ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

GDP Increase: ಜಿಡಿಪಿಯಲ್ಲಿ ಅಚ್ಚರಿಯ ಬೆಳವಣಿಗೆ, ಏಪ್ರಿಲ್-ಜೂನ್‌ನಲ್ಲಿ 7.8%ಕ್ಕೆ ಜಿಗಿತ! ಕಾರಣವೇನು?

ಭಾರತದ ಜಿಡಿಪಿ ಬೆಳವಣಿಗೆ ಕಳೆದ ಏಪ್ರಿಲ್-ಜೂನ್‌ ತ್ರೈಮಾಸಿಕದಲ್ಲಿ ನಿರೀಕ್ಷೆ ಮೀರಿ, ಅಚ್ಚರಿಯ ಹೊಸ ಎತ್ತರಕ್ಕೇರಿದೆ. ಈ ಮೂರು ತಿಂಗಳಿನಲ್ಲಿ 7.8% ಬೆಳವಣಿಗೆಯು ದಾಖಲಾಗಿದೆ ಎಂದು ರಾಷ್ಟ್ರೀಯ ಅಂಕಿ ಅಂಶಗಳ ಕಚೇರಿಯು (National statistics office) ಬಿಡುಗಡೆಗೊಳಿಸಿದ ಅಂಕಿ ಅಂಶಗಳು ತಿಳಿಸಿದೆ.

ನವದೆಹಲಿ: ಭಾರತದ ಜಿಡಿಪಿ ಬೆಳವಣಿಗೆ ಕಳೆದ ಏಪ್ರಿಲ್-ಜೂನ್‌ ತ್ರೈಮಾಸಿಕದಲ್ಲಿ ನಿರೀಕ್ಷೆ ಮೀರಿ, ಅಚ್ಚರಿಯ ಹೊಸ ಎತ್ತರಕ್ಕೇರಿದೆ. ಈ ಮೂರು ತಿಂಗಳಿನಲ್ಲಿ 7.8% ಬೆಳವಣಿಗೆಯು ದಾಖಲಾಗಿದೆ ಎಂದು ರಾಷ್ಟ್ರೀಯ ಅಂಕಿ ಅಂಶಗಳ ಕಚೇರಿಯು (National statistics office) ಬಿಡುಗಡೆಗೊಳಿಸಿದ ಅಂಕಿ ಅಂಶಗಳು ತಿಳಿಸಿದೆ. ನಿರ್ಮಾಣ ವಲಯ ಮತ್ತು ಕೃಷಿ ಕ್ಷೇತ್ರದಲ್ಲಿ ಭಾರಿ ಬೆಳವಣಿಗೆ ಆಗಿರುವುದು, ಕೇಂದ್ರ ಸರಕಾರದ ಬಂಡವಾಳ ಹೆಚ್ಚ ಗಣನೀಯ ಹೆಚ್ಚಳವಾಗಿರುವುದು ಪ್ರಭಾವ ಬೀರಿದೆ. ವಿಮಾನಗಳ ಮೂಲಕ ಸರಕುಗಳ ಸಾಗಣೆಯಲ್ಲಿ ಹೆಚ್ಚಳವಾಗಿದೆ. ಜಿಎಸ್‌ ಟಿ ಸಂಗ್ರಹದಲ್ಲೂ ದಾಖಲೆಯ ಏರಿಕೆಯಾಗಿದೆ. ಹೀಗಾಗಿ ಜಾಗತಿಕ ವಾಣಿಜ್ಯ ವಲಯದ ಅನಿಶ್ಚಿತತೆಯ ನಡುವೆಯೂ ಭಾರತದ ಜಿಡಿಪಿ ವೃದ್ಧಿಸಿದೆ.

2025-26ರ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಮೌಲ್ಯ 47.89 ಲಕ್ಷ ಕೋಟಿ ರುಪಾಯಿಗೆ ಏರಿಕೆಯಾಗಿದೆ. 2024-25ರ ಏಪ್ರಿಲ್-ಜೂನ್‌ ತ್ರೈಮಾಸಿಕದಲ್ಲಿ ಇದು 44.42 ಲಕ್ಷ ಕೋಟಿ ರುಪಾಯಿ ಆಗಿತ್ತು. ಅಂದರೆ 7.8% ಬೆಳವಣಿಗೆ ದಾಖಲಿಸಿದೆ. ಈ ಅವಧಿಯಲ್ಲಿ ನಾಮಿನಲ್‌ ಜಿಡಿಪಿ ಅಥವಾ ಎಲ್ಲ ಸರಕು ಮತ್ತು ಸೇವೆಗಳ ಮಾರುಕಟ್ಟೆ ಅಧಾರಿತ ನಗದು ಮೌಲ್ಯ 86.05 ಲಕ್ಷ ಕೋಟಿ ರುಪಾಯಿಗಳಾಗಿದೆ. 2024-25ರ ಮೊದಲ ತ್ರೈಮಾಸಿಕದಲ್ಲಿ ಇದು 79.08 ಲಕ್ಷ ಕೋಟಿ ರುಪಾಯಿಗಳಾಗಿತ್ತು. ಅಂದರೆ 8.8% ಏರಿಕೆ ದಾಖಲಿಸಿದೆ.

ಕೃಷಿ ಕ್ಷೇತ್ರದ ಪ್ರಗತಿ:

ಕೃಷಿ ಕ್ಷೇತ್ರದಲ್ಲಿ ಕಳೆದ ಏಪ್ರಿಲ್-ಜೂನ್‌ ತ್ರೈಮಾಸಿಕದಲ್ಲಿ 3.7% ರ ಉತ್ತಮ ಪ್ರಗತಿ ದಾಖಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1.5% ರ ಪ್ರಗತಿ ಉಂಟಾಗಿತ್ತು. ವಿದ್ಯುತ್‌ ಮತ್ತು ಉತ್ಪಾದನೆ ವಲಯದಲ್ಲಿ ವಾರ್ಷಿಕ ಸರಾಸರಿ ಲೆಕ್ಕದಲ್ಲಿ 7% ಬೆಳವಣಿಗೆ ಆಗಿದೆ. ಹೋಟೆಲ್‌, ಸಾರಿಗೆ, ಸಂವಹನ, ಸೇವೆಗಳ ವಲಯದಲ್ಲಿ 9.5% ರ ಪ್ರಗತಿ ಉಂಟಾಗಿದೆ. ಹಣಕಾಸು, ರಿಯಲ್‌ ಎಸ್ಟೇಟ್‌, ವೃತ್ತಿಪರ ಸೇವೆಗಳ ವಲಯದಲ್ಲಿ 9.5% ಬೆಳವಣಿಗೆ ಆಗಿದೆ. ಸಾರ್ವಜನಿಕ ಆಡಳಿತ ಮತ್ತು ರಕ್ಷಣಾ ವಲಯದಲ್ಲಿ 9.8% ಪ್ರಗತಿ ದಾಖಲಾಗಿದೆ.

ಸಾರ್ವಜನಿಕ ವೆಚ್ಚದ ಪುಷ್ಟಿ:

ಕೇಂದ್ರ ಸರಕಾರದ ಬಂಡವಾಳ ವೆಚ್ಚದಲ್ಲಿ ಏಪ್ರಿಲ್-ಜೂನ್‌ ತ್ರೈಮಾಸಿಕದಲ್ಲಿ 52% ಹೆಚ್ಚಳ ಆಗಿರುವುದು ಗಮನಾರ್ಹ. ಇದು ಜಿಡಿಪಿ ಬೆಳವಣಿಗೆಗೆ ಪುಷ್ಟಿ ನೀಡಿದೆ. ಗ್ರಾಮೀಣ ಪ್ರದೇಶಗಳಲ್ಲಿ ಬೇಡಿಕೆ ಕೂಡ ಈ ಅವಧಿಯಲ್ಲಿ ಪುಷ್ಟಿ ನೀಡಿತ್ತು. ಆದರೆ ಇದೀಗ ಟ್ರಂಪ್‌ ಅವರು ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಸರಕುಗಳ ಮೇಲೆ 50% ಸುಂಕ ಹೇರಿಕೆ ಮಾಡಿರುವುದರಿಂದ ಇದರ ಪ್ರಭಾವ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಈ ಸುದ್ದಿಯನ್ನೂ ಓದಿ: Adichunchanagairi Mutt Sri: ಜಿಡಿಪಿ ಪಟ್ಟಿಯಲ್ಲಿ ಭಾರತ ನಾಲ್ಕನೇ ದೇಶ : ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ

ಜಿಡಿಪಿ ಅಂಕಿ ಅಂಶಗಳು ಅತ್ಯಂತ ಆರೋಗ್ಯಕರವಾಗಿವೆ. ಅಮೆರಿಕದ ಟಾರಿಫ್‌ ಸಂಘರ್ಷವನ್ನು ಎದುರಿಸಲು ಇದು ಸಹಕಾರಿಯಾಗಲಿದೆʼʼ ಎಂದು ತಜ್ಞರು ಹೇಳಿದ್ದಾರೆ.