ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Manipal Hospital: 'ಹೃದಯಾಘಾತ' ತಡೆಯಲು ಮಣಿಪಾಲ್ ಆಸ್ಪತ್ರೆ ವತಿಯಿಂದ ವಿದ್ಯಾರ್ಥಿಗಳಿಗೆ ಸಿಪಿಅರ್ ತರಬೇತಿ ಕಾರ್ಯಕ್ರಮ

ಮಣಿಪಾಲ್ ಆಸ್ಪತ್ರೆಯೂ ಜುಲೈ 1, 2025 ರಂದು ಸುಮಾರು 200 ವಿದ್ಯಾರ್ಥಿಗಳಿಗೆ ಸಿಪಿಅರ್ ಹೃದಯ ಶ್ವಾಸಕೋಶದ ಪುನರುಜ್ಜೀವನ ತರಬೇತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿತು. ಯುವ ಪೀಳಿಗೆ ಯನ್ನು ಅಗತ್ಯ ಜೀವ ಉಳಿಸುವ ಕೌಶಲ್ಯಗಳೊಂದಿಗೆ ಸಜ್ಜು ಗೊಳಿಸುವ ನಿಟ್ಟಿನಲ್ಲಿ ಮಣಿಪಾಲ ಆಸ್ಪತ್ರೆಯು ಈ ತರಬೇತಿ ಆಯೋಜನೆ ಮಾಡಿದೆ.

ಮಣಿಪಾಲ್ ಆಸ್ಪತ್ರೆ ವತಿಯಿಂದ ವಿದ್ಯಾರ್ಥಿಗಳಿಗೆ ಸಿಪಿಆರ್ ತರಬೇತಿ

Profile Pushpa Kumari Jul 2, 2025 11:43 AM

ಬೆಂಗಳೂರು: ಯುವ ಜನರಲ್ಲಿ ಹಠಾತ್ ಹೃದಯಾಘಾತ ಮತ್ತು ಹೃದಯ ಸ್ತಂಭನ ದಂತಹ ಹೃದಯ ಸಂಬಂಧಿ ತುರ್ತು ಪರಿಸ್ಥಿತಿಗಳು ಹೆಚ್ಚಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು, ಮಣಿಪಾಲ್ ಆಸ್ಪತ್ರೆಯೂ (Manipal Hospital) ಜುಲೈ 1, 2025 ರಂದು ಸುಮಾರು 200 ವಿದ್ಯಾರ್ಥಿಗಳಿಗೆ ಸಿಪಿಅರ್ ಹೃದಯ ಶ್ವಾಸಕೋಶದ ಪುನರುಜ್ಜೀವನ ತರಬೇತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿತು. ಯುವ ಪೀಳಿಗೆಯನ್ನು ಅಗತ್ಯ ಜೀವ ಉಳಿಸುವ ಕೌಶಲ್ಯಗಳೊಂದಿಗೆ ಸಜ್ಜು ಗೊಳಿಸುವ ನಿಟ್ಟಿನಲ್ಲಿ ಮಣಿಪಾಲ ಆಸ್ಪತ್ರೆಯು ಈ ತರಬೇತಿ ಆಯೋಜನೆ ಮಾಡಿದೆ.

ಇತ್ತೀಚಿನ ವರದಿ ಪ್ರಕಾರ 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳಲ್ಲಿ ಹೃದಯಾಘಾತದಲ್ಲಿ ಗಮನಾರ್ಹ ಏರಿಕೆ ಯಾಗುತ್ತಿರುವುದು ಕಳವಳಕಾರಿ.‌ ಜಡ ಜೀವನಶೈಲಿ, ಕಳಪೆ ಆಹಾರ ಪದ್ಧತಿ ಮತ್ತು ಹೆಚ್ಚಿದ ಒತ್ತಡದ ಮಟ್ಟಗಳು ಈ ಉಲ್ಬಣಕ್ಕೆ ಮುಖ್ಯ ಕಾರಣವಾಗಿವೆ. ಹೃದಯ ಸಂಬಂಧಿ ಘಟನೆಗಳ ಸಮಯದಲ್ಲಿ ಪ್ರಾಥಮಿಕ ಹಂತದ ಪ್ರಾಮುಖ್ಯತೆಯನ್ನು ಗುರುತಿಸಿದ ಮಣಿಪಾಲ ಆಸ್ಪತ್ರೆಯ ತಂಡ, ವಿದ್ಯಾರ್ಥಿಗಳಿಗೆ ತುರ್ತು ಸಂದರ್ಭಗಳಲ್ಲಿ ತ್ವರಿತವಾಗಿ ಕಾರ್ಯನಿರ್ವಹಿಸಲು ಅಗತ್ಯ ಜ್ಞಾನ ಮತ್ತು ಕೌಶಲ್ಯಗಳ ಬಗ್ಗೆ ತರಬೇತಿ ನೀಡಿದರು.

WhatsApp Image 2025-07-01 at 12.47.19

ನಮ್ಮ ಯುವಕರನ್ನು ಸಿಪಿಆರ್ ಕೌಶಲ್ಯಗಳೊಂದಿಗೆ ಸಬಲೀಕರಣಗೊಳಿಸುವುದು ಮತ್ತು ಹೃದಯ ಸಂಬಂಧಿ ತುರ್ತು ಪರಿಸ್ಥಿತಿಗಳಿಗೆ ತಕ್ಷಣ ಪ್ರತಿಕ್ರಿಯಿಸುವ ನಿಟ್ಟಿನಲ್ಲಿ ಇಂತಹ ತರಬೇತಿ ಕಾರ್ಯ ಕ್ರಮ ಬಹಳಷ್ಟು ಅಗತ್ಯವಾಗಿದೆ ಎಂದು ಡಾ. ನಿರಂಜನ್ ರೈ ಹೇಳಿದರು. ಯುವ ಜನರಲ್ಲಿ ಹೃದಯ ಸಂಬಂಧಿತ ಸಮಸ್ಯೆಗಳು ಹೆಚ್ಚುತ್ತಿರುವ ಕಾರಣ ತುರ್ತು ಸಂದರ್ಭಗಳಲ್ಲಿ ತ್ವರಿತವಾಗಿ ಮತ್ತು ಆತ್ಮವಿಶ್ವಾಸದಿಂದ ಕಾರ್ಯನಿರ್ವಹಿಸಲು ಅಗತ್ಯವಾದ ಕೌಶಲ್ಯಗಳೊಂದಿಗೆ ನಾವು ಯುವ ಪೀಳಿಗೆಯನ್ನು ಸಜ್ಜುಗೊಳಿಸುವುದು ಕಡ್ಡಾಯವಾಗಿದೆ" ಎಂದು ಡಾ. ಹರ್ಷಿತಾ ಶ್ರೀಧರ್ ಹೇಳಿದರು.

ಇದನ್ನು ಓದಿ:Health Tips: ರಕ್ತದೊತ್ತಡವನ್ನು ನಿಯಂತ್ರಿಸಲು ಈ ಆಹಾರ ಕ್ರಮ ಅಳವಡಿಸಿ

ಮಣಿಪಾಲ ಆಸ್ಪತ್ರೆಗಳು ಈಗಾಗಲೇ ಅಕ್ಟೋಬರ್ 2024 ರಲ್ಲಿ, 'ಮಿಷನ್ 3K - 3000 ಹಾರ್ಟ್ಸ್, ಒನ್ ಬೀಟ್' ಕಾರ್ಯಕ್ರಮದ ಸಂದರ್ಭದಲ್ಲಿ 24 ಗಂಟೆಗಳ ಒಳಗೆ 3,319 ಸಿಪಿಅರ್ ಪ್ರದರ್ಶನಗಳನ್ನು ನಡೆಸುವ ಮೂಲಕ ಆಸ್ಪತ್ರೆಯೂ ಹೊಸ ಗಿನ್ನೆಸ್ ವಿಶ್ವ ದಾಖಲೆಯನ್ನು ಸೃಷ್ಟಿಸಿತ್ತು. ಇದೀಗ ವಿದ್ಯಾರ್ಥಿಗಳಿಗೆ ಸಿಪಿಆರ್ ತರಬೇತಿಯನ್ನು ಆಯೋಜಿಸುವ ಮೂಲಕ, ಮಣಿಪಾಲ ಆಸ್ಪತ್ರೆ ಹೃದಯ-ಸ್ಮಾರ್ಟ್ ಸಮುದಾಯವನ್ನು ಬೆಳೆಸುವ ಮೂಲಕ ತನ್ನ ಧ್ಯೇಯವನ್ನು ಮುಂದುವರೆಸಿದೆ.

WhatsApp Image 2025-07-01 at 12.47.21

ತರಬೇತಿ ಕಾರ್ಯಕ್ರಮದಲ್ಲಿ, ರೋಟರಿ ಜಿಲ್ಲೆ 3192 ರ ಜಿಲ್ಲಾ ಗವರ್ನರ್ ಪ್ರೊ. ಎಲಿಜಬೆತ್ ಚೆರಿ ಯನ್, ಶ್ರೀ ಶರತ್ ಚಂದ್ರ, ಐಪಿಎಸ್ - ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಮತ್ತು ಸರ್ಕಾರದ ಪ್ರಧಾನ ಕಾರ್ಯದರ್ಶಿ (ಪಿಸಿಎಎಸ್), ಶ್ರೀ ಸೈದುಲು ಅಡವತ್, ಉಪ ಪೊಲೀಸ್ ಆಯುಕ್ತರು , ಶ್ರೀ ಭಾಸ್ಕರ್ ರಾವ್, ಮಾಜಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು, ಬೆಂಗಳೂರು ನಗರ ಪೊಲೀಸ್ ಆಯುಕ್ತರು ಮತ್ತು ಉಪಾಧ್ಯಕ್ಷರು, ಭಾರತೀಯ ರೆಡ್ ಕ್ರಾಸ್ ಸೊಸೈಟಿ, ಕರ್ನಾಟಕ ರಾಜ್ಯ ಶಾಖೆ, ಡಾ. ನಿರಂಜನ್ ರೈ, ಆಸ್ಪತ್ರೆ ನಿರ್ದೇಶಕರು, ಮಣಿಪಾಲ ಆಸ್ಪತ್ರೆ, ಮಿಲ್ಲರ್ಸ್ ರಸ್ತೆ, ಡಾ. ಹರ್ಷಿತಾ ಶ್ರೀಧರ್, ಸಲಹೆಗಾರ - ತುರ್ತು ವೈದ್ಯಕೀಯ ವೈದ್ಯ, ಮಣಿಪಾಲ ಆಸ್ಪತ್ರೆ, ಮಿಲ್ಲರ್ಸ್ ರಸ್ತೆ, ಮುಂತಾದ ಗೌರವಾನ್ವಿತ ಗಣ್ಯರು ಉಪಸ್ಥಿತರಿದ್ದರು.