ಶಾಮ್ಲಿಯ 24 ವರ್ಷದ ನೌಮನ್ ಇಲಾಹಿ ಅವರನ್ನು ಇದೇ ರೀತಿಯ ಆರೋಪಗಳ ಅಡಿಯಲ್ಲಿ ಪಾಣಿಪತ್‌ನಲ್ಲಿ ಬಂಧಿಸಲಾಗಿತ್ತು.