ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಸರ್ಕಾರದ ಪ್ರಧಾನ ಕಚೇರಿ ಎದುರೇ ರಾಜಾರೋಷವಾಗಿ ಹುಕ್ಕಾ ಸೇದಿದ ಕಿಡಿಗೇಡಿ; ವಿಡಿಯೋ ನೋಡಿ

ಮುಂಬೈನ ಪ್ರಸಿದ್ಧ ಹೋಟೆಲ್‌ನ ಮಾಲೀಕರೊಬ್ಬರು ಮಹಾರಾಷ್ಟ್ರದ ಸಾರ್ವಜನಿಕ ಹುಕ್ಕಾ ನಿಷೇಧದ ಉಲ್ಲಂಘನೆ ಮಾಡಿದ್ದಾರೆ. ರಾಜ್ಯದ ಆಡಳಿತ ಕೇಂದ್ರವಾದ ಮಂತ್ರಾಲಯದ ಹೊರಗೆ ಐಷಾರಾಮಿ ವಾಹನದೊಳಗೆ ಹುಕ್ಕಾ ಧೂಮಪಾನ ಮಾಡುತ್ತಿರುವ ವಿಡಿಯೋ ಕ್ಯಾಮರಾದಲ್ಲಿ (Viral Video) ಸೆರೆಯಾಗಿದೆ.

ಸರ್ಕಾರಿ ಕಚೇರಿ ಎದುರೇ ಹುಕ್ಕಾ ಸೇದಿದ ಕಿಡಿಗೇಡಿ!

-

Vishakha Bhat Vishakha Bhat Jul 18, 2025 1:57 PM

ಮುಂಬೈ: ಮುಂಬೈನ ಪ್ರಸಿದ್ಧ ಹೋಟೆಲ್‌ನ ಮಾಲೀಕರೊಬ್ಬರು ಮಹಾರಾಷ್ಟ್ರದ ಸಾರ್ವಜನಿಕ ಹುಕ್ಕಾ ನಿಷೇಧದ ಉಲ್ಲಂಘನೆ ಮಾಡಿದ್ದಾರೆ. ರಾಜ್ಯದ ಆಡಳಿತ ಕೇಂದ್ರವಾದ ಮಂತ್ರಾಲಯದ ಹೊರಗೆ ಐಷಾರಾಮಿ ವಾಹನದೊಳಗೆ ಹುಕ್ಕಾ ಧೂಮಪಾನ ಮಾಡುತ್ತಿರುವ ವಿಡಿಯೋ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, ವೈರಲ್ ಆಗಿದೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸಾರ್ವಜನಿಕ ಸ್ಥಳಗಳಲ್ಲಿ ಹುಕ್ಕಾ ನಿಷೇಧಕ್ಕೆ ಸ್ಪಷ್ಟವಾಗಿ ಆದೇಶಿಸಿದ್ದರೂ ಇದು ಎಗ್ಗಿಲ್ಲದೆ ನಡೆಯುತ್ತಿದೆ. ವೈರಲ್ ವಿಡಿಯೋದಲ್ಲಿ (Viral Video) ವ್ಯಕ್ತಿಯೊಬ್ಬರು ಕಾರು ಚಲಾಯಿಸುತ್ತಾ ಹುಕ್ಕಾ ಸೇದುತ್ತಿರುವುದನ್ನು ತೋರಿಸುತ್ತದೆ.

ವೈರಲ್ ವಿಡಿಯೋದಲ್ಲಿ, ವ್ಯಕ್ತಿಯನ್ನು ಮುಂಬೈನ ಮಸೀದಿ ಪ್ರದೇಶದಲ್ಲಿರುವ ಫಹಮ್ ಲೌಂಜ್‌ನ ಮಾಲೀಕ ಮೊಹಮ್ಮದ್ ಠಕ್ಕರ್ ಎಂದು ಗುರುತಿಸಲಾಗಿದೆ. ಮಂತ್ರಾಲಯದ ಸುತ್ತಮುತ್ತಲಿನ ಆವರಣದಲ್ಲಿ ರೇಂಜ್ ರೋವರ್ ಎಸ್‌ಯುವಿ ಚಾಲನೆ ಮಾಡುವಾಗ ಅವರು ಹುಕ್ಕಾ ಸೇದುತ್ತಿರುವುದು ಕಂಡುಬಂದಿದೆ. ವೀಡಿಯೊದಲ್ಲಿ ಹುಕ್ಕಾ ‘ಗಿಡಮೂಲಿಕೆ’ ಎಂದು ಠಕ್ಕರ್ ಹೇಳಿಕೊಂಡಿದ್ದಾನೆ.

ಸಾರ್ವಜನಿಕ ಸ್ಥಳಗಳಲ್ಲಿ ಹುಕ್ಕಾ ಸೇದುವಂತಿಲ್ಲ ಎಂದು ಸರ್ಕಾರ ಆದೇಶ ಹೊರಡಿಸಿದ್ದರೂ ಠಕ್ಕರ್ ಕಾರು ಚಲಾಯಿಸುತ್ತಾ ಹುಕ್ಕಾ ಸೇದಿದ್ದಾರೆ. ಅಲ್ಲದೆ, ಯಾರಾದರೂ ಹುಕ್ಕಾ ಸೇದಲು ಬಯಸಿದರೆ, ಅವರು ತನ್ನ ಕಾರಿನಲ್ಲಿ ಕುಳಿತುಕೊಳ್ಳಬಹುದು ಎಂದೂ ಹೇಳಿದ್ದಾನೆ. ಎಸ್‌ಯುವಿಯ ಹಿಂದಿನ ಸೀಟಿನಲ್ಲಿ ಫಹಮ್ ಲೌಂಜ್‌ನ ಸಿಬ್ಬಂದಿ ಕುಳಿತುಕೊಂಡಿದ್ದರು ಎನ್ನಲಾಗಿದೆ. ಠಕ್ಕರ್ ಮಂತ್ರಾಲಯ ಸಿಗ್ನಲ್‌ನಿಂದ ಏರ್ ಇಂಡಿಯಾ ಕಟ್ಟಡದ ಕಡೆಗೆ ಚಾಲನೆ ಮಾಡುತ್ತಾ ಹುಕ್ಕಾ ಸೇದುವುದನ್ನು ಮುಂದುವರಿಸಿದ್ದಾನೆ.

ಮೊಹಮ್ಮದ್ ಠಕ್ಕರ್ ಯಾರು?

ಮೂಲಗಳ ಪ್ರಕಾರ, ಮೊಹಮ್ಮದ್ ಠಕ್ಕರ್ ಮುಂಬೈನ ಮಸೀದಿ ಪ್ರದೇಶದಲ್ಲಿರುವ ಫಹಮ್ ಲೌಂಜ್ ಎಂಬ ಹೋಟೆಲ್‌ನ ಮಾಲೀಕ. ದುಬೈ ಸೇರಿದಂತೆ ವಿವಿಧ ದೇಶಗಳಲ್ಲಿ ಹಲವಾರು ಇತರ ಫ್ರಾಂಚೈಸಿಗಳನ್ನು ಹೊಂದಿದ್ದಾನೆ. ವಿಡಿಯೋದಲ್ಲಿ ಮೊಹಮ್ಮದ್ ಹೇಳಿಕೊಂಡಿರುವಂತೆ, ಆತನ ರೆಸ್ಟೋರೆಂಟ್‌ಗೆ ಭೇಟಿ ನೀಡುವ ವ್ಯಕ್ತಿಗಳಿಗೆ ಹರ್ಬಲ್ ಹುಕ್ಕಾವನ್ನು ನೀಡಲಾಗುತ್ತದೆಯಂತೆ.

ಅಂದಹಾಗೆ, ಮುಂಬೈ ನಗರದಾದ್ಯಂತ ಹಲವಾರು ಇತರ ಹುಕ್ಕಾ ಪಾರ್ಲರ್‌ಗಳಲ್ಲಿ ಯುವಜನತೆಗೆ ಗಿಡಮೂಲಿಕೆಗಳ ಸುವಾಸನೆಯ ರೂಪದಲ್ಲಿ ನಿಕೋಟಿನ್ ಮಿಶ್ರಿತ ಸುವಾಸನೆಗಳನ್ನು ನೀಡಲಾಗುತ್ತದೆ. ಇನ್ನು ಈ ವೈರಲ್ ವಿಡಿಯೋದ ಕುರಿತು ಮುಂಬೈ ಪೊಲೀಸರು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ಈ ಸುದ್ದಿಯನ್ನೂ ಓದಿ: Viral Video: ಕೋಲ್ಡ್‌ಪ್ಲೇ ಕಾರ್ಯಕ್ರಮದಲ್ಲಿ ಖ್ಯಾತ ಕಂಪನಿಯ CEO ಮತ್ತು HR ಲವ್ವಿ-ಡವ್ವಿ ಬಟಾ ಬಯಲು- ವಿಡಿಯೊ ಫುಲ್‌ ವೈರಲ್‌

ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹುಕ್ಕಾ ಪಾರ್ಲರ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪ್ರತಿಜ್ಞೆ ಮಾಡಿದ ಕೆಲವೇ ತಿಂಗಳುಗಳ ನಂತರ ಈ ವಿಡಿಯೋ ಕಾಣಿಸಿಕೊಂಡಿದೆ. ಮಾರ್ಚ್ 25, 2025 ರಂದು, ರಾಜ್ಯ ವಿಧಾನಸಭಾ ಅಧಿವೇಶನದಲ್ಲಿ, ಸಿಎಂ ಫಡ್ನವೀಸ್, ಹುಕ್ಕಾ ಪಾರ್ಲರ್‌ಗಳನ್ನು ನಿಷೇಧಿಸುವ ಕಾನೂನನ್ನು ಇನ್ನಷ್ಟು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು. ಈ ನಿಯಮವನ್ನು ಉಲ್ಲಂಘಿಸುವ ರೆಸ್ಟೋರೆಂಟ್‌ಗಳ ಪರವಾನಗಿಗಳನ್ನು ರದ್ದುಗೊಳಿಸಲಾಗುವುದು ಮತ್ತು ಕಾನೂನು ಜಾರಿ ಸಂಸ್ಥೆಗಳನ್ನು ಹೊರತುಪಡಿಸಿ ಬೇರೆ ಯಾರಾದರೂ ಅಂತಹ ಚಟುವಟಿಕೆಗಳನ್ನು ಮಾಡುವುದು ಕಂಡುಬಂದೆ ಪ್ರದೇಶ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದರು.