ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Covid Vaccines: ಕೋವಿಡ್ ಲಸಿಕೆಯಿಂದ ಹೆಚ್ಚುತ್ತಿದೆಯಾ ಹೃದಯಾಘಾತ? ಏಮ್ಸ್‌ ವೈದ್ಯರ ವರದಿಯಲ್ಲಿ ಬಯಲಾದ ಸತ್ಯವೇನು?

ದೇಶದ ಯುವ ಜನತೆಯಲ್ಲಿ ಹೃದಯಾಘಾತ ಸಂಭವಿಸುತ್ತಿದ್ದು, ಜನರು ಬೆಚ್ಚಿ ಬಿದ್ದಿದ್ದಾರೆ. ಕೋವಿಡ್-19 ಲಸಿಕೆಗಳು ದಿಢೀರ್‌ ಹೃದಯಾಘಾತಕ್ಕೆ ಕಾರಣವಾಗಿವೆ ಎಂದು ಎಲ್ಲೆಡೆ ಹೇಳಲಾಗುತ್ತಿದೆ. ಈ ಕುರಿತು ಸಮೀಕ್ಷೆ ನಡೆದಿದ್ದು, ಕೋವಿಡ್-19 ಲಸಿಕೆಗಳು ಮತ್ತು ಹೃದಯಾಘಾತದಿಂದ ಉಂಟಾಗುವ ಹಠಾತ್ ಸಾವುಗಳ ಹೆಚ್ಚಳದ ನಡುವೆ ಯಾವುದೇ ಸಂಬಂಧ ಕಂಡುಬಂದಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬುಧವಾರ ತಿಳಿಸಿದೆ.

ನವದೆಹಲಿ: ದೇಶದ ಯುವ ಜನತೆಯಲ್ಲಿ ಹೃದಯಾಘಾತ ಸಂಭವಿಸುತ್ತಿದ್ದು, ಜನರು ಬೆಚ್ಚಿ ಬಿದ್ದಿದ್ದಾರೆ. ಕೋವಿಡ್-19 ಲಸಿಕೆಗಳು (Covid Vaccines) ದಿಢೀರ್‌ ಹೃದಯಾಘಾತಕ್ಕೆ ಕಾರಣವಾಗಿವೆ ಎಂದು ಎಲ್ಲೆಡೆ ಹೇಳಲಾಗುತ್ತಿದೆ. ಈ ಕುರಿತು ಸಮೀಕ್ಷೆ ನಡೆದಿದ್ದು, ಕೋವಿಡ್-19 ಲಸಿಕೆಗಳು ಮತ್ತು ಹೃದಯಾಘಾತದಿಂದ ಉಂಟಾಗುವ ಹಠಾತ್ ಸಾವುಗಳ ಹೆಚ್ಚಳದ ನಡುವೆ ಯಾವುದೇ ಸಂಬಂಧ ಕಂಡುಬಂದಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬುಧವಾರ ತಿಳಿಸಿದೆ. ಕೋವಿಡ್ ನಂತರದ ವಯಸ್ಕರಲ್ಲಿ ಹಠಾತ್ ಸಾವುಗಳ ಕುರಿತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮತ್ತು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ನಡೆಸಿದ ವ್ಯಾಪಕ ಅಧ್ಯಯನಗಳ ಆಧಾರದ ಮೇಲೆ ಸಚಿವಾಲಯ ಈ ಹೇಳಿಕೆಯನ್ನು ನೀಡಿದೆ.

AIIMS ಕೋವಿಡ್‌ ಲಸಿಕೆಗಳ ಮೇಲೆ ಅಧ್ಯಯನ ನಡೆಸಲಾಗಿತ್ತು. ಅಧ್ಯಯನಗಳು ಭಾರತದಲ್ಲಿ COVID-19 ಲಸಿಕೆಗಳು ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ದೃಢಪಡಿಸಿವೆ. ದೇಶದ ಹಲವಾರು ಏಜೆನ್ಸಿಗಳ ಮೂಲಕ ಹಠಾತ್ ವಿವರಿಸಲಾಗದ ಸಾವುಗಳ ವಿಷಯವನ್ನು ತನಿಖೆ ಮಾಡಲಾಗಿದೆ. ಈ ಅಧ್ಯಯನಗಳು COVID 19 ಲಸಿಕೆ ಮತ್ತು ದೇಶದಲ್ಲಿ ಹಠಾತ್ ಸಾವುಗಳ ವರದಿಗಳ ನಡುವೆ ಯಾವುದೇ ನೇರ ಸಂಬಂಧವಿಲ್ಲ ಎಂದು ವರದಿ ತಿಳಿಸಿದೆ.

ರಾಜ್ಯದಲ್ಲಿ ಹೆಚ್ಚಿದ ಹೃದಯಾಘಾತ ಪ್ರಕರಣದಿಂದಾಗಿ ಜನತೆ ಸಣ್ಣಪುಟ್ಟ ಅಸ್ವಸ್ಥತೆಗಳಿಗೂ ತಪಾಸಣೆಗಾಗಿ ಹೃದ್ರೋಗ ತಜ್ಞರ ಬಳಿ ದಾಂಗುಡಿ ಇಡುತ್ತಿದ್ದಾರೆ. ಇದರಿಂದಾಗಿ ಬೆಂಗಳೂರು, ಮೈಸೂರು, ಕಲಬುರಗಿಯಲ್ಲಿರುವ ಜಯದೇವ ಹೃದ್ರೋಗ ಸಂಸ್ಥೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಜೊತೆಗೆ ಖಾಸಗಿ ಹೃದ್ರೋಗ ತಜ್ಞರ ಬಳಿಯೂ ತಪಾಸಣೆಗೊಳಗಾಗುತ್ತಿರುವ ಸಂಖ್ಯೆ ತೀವ್ರಗೊಂಡಿದೆ. ಸಾಮರ್ಥ್ಯ ಮೀರಿ ರೋಗಿಗಳು ಬರುತ್ತಿರುವುದರಿಂದ ತಪಾಸಣೆಗೆ ಒತ್ತಡ ಹೆಚ್ಚಾಗಿದೆ. ಸಾರ್ವಜನಿಕರು ಮೊದಲು ಸಾಮಾನ್ಯ ಪರೀಕ್ಷೆಗೆ ಒಳಗಾಗಿ ನಂತರ ಹೆಚ್ಚಿನ ಚಿಕಿತ್ಸೆಗೆ ತಜ್ಞರ ಬಳಿ ಹೋಗುವಂತೆ ಮನವಿ ಮಾಡಿಕೊಳ್ಳಲಾಗುತ್ತಿದೆ.

ಈ ಸುದ್ದಿಯನ್ನೂ ಓದಿ: Manipal Hospital: 'ಹೃದಯಾಘಾತ' ತಡೆಯಲು ಮಣಿಪಾಲ್ ಆಸ್ಪತ್ರೆ ವತಿಯಿಂದ ವಿದ್ಯಾರ್ಥಿಗಳಿಗೆ ಸಿಪಿಅರ್ ತರಬೇತಿ ಕಾರ್ಯಕ್ರಮ

ದೇಶದ ಯುವ ಜನತೆಯಲ್ಲಿ ಹೃದಯಾಘಾತ ಸಂಭವಿಸುತ್ತಿದ್ದು, ಜನರು ಬೆಚ್ಚಿ ಬಿದ್ದಿದ್ದಾರೆ. ಕೋವಿಡ್-19 ಲಸಿಕೆಗಳು ದಿಢೀರ್‌ ಹೃದಯಾಘಾತಕ್ಕೆ ಕಾರಣವಾಗಿವೆ ಎಂದು ಎಲ್ಲೆಡೆ ಹೇಳಲಾಗುತ್ತಿದೆ. ಈ ಕುರಿತು ಸಮೀಕ್ಷೆ ನಡೆದಿದ್ದು, ಕೋವಿಡ್-19 ಲಸಿಕೆಗಳು ಮತ್ತು ಹೃದಯಾಘಾತದಿಂದ ಉಂಟಾಗುವ ಹಠಾತ್ ಸಾವುಗಳ ಹೆಚ್ಚಳದ ನಡುವೆ ಯಾವುದೇ ಸಂಬಂಧ ಕಂಡುಬಂದಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬುಧವಾರ ತಿಳಿಸಿದೆ. ಕೋವಿಡ್ ನಂತರದ ವಯಸ್ಕರಲ್ಲಿ ಹಠಾತ್ ಸಾವುಗಳ ಕುರಿತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮತ್ತು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ನಡೆಸಿದ ವ್ಯಾಪಕ ಅಧ್ಯಯನಗಳ ಆಧಾರದ ಮೇಲೆ ಸಚಿವಾಲಯ ಈ ಹೇಳಿಕೆಯನ್ನು ನೀಡಿದೆ.