ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಡೆಲಿವರಿ ಬಾಯ್ ಅನುಚಿತವಾಗಿ ಮುಟ್ಟಿದ ಎಂದ ಮಹಿಳೆ; ಹಾಗೆ ಎನಿಸುತ್ತಿಲ್ಲ ಎಂದ ನೆಟ್ಟಿಗರು, ಇಲ್ಲಿದೆ ವೈರಲ್ ವಿಡಿಯೊ

Woman Alleges Blinkit Delivery Man: ಬ್ಲಿಂಕಿಟ್ ಡೆಲಿವರಿ ಬಾಯ್ ತನ್ನನ್ನು ಅನುಚಿತವಾಗಿ ಮುಟ್ಟಿದ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ. ಇದರ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಆತ ಬೇಕಂತಲೇ ತನ್ನ ಎದೆಯನ್ನು ಮುಟ್ಟಿದ್ದಾನೆ ಎಂದಿದ್ದಾರೆ. ಸದ್ಯ ಈ ವಿಡಿಯೊ ವೈರಲ್ ಆಗಿದೆ.

ಡೆಲಿವರಿ ಬಾಯ್ ಅನುಚಿತವಾಗಿ ಮುಟ್ಟಿದ ಎಂದ ಮಹಿಳೆ

-

Priyanka P Priyanka P Oct 4, 2025 7:00 PM

ದೆಹಲಿ: ಬ್ಲಿಂಕಿಟ್ ಡೆಲಿವರಿ ಬಾಯ್ (Blinkit Delivery Man) ಆರ್ಡರ್ ತಲುಪಿಸುವಾಗ ಅನುಚಿತವಾಗಿ ಸ್ಪರ್ಶಿಸಿದನೆಂದು ಆರೋಪಿಸಿ ಮಹಿಳೆಯೊಬ್ಬರು ತಮ್ಮ ಆತಂಕಕಾರಿ ಅನುಭವವನ್ನು ಹಂಚಿಕೊಂಡಿದ್ದಾರೆ. ಅವರು ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಸಾಮಾಜಿಕ ಮಾಧ್ಯಮದಲ್ಲಿ (Social media) ಪೋಸ್ಟ್ ಮಾಡಿ, ಕಂಪನಿಯು ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಈ ಘಟನೆ ಅಕ್ಟೋಬರ್ 3ರಂದು ಸಂಜೆ 5:30ರ ಸುಮಾರಿಗೆ ನಡೆದಿದೆ. ಸಿಸಿಟಿವಿ ದೃಶ್ಯಾವಳಿಯನ್ನು ಹಂಚಿಕೊಳ್ಳುವಾಗ ಮಹಿಳೆ ಬ್ಲಿಂಕಿಟ್ ಅವರ ಅಧಿಕೃತ ಖಾತೆಯನ್ನು ಟ್ಯಾಗ್ ಮಾಡಿದ್ದಾರೆ. ತಮ್ಮ ಪೋಸ್ಟ್‌ನಲ್ಲಿ ಅವರು, ಡೆಲಿವರಿ ಬಾಯ್‍ನ ದುಷ್ಕೃತ್ಯವನ್ನು ವಿವರಿಸಿದ್ದಾರೆ. ಈ ಕೃತ್ಯವು ಉದ್ದೇಶಪೂರ್ವಕವಾಗಿದೆಯೇ ಅಥವಾ ಆಕಸ್ಮಿಕವಾಗಿ ನಡೆದಿದೆಯೇ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಚರ್ಚಿಸುತ್ತಿದ್ದಾರೆ.

ಎಕ್ಸ್‌ನಲ್ಲಿ ಹಂಚಿಕೊಂಡಿರುವ ಈ ವಿಡಿಯೊದಲ್ಲಿ, ಮಹಿಳೆಯ ಮನೆಯ ಹೊರಗೆ ಡೆಲಿವರಿ ಬಾಯ್ ನಿಂತಿರುವುದನ್ನು ಕಾಣಬಹುದು. ಅವನು ತನ್ನ ಬ್ಯಾಗ್‌ನಿಂದ ಪ್ಯಾಕೇಜ್ ತೆಗೆದುಕೊಳ್ಳುತ್ತಿರುವುದನ್ನು ಗಮನಿಸಬಹುದು. ಮಹಿಳೆ ಅವನಿಗೆ ನಗದು ನೀಡಿದಾಗ, ಅವನು ಅದನ್ನು ತನ್ನ ಬಲಗೈಯಿಂದ ಸ್ವೀಕರಿಸಿದ್ದಾನೆ. ಬ್ಯಾಗ್ ಅನ್ನು ಎಡಗೈಯಲ್ಲಿ ಹಿಡಿದುಕೊಂಡು, ಅವನು ಅವಳಿಗೆ ಪ್ಯಾಕೇಜ್ ನೀಡಿದ್ದಾನೆ. ಈ ವೇಳೆ ಅವನ ಬಲಗೈ ಅವಳ ಎದೆಗೆ ಟಚ್ ಆಗಿದೆ. ಕೂಡಲೇ ಆಕೆ ಹಿಂದೆ ಹೆಜ್ಜೆ ಹಾಕಿದ್ದಾಳೆ.

ವಿಡಿಯೊ ವೀಕ್ಷಿಸಿ:



ಇಂದು ಬ್ಲಿಂಕಿಟ್‌ನಿಂದ ಆರ್ಡರ್ ಮಾಡುವಾಗ ನನಗೆ ಹೀಗಾಯಿತು. ಡೆಲಿವರಿ ವ್ಯಕ್ತಿ ಪಾರ್ಸೆಲ್ ಅನ್ನು ಕೊಡುವಾಗ ಅನುಚಿತವಾಗಿ ನನ್ನನ್ನು ಮುಟ್ಟಿದ. ಇದು ಸ್ವೀಕಾರಾರ್ಹವಲ್ಲ. ಬ್ಲಿಂಕಿಟ್ ದಯವಿಟ್ಟು ಕಠಿಣ ಕ್ರಮ ಕೈಗೊಳ್ಳಿ. ಭಾರತದಲ್ಲಿ ಮಹಿಳೆಯರ ಸುರಕ್ಷತೆಯೇ ತಮಾಷೆಯೇ? ಎಂದು ಮಹಿಳೆ ತನ್ನ ಪೋಸ್ಟ್‌ಗೆ ಈ ರೀತಿ ಶೀರ್ಷಿಕೆ ನೀಡಿದ್ದಾರೆ.

ಮಹಿಳೆ ಪೋಸ್ಟ್ ಮಾಡಿದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು (Viral Video), ಬಳಕೆದಾರರಿಂದ ವ್ಯಾಪಕ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿತು. ಅನೇಕರು ಆಕೆಯನ್ನು ಬೆಂಬಲಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕರೆ ನೀಡಿದರೆ, ಕೆಲವರು ಈ ಘಟನೆ ಉದ್ದೇಶಪೂರ್ವಕವೋ ಅಥವಾ ಆಕಸ್ಮಿಕವೋ ಎಂದು ಚರ್ಚಿಸಿದ್ದಾರೆ.

ಇದನ್ನೂ ಓದಿ: Viral Video: ಸಿಸೇರಿಯನ್‌ ಆದ ಕೇವಲ 15 ದಿನಗಳಲ್ಲಿ ಬಾಣಂತಿಯ ಸ್ಕೂಟರ್ ಸವಾರಿ; ಇದು ಧೈರ್ಯವಲ್ಲ, ಮೂರ್ಖತನ ಎಂದ ನೆಟ್ಟಿಗರು

ಅವನು ಉದ್ದೇಶಪೂರ್ವಕವಾಗಿ ತನ್ನ ಕೈಯನ್ನು ನಿಮ್ಮ ದೇಹದ ಮೇಲ್ಭಾಗಕ್ಕೆ ತಂದು ಅನುಚಿತವಾಗಿ ನಿಮ್ಮನ್ನು ಮುಟ್ಟಿದ್ದನ್ನು ಸ್ಪಷ್ಟವಾಗಿ ಕಾಣಬಹುದು. ಈ ರೆಕಾರ್ಡಿಂಗ್ ಇಲ್ಲದೆ ಇದ್ದಿದ್ದರೆ, ಅವನ ಅಪರಾಧವನ್ನು ಗುರುತಿಸುವುದು ಕಷ್ಟವಾಗುತ್ತಿತ್ತು ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. ಇದು ಖಂಡಿತವಾಗಿಯೂ ತಪ್ಪಲ್ಲ. ಆ ನೀಚ ಕೃತ್ಯವು ಉದ್ದೇಶಪೂರ್ವಕವಾಗಿ ನಡೆದಿದೆ. ಬ್ಲಿಂಕಿಟ್ ಕ್ರಮ ತೆಗೆದುಕೊಳ್ಳುತ್ತದೆ ಎಂದು ಭಾವಿಸುತ್ತೇನೆ ಎಂದು ಮಗದೊಬ್ಬರು ಹೇಳಿದರು.

ಆದರೆ ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಇದು ಆಕಸ್ಮಿಕವಾಗಿರಬಹುದು ಎಂದು ಭಾವಿಸಿದ್ದಾರೆ. ಬೇಕೆಂದೇ ಆತ ಈ ರೀತಿ ಮಾಡಿದಂತಿಲ್ಲ. ಪಾರ್ಸೆಲ್ ಕೊಡುವಾಗ ತಪ್ಪಿ ಮುಟ್ಟಿರಬಹುದು. ಕೆಲವೊಮ್ಮೆ ಈ ರೀತಿಯ ಘಟನೆಗಳು ಉಂಟಾಗುತ್ತದೆ ಎಂದು ವ್ಯಕ್ತಿಯೊಬ್ಬರು ಕಮೆಂಟ್ ಮಾಡಿದ್ದಾರೆ. ಅವನು ನಿಮ್ಮೊಂದಿಗೆ ಅನುಚಿತವಾಗಿ ಮಾತನಾಡಿದ್ದಾನೆಯೇ? ಮಹಿಳಾ ಸುರಕ್ಷತೆಯ ಬಗ್ಗೆ ಬರೆಯುವುದು, ತಮಾಷೆ ಇತ್ಯಾದಿ ಅನಗತ್ಯವೆಂದು ತೋರುತ್ತದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಡೆಲಿವರಿ ಬಾಯ್ ಈ ರೀತಿ ಉದ್ದೇಶಪೂರ್ವಕವಾಗಿ ಮುಟ್ಟಿದ್ದಾನೆ ಎಂದು ನಾನು ಭಾವಿಸುವುದಿಲ್ಲ ಎಂದು ಮಗದೊಬ್ಬರು ಕಮೆಂಟ್ ಮಾಡಿದ್ದಾರೆ.