ಬೆಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ(Mahathma Gandhji) ಜನ್ಮದಿನವಾದ(Birth Anniversary) ಅಕ್ಟೋಬರ್ 2 ರಂದು ಪ್ರತಿವರ್ಷ ಗಾಂಧೀಜಿ ಜಯಂತಿಯನ್ನು(Gandhi Jayanti) ಆಚರಿಸಲಾಗುತ್ತದೆ. ಈ ವರ್ಷ ಭಾರತವು ಗಾಂಧೀಜಿ ಅವರ 156 ನೇ ಜಯಂತಿಯನ್ನು ಆಚರಿಸುತ್ತಿದ್ದು, ಪ್ರಪಂಚದಾದ್ಯಂತ ಈ ದಿನವನ್ನು ಅಂತರರಾಷ್ಟ್ರೀಯ ಅಹಿಂಸಾ ದಿನ ಎಂದು ಆಚರಿಸಲಾಗುತ್ತದೆ. ಇದು ಭಾರತ ರಾಷ್ಟ್ರಿಯ ಹಬ್ಬವಾಗಿವಾಗಿದ್ದು, ಹೆಚ್ಚಿನ ಮಹತ್ವವನ್ನು ಹೊಂದಿದೆ.
ಮಹಾತ್ಮ ಗಾಂಧೀಜಿಯವರು ಬ್ರಿಟಿಷರ ವಸಾಹತುಶಾಹಿಯಿಂದ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡುವುದರ ಜೊತೆಗೆ, ಜಗತ್ತಿಗೆ ಅಹಿಂಸೆಯ ಸಂದೇಶವನ್ನು ಪಸರಿಸಿದವರು. ಭಾರತದ ಸ್ವಾತಂತ್ರ್ಯಕ್ಕಾಗಿ ಜೀವ - ಜೀವನವನ್ನು ತ್ಯಾಗ ಮಾಡಿದ ಗಾಂಧಿ ಜಯಂತೋತ್ಸವವದ ಮಹತ್ವ, ಇತಿಹಾಸ, ಆಚರಣೆ ಇತ್ಯಾದಿ ವಿಷಯಗಳ ಬಗ್ಗೆ ಇಲ್ಲಿದೆ ಮಾಹಿತಿ.
ಜನನ
ಅಕ್ಟೋಬರ್ 2, 1869ರಲ್ಲಿ ಕರಮಚಂದ್ ಗಾಂಧಿ, ಹಾಗೂ ಪುತಲೀಬಾಯಿ ಅವರ ಮಗನಾಗಿ ಗುಜರಾತ್ ನ ಪೋರಬಂದರ್ ನಲ್ಲಿ ಜನಿಸಿದರು. ಇವರ ಪೂರ್ಣ ಹೆಸರು ಮೋಹನದಾಸ್ ಕರಮ ಚಂದ್ ಗಾಂಧಿ. ತನ್ನ 13ನೇ ವಯಸ್ಸಿನಲ್ಲಿ ಗಾಂಧೀಜಿ ಅವರಿಗೆ ಕಸ್ತೂರಿ ಬಾ ರೊಂದಿಗೆ ವಿವಾಹವಾಯ್ತು. ಇವರಿಬ್ಬರಿಗೆ ನಾಲ್ಕು ಮಕ್ಕಳು ಜನಿಸಿದರು. ಹರಿಲಾಲ್ ಗಾಂಧಿ, ಮಣಿಲಾಲ್ ಗಾಂಧಿ , ರಾಮದಾಸ್ ಗಾಂಧಿ ಮತ್ತು ದೇವದಾಸ್ ಗಾಂಧಿ. ತನ್ನ 19 ನೇ ವಯಸ್ಸಿನಲ್ಲಿ ಗಾಂಧೀಜಿ ಲಂಡನ್ ನ ಯೂನಿವರ್ಸಿಟಿ ಕಾಲೇಜಿನಿಂದ ಕಾನೂನು ಪದವಿ ಪಡೆದರು.
ಮಹತ್ವ:
ಬ್ರಿಟಿಷರ ವಿರುದ್ಧ ಹೋರಾಡಿದ ಗಾಂಧಿಯವರ ಅವರು ನಿಲುವು, ಸಿದ್ಧಾಂತ, ಹೋರಾಟದ ತೀವ್ರತೆ ಅವರನ್ನು ವಿಶ್ವವ್ಯಾಪಿ ವ್ಯಕ್ತಿಯಾಗಿ ಮಾಡಿತು. ಅವರು ರಾಷ್ಟ್ರಕ್ಕೆ ನೀಡಿದ ಕೊಡುಗೆಯನ್ನು ಆಚರಿಸಲು, ಗಾಂಧಿ ಜಯಂತಿಯನ್ನು ಪ್ರತಿ ವರ್ಷ ಭಾರತದಲ್ಲಿ ರಾಷ್ಟ್ರೀಯ ರಜಾದಿನವಾಗಿ ಆಚರಿಸಲಾಗುತ್ತದೆ. ಅವರು ಭಾರತವನ್ನು ಅಸಹಕಾರ ಚಳುವಳಿ, ಸಾಲ್ಟ್ ಮಾರ್ಚ್, ಸ್ವರಾಜ್ ಮತ್ತು ಬ್ರಿಟಿಷ್ ಆಡಳಿತದ ವಿರುದ್ಧ ಪ್ರತಿಭಟಿಸಲು ಅನೇಕ ಅಹಿಂಸಾ ಮಾರ್ಗಗಳನ್ನು ಅನುಸರಿಸಿದರು. ಅವರು 'ಸ್ವದೇಶಿ' ಪರಿಕಲ್ಪನೆಯ ಮೂಲಕ ಆರ್ಥಿಕ ಸ್ವಾತಂತ್ರ್ಯವನ್ನು ಪಡೆಯುವ ಕಲ್ಪನೆಯನ್ನು ಪ್ರಚಾರ ಮಾಡಿದರು. ಮಹಾತ್ಮ ಗಾಂಧಿ ವಿವಿಧ ಐತಿಹಾಸಿಕ ಘಟನೆಗಳಲ್ಲಿ ಭಾಗವಹಿಸಿದರು ಮತ್ತು ಪ್ರಪಂಚದಾದ್ಯಂತ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರಾದರು.
ಅಷ್ಟೇ ಅಲ್ಲದೇ ಗಾಂಧೀಜಿಯವರ ಸತ್ಯ ಮತ್ತು ಅಹಿಂಸೆಯ ಸಿದ್ಧಾಂತವು ಅನೇಕರ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಕೇವಲ ಭಾರತದಲ್ಲಿ ಮಾತ್ರವಲ್ಲ ಇತರ ಹಲವಾರು ದೇಶಗಳಲ್ಲಿ ಗಾಂಧೀಜಿಯವರ ಅಹಿಂಸಾ ತತ್ವವನ್ನು ಅಳವಡಿಸಿಕೊಂಡಿರುವ ಉದಾಹರಣೆಗಳಿವೆ. ಮಾರ್ಟಿನ್ ಲೂಥರ್ ಮತ್ತು ನೆಲ್ಸನ್ ಮಂಡೇಲಾ ಅವರು ತಮ್ಮ ದೇಶದ ಸ್ವಾತಂತ್ರ್ಯ ಹೋರಾಟಲ್ಲಿ ಈ ತತ್ವಗಳನ್ನೇ ಅಳವಡಿಸಿಕೊಂಡು ವಿಜಯವನ್ನು ಸಾಧಿಸಿದ್ದಾರೆ.
ಗಾಂಧಿ ಜಯಂತಿ ಇತಿಹಾಸ:
ಮಹಾತ್ಮ ಗಾಂಧಿಯನ್ನು ರಾಷ್ಟ್ರಪಿತ ಎಂದು ಕರೆಯಲಾಗುತ್ತದೆ. ಅವರು ಬ್ರಿಟಿಷರ ವಿರುದ್ಧ ನಡೆದ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಿದರು ಮತ್ತು ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಪ್ರಮುಖರಾದವರು. ಅವರು ಅಹಿಂಸಾ ಮಾರ್ಗಗಳ ಮೂಲಕ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಕೊಡುಗೆ ನೀಡಿದರು ಮತ್ತು ಅಸ್ಪೃಶ್ಯತೆಯಂತಹ ಹಳೆಯ ಪದ್ಧತಿಗಳನ್ನು ತೊಡೆದುಹಾಕಲು ರಾಷ್ಟ್ರಕ್ಕೆ ಸಹಾಯ ಮಾಡಿದರು. ಅವರ ತತ್ವಶಾಸ್ತ್ರ ಮತ್ತು ನೊಬೆಲ್ ಕೆಲಸದಿಂದಾಗಿ ಅವರಿಗೆ 'ಮಹಾತ್ಮ' ಎಂಬ ಬಿರುದನ್ನು ಪಡೆಯುವಂತೆ ಮಾಡಿತು. ಅಂದರೆ ಅಕ್ಷರಶಃ 'ಮಹಾನ್ ಆತ್ಮ' ಎಂದೂ ಹೇಳಬಹುದು. ಅವರ ಸಿದ್ಧಾಂತಗಳು ಮತ್ತು ತತ್ವಶಾಸ್ತ್ರವು ಅವರನ್ನು ಪ್ರಪಂಚದಾದ್ಯಂತ ಜನಪ್ರಿಯಗೊಳಿಸಿವೆ. ಜೂನ್ 15, 2007 ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಅಕ್ಟೋಬರ್ 2 ಅನ್ನು ಅಂತರರಾಷ್ಟ್ರೀಯ ಅಹಿಂಸಾ ದಿನವೆಂದು ಘೋಷಿಸುವ ನಿರ್ಣಯವನ್ನು ಅಂಗೀಕರಿಸಿತು
ಹೋರಾಟದ ಬದುಕು
ಭಾರತದಲ್ಲಿ ಮಾತ್ರವಲ್ಲದೆ ದಕ್ಷಿಣ ಆಫ್ರಿಕಾದಲ್ಲೂ ಗಾಂಧೀಜಿ ಅವರು ವರ್ಣಭೇದ ನೀತಿಯ ವಿರುದ್ಧ ಹೋರಾಡಿ, ಹೆಸರು ಗಳಿಸಿದ್ದರು. ಈ ಹಿನಲೆಯಲ್ಲಿಯೇ ದಕ್ಷಿಣ ಆಫ್ರಿಕಾದಲ್ಲಿಯೂ ಅನೇಕ ಕಡೆ ಗಾಂಧೀಜಿಯವರ ಪುತ್ಥಳಿಗಳನ್ನು ನಿರ್ಮಿಸಲಾಗಿದೆ.
ಈ ಸುದ್ದಿಯನ್ನು ಓದಿ: Vijayadashami Festival: ವಿಜಯದಶಮಿ ಹಬ್ಬವನ್ನು ಯಾಕೆ ಆಚರಿಸುತ್ತಾರೆ? ಮಹತ್ವ - ಹಿನ್ನೆಲೆ ಏನು ಗೊತ್ತಾ?
ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ಭಾರತದ ಸ್ವಾತಂತ್ರ್ಯ ಚಳುವಳಿಯನ್ನು ಮುನ್ನಡೆಸಿದರು, ಇತರ ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನು ಹುರಿದುಂಬಿಸುತ್ತಾ ಅವರು ಹಲವಾರು ನಾಗರಿಕ ಹಕ್ಕು ಚಳುವಳಿಗಳನ್ನು ಆರಂಭಿಸಿದರು.
ಅಂತರಾಷ್ಟ್ರೀಯ ಅಹಿಂಸಾ ದಿನ' ಎಂದು ಘೋಷಣೆ
ವಿಶ್ವಸಂಸ್ಥೆಯು ಗಾಂಧಿ ಜಯಂತಿಯನ್ನು 'ಅಂತರಾಷ್ಟ್ರೀಯ ಅಹಿಂಸಾ ದಿನ' ಎಂದು ಆಚರಿಸಿ ಮಹಾತ್ಮ ಗಾಂಧಿಗೆ ತಮ್ಮ ಗೌರವ ನಮನಗಳನ್ನು ಸಲ್ಲಿಸುತ್ತದೆ. ಸ್ವಾತಂತ್ರ್ಯ ಹೋರಾಟಕ್ಕೆ ಅವರ ಅಮೂಲ್ಯ ಕೊಡುಗೆಗಳನ್ನು ಗೌರವಿಸಲು ಈ ದಿನದಂದು ಗಾಂಧೀಜಿಯವರ ಚಿಂತನೆಗಳನ್ನು ಮತ್ತು ತತ್ವಶಾಸ್ತ್ರಗಳನ್ನು ಪ್ರಚಾರ ಮಾಡುವ ಅನೇಕ ಕಾರ್ಯಕ್ರಮಗಳನ್ನು ದೇಶಾದ್ಯಂತ ಆಯೋಜಿಸಲಾಗುತ್ತದೆ. ಗಾಂಧೀಜಿಯವರ ಜೀವನ ಮತ್ತು ಆದರ್ಶಗಳು ಜನರ ಜೀವನದ ಮೇಲೆ ಪ್ರಭಾವ ಬೀರುತ್ತಲೇ ಇರುತ್ತದೆ.