Viral Video: ಹೀಗೂ ಉಂಟೇ!? ಮದುವೆಯಲ್ಲಿ ಚಿಕನ್ ಲೆಗ್ ಪೀಸನ್ನು ಪರ್ಸ್‌ಗೆ ತುಂಬಿದ ಮಹಿಳೆ
Woman Hiding Chicken Leg Piece: ಮದುವೆ, ಇನ್ನಿತರ ಸಮಾರಂಭದಲ್ಲಿ ಊಟಕ್ಕೆ ಬಡಿಸಲಾದ ಆಹಾರ ಹೆಚ್ಚಾದರೆ ಕೆಲವರು ವ್ಯರ್ಥ ಮಾಡುತ್ತಾರೆ. ಆದರೆ, ಇಲ್ಲೊಬ್ಬಳು ಮಹಿಳೆ ಚಿಕನ್ ಲೆಗ್ ಪೀಸ್ ಅನ್ನು ತನ್ನ ಪರ್ಸ್‌ಗೆ ತುಂಬಿದ್ದಾಳೆ. ಈ ದೃಶ್ಯದ ವಿಡಿಯೊ ವೈರಲ್ ಆಗಿದ್ದು, ನೆಟ್ಟಿಗರು ಹಾಸ್ಯಚಟಾಕಿ ಹಾರಿಸಿದ್ದಾರೆ.

-

ದೆಹಲಿ: ಭಾರತೀಯ ವಿವಾಹ (wedding) ಸಮಾರಂಭದಲ್ಲಿ ಸಿದ್ಧಪಡಿಸಲಾಗುವ ಭಕ್ಷ್ಯಗಳು ಬಹಳ ರುಚಿಕರವಾಗಿರುತ್ತದೆ. ಹಿಂದೆಲ್ಲಾ ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದ ಅಜ್ಜ-ಅಜ್ಜಿಯರು ತಮ್ಮ ಎಲೆಗೆ ಹಾಕಿದ ಆಹಾರ ಹೆಚ್ಚಾದರೆ ಅದನ್ನು ವ್ಯರ್ಥ ಮಾಡುತ್ತಿರಲಿಲ್ಲ. ಬದಲಾಗಿ ತಮ್ಮ ಕರ್ಚೀಫ್‍ನಲ್ಲಿ ಅದನ್ನು ಎತ್ತಿಟ್ಟು, ಮನೆಗೆ ತರುತ್ತಿದ್ದರು. ಆದರೀಗ ಇಂತಹ ಪ್ರವೃತ್ತಿಗಳು ಕಡಿಮೆಯಾಗುತ್ತಿದೆ ಎಂದು ಕೆಲವರು ಹೇಳುತ್ತಾರೆ. ಈ ನಡುವೆ ಸಾಮಾಜಿಕ ಮಾಧ್ಯಮದಲ್ಲಿ ಇದೇ ರೀತಿಯ ವಿಡಿಯೊವೊಂದು ವೈರಲ್ (Viral Video) ಆಗುತ್ತಿದೆ.
ಹೌದು, ಮಹಿಳೆಯೊಬ್ಬರು ಚಿಕನ್ ಲೆಗ್ ಪೀಸ್ ಅನ್ನು ಚಿಶ್ಯೂ ಪೇಪರ್‌ನಲ್ಲಿಡುತ್ತಾ ತನ್ನ ಪರ್ಸ್ ಒಳಗೆ ಇಟ್ಟಿದ್ದಾರೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಹಾಸ್ಯಮಯವಾಗಿ ಕಂಡಿದೆ. ಮಹಿಳೆಯು ಊಟ ಮಾಡುವಾಗ ದೊಡ್ಡ ಚಿಕನ್ ಕಬಾಬ್ ತುಂಡನ್ನು ತಿನ್ನಲು ಸಾಧ್ಯವಾಗದೆ ಅದನ್ನು ಕೊಂಡೊಯ್ಯಲು ನಿರ್ಧರಿಸಿದರು. ಈ ವಿಡಿಯೊ ವೈರಲ್ ಆದ ನಂತರ ವಿವಾಹ ಸಂಭ್ರಮದ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ಬಳಕೆದಾರರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿತು.
ವಿಡಿಯೊದಲ್ಲಿ, ಮಹಿಳೆಯು ಕೋಳಿಯ ತುಂಡನ್ನು ಟಿಶ್ಯೂ ಪೇಪರ್‌ನಲ್ಲಿ ಸುತ್ತುವ ಮೊದಲು ಅದನ್ನು ತನ್ನ ಕೈಚೀಲದೊಳಗೆ ಬೇಗನೆ ಸೇರಿಸಿಕೊಳ್ಳುತ್ತಾಳೆ. ಯಾರೂ ನೋಡುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳಲು ಸುತ್ತಲೂ ನೋಡುತ್ತಾಳೆ. ಆದರೂ, ಆಕೆಯ ಕೃತ್ಯವು ಕ್ಯಾಮರಾದಲ್ಲಿ ಸೆರೆಯಾಗಿದೆ. ನೆಟ್ಟಿಗರು ಹಾಸ್ಯಮಯ ಪ್ರತಿಕ್ರಿಯೆಗಳೊಂದಿಗೆ ಕಾಮೆಂಟ್‌ಗಳನ್ನು ಭರ್ತಿ ಮಾಡಿದ್ದಾರೆ.
ವಿಡಿಯೊ ವೀಕ್ಷಿಸಿ:
अब पता चला पापा के परियां अपने साथ हमेशा पर्स लेकर क्यों चलती है,विडियो देखें मज़ा आ जाएगा। pic.twitter.com/SX7AYyBipP
— aejaz kousar (@MDaejazAlam1) September 15, 2025
ಕೆಲವು ಬಳಕೆದಾರರು, ಇದನ್ನು ಉತ್ತಮ ನಡೆ ಎಂದು ಹೇಳಿದರೆ, ಹಲವರು ಇದು ವಿವಾಹ ಸಂಭ್ರಮಕ್ಕೆ ಹಾಸ್ಯವನ್ನು ಸೇರಿಸಿದೆ ಎಂದು ತಿಳಿಸಿದರು. ಈ ವಿಡಿಯೊ ಹಲವಾರು ವೀಕ್ಷಣೆಗಳನ್ನು ಸಂಗ್ರಹಿಸುತ್ತಲೇ ಇದೆ. ಸಾಮಾಜಿಕ ಮಾಧ್ಯಮದ ಯುಗದಲ್ಲಿ ಭಾರತೀಯ ವಿವಾಹಗಳಲ್ಲಿನ ಪ್ರಾಮಾಣಿಕ ಕ್ಷಣಗಳು ವಿರಳವಾಗಿ ಗಮನಕ್ಕೆ ಬರುತ್ತವೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ವಿಡಿಯೊವನ್ನು @MDaejazAlam1 ಅವರು X ನಲ್ಲಿ ಪೋಸ್ಟ್ ಮಾಡಿದ್ದಾರೆ. ಈಗ ಗೊತ್ತಾಯ್ತಾ, ಅಪ್ಪಂದಿರ ಮುದ್ದಿನ ಹೆಣ್ಮಕ್ಕಳು ಸಮಾರಂಭಗಳಿಗೆ ಯಾಕೆ ಪರ್ಸ್/ಬ್ಯಾಗ್ ತೆಗೆದುಕೊಂಡು ಹೋಗುತ್ತಾರೆ ಎಂದು ವಿಡಿಯೊಗೆ ಈ ರೀತಿ ತಮಾಷೆಯಾಗಿ ಶೀರ್ಷಿಕೆ ನೀಡಲಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ಅಪ್ರಸ್ತುತ ಮತ್ತು ವಿಲಕ್ಷಣ ಘಟನೆಯ ವಿಷಯವನ್ನು ಟೀಕಿಸುವುದರಲ್ಲಿ ನೆಟ್ಟಿಗರು ಯಾವಾಗಲೂ ನಿರತರಾಗಿರುತ್ತಾರೆ. ಮೊನ್ನೆಯಷ್ಟೇ ಭಾರತೀಯ ದಂಪತಿಗಳು ತಮ್ಮ ಮದುವೆಯ ಫೋಟೋಶೂಟ್ ಸಮಯದಲ್ಲಿ, ಪರಸ್ಪರ ಲಿಪ್-ಲಾಕ್ ಮಾಡಿರುವ ವಿಡಿಯೊ ವೈರಲ್ ಆಗಿತ್ತು. ಛಾಯಾಗ್ರಾಹಕರ ತಂಡವು ತಮ್ಮ ಕ್ಯಾಮರಾದಲ್ಲಿ ಈ ಪ್ರಣಯ ಕ್ಷಣವನ್ನು ಸೆರೆಹಿಡಿದಿತ್ತು. ಮದುವೆಯಲ್ಲಿ ಅಂತಹ ಫೋಟೋಶೂಟ್‌ಗಳು ಸೂಕ್ತವೇ ಅಥವಾ ಇಲ್ಲವೇ ಎಂಬುದರ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಕಾರಣವಾಗಿತ್ತು.
ಇದನ್ನೂ ಓದಿ: Viral Video: ಮದ್ವೆ ಫೋಟೋಶೂಟ್ ವೇಳೆ ನವಜೋಡಿಯ ಲಿಪ್-ಲಾಕ್; ವಿಡಿಯೊ ಫುಲ್ ವೈರಲ್!