ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chanda Gaur: ಕಾಂಗ್ರೆಸ್‌ ಶಾಸಕಿಯ ಪುತ್ರನ ಮನೆಯಲ್ಲಿ ಕೆಲಸದಾಕೆಯ ಶವ ಪತ್ತೆ: ಮುಖದ ಮೇಲೆ ಗಾಯದ ಗುರುತು

ಮಧ್ಯಪ್ರದೇಶದ ಛತ್ತರ್‌ಪುರದ ಖರ್ಗಪುರ ಶಾಸಕಿ ಚಂದಾ ಗೌರ್ ಅವರ ಪುತ್ರ ಅಭಿಯಂತ್ ಗೌರ್ ಮನೆಯಲ್ಲಿ ಕೆಲಸದಾಕೆ ಸಪ್ನಾ ರೈಕ್ವಾರ್ (21) ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಆಕೆಯ ಮುಖದ ಮೇಲೆ ನಾಯಿ ಕಚ್ಚಿದ ಗಾಯದ ಗುರುತುಗಳು ಕಂಡುಬಂದಿದ್ದು, ಈ ಘಟನೆ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಸಾಂಧರ್ಬಿಕ ಚಿತ್ರ

ಭೋಪಾಲ್‌: ಮಧ್ಯಪ್ರದೇಶದ (Madhya Pradesh) ಛತ್ತರ್‌ಪುರದ (Chhatarpur) ಖರ್ಗಪುರ (Khargpur) ಶಾಸಕಿ ಚಂದಾ ಗೌರ್ (Chanda Gaur) ಅವರ ಪುತ್ರ ಅಭಿಯಂತ್ ಗೌರ್ ಮನೆಯಲ್ಲಿ ಕೆಲಸದಾಕೆ ಸಪ್ನಾ ರೈಕ್ವಾರ್ (21) ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರ ಮುಖದ ಮೇಲೆ ನಾಯಿ ಕಚ್ಚಿದ ಗಾಯದ ಗುರುತು ಕಂಡುಬಂದಿದ್ದು, ಈ ಘಟನೆ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಸೋಮವಾರ ಬೆಳಗ್ಗೆ 5:20ರ ಸುಮಾರಿಗೆ ಮನೆಯ ಹಿಂಭಾಗದಲ್ಲಿ ಸಪ್ನಾ ಶವವಾಗಿ ನೇತಾಡುತ್ತಿರುವುದು ಕಂಡುಬಂದಿತು. ಕುಟುಂಬ ಸದಸ್ಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಸಪ್ನಾ ದುಪಟ್ಟಾದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ಆಕೆಯ ಮುಖದ ಮೇಲಿನ ಗಾಯಗಳನ್ನು ಗಮನಿಸಿದ ಅಧಿಕಾರಿಗಳು, ಇದು ನಾಯಿ ಕಚ್ಚಿದ ಗುರುತು ಎಂದು ದೃಢಪಡಿಸಿದ್ದಾರೆ.



ಈ ಸುದ್ದಿಯನ್ನೂ ಓದಿ: Lawrence Bishnoi: ದೆಹಲಿ ಶೂಟೌಟ್- ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್​​ನ ಇಬ್ಬರು ಸದಸ್ಯರ ಬಂಧನ

ಸಾವಿನ ನಿಖರ ಕಾರಣ ತಿಳಿಯಲು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಘಟನೆ ಸಮಯದಲ್ಲಿ ಅಭಿಯಂತ್ ಗೌರ್‌ ಅವರ ಪತ್ನಿ ಮತ್ತು ಮಗ ಮನೆಯಲ್ಲಿದ್ದರು. ಠಾಣೆ ಉಸ್ತುವಾರಿ ಬಾಲ್ಮಿಕ್ ಚೌಬೆ, “ಪ್ರಕರಣವನ್ನು ಎಲ್ಲ ಕೋನಗಳಿಂದ ತನಿಖೆ ಮಾಡಲಾಗುತ್ತಿದೆ. ಮರಣೋತ್ತರ ಪರೀಕ್ಷೆಯ ವರದಿಯ ನಂತರವೇ ಸ್ಪಷ್ಟ ಚಿತ್ರಣ ದೊರೆಯಲಿದೆ” ಎಂದು ತಿಳಿಸಿದ್ದಾರೆ.

ಪೊಲೀಸರು ಸಪ್ನಾಳ ಸಂಬಂಧಿಕರು ಮತ್ತು ಪರಿಚಯಸ್ಥರೊಂದಿಗೆ ಮಾತನಾಡಿ, ಆಕೆ ಯಾವುದಾದರು ಒತ್ತಡದಲ್ಲಿದ್ದರೆ ಎಂದು ತಿಳಿಯಲು ಪ್ರಯತ್ನಿಸುತ್ತಿದ್ದಾರೆ. ಸಪ್ನಾ ಹಲವು ವರ್ಷಗಳಿಂದ ಈ ಮನೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಈ ಘಟನೆ ಛತ್ತರ್‌ಪುರದಲ್ಲಿ ಸಂಚಲನ ಸೃಷ್ಟಿಸಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ನಾಯಿ ಕಚ್ಚಿದ ಗಾಯದ ಗುರುತುಗಳು ಮತ್ತು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ತನಿಖೆಯ ಮೂಲಕ ಈ ಘಟನೆಯ ಹಿಂದಿನ ಸತ್ಯವನ್ನು ಬಯಲಿಗೆಳೆಯಲು ಪೊಲೀಸರು ಕಾರ್ಯಾಚಾರಣೆ ನಡೆಸುತ್ತಿದ್ದಾರೆ.