ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Omar Abdullah: ಪಹಲ್ಗಾಮ್‌ ದಾಳಿ ಬಳಿಕ ಮೊದಲ ಬಾರಿಗೆ ಮೋದಿ ಭೇಟಿ ಮಾಡಿದ ಒಮರ್ ಅಬ್ದುಲ್ಲಾ

ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಶನಿವಾರ ಪ್ರಧಾನಿ ಮೋದಿ ಅವರನ್ನು ಮಧ್ಯಾಹ್ನ ಭೇಟಿ ಮಾಡಿದ್ದು, ಇಬ್ಬರು ನಾಯಕರ ನಡುವಿನ ಸಭೆ ಸುಮಾರು 30 ನಿಮಿಷಗಳ ಕಾಲ ನಡೆಯಿತು. ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರು ಸಾವನ್ನಪ್ಪಿದ ಅನಂತರ ಒಮರ್ ಅಬ್ದುಲ್ಲಾ ಮತ್ತು ನರೇಂದ್ರ ಮೋದಿ ಭೇಟಿಯಾಗುತ್ತಿರುವುದು ಇದೇ ಮೊದಲು.

ಪಹಲ್ಗಾಮ್‌ ದಾಳಿ: ಪ್ರಧಾನಿಯೊಂದಿಗೆ ಒಮರ್ ಅಬ್ದುಲ್ಲಾ ಚರ್ಚೆ

ನವದೆಹಲಿ: ಕಾಶ್ಮೀರದ ಪಹಲ್ಗಾಮ್‌ನ (Pahalgam) ಬೈಸರನ್ ಕಣಿವೆಯಲ್ಲಿ ಏಪ್ರಿಲ್ 22ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ (Terror attack) ಹೆಚ್ಚಿನ ಪ್ರವಾಸಿಗರು ಸೇರಿದಂತೆ 26 ಜನರು ಸಾವನ್ನಪ್ಪಿದ ಬಳಿಕ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ (Jammu and Kashmir Chief Minister) ಒಮರ್ ಅಬ್ದುಲ್ಲಾ(Omar Abdullah) ಅವರು ಶನಿವಾರ ದೆಹಲಿಯ ಪ್ರಧಾನಿಯವರ ನಿವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಅಧಿಕೃತವಾಗಿ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಇವರಿಬ್ಬರೂ ಸುಮಾರು 30 ನಿಮಿಷಗಳ ಕಾಲ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಪಾಕಿಸ್ತಾನದೊಂದಿಗೆ ಎಲ್ಲ ರೀತಿಯ ಸಂಪರ್ಕವನ್ನು ಭಾರತ ಕಡಿತಗೊಳಿಸಿದೆ. ಈಗಾಗಲೇ ಪಾಕಿಸ್ತಾನದ ಸರಕು ಸಾಗಾಟಕ್ಕೆ ತನ್ನ ವಾಯು ಪ್ರದೇಶ, ಬಂದರು, ರಸ್ತೆ ಸಾರಿಗೆ ಬಳಕೆಯನ್ನು ಮುಚ್ಚಲಾಗಿದೆ. ಅಲ್ಲದೇ ಅಂಚೆ ಮೂಲಕ ಸಂಪರ್ಕವನ್ನು ಕಡಿತಗೊಳಿಸಲಾಗಿದೆ.

ಭಯೋತ್ಪಾದಕರ ವಿರುದ್ಧ ನಿರ್ಣಾಯಕ ಕ್ರಮ ಕೈಗೊಳ್ಳಲು ಬದ್ಧವಾಗಿರುವ ಭಾರತ ಭಯೋತ್ಪಾದನೆ ಮತ್ತು ಅವರನ್ನು ಬೆಂಬಲಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ದೇಶದ ಬದ್ಧತೆಯನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ಪುನರುಚ್ಚರಿಸಿದ್ದಾರೆ.

ಅಂಗೋಲಾದ ಅಧ್ಯಕ್ಷ ಜೊವೊ ಮ್ಯಾನುಯೆಲ್ ಗೊನ್ಕಾಲ್ವ್ಸ್ ಲಾರೆಂಕೊ ಅವರೊಂದಿಗೆ ಮಾತುಕತೆ ನಡೆಸಿರುವ ಪ್ರಧಾನಿ ಮೋದಿ, ಭಾರತ ಮತ್ತು ಅಂಗೋಲಾ ಪ್ರಗತಿಯಲ್ಲಿ ಪಾಲುದಾರರು ಮತ್ತು ಜಾಗತಿಕ ದಕ್ಷಿಣದ ಆಧಾರಸ್ತಂಭಗಳು ಎಂದು ಹೇಳಿದ್ದರು.

ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಶನಿವಾರ ಪ್ರಧಾನಿ ಮೋದಿಯವರನ್ನು ಮಧ್ಯಾಹ್ನ ಭೇಟಿ ಮಾಡಿದ್ದು, ಇಬ್ಬರು ನಾಯಕರ ನಡುವಿನ ಸಭೆ ಸುಮಾರು 30 ನಿಮಿಷಗಳ ಕಾಲ ನಡೆಯಿತು ಎಂದು ಮೂಲಗಳು ತಿಳಿಸಿವೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರು ಸಾವನ್ನಪ್ಪಿದ ಅನಂತರ ಒಮರ್ ಅಬ್ದುಲ್ಲಾ ಮತ್ತು ನರೇಂದ್ರ ಮೋದಿ ಭೇಟಿಯಾಗುತ್ತಿರುವುದು ಇದೇ ಮೊದಲು.

ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಕಳೆದ ವಾರ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಿರುವುದಾಗಿ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರ ರಾಷ್ಟ್ರೀಯ ಸಮ್ಮೇಳನ ಪಕ್ಷವು ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.



ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ಪ್ರತಿಕ್ರಿಯಿಸಿರುವ ಒಮರ್ ಅಬ್ದುಲ್ಲಾ, ಪಹಲ್ಗಾಮ್ ದಾಳಿಯ ಅನಂತರ ಉಂಟಾಗಿರುವ ಸಾರ್ವಜನಿಕ ಆಕ್ರೋಶವು ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಶೀಘ್ರದಲ್ಲೇ ಕೊನೆಗೊಳ್ಳಬಹುದು ಎಂಬುದರ ಸೂಚನೆಯಾಗಿದೆ ಎಂದು ಹೇಳಿದರು.

ಇದನ್ನೂ ಓದಿ: Suhas Shetty Murder Case: ಸುಹಾಸ್ ಹತ್ಯೆ, ಪಹಲ್ಗಾಮ್‌ ದಾಳಿ ಖಂಡಿಸಿ ನಾಳೆ ಚಿಕ್ಕಮಗಳೂರು ಜಿಲ್ಲೆ ಬಂದ್

ಪಹಲ್ಗಾಮ್‌ನ ಬೈಸರನ್‌ನಲ್ಲಿ 26 ಜನರ ಹತ್ಯೆಯನ್ನು ಖಂಡಿಸಲು ಏಪ್ರಿಲ್ 28ರಂದು ಕರೆಯಲಾಗಿದ್ದ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಸುಮಾರು 27 ನಿಮಿಷಗಳ ಕಾಲ ಮಾಡಿರುವ ಭಾಷಣದಲ್ಲಿ ಅವರು ರಾಜ್ಯದಲ್ಲಿ ವಿಶೇಷ ಸ್ಥಾನಮಾನ ಪುನಃಸ್ಥಾಪನೆಗಾಗಿ ಹತ್ಯಾಕಾಂಡವನ್ನು ಒಪ್ಪುವುದಿಲ್ಲ ಎಂದ ಅವರು ಭಾವುಕರಾಗಿ ಈ ಸಭೆಯು ಇತರರಿಗಿಂತ ಹೆಚ್ಚು ಬಲಿಪಶು ಕುಟುಂಬಗಳ ನೋವನ್ನು ಅರ್ಥಮಾಡಿಕೊಳ್ಳುತ್ತದೆ ಎಂದು ಹೇಳಿದ್ದರು.

ಜಮ್ಮು ಮತ್ತು ಕಾಶ್ಮೀರದ ಭದ್ರತೆಯು ಚುನಾಯಿತ ಸರ್ಕಾರದ ಜವಾಬ್ದಾರಿಯಲ್ಲದಿದ್ದರೂ ಈ ಕುಟುಂಬಗಳಿಗೆ ಕ್ಷಮೆಯಾಚಿಸಲು ನನ್ನ ಬಳಿ ಪದಗಳೇ ಇರಲಿಲ್ಲ. ಪ್ರವಾಸೋದ್ಯಮ ಸಚಿವನಾಗಿ ನಾನು ಈ ಜನರನ್ನು ಇಲ್ಲಿಗೆ ಬರಲು ಆಹ್ವಾನಿಸಿದೆ. ಆತಿಥೇಯನಾಗಿ ಅವರನ್ನು ಸುರಕ್ಷಿತವಾಗಿ ವಾಪಸ್ ಕಳುಹಿಸುವುದು ನನ್ನ ಜವಾಬ್ದಾರಿಯಾಗಿತ್ತು. ಅವರನ್ನು ವಾಪಸ್ ಕಳುಹಿಸಲು ನನಗೆ ಸಾಧ್ಯವಾಗಲಿಲ್ಲ ಎಂದು ಅವರು ತಿಳಿಸಿದ್ದರು.