ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Fake Marriage Racket: ನಕಲಿ ವಿವಾಹ ವಂಚನೆ ಜಾಲ: 9 ಮಂದಿಯ ಬಂಧನ

ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಕಲಿ ಮದುವೆ ದಂಧೆಯೊಂದರ ಗ್ಯಾಂಗ್‌ನ 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಗ್ಯಾಂಗ್ ಮದುವೆ ಆಮಿಷವೊಡ್ಡಿ ಹಣ, ವಿವಿಧ ಬೆಲೆಬಾಳುವ ವಸ್ತುಗಳು, ಆಭರಣಗಳೊಂದಿಗೆ ಪರಾರಿಯಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಪಾಟ್ನಾ: ನಕಲಿ ಮದುವೆ (Fake Marriage Racket) ದಂಧೆಯೊಂದು ಬಿಹಾರದಲ್ಲಿ (Bihar) ಪತ್ತೆಯಾಗಿದ್ದು, 4 ʼನಕಲಿʼ ವಧುಗಳು ಸೇರಿದಂತೆ 9 ಜನರನ್ನು ಬಂಧಿಸಲಾಗಿದೆ. ಬಿಹಾರದ ಪಶ್ಚಿಮ ಚಂಪಾರಣ್ (Champaran) ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಗ್ಯಾಂಗ್ (marriage fraud network) ಜನರಿಗೆ ಮದುವೆ (Marriage) ಆಮಿಷವೊಡ್ಡಿ ಹಣ, ವಿವಿಧ ಬೆಲೆಬಾಳುವ ವಸ್ತುಗಳು, ಆಭರಣಗಳೊಂದಿಗೆ ಪರಾರಿಯಾಗುವ ಮೂಲಕ ಅತ್ಯಾಧುನಿಕ ರೀತಿಯಲ್ಲಿ ವಿವಾಹ ವಂಚನೆ (Fake Marriage) ಕಾರ್ಯಾಚರಣೆಯನ್ನು ನಡೆಸುತ್ತಿತ್ತು ಎಂದು ಉಪ-ವಿಭಾಗೀಯ ಪೊಲೀಸ್ ಅಧಿಕಾರಿ ಪ್ರಕಾಶ್ ಸಿಂಗ್ ಹೇಳಿದರು.

ʼʼಪಶ್ಚಿಮ ಚಂಪಾರಣ್ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಕಲಿ ವಿವಾಹ ವಂಚನೆಯ ಗ್ಯಾಂಗ್ ಜನರಿಗೆ ಆಮಿಷವೊಡ್ಡುವ ಮೂಲಕ ಗುರಿಯಾಗಿಸಿಕೊಂಡು ವಿವಿಧ ವಸ್ತುಗಳು, ಆಭರಣಗಳು ಮತ್ತು ನಗದುಗಳೊಂದಿಗೆ ಪರಾರಿಯಾಗುತ್ತಿತ್ತುʼʼ ಎಂದು ಅವರು ವಿವರಿಸಿದರು.

ಈ ಗ್ಯಾಂಗ್‌ನಲ್ಲಿದ್ದ ಮಹಿಳಾ ಸದಸ್ಯರು ಈಗಾಗಲೇ ವಿವಾಹಿತರಾಗಿದ್ದರು. ಅವರು ಅಲ್ಪಾವಧಿಗೆ ಕೆಲವು ಕುಟುಂಬಗಳೊಂದಿಗೆ ಸೇರಿಕೊಂಡು ಇದು ನಿಜವಾದ ವಿವಾಹದ ರೀತಿಯಲ್ಲಿ ಸಿದ್ಧತೆಗಳನ್ನು ನಡೆಸುತ್ತಿದ್ದರು ಎನ್ನಲಾಗಿದೆ.

ಬೆಟ್ಟಿಯಾ ಬಳಿಯ ಮೈನಾತಂಡ್ ಪ್ರದೇಶದಲ್ಲಿ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ನಾಲ್ವರು ಮಹಿಳೆಯರು ಮತ್ತು ಆಪಾದಿತ ಮಾಸ್ಟರ್ ಮೈಂಡ್ ಅಲಿ ಅಹ್ಮದ್ ಸೇರಿದಂತೆ ಐದು ಮಂದಿ ಪುರುಷರನ್ನುಬಂಧಿಸಿದ್ದಾರೆ. ಆರೋಪಿಗಳಿಂದ ಒಂದು ಬೊಲೆರೊ ವಾಹನ, ಎರಡು ಮೋಟಾರ್ ಸೈಕಲ್‌ಗಳು ಮತ್ತು ಒಂಬತ್ತು ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ʼʼನಕಲಿ ವಿವಾಹ ವಂಚನೆಯಲ್ಲಿ ಭಾಗಿಯಾಗಿದ್ದ ಈ ಗ್ಯಾಂಗ್ ಬಾಗಾಹಾ ಮತ್ತು ಬೆಟ್ಟಿಯಾದಲ್ಲಿ ಹಲವು ತಿಂಗಳುಗಳಿಂದ ಸಕ್ರಿಯವಾಗಿತ್ತು. ದಾಳಿಯ ವೇಳೆ ಆರೋಪಿಗಳೆಲ್ಲರನ್ನೂ ಬಂಧಿಸಲಾಗಿದ್ದು, ಹೆಚ್ಚಿನ ತನಿಖೆಯಿಂದ ಮತ್ತಷ್ಟು ಮಾಹಿತಿ ಬಹಿರಂಗವಾಗುವ ಸಾಧ್ಯತೆ ಇದೆʼʼ ಎಂದು ಉಪ-ವಿಭಾಗೀಯ ಪೊಲೀಸ್ ಅಧಿಕಾರಿ ಪ್ರಕಾಶ್ ಸಿಂಗ್ ವಿವರಿಸಿದರು.

ಈಗಾಗಲೇ ಈ ವಿವಾಹ ವಂಚನೆ ಗ್ಯಾಂಗ್‌ಗಳು ಹಲವು ಕುಟುಂಬಗಳಿಗೆ ವಂಚಿಸಿವೆ. ಅನೇಕರು ಲಕ್ಷಾಂತರ ರೂಪಾಯಿ ನಷ್ಟವನ್ನು ಅನುಭವಿಸಿದ್ದಾರೆ.

ಇದನ್ನೂ ಓದಿ: Ranveer Singh and Deepika: ಅಂಬಾನಿ ನಿವಾಸದ ಗಣೇಶ ಚತುರ್ಥಿ ಆಚರಣೆಯಲ್ಲಿ ದೀಪಿಕಾ-ರಣವೀರ್ ದಂಪತಿ ಭಾಗಿ; ಕ್ಯೂಟ್‌ ಲುಕ್‌ಗೆ ಫ್ಯಾನ್ಸ್‌ ಫಿದಾ

ವಿವಾಹ ವಂಚನೆ ಜಾಲ ಬಿಹಾರದಲ್ಲಿ ಮಾತ್ರವಲ್ಲ ಇತರ ಭಾರತೀಯ ರಾಜ್ಯಗಳಿಗೆ ವಿಸ್ತರಿಸಿರುವ ಸಾಧ್ಯತೆ ಇದೆ. ಈ ಕುರಿತು ಹೆಚ್ಚಿನ ತನಿಖೆಗಾಗಿ ಎಲ್ಲಾ ಶಂಕಿತರನ್ನು ಕಸ್ಟಡಿಗೆ ಒಪ್ಪಿಸಲಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author