ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vice President: ಮಾಜಿ ಉಪರಾಷ್ಟ್ರಪತಿಗೆ ಯಾವೆಲ್ಲ ಪಿಂಚಣಿ ಸೌಲಭ್ಯ ಸಿಗಲಿದೆ?

ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿ ಜಗದೀಪ್ ಧನಕರ್ ರಾಜಕೀಯ ಬದುಕಿನಿಂದ ಹೊರ ಬಂದು ತಮ್ಮ ನಿವೃತ್ತಿ ಜೀವನ ಆರಂಭಿಸಿದ್ದಾರೆ. ಈ ಮಧ್ಯೆ ಅವರಿಗೆ ಸಿಗುವ ಸೌಲಭ್ಯದ ಬಗ್ಗೆ ಭಾರಿ ಚರ್ಚೆ ಆಗುತ್ತಿದ್ದು, ಶಾಸಕರಾಗಿ, ರಾಜ್ಯಪಾಲರಾಗಿ ಹಾಗೂ ಉಪರಾಷ್ಟ್ರಪತಿಯಾಗಿ ಕಾರ್ಯ ನಿರ್ವಹಿಸಿದ್ದ ಅವರಿಗೆ ಮೂರು ಪಿಂಚಣಿ ದೊರೆಯುತ್ತದೆಯೇ ಅನ್ನುವ ಪ್ರಶ್ನೆ ಮೂಡಿದೆ.

ಜಗದೀಪ್ ಧನಕರ್

ನವದೆಹಲಿ: ಮಾಜಿ ಉಪರಾಷ್ಟ್ರಪತಿ (Former Vice President) ಜಗದೀಪ್ ಧನಕರ್ (Jagdeep Dhankhar) ರಾಜಸ್ಥಾನ (Rajasthan) ವಿಧಾನಸಭೆಯ ಮಾಜಿ ಶಾಸಕರಾಗಿ ಪಿಂಚಣಿಗಾಗಿ ಮತ್ತೊಮ್ಮೆ ಅರ್ಜಿ ಸಲ್ಲಿಸಿದ್ದಾರೆ. 1993ರಿಂದ 1998ರವರೆಗೆ ಕಿಶನ್‌ಗಢದಿಂದ ಶಾಸಕರಾಗಿದ್ದ ಧನಕರ್, ಅನಾರೋಗ್ಯ ಕಾರಣದಿಂದ 2025ರ ಜುಲೈ 21ರಂದು ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 2019ರವರೆಗೆ ಶಾಸಕರ ಪಿಂಚಣಿಯನ್ನು ಪಡೆಯುತ್ತಿದ್ದ ಅವರು, ಪಶ್ಚಿಮ ಬಂಗಾಳದ ರಾಜ್ಯಪಾಲರಾದ ನಂತರ ಅದನ್ನು ಸ್ಥಗಿತಗೊಳಿಸಿದ್ದರು.

ರಾಜಸ್ಥಾನ ವಿಧಾನಸಭಾ ಸಚಿವಾಲಯ ಧನಕರ್‌ರ ಅರ್ಜಿಯನ್ನು ಪರಿಶೀಲಿಸುತ್ತಿದೆ. ಮಾಜಿ ಶಾಸಕರಿಗೆ ತಿಂಗಳಿಗೆ 35,000 ರೂ. ಪಿಂಚಣಿಯ ಹಕ್ಕಿದ್ದು, 70 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಶೇ. 20ರಷ್ಟು ಹೆಚ್ಚಳದೊಂದಿಗೆ ಧನಕರ್‌ಗೆ 42,000 ರೂ. ಪಿಂಚಣಿ ಸಿಗಲಿದೆ. ಇದರ ಜತೆಗೆ ಮಾಜಿ ಸಂಸದರಾಗಿ 31,000 ರೂ. ಮತ್ತು ಮಾಜಿ ಉಪರಾಷ್ಟ್ರಪತಿಯಾಗಿ 2 ಲಕ್ಷ ರೂ. ಪಿಂಚಣಿಯನ್ನು ಅವರು ಪಡೆಯುತ್ತಿದ್ದಾರೆ. ಒಟ್ಟಾರೆ, ಧನಕರ್‌ ಅವರ ಪಿಂಚಣಿ ತಿಂಗಳಿಗೆ 2.73 ಲಕ್ಷ ರೂ. ಆಗಲಿದೆ. ಆದರೆ ರಾಜ್ಯಪಾಲರಾಗಿದ್ದ ಸ್ಥಾನಕ್ಕೆ ಯಾವುದೇ ಪಿಂಚಣಿ ಇಲ್ಲ.

ಈ ಸುದ್ದಿಯನ್ನು ಓದಿ: Viral Video: ಆಸ್ತಿ ಆಸೆಗೆ ಬಿದ್ದ ಸೊಸೆ ಮಾವನಿಗೆ ಮಾಡಿದ್ದೇನು ಗೊತ್ತಾ? ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

ಜಗದೀಪ್ ಧನಕರ್, ರಾಜಸ್ಥಾನದ ಝುಂಝುನು ಜಿಲ್ಲೆಯ ಕಿಥಾನ ಗ್ರಾಮದಲ್ಲಿ ಜನಿಸಿ, 1989ರಲ್ಲಿ ಜನತಾದಳದಿಂದ ಝುಂಝುನಿಂದ ಸಂಸದರಾಗಿ ರಾಜಕೀಯ ಜೀವನ ಆರಂಭಿಸಿದರು. ಚಂದ್ರಶೇಖರ್ ಸರ್ಕಾರದಲ್ಲಿ ಸಚಿವರಾಗಿದ್ದ ಅವರು, ನಂತರ ಕಾಂಗ್ರೆಸ್ ಸೇರಿ 1993ರಲ್ಲಿ ಕಿಶನ್‌ಗಢದಿಂದ ಶಾಸಕರಾದರು. 2019ರಿಂದ 2022ರವರೆಗೆ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ ಧನಕರ್, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯೊಂದಿಗಿನ ಘರ್ಷಣೆಯಿಂದ ಗಮನ ಸೆಳೆದಿದ್ದರು. 2022ರ ಆಗಸ್ಟ್ 11ರಂದು 14ನೇ ಉಪರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ಅವರು, 2023ರ ಜುಲೈ 21ರಂದು ಆರೋಗ್ಯ ಕಾರಣಗಳಿಂದ ರಾಜೀನಾಮೆ ನೀಡಿದರು.

ಧನಕರ್ ದಕ್ಷಿಣ ದೆಹಲಿಯ ಛತರ್‌ಪುರ ಎನ್‌ಕ್ಲೇವ್‌ನ ಖಾಸಗಿ ನಿವಾಸದಲ್ಲಿ ವಾಸಿಸಲಿದ್ದಾರೆ. ಉಪರಾಷ್ಟ್ರಪತಿ ಚುನಾವಣೆ ಸೆಪ್ಟೆಂಬರ್ 9ಕ್ಕೆ ನಿಗದಿಯಾಗಿದ್ದು, ಅಧಿಕೃತ ನಿವಾಸವನ್ನು ತೊರೆಯಬೇಕಾಗಿದೆ. ಸರ್ಕಾರಿ ನಿವಾಸ ಸಿಗುವವರೆಗೆ ಅವರು ಖಾಸಗಿ ಮನೆಯಲ್ಲಿರಲಿದ್ದಾರೆ. ಮಾಜಿ ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿಗೆ ಟೈಪ್-8 ಬಂಗಲೆಗಳನ್ನು ಒದಗಿಸುವ ನಿಯಮವಿದ್ದು, ಈ ಪ್ರಕ್ರಿಯೆಗೆ ಕನಿಷ್ಠ ಮೂರು ತಿಂಗಳು ಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.