ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Missing Case: ನ್ಯಾಯಾಧೀಶೆಯಾಗಲು ತಯಾರಿ ನಡೆಸುತ್ತಿದ್ದ ಯುವತಿ ನಾಪತ್ತೆ ಕೇಸ್‌ನಲ್ಲಿ ಟ್ವಿಸ್ಟ್‌; ಆಕೆ ಹೋಗಿದ್ದಾದರೂ ಎಲ್ಲಿಗೆ?

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಾಪತ್ತೆ ಪ್ರಕರಣ ಕೊನೆಗೂ ಇತ್ಯರ್ಥಗೊಂಡಿದೆ. ಸಿವಿಲ್ ನ್ಯಾಯಾಧೀಶ ಹುದ್ದೆಯ ಆಕಾಂಕ್ಷಿ 29 ವರ್ಷದ ಅರ್ಚನಾ ತಿವಾರಿ ಇಂದೋರ್‌ ರೈಲ್ವೆ ನಿಲ್ದಾಣದಲ್ಲಿ ನಾಪತ್ತೆಯಾಗಿದ್ದರು. ಇದೀಗ ಅವರ ಸುಳಿವು ಸಿಕ್ಕಿದೆ ಎಂದು ತಿಳಿದು ಬಂದಿದೆ.

ಇಂದೋರ್‌: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಾಪತ್ತೆ ಪ್ರಕರಣ (Missing Case) ಕೊನೆಗೂ ಇತ್ಯರ್ಥಗೊಂಡಿದೆ. ಸಿವಿಲ್ ನ್ಯಾಯಾಧೀಶ ಹುದ್ದೆಯ ಆಕಾಂಕ್ಷಿ 29 ವರ್ಷದ ಅರ್ಚನಾ ತಿವಾರಿ ಇಂದೋರ್‌ (Madhya Pradesh) ರೈಲ್ವೆ ನಿಲ್ದಾಣದಲ್ಲಿ ನಾಪತ್ತೆಯಾಗಿದ್ದರು. ಅವರು ಇಂದೋರ್‌ನಿಂದ ಕಟ್ನಿಗೆ ರೈಲು ಹತ್ತಿದ್ದರು. ಅದಾದ ಬಳಿಕ ಅವರು ಎಲ್ಲಿಗೆ ಹೋದರು ಏನಾದರು ಎಂಬುದು ಯಾರಿಗೂ ತಿಳಿದಿರಲಿಲ್ಲ. ಇದೀಗ ಅವರ ಸುಳಿವು ಸಿಕ್ಕಿದೆ. ಗ್ವಾಲಿಯರ್‌ನಲ್ಲಿ ನಿಯೋಜಿತರಾಗಿದ್ದ ಕಾನ್‌ಸ್ಟೆಬಲ್‌ ಜೊತೆ ಅರ್ಚನಾ ಸಂಪರ್ಕದಲ್ಲಿದ್ದಾಳೆ ಎಂದು ತಿಳಿದು ಬಂದಿದೆ. ಅರ್ಚನಾ ಸಹೋದರ ದಿವ್ಯಾಂಶು ಮಿಶ್ರಾ ಕೂಡ ಆಕೆ ಜೀವಂತವಾಗಿದ್ದಾಳೆ ಎಂದು ತಿಳಿಸಿದ್ದಾರೆ.

ಭೋಪಾಲ್ ರೈಲ್ವೆ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಲೋಧಾ, ಪೊಲೀಸರಿಗೆ ಕೆಲವು ಪ್ರಮುಖ ಸುಳಿವುಗಳು ಸಿಕ್ಕಿವೆ ಆದರೆ ಹೆಚ್ಚಿನ ಮಾಹಿತಿಯನ್ನು ಹಂಚಿಕೊಂಡಿಲ್ಲ ಎಂದು ಹೇಳಿದರು. ಆಕೆ ತನ್ನ ತಾಯಿಯೊಂದಿಗೆ ಮಾತನಾಡಿದ್ದಾಳೆ ಮತ್ತು ತನ್ನ ಸ್ಥಳವನ್ನು ಹಂಚಿಕೊಂಡಿದ್ದಾಳೆ ಎಂದು ಮೂಲಗಳು ತಿಳಿಸಿವೆ. ಆಕೆಯನ್ನು ಕರೆದುಕೊಂಡು ಹೋಗಲು ರೈಲ್ವೆ ಪೊಲೀಸ್ ತಂಡ ಸ್ಥಳಕ್ಕೆ ತೆರಳಿದೆ ಎಂದು ತಿಳಿದು ಬಂದಿದೆ ಎಂದು ಅವರು ತಿಳಿಸಿದ್ದಾರೆ.

ಕಾನೂನು ಪದವೀಧರೆಯಾದ ಅವರು ಇಂದೋರ್‌ನಲ್ಲಿ ನ್ಯಾಯಾಂಗ ಸೇವೆಗಳಿಗೆ ತಯಾರಿ ನಡೆಸುತ್ತಿದ್ದರು. ಅವರು ಆಗಸ್ಟ್ 7 ರಂದು ಇಂದೋರ್-ಬಿಲಾಸ್ಪುರ್ ನರ್ಮದಾ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸಿದ್ದರು. ರೈಲು ಭೋಪಾಲ್ ತಲುಪಿದಾಗ ರಾತ್ರಿ 10:15 ಕ್ಕೆ ಅವರು ಕೊನೆಯ ಬಾರಿಗೆ ತಮ್ಮ ತಾಯಿಯೊಂದಿಗೆ ಮಾತನಾಡಿದ್ದರು. ನಂತರ ಅವರು ನಾಪತ್ತೆಯಾಗಿದ್ದರು. ಆಕೆ ತನ್ನ ಬ್ಯಾಗ್‌ನ್ನು ಉಮಾರಿಯಾ ನಿಲ್ದಾಣದಲ್ಲಿ ಬಿಟ್ಟು ಹೋಗಿರುವುದು ಕಂಡು ಬಂದಿತ್ತು. ಆಕೆಯ ಕೊನೆಯ ಮೊಬೈಲ್ ಸ್ಥಳ ಭೋಪಾಲ್‌ನ ರಾಣಿ ಕಮಲಪತಿ ನಿಲ್ದಾಣದಲ್ಲಿ ಪತ್ತೆಯಾಗಿತ್ತು. ಅದು ಇಟಾರ್ಸಿಯಲ್ಲಿ ಇಂಟರ್ನೆಟ್‌ಗೆ ಸ್ವಲ್ಪ ಸಮಯ ಸಂಪರ್ಕಗೊಂಡಿತ್ತು.

ಈ ಸುದ್ದಿಯನ್ನೂ ಓದಿ: Dharmasthala Case: ಅನನ್ಯ ಭಟ್ ನಾಪತ್ತೆ ಕೇಸ್​​ಗೆ ಟ್ವಿಸ್ಟ್: ದೂರುದಾರೆ ಸುಜಾತಾ ಭಟ್​​​ಗೆ ಮಕ್ಕಳೇ ಇರಲಿಲ್ಲ

ನಂತರ ಪೊಲೀಸರು ಕಾರ್ಯಪ್ರವೃತ್ತರಾಗಿ ಅನೇಕ ರೈಲು ನಿಲ್ದಾಣಗಳಲ್ಲಿರುವ 97 ಕ್ಯಾಮೆರಾಗಳಿಂದ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಿದರು. ಮೂರು ಪೊಲೀಸ್ ತಂಡಗಳನ್ನು ನಿಯೋಜಿಸಲಾಯಿತು ಮತ್ತು ಬುಧ್ನಿ ಮತ್ತು ಬರ್ಖೇಡಾ ನಡುವಿನ ಬೆಟ್ಟದ ಪ್ರದೇಶವಾದ ಮಿಡ್‌ಘಾಟ್‌ನ ಅರಣ್ಯ ಪ್ರದೇಶವನ್ನು ಸ್ನಿಫರ್ ಡಾಗ್ಸ್, ಡೈವರ್ಸ್ ಮತ್ತು ಡ್ರೋನ್‌ಗಳ ಸಹಾಯದಿಂದ ಶೋಧಿಸಲಾಗಿತ್ತು. ಆಕೆಯ ಕರೆ ವಿವರ, ಬ್ಯಾಂಕ್‌ ಖಾತೆ ಸೇರಿದಂತೆ ಹಲವು ಮಹತ್ವದ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದರು.