ಭುವನೇಶ್ವರ: ಒಡಿಶಾದ (Odisha) ಪುರಿ (Puri) ಜಿಲ್ಲೆಯ ಬ್ರಹ್ಮಗಿರಿಯ (Mabali Harachandi) ಮಾಬಲಿ ಹರಚಂಡಿ (Mabali Harachandi) ದೇವಸ್ಥಾನದ ಬಳಿ ಮೈಸೂರಿನ 20 ವರ್ಷದ ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ (Gang Rape) ನಡೆಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಯುವತಿ ಮತ್ತು ಆಕೆಯ ಗೆಳೆಯನ ವಿಡಿಯೊ ಚಿತ್ರೀಕರಿಸಿ, ಬೆದರಿಕೆ ಹಾಕಿದ ಯುವಕರ ಗುಂಪು 3,500 ರೂ. ವಸೂಲಿ ಮಾಡಿದೆ. ಇನ್ನಷ್ಟು ಹಣಕ್ಕೆ ಬೇಡಿಕೆ ಇಟ್ಟಾಗ ಅವರು ಹಣ ಕೊಡಲು ನಿರಾಕರಿಸಿದ್ದಾರೆ. ಈ ವೇಳೆ ಗೆಳೆಯನನ್ನು ಥಳಿಸಿ, ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ.
ಘಟನೆಯ ವಿವರ
ಸೆಪ್ಟೆಂಬರ್ 13ರಂದು ಯುವತಿ ಮತ್ತು ಆಕೆಯ ಗೆಳೆಯ ಮಾಬಲಿ ಹರಚಂಡಿ ದೇವಸ್ಥಾನಕ್ಕೆ ಭೇಟಿ ನೀಡಿ, ಪೂಜೆಯ ನಂತರ ಬೀಚ್‌ಗೆ ತೆರಳಿದ್ದರು. ಆಗ ಕೆಲವರು ಆ ಜೋಡಿಯನ್ನು ಹಿಂಬಾಲಿಸಿ, ಒಟ್ಟಿಗಿರುವ ವಿಡಿಯೊ ಚಿತ್ರೀಕರಿಸಿ ಬೆದರಿಕೆ ಹಾಕಿದ್ದಾರೆ. ಜೋಡಿಯಿಂದ 2,500 ರೂ. ಆನ್‌ಲೈನ್ ಮೂಲಕ ಮತ್ತು 1,000 ರೂ. ನಗದು ವಸೂಲಿ ಮಾಡಿದ್ದಾರೆ. ಇನ್ನಷ್ಟು ಹಣಕ್ಕೆ ಒತ್ತಾಯಿಸಿದಾಗ ಒಪ್ಪದಿದ್ದಕ್ಕೆ, ಗೆಳೆಯನನ್ನು ಥಳಿಸಿ, ಯುವತಿಯ ಮೇಲೆ ಸಾಮೂಹಿಕ ಅತ್ತಾಚಾರ ಎಸಗಿದ್ದಾರೆ. ನಂತರ ಜೋಡಿಯನ್ನು ಸಮೀಪದ ಕಾಡಿನಲ್ಲಿ ಬಿಟ್ಟು ತಪ್ಪಿಸಿಕೊಂಡಿದ್ದಾರೆ.
ಈ ಸುದ್ದಿಯನ್ನು ಓದಿ: Viral Video: ಹೀಗೂ ಉಂಟೇ!? ಮದುವೆಯಲ್ಲಿ ಚಿಕನ್ ಲೆಗ್ ಪೀಸನ್ನು ಪರ್ಸ್‌ಗೆ ತುಂಬಿದ ಮಹಿಳೆ
ಪೊಲೀಸ್ ಕಾರ್ಯಾಚರಣೆ
ಯುವತಿ ಸ್ಥಳೀಯರಿಗೆ ತನ್ನ ದುರಂತವನ್ನು ತಿಳಿಸಿದ್ದು, ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸೆಪ್ಟೆಂಬರ್ 15ರಂದು ಯುವತಿಯ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದ್ದು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ಶಿವ ಪ್ರಸಾದ್ ಸಾಹು ರಾಜ್ಯದಿಂದ ಪರಾರಿಯಾಗಿರುವ ಸಾಧ್ಯತೆಯಿದ್ದು, ವಿಶೇಷ ಪೊಲೀಸ್ ತಂಡವು ಆತನ ಶೋಧಕ್ಕೆ ಬಲೆ ಬೀಸಿದೆ. ಆರೋಪಿಗಳ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ತನಿಖೆಯು ದೌರ್ಜನ್ಯ, ಬೆದರಿಕೆ, ಮತ್ತು ವಸೂಲಿಯ ಆರೋಪಗಳ ಮೇಲೆ ಕೇಂದ್ರೀಕೃತವಾಗಿದೆ. ಈ ಸ್ಥಳೀಯರು ಮತ್ತು ಸಾಮಾಜಿಕ ಕಾರ್ಯಕರ್ತರು ಕಠಿಣ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ. ಈ ಘಟನೆಯು ದೇಶಾದ್ಯಂತ ಮಹಿಳಾ ಸುರಕ್ಷತೆಯ ಪ್ರಶ್ನೆಯನ್ನು ಮತ್ತೆ ಮುನ್ನಲೆಗೆ ತಂದಿದೆ.