ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

India-US Trade Talks: ಭಾರತ-ಅಮೆರಿಕ ವ್ಯಾಪಾರ ಮಾತುಕತೆ ಶೀಘ್ರ ಪುನರಾರಂಭ

ಅಮೆರಿಕ ಮತ್ತೆ ಸುಂಕ ಹೆಚ್ಚಳ ಮಾಡುವ ಸಾಧ್ಯತೆ ಇರುವುದರಿಂದ ಭಾರತ-ಅಮೆರಿಕ ವ್ಯಾಪಾರ ಮಾತುಕತೆ ಶೀಘ್ರದಲ್ಲೇ ಪುನರ್ ಆರಂಭವಾಗುವ ನಿರೀಕ್ಷೆ ಇದೆ. ಈ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗಾಗಲೇ ಸಾಮಾಜಿಕ ಮಾಧ್ಯಮದಲ್ಲಿ ದೃಢೀಕರಿಸಿದ್ದಾರೆ.

ನವದೆಹಲಿ: ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಮಾತುಕತೆಗಳು (India-US Trade Talks) ಮತ್ತೆ ಆರಂಭವಾಗಲಿದೆ. ಆರನೇ ಸುತ್ತಿನ ಮಾತುಕತೆಗಳು ಶೀಘ್ರದಲ್ಲೇ ನಡೆಯಲಿವೆ. ಈ ಮಾತುಕತೆಗಳನ್ನು ಆಗಸ್ಟ್ ಅಂತ್ಯಕ್ಕೆ ನಿಗದಿಪಡಿಸಲಾಗಿತ್ತು. ಆದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಭಾರತೀಯ ಆಮದುಗಳ ಮೇಲೆ ಶೇಕಡಾ 50ರಷ್ಟು ಸುಂಕ (Trump Tariffs) ವಿಧಿಸಿದ ಅನಂತರ ಉಂಟಾದ ಉದ್ವಿಗ್ನತೆಯ ಪರಿಣಾಮ ಅನಿರ್ದಿಷ್ಟವಾಗಿ ಇವುಗಳನ್ನು ಮುಂದೂಡಲಾಗಿದೆ. ಈ ಮಾತುಕತೆಗಳನ್ನು ದೆಹಲಿಯೇ (Delhi) ಆಯೋಜಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಈ ಕುರಿತು ಸಾಮಾಜಿಕ ಮಾಧ್ಯಮವಾದ ಟ್ರುತ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಡೊನಾಲ್ಡ್ ಟ್ರಂಪ್, ಎರಡೂ ದೇಶಗಳು ವ್ಯಾಪಾರ ವಹಿವಾಟನ್ನು ನಡೆಸಲು ಇರುವ ಅಡೆತಡೆಗಳನ್ನು ಪರಿಹರಿಸಲು ಮಾತುಕತೆಗಳನ್ನು ಮುಂದುವರಿಸುತ್ತಿವೆ ಎಂದು ತಿಳಿಸಿದರು.

ಮುಂಬರುವ ವಾರಗಳಲ್ಲಿ ನಾನು ನನ್ನ ಆತ್ಮೀಯ ಸ್ನೇಹಿತ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಲು ಎದುರು ನೋಡುವುದಾಗಿ ತಿಳಿಸಿರುವ ಅವರು, ಎರಡೂ ಮಹಾನ್ ದೇಶಗಳಿಗೆ ಯಶಸ್ವಿ ತೀರ್ಮಾನಕ್ಕೆ ಬರಲು ಯಾವುದೇ ತೊಂದರೆ ಇರುವುದಿಲ್ಲ ಎಂದು ಹೇಳಿದ್ದಾರೆ.

ಈ ಕುರಿತು ಟ್ರಂಪ್ ಶ್ವೇತಭವನದಲ್ಲಿ ಘೋಷಣೆ ಮಾಡುವಾಗ ಭಾರತ-ಅಮೆರಿಕ ಸಂಬಂಧಗಳನ್ನು "ಅತ್ಯಂತ ವಿಶೇಷ ಸಂಬಂಧ" ಎಂದು ಕರೆದರು.

ಇದಕ್ಕೆ ಪ್ರತಿಕ್ರಿಯಿಸಿರುವ ಮೋದಿ, ಅಮೆರಿಕ ಅಧ್ಯಕ್ಷರ ಭಾವನೆಗಳನ್ನು ಮತ್ತು ಭಾರತ-ಅಮೆರಿಕ ದ್ವಿಪಕ್ಷೀಯ ಸಂಬಂಧಗಳ ಸಕಾರಾತ್ಮಕ ಮೌಲ್ಯಮಾಪನವನ್ನು ಮೆಚ್ಚುತ್ತೇನೆ ಮತ್ತು ಸಂಪೂರ್ಣವಾಗಿ ಪ್ರತಿಕ್ರಿಯಿಸುತ್ತೇನೆ ಎಂದು ತಿಳಿಸಿದ್ದಾರೆ. ಹೀಗಾಗಿ ಅಕ್ಟೋಬರ್ ಗಡುವಿನೊಳಗೆ ಒಪ್ಪಂದ ಅಂತ್ಯವಾಗುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.

ಕೃಷಿ ಮತ್ತು ಡೇರಿಯ ಕುರಿತಾದ ತನ್ನ ನಿಲುವಿಗೆ ಭಾರತ ಬದ್ಧವಾಗಿದೆ. ಅಗ್ಗದ ಅಮೆರಿಕನ್ ಸರಕುಗಳು ಈ ಮಾರುಕಟ್ಟೆಗಳನ್ನು ದುರ್ಬಲಗೊಳಿಸಲು ಮತ್ತು ಕೋಟ್ಯಂತರ ರೈತರು, ಜಾನುವಾರು ಮಾಲೀಕರು ಮತ್ತು ಮೀನುಗಾರರು ಮತ್ತು ಮಹಿಳೆಯರ ಜೀವನೋಪಾಯಕ್ಕೆ ಬೆದರಿಕೆ ಹಾಕಲು ಅನುವು ನೀಡುವುದಿಲ್ಲ ಎಂದು ಹೇಳಿರುವ ಭಾರತ, ಇದರ ಜತೆಗೆ ಕಾರ್ನ್, ಸೋಯಾಬೀನ್, ಸೇಬು, ಬಾದಾಮಿ ಮತ್ತು ಎಥೆನಾಲ್‌ನಂತಹ ಉತ್ಪನ್ನಗಳ ಮೇಲಿನ ಸುಂಕವನ್ನು ಕಡಿಮೆ ಮಾಡುವ ಪ್ರಸ್ತಾಪಗಳನ್ನು ಸಹ ರದ್ದುಗೊಳಿಸಿದೆ.

ಇದನ್ನೂ ಓದಿ: ಗ್ಯಾಲಂಟ್ ಸ್ಪೋರ್ಟ್ಸ್‌ನಿಂದ ‘ಗ್ಯಾಲಂಟ್ ಪಾರ್ಟ್ನರ್’ ಪ್ಲಾಟ್‌ಫಾರ್ಮ್ ಆರಂಭ!

ಇನ್ನು ಕೃಷಿ ಆಧಾರಿತ ಎಂಎಸ್‌ಎಂಇಗಳನ್ನು ರಕ್ಷಿಸಲು ಅಮೆರಿಕವನ್ನು ದೂರವಿಡುವುದು ಸಹ ಅಗತ್ಯವಾಗಿದೆ ಎಂದಿರುವ ಭಾರತ ಸರ್ಕಾರ, ಇವು ಕೊಯ್ಲು ಪೂರ್ವ ಮತ್ತು ಅನಂತರದ ಚಟುವಟಿಕೆಗಳು, ಜಾನುವಾರು ಉತ್ಪಾದನೆ ಮತ್ತು ಆರೈಕೆ, ಆಹಾರ ಸಂಸ್ಕರಣೆ ಹಾಗೂ ವಿವಿಧ ಕೃಷಿ ಸೇವೆಗಳಲ್ಲಿ ತೊಡಗಿಸಿಕೊಂಡಿವೆ. ಹೀಗಾಗಿ ಈ ವಿಷಯದಲ್ಲಿ ಹಿಂದೆ ಸರಿಯುವುದಿಲ್ಲ ಎಂದು ಮೋದಿ ಈಗಾಗಲೇ ಸ್ಪಷ್ಟಪಡಿಸಿದೆ.

ವಿದ್ಯಾ ಇರ್ವತ್ತೂರು

View all posts by this author