Operation sindoor: ತನ್ನ ವಾಯುಪ್ರದೇಶ ಪೂರ್ತಿ ಮುಚ್ಚಿದ ಪಾಕ್, ಮರುದಾಳಿಗೆ ಸಿದ್ಧತೆ?
ಪಾಕಿಸ್ತಾನದ ವಾಯುಯಾನ ಪ್ರಾಧಿಕಾರ ಹೊರಡಿಸಿದ ಆದೇಶದಲ್ಲಿ, ಮುಂದಿನ 48 ಗಂಟೆಗಳ ಕಾಲ ಪಾಕಿಸ್ತಾನವು ಈಗ ಹಾರಾಟ ನಿಷೇಧಿತ ವಲಯವಾಗಿದೆ ಎಂದು ಹೇಳಿದೆ. ಪಾಕಿಸ್ತಾನವು ಈ ಕ್ರಮವನ್ನು ಮುನ್ನೆಚ್ಚರಿಕೆ ಕ್ರಮ ಎಂದು ಕರೆದಿದ್ದರೂ, ಆ ದೇಶವು ಪ್ರತೀಕಾರ ತೀರಿಸಿಕೊಳ್ಳಲು ಪ್ರತಿಜ್ಞೆ ಮಾಡಿದೆ.


ನವದೆಹಲಿ: ಪಾಕಿಸ್ತಾನ (pakistan) ಆಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದ ಒಳಭಾಗದಲ್ಲಿರುವ ಅನೇಕ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತೀಯ (India) ಸಶಸ್ತ್ರ ಪಡೆಗಳ ಕ್ಷಿಪಣಿಗಳು ಬುಧವಾರ ರಾತ್ರಿ ದಾಳಿ (Operation sindoor) ಮಾಡಿದ ನಂತರ ಪಾಕಿಸ್ತಾನವು ಇನ್ನೂ ಅಪನಂಬಿಕೆ ಮತ್ತು ಶಾಕ್‌ನಲ್ಲಿದೆ. ಈ ನಡುವೆ ಅದು ತನ್ನ ವಾಯುಪ್ರದೇಶವನ್ನು (Airspace) ಸಂಪೂರ್ಣವಾಗಿ ಮುಚ್ಚಲು ನಿರ್ಧರಿಸಿದ್ದು, ಪ್ರತಿದಾಳಿಗಾಗಿ (hit back) ಸಿದ್ಧತೆ ನಡೆಸಿದೆ ಎನ್ನಲಾಗಿದೆ.
ಇಲ್ಲಿಯವರೆಗೆ, ಪಾಕಿಸ್ತಾನವು ಭಾರತೀಯ ವಿಮಾನಯಾನ ಸಂಸ್ಥೆಗಳ ಒಡೆತನದ, ಗುತ್ತಿಗೆ ಪಡೆದ ಅಥವಾ ನಿರ್ವಹಿಸುವ ವಿಮಾನಗಳಿಗೆ ಮಾತ್ರ ತನ್ನ ವಾಯುಪ್ರದೇಶವನ್ನು ಮುಚ್ಚಿತ್ತು, ಆದರೆ ಭಾರತದ ನಿಖರ ದಾಳಿಯ ನಂತರ, ಇಸ್ಲಾಮಾಬಾದ್ ಮತ್ತು ರಾವಲ್ಪಿಂಡಿ (ಪಾಕ್ ಸೇನಾ ಪ್ರಧಾನ ಕಚೇರಿ) ತನ್ನದೇ ಆದ ನಾಗರಿಕ ವಿಮಾನಗಳು ಸೇರಿದಂತೆ ಎಲ್ಲಾ ದೇಶಗಳಿಗೆ ದೇಶದ ವಾಯುಪ್ರದೇಶವನ್ನು ಸಂಪೂರ್ಣವಾಗಿ ಮುಚ್ಚುವುದಾಗಿ ಘೋಷಿಸಿವೆ. ಕೆಲವು ಅಗತ್ಯ ವಿಮಾನಗಳಿಗೆ ಮಾತ್ರ ಅನುಮತಿ ನೀಡಲಾಗುತ್ತಿದೆ ಎಂದು ವರದಿಯಾಗಿದೆ.
ಪಾಕಿಸ್ತಾನದ ವಾಯುಯಾನ ಪ್ರಾಧಿಕಾರ ಹೊರಡಿಸಿದ ಆದೇಶದಲ್ಲಿ, ಮುಂದಿನ 48 ಗಂಟೆಗಳ ಕಾಲ ಪಾಕಿಸ್ತಾನವು ಈಗ ಹಾರಾಟ ನಿಷೇಧಿತ ವಲಯವಾಗಿದೆ ಎಂದು ಹೇಳಿದೆ. ಪಾಕಿಸ್ತಾನವು ಈ ಕ್ರಮವನ್ನು ಮುನ್ನೆಚ್ಚರಿಕೆ ಕ್ರಮ ಎಂದು ಕರೆದಿದ್ದರೂ, ಆ ದೇಶವು ಪ್ರತೀಕಾರ ತೀರಿಸಿಕೊಳ್ಳಲು ಪ್ರತಿಜ್ಞೆ ಮಾಡಿದೆ. ಪಾಕಿಸ್ತಾನದ ವಿರುದ್ಧ ಭಾರತ ತೆಗೆದುಕೊಂಡ ಕ್ರಮವು 26 ನಾಗರಿಕರನ್ನು ಕೊಂದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಸೀಮಿತ ಪ್ರತಿಕ್ರಿಯೆ ಆಗಿತ್ತು. ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರ ಪ್ರಚೋದನಕಾರಿ ಮತ್ತು ಕೋಮುವಾದಿ ಭಾಷಣದ ಕೆಲವು ದಿನಗಳ ನಂತರ ಈ ದಾಳಿ ಧಾರ್ಮಿಕ ಪ್ರೇರಿತವಾಗಿತ್ತು.
ಆದ್ದರಿಂದ, ಈಗ ಪಾಕಿಸ್ತಾನ ನಡೆಸುವ ಯಾವುದೇ ದಾಳಿಯನ್ನು ಪ್ರತೀಕಾರವಾಗಿ ಅಲ್ಲ, ಬದಲಾಗಿ ಭಯೋತ್ಪಾದನೆಯಾಗಿ ಮಾತ್ರ ನೋಡಲಾಗುತ್ತದೆ ಎಂದು ಮಿಲಿಟರಿ ತಜ್ಞರು ಹೇಳುತ್ತಾರೆ. ಏತನ್ಮಧ್ಯೆ, ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ರಾಷ್ಟ್ರೀಯ ಭದ್ರತಾ ಮಂಡಳಿ ಮುಖ್ಯಸ್ಥರನ್ನು ಭೇಟಿಯಾಗಿ ಪಾಕಿಸ್ತಾನದ ಪ್ರತಿಕ್ರಿಯೆ ಹೇಗಿರಬೇಕು ಎಂಬುದರ ಕುರಿತು ಚರ್ಚಿಸಿದರು.
ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತ ನಡೆಸಿದ ದಾಳಿಯ ಸಮಯದಲ್ಲಿ ಮತ್ತು ಸ್ವಲ್ಪ ಸಮಯದ ನಂತರ - ಭಾರತೀಯ ಕಾಲಮಾನ ಬೆಳಿಗ್ಗೆ 1:05 ರಿಂದ ಬೆಳಿಗ್ಗೆ 1:30 ರವರೆಗೆ - ಇಸ್ಲಾಮಾಬಾದ್ ಮತ್ತು ಲಾಹೋರ್‌ಗೆ ಹೋಗುವ ಎಲ್ಲಾ ವಿಮಾನಗಳನ್ನು ಕರಾಚಿ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಯಿತು. ಅಲ್ಲಿ ವಿಮಾನ ಕಾರ್ಯಾಚರಣೆಗಳು ತೀವ್ರ ಒತ್ತಡಕ್ಕೆ ಒಳಗಾದವು. ಇದರ ನಂತರ, ಕೆಲವು ಅಗತ್ಯ ವಿಮಾನಗಳನ್ನು ಹೊರತುಪಡಿಸಿ, ಸಂಪೂರ್ಣ ವಾಯುಪ್ರದೇಶವನ್ನು ಸ್ಥಗಿತಗೊಳಿಸಲಾಯಿತು.
ಪಾಕಿಸ್ತಾನದ ಗಡಿಯಲ್ಲಿರುವ ಪಶ್ಚಿಮ ಮುಂಭಾಗದಲ್ಲಿರುವ ಹಲವಾರು ವಿಮಾನ ನಿಲ್ದಾಣಗಳಲ್ಲಿ ನಾಗರಿಕ ವಿಮಾನ ಕಾರ್ಯಾಚರಣೆಯನ್ನು ಭಾರತವೂ ನಿರ್ಬಂಧಿಸಿದೆ. ಪಾಕಿಸ್ತಾನ ಪರಿಸ್ಥಿತಿಯನ್ನು ಉಲ್ಬಣಗೊಳಿಸಿದರೆ, ನವದೆಹಲಿ "ದೃಢವಾಗಿ ಪ್ರತೀಕಾರ ತೀರಿಸಿಕೊಳ್ಳುತ್ತದೆ" ಎಂದು ಎಚ್ಚರಿಸಿದೆ.
ಇದನ್ನೂ ಓದಿ: Operation of Sindoor: 'ಆಪರೇಷನ್ ಸಿಂಧೂರ್’: ಗುರುವಾರ ಸರ್ವಪಕ್ಷ ಸಭೆ ಕರೆದ ಸರ್ಕಾರ