ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Narendra Modi: ಬಾಹ್ಯಾಕಾಶದಲ್ಲಿ ಜೀವನ ಹೇಗಿದೆ? ಪ್ರಧಾನಿ ಮೋದಿಯೊಂದಿಗೆ ಸಂವಾದ ನಡೆಸಿದ ಶುಭಾಂಶು ಶುಕ್ಲಾ

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ (ಐಎಸ್​ಎಸ್) ಗಗನಯಾತ್ರಿ ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಶುಕ್ರವಾರ ಸಂಜೆ ಸಂವಾದ ನಡೆಸಿದ್ದಾರೆ. ಬಾಹ್ಯಾಕಾಶದಿಂದ ಶುಕ್ಲಾ ವಿಡಿಯೋ ಕಾನ್ಫರೆನ್ಸ್ ಮೂಲಕ ಮೋದಿ ಅವರೊಂದಿಗೆ ಮಾತನಾಡಿದ್ದಾರೆ.

ನವದೆಹಲಿ: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ (ಐಎಸ್​ಎಸ್) ಗಗನಯಾತ್ರಿ ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ (Shubhanshu Shukla) ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರೊಂದಿಗೆ ಶುಕ್ರವಾರ ಸಂಜೆ ಸಂವಾದ ನಡೆಸಿದ್ದಾರೆ. ಬಾಹ್ಯಾಕಾಶದಿಂದ ಶುಕ್ಲಾ ವಿಡಿಯೋ ಕಾನ್ಫರೆನ್ಸ್ ಮೂಲಕ ಮೋದಿ ಅವರೊಂದಿಗೆ ಮಾತನಾಡಿದ್ದಾರೆ. ಈ ಕುರಿತು ಪ್ರಧಾನಿ ಮೋದಿ ಅವರ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ, “ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರೊಂದಿಗೆ ಮಾತನಾಡಿದ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ಇಂದು, ನೀವು ನಮ್ಮ ತಾಯ್ನಾಡಿನಿಂದ ದೂರವಾಗಿದ್ದೀರಿ, ಆದರೆ ನೀವು ಭಾರತೀಯರ ಹೃದಯಕ್ಕೆ ಹತ್ತಿರವಾಗಿದ್ದೀರಿ ಎಂದು ಮೋದಿ ಹೇಳಿದ್ದಾರೆ. ನಿಮ್ಮ ಹೆಸರಿನಲ್ಲಿಯೇ ಶುಭ ಇದೆ. ಇದು ನವಯುಗದ ಶುಭಾರಂಭ ಎಂದು ಅವರು ಹೇಳಿದರು. ಪ್ರಧಾನಿಯವರಿಗೆ ಉತ್ತರಿಸುತ್ತಾ ಮಾತನಾಡಿದ ಶುಭಾಂಶ ಶುಕ್ಲಾ "ಇದು ನನ್ನ ಪ್ರಯಾಣ ಮಾತ್ರವಲ್ಲ, ನಮ್ಮ ದೇಶದ ಪ್ರಯಾಣವೂ ಆಗಿದೆ. ಹೊಸ ಅನುಭವವನ್ನು ಪಡೆಯುತ್ತಿದ್ದೇನೆ. ಕಲಿಯುವುದು ಸಾಕಷ್ಟಿದೆ ಎಂದು ಹೇಳಿದ್ದಾರೆ.



ಪ್ರಧಾನಿಯವರು ಇಲ್ಲಿಯವರೆಗೆ ನೋಡಿದ್ದೇನು ಎಂಬುದನ್ನು ವಿವರಿಸಲು ಕೇಳಿದಾಗ ಶುಕ್ಲಾ, ಸ್ವಲ್ಪ ಸಮಯದ ಹಿಂದೆ, ನಾನು ಕಿಟಕಿಯಿಂದ ಹೊರಗೆ ನೋಡುತ್ತಿದ್ದಾಗ, ನಾವು ಹವಾಯಿಯ ಮೇಲೆ ಹಾರುತ್ತಿದ್ದೆವು. ನಾವು ದಿನಕ್ಕೆ 16 ಬಾರಿ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ಕಕ್ಷೆಯಿಂದ ನೋಡುತ್ತೇವೆ. ನಮ್ಮ ರಾಷ್ಟ್ರವು ಬಹಳ ವೇಗದಲ್ಲಿ ಮುಂದುವರಿಯುತ್ತಿದೆ ಎಂದು ಹೇಳಿದ್ದಾರೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದದಿಂದ, ನಾನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದ್ದೇನೆ. ಇಲ್ಲಿ ನಿಲ್ಲುವುದು ಸುಲಭವಾಗಿ ಕಾಣುತ್ತದೆ, ಆದರೆ ನನ್ನ ತಲೆ ಸ್ವಲ್ಪ ಭಾರವಾಗಿದೆ, ಕೆಲವು ತೊಂದರೆಗಳನ್ನು ಎದುರಿಸುತ್ತಿದೆ; ಆದರೆ ಇವು ಸಣ್ಣ ಸಮಸ್ಯೆಗಳಾಗಿವೆ ಎಂದು ಶುಕ್ಲಾ ಹೇಳಿದ್ದಾರೆ.

ಇದಾದ ನಂತರ ತಮಾಷೆಯಾಗಿ, ಕ್ಯಾರೆಟ್ ಹಲ್ವಾ ತೆಗೆದುಕೊಂಡು ಹೋಗಿದ್ದೀರಾ? ಅದನ್ನು ಬೇರೆಯವರಿಗೂ ಕೊಟ್ಟಿರಾ? ಎಂದು ಮೋದಿ ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ, ನಾನು ನಿಜವಾಗಿಯೂ ಕ್ಯಾರೆಟ್ ಹಲ್ವಾ, ಹೆಸರುಬೇಳೆ ಹಲ್ವಾ, ಮಾವಿನ ರಸ ತೆಗೆದುಕೊಂಡು ಬಂದಿದ್ದೆ. ನಮ್ಮ ದೇಶದ ಪಾಕಪದ್ಧತಿಯ ಬಗ್ಗೆ ಬೇರೆ ದೇಶದವರಿಗೂ ತಿಳಿಸಬೇಕೆಂದು ಇಲ್ಲಿದ್ದ ಬೇರೆ ದೇಶಿಗರಿಗೂ ಕೊಟ್ಟೆ. ಎಲ್ಲರೂ ಕೂತು ಹಲ್ವಾ ತಿಂದೆವು. ಎಲ್ಲರಿಗೂ ಅದು ತುಂಬಾ ಹಿಡಿಸಿತು ಎಂದು ಶುಕ್ಲಾ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Shubhanshu Shukla: ಮಗುವಿನಂತಾಗಿದ್ದೇನೆ...ಬಾಹ್ಯಾಕಾಶದಲ್ಲಿರುವ ಶುಭಾಂಶು ಶುಕ್ಲಾ ಕಳುಹಿಸಿದ ಮೊದಲ ಸಂದೇಶವೇನು?

ರಾಕೇಶ್‌ ಶರ್ಮಾ ಅವರ ಬಳಿಕ ಬಾಹ್ಯಾಕಾಶ ಪ್ರಯಾಣ ಕೈಗೊಂಡ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಶುಭಾಂಶು ಪಾತ್ರರಾಗಿದ್ದಾರೆ. ಪ್ರಧಾನಿ ಮೋದಿ ಅವರು ಈ ಮಿಷನ್ ಪೈಲಟ್ ಶುಭಾಂಶು ಶುಕ್ಲಾ ಮತ್ತು ಇತರ ಸಿಬ್ಬಂದಿ ಸದಸ್ಯರಾದ ಮಿಷನ್ ಕಮಾಂಡರ್ ಪೆಗ್ಗಿ ವಿಟ್ಸನ್ ಮತ್ತು ಮಿಷನ್ ತಜ್ಞರಾದ ಪೋಲೆಂಡ್‌ನ ಸ್ಲಾವೋಸ್ಜ್ ಉಜ್ನಾನ್ಸ್ಕಿ-ವಿಸ್ನಿವ್ಸ್ಕಿ ಮತ್ತು ಹಂಗೇರಿಯ ಟಿಬೋರ್ ಕಪು ಅವರನ್ನು ಅಭಿನಂದಿಸಿದರು.