ದೆಹಲಿ: ಸ್ವಾತಂತ್ರ್ಯ ದೊರಕಿ ಎಂಟು ದಶಗಳು ಪೂರೈಸುತ್ತ ಬಂದರೂ ಭಾರತ ಹಾಗೂ ಪಾಕಿಸ್ತಾನ(Pakistan) ನಡುವೆ ಇರುವ ಗಡಿ ವಿವಾದ ಬಗೆಹರಿದಿಲ್ಲ. ಕಳೆದ 78 ವರ್ಷಗಳಿಂದಲೂ ಈ ಕುರಿತಾಗಿ ಭಾರತ ನಾನಾ ಪ್ರಯತ್ನ ಮಾಡಿತ್ತಿದ್ದು, ರಾಜತಾಂತ್ರಿಕ ಮಾತುಕತೆಗಳ ಮೂಲಕ ಈ ಸಮಸ್ಯೆಗೆ ಇತಿಶ್ರೀ ಹಾಡಲು ಮುಂದಾಳತ್ವ ವಹಿಸಿದರೂ ಯಾವುದೇ ಫಲ ನೀಡಿಲ್ಲ. ಆತ್ತ ಪಾಕಿಸ್ತಾನವೂ ಈ ಬಗ್ಗೆ ತನ್ನ ನಿಲುವನ್ನು ವ್ಯಕ್ತಪಡಿಸದೇ ತೋರಿದ್ದು, ಇದೀಗ ಏಕಾಏಕಿ ಸರ್ ಕ್ರೀಕ್ ಪಕ್ಕದ ಪ್ರದೇಶಗಳಲ್ಲಿ ತನ್ನ ಮಿಲಿಟರಿ ಚಟುವಟಿಕೆಗಳನ್ನು ವಿಸ್ತರಿಸಿದೆ. ಈ ಬೆಳವಣಿಗೆ ಮತ್ತೆ ಎರಡು ದೇಶಗಳ ಮಧ್ಯೆ ಗಡಿ ವಿವಾದದ ಕಿಡಿ ಹೊತ್ತಿಕೊಂಡಿದ್ದು, ಇತ್ತೀಚೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಸರ್‌ಕ್ರೀಕ್ ಪ್ರದೇಶದಲ್ಲಿ ಏನಾದರೂ ದುಸ್ಸಾಹಸ ಮಾಡಲು ಯತ್ನಿಸಿದ್ದರೆ ವ್ಯತಿರಿಪ್ತ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ. ಇಡೀ ಪ್ರದೇಶದ ಭೌಗೋಳಿಕತೆ ಹಾಗೂ ಇತಿಹಾಸ ಬದಲಾಗುವ ಹಾಗೆ ಉತ್ತರ ನೀಡಬೇಕಾಗುತ್ತದೆ ಎಂದು ಖಡಕ್ ವಾರ್ನಿಂಗ್ ಮಾಡಿದ್ದಾರೆ.
ಇದೆಲ್ಲದ್ದರ ಮಧ್ಯೆ ಸರ್ ಕ್ರೀಕ್ ಪ್ರದೇಶದ ಬಗ್ಗೆ ನಾನಾ ಪ್ರಶ್ನೆಗಳು ಹುಟ್ಟಿದ್ದು, ಸರ್‌ಕ್ರೀಕ್ ಪ್ರದೇಶ ಎಂದರೇನು? ಈ ಬಗ್ಗೆ ಪಾಕಿಸ್ತಾನ ಕ್ಯಾತೆ ತೆಗೆಯುತ್ತಿರುವುದ್ದೇಕೆ? ರಾಜನಾಥ್ ಸಿಂಗ್ ಈ ವಿಷಯದಲ್ಲಿ ಗರಂ ಆಗಲು ಕಾರಣವೇನು ಎಂಬಿತ್ಯಾದಿ ಮಾಹಿತಿ ಇಲ್ಲಿದೆ.
ವಿವಾದಾತ್ಮಕ ಪ್ರದೇಶ
ಸರ್ ಕ್ರೀಕ್ 96 ಕಿ.ಮೀ. ಉದ್ದದ ಪ್ರದೇಶವಾಗಿದ್ದು, ಗುಜರಾತ್‌ನ ರಣ್ ಆಫ್ ಕಚ್‌ನಿಂದ ಪಾಕಿಸ್ತಾನ ಸಿಂಧ್ ಪ್ರಾಂತ್ಯವನ್ನು ಪ್ರತ್ಯೇಕಿಸುತ್ತದೆ. ಇದು ವಿವಾದಾತ್ಮಕ ಪ್ರದೇಶವಾಗಿದ್ದು, ಅತ್ಯಂತ ಸೂಕ್ಷ್ಮವಾಗಿದೆ. ಇಲ್ಲಿನ ಯಾವುದೇ ದೇಶಗಳ ಸೇನೆಗಳು ಮಾಡುವ ಮಿಲಿಟರಿ ಚಟುವಟಿಕೆಗಳು ಉದ್ವಿಗ್ನತೆಯನ್ನು ಸೃಷ್ಟಿಸುವುದರ ಜತೆ ಭಾರತ-ಪಾಕಿಸ್ತಾನ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆ. ಜತೆಗೆ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಅಸ್ಥಿರತೆಯನ್ನು ಹೆಚ್ಚಿಸಲಿದ್ದು, ಅದು ಗಡಿ ವಿವಾದಿತ ಪ್ರದೇಶವಾಗಿ ಗುರುತಿಸಿಕೊಂಡಿದೆ.
ಇನ್ನು 1960ರ ದಶಕದಿಂದಲ್ಲೇ ಈ ಸರ್ ಕ್ರೀಕ್ ವಿವಾದ ಹೊಗೆಯಾಡುತ್ತಲೇ ಇದೆ. ಸರ್ ಕ್ರೀಕ್ ಭಾರತದ ಗುಜರಾತ್ ರಾಜ್ಯದ ಕಚ್ ಪ್ರದೇಶ ಮತ್ತು ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ನಡುವೆ ಇರುವ ಕೊಲ್ಲಿಯಲ್ಲಿರುವ ಕಿರಿದಾದ, ಸುಮಾರು 96 ಕಿಲೋಮೀಟರ್ ಉದ್ದದ ಜಲಮಾರ್ಗವಾಗಿದೆ. ಈ ಪ್ರದೇಶವು ಸಮುದ್ರ ಮತ್ತು ಭೂ ಗಡಿಗಳನ್ನು ಸಂಪರ್ಕಿಸಲಿದ್ದು, ಸರ್ ಕ್ರೀಕ್ ಸುತ್ತಮುತ್ತಲಿನ ಕರಾವಳಿ ನೀರಿನಲ್ಲಿ ಹೈಡ್ರೋಕಾರ್ಬನ್ ಮತ್ತು ನೈಸರ್ಗಿಕ ಅನಿಲ ನಿಕ್ಷೇಪಗಳಿವೆ ಎಂಬ ಉಲ್ಲೇಖವಿದೆ.
ಈ ಸುದ್ದಿಯನ್ನು ಓದಿ: Viral Video: ಡೆಲಿವರಿ ಬಾಯ್ ಅನುಚಿತವಾಗಿ ಮುಟ್ಟಿದ ಎಂದ ಮಹಿಳೆ; ಹಾಗೆ ಎನಿಸುತ್ತಿಲ್ಲ ಎಂದ ನೆಟ್ಟಿಗರು, ಇಲ್ಲಿದೆ ವೈರಲ್ ವಿಡಿಯೊ
ಈ ಪ್ರದೇಶವು ಗುಜರಾತ್ ಮತ್ತು ಸಿಂಧ್ ಪ್ರಾಂತ್ಯಗಳ ನಡುವೆ ಇದ್ದು, ಸಮುದ್ರ ಗಡಿರೇಖೆ ರೇಖೆಗೆ ಸಂಪರ್ಕ ಹೊಂದಿದೆ. ಈಗ ಪಾಕಿಸ್ತಾನದ ಹೆಚ್ಚುತ್ತಿರುವ ಮಿಲಿಟರಿ ಚಟುವಟಿಕೆಯ ಮಧ್ಯೆ, ಯಾವುದೇ ಆಕ್ರಮಣವನ್ನು ಬಲವಾದ ಕ್ರಮಕ್ಕೆ ಒಳಪಡಿಸಲಾಗುವುದು ಎಂದು ಭಾರತ ಸ್ಪಷ್ಟಪಡಿಸಿದೆ.
ದೀರ್ಘಕಾಲದ ಸಮಸ್ಯೆ
ಸರ್ ಕ್ರೀಕ್ ವಿವಾದವು ಭಾರತ-ಪಾಕಿಸ್ತಾನ ಸಂಬಂಧಗಳಲ್ಲಿ ದೀರ್ಘಕಾಲದ ಸಮಸ್ಯೆಯಾಗಿದ್ದು, ಸದ್ಯದ ಬೆಳವಣಿಗೆಗಳು ಭಾರತವು ತನ್ನ ಗಡಿ ಭದ್ರತೆ ಮತ್ತು ಕಾರ್ಯತಂತ್ರದ ಹಿತಾಸಕ್ತಿಗಳನ್ನು ರಕ್ಷಿಸುವ ಹೊಣೆಗಾರಿಕೆಯನ್ನು ಹೊಂದಿದೆ. ಇದನ್ನು ಕಾಯ್ದುಕೊಳ್ಳಲು ಯಾವುದೇ ಆಕ್ರಮಣದ ನಿರ್ಧಾರವನ್ನು ಮತ್ತು ತ್ವರಿತ ಕ್ರಮವನ್ನು ಯೋಚಿಸುವುದಿಲ್ಲ ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಲಾಗಿದೆ.
ಇನ್ನು ಪಾಕಿಸ್ತಾನವು ಅಲ್ಲಿ ಸೇನಾ ವಸಾಹತುಗಳನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದ್ದು, ಸೇನೆಗೆ ಬೇಕಾದ ಕಟ್ಟಡಗಳನ್ನು ನಿರ್ಮಿಸುತ್ತಿದೆ. ಈ ಬೆಳವಣಿಗೆ ಭಾರತೀಯ ಸೇನೆಯಲ್ಲಿ ಅಸಮಾಧಾನದ ಕಿಡಿ ಹೊತ್ತಿಸಿದ್ದು, ಸರ್ ಕ್ರಿಕ್ ಅನ್ನು ಮುಟ್ಟಲು ಪ್ರಯತ್ನಿಸಿದ್ದಾರೆ ಭಾರತೀಯ ಸೇನೆ ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ ಮತ್ತು ಹೇಗೆ ಬೇಕಾದರೂ ಪಾಕಿಸ್ತಾನದ ಮೇಲೆ ಹಾನಿಯನ್ನುಂಟುಮಾಡಬಹುದು ಎಂದು ರಾಜನಾಥ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ.