ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

PM Modi: ಭಾರತದೊಂದಿಗೆ ಮಾತನಾಡಬೇಕು ಎಂದ ಟ್ರಂಪ್.. ಮೋದಿ ಉತ್ತರವೇನು?

ರಷ್ಯಾದಿಂದ ತೈಲ ಆಮದು ಮಾಡುತ್ತಿರುವ ಕಾರಣಕ್ಕೆ ಭಾರತಕ್ಕೆ ಹೆಚ್ಚುವರಿ ಸುಂಕ ವಿಧಿಸಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಮೋದಿ ಜೊತೆ ಮಾತನಾಡಲು ಬಯಸುವುದಾಗಿ ಹೇಳಿದ್ದಾರೆ. ಮೋದಿ ನನ್ನ ಆತ್ಮೀಯ ಸ್ನೇಹಿತ ಎಂದು ಕೂಡ ಕರೆದಿದ್ದಾರೆ. ಇದಕ್ಕೆ ಮೋದಿ ಪ್ರತಿಕ್ರಿಯೆ ಏನು ?

ನವದೆಹಲಿ: ರಷ್ಯಾದಿಂದ ತೈಲ ಆಮದು (Russian Oil imports) ಮಾಡುತ್ತಿರುವುದಕ್ಕಾಗಿ ಭಾರತದ ಮೇಲೆ ಹೆಚ್ಚುವರಿ ಸುಂಕ (Additional tariff) ವಿಧಿಸಿದ್ದ ಅಮೆರಿಕ (US ) ಈಗ ಮತ್ತೆ ಭಾರತದೆಡೆಗೆ ತನ್ನ ಮೃದು ಧೋರಣೆ ತೋರುವ ಪ್ರಯತ್ನ ಮಾಡುತ್ತಿದೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ (Social Media) ಪ್ರಧಾನಿ ನರೇಂದ ಮೋದಿ (Prime Minister Narendra Modi) ಜೊತೆ ಮಾತನಾಡಲು ಎದುರು ನೋಡುತ್ತಿರುವುದಾಗಿ ಹೇಳಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಅವರಿಗೆ ಪ್ರಧಾನಿ ನರೇಂದ ಮೋದಿ ಪ್ರತಿಕ್ರಿಯೆಯನ್ನು ನೀಡಿದ್ದು, ಭಾರತ ಮತ್ತು ಅಮೆರಿಕ ಮೊದಲಿನಿಂದ ಪಾಲುದಾರರು ಎಂದು ಕರೆದಿದ್ದಾರೆ.

ರಷ್ಯಾದಿಂದ ತೈಲ ಆಮದು ಮಾಡುತ್ತಿರುವುದಕ್ಕೆ ನವದೆಹಲಿಯ ಮೇಲೆ ವಾಷಿಂಗ್ಟನ್ ವಿಧಿಸಿದ ಶೇ. 50ರಷ್ಟು ದಂಡ ಹಾಗೂ ಭಾರತದ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾತುಗಳು ಕಳೆದ ಕೆಲವು ತಿಂಗಳುಗಳಲ್ಲಿ ಎರಡು ರಾಷ್ಟ್ರಗಳ ಸಂಬಂಧಗಳ ಮೇಲೆ ಪರಿಣಾಮ ಬೀರಿತ್ತು.ಈ ನಡುವೆ ಇದೀಗ ಭಾರತದೊಂದಿಗೆ ಮಾತುಕತೆಗೆ ಸಿದ್ದ ಎಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ.

ಭಾರತ ಮತ್ತು ಅಮೆರಿಕ ನೈಸರ್ಗಿಕ ಪಾಲುದಾರರು ಎಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಟ್ರಂಪ್ ಅವರ ಪೋಸ್ಟ್ ಗೆ ಸಮಾಧಾನಕರ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಭಾರತೀಯ ನಾಯಕ ಮೋದಿ ಅವರನ್ನು ಆತ್ಮೀಯ ಸ್ನೇಹಿತ ಎಂದು ಕರೆದಿರುವ ಟ್ರಂಪ್, ಸ್ಥಗಿತಗೊಂಡ ವ್ಯಾಪಾರ ಮಾತುಕತೆಗಳಿಗೆ ಹೊಸ ದಾರಿಯನ್ನು ತೆರೆಯುವ ಪ್ರಯತ್ನ ಮಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಮೋದಿ, ಭಾರತ ಮತ್ತು ಅಮೆರಿಕ ಆಪ್ತ ಸ್ನೇಹಿತರು ಮತ್ತು ನೈಸರ್ಗಿಕ ಪಾಲುದಾರರು. ನಮ್ಮ ವ್ಯಾಪಾರ ಮಾತುಕತೆಗಳು ಭಾರತ- ಅಮೆರಿಕ ಪಾಲುದಾರಿಕೆಯ ಅಪರಿಮಿತ ಸಾಮರ್ಥ್ಯವನ್ನು ಅನ್ಲಾಕ್ ಮಾಡಲು ದಾರಿ ಮಾಡಿಕೊಡುತ್ತವೆ ಎನ್ನುವ ವಿಶ್ವಾಸವಿದ್ದು, ಇದು ಆದಷ್ಟು ಬೇಗ ಮುಗಿಯಲಿದೆ. ಇದನ್ನು ನಮ್ಮ ತಂಡಗಳು ಮಾಡುತ್ತಿವೆ ಎಂದು ಹೇಳಿದ್ದಾರೆ.

ಈ ಕುರಿತು ಸಮಾಜಿಕ ಮಾಧ್ಯಮವಾದ ಟ್ರುತ್ ನಲ್ಲಿ ಬರೆದಿರುವ ಟ್ರಂಪ್, ಭಾರತದೊಂದಿಗೆ ವ್ಯಾಪಾರ ಮಾತುಕತೆಗಳು ಮುಂದುವರೆದಿವೆ ಎಂದು ಹೇಳಿದ್ದು, ಇದು ಎರಡು ದೇಶಗಳ ನಡುವಿನ ಸಂಬಂಧದಲ್ಲಿ ಪ್ರಗತಿಯ ಬಗ್ಗೆ ಆಶಾವಾದವನ್ನು ವ್ಯಕ್ತಪಡಿಸುವಂತೆ ಮಾಡಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಟ್ರಂಪ್, ಪ್ರಧಾನಿ ಮೋದಿ ಅವರ ಟ್ವೀಟ್ ಅನ್ನು ಮರು-ಪೋಸ್ಟ್ ಮಾಡಿದರು. ಇದರಲ್ಲಿ ಮೋದಿ ಅವರು, ಎರಡೂ ಮಹಾನ್ ದೇಶಗಳಿಗೆ ಯಶಸ್ವಿ ತೀರ್ಮಾನಕ್ಕೆ ಬರಲು ಯಾವುದೇ ತೊಂದರೆ ಇರುವುದಿಲ್ಲ ಎಂದು ಹೇಳಿದ್ದಾರೆ.

ಹೀಗಾಗಿ ಈ ಕುರಿತು ಮುಂದಿನ ದಿನಗಳಲ್ಲಿ ಪ್ರಧಾನಿ ಮೋದಿ ಅವರು ಟ್ರಂಪ್ ಅವರೊಂದಿಗೆ ಮಾತನಾಡುವ ನಿರೀಕ್ಷೆಯಿದೆ ಎನ್ನಲಾಗುತ್ತಿದೆ. ಶೀಘ್ರದಲ್ಲೇ ಟ್ರಂಪ್ ಅವರೊಂದಿಗೆ ಮಾತನಾಡಲು ಎದುರು ನೋಡುತ್ತಿದ್ದೇನೆ ಎಂದು ಹೇಳಿರುವ ಮೋದಿ, ಎರಡೂ ರಾಷ್ಟ್ರಗಳ ಜನರಿಗೆ ಉಜ್ವಲ, ಹೆಚ್ಚು ಸಮೃದ್ಧ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Lehenga Sarees Trend 2025: ಮುಂಬರುವ ನವರಾತ್ರಿ ಸಂಭ್ರಮಕ್ಕೆ ಸಾಥ್ ನೀಡಲು ಸಜ್ಜಾದ ಲೆಹೆಂಗಾ ಸೀರೆಗಳು

ರಷ್ಯಾದಿಂದ ತೈಲ ಆಮದು ಹಿನ್ನೆಲೆಯಲ್ಲಿ ನವದೆಹಲಿಯ ಮೇಲೆ ವಾಷಿಂಗ್ಟನ್‌ನ ದಂಡನಾತ್ಮಕ ಶೇ. 50ರಷ್ಟು ಸುಂಕ ವಿಧಿಸಿದ ಬಳಿಕ ಎರಡು ರಾಷ್ಟ್ರಗಳ ನಾಯಕರ ಹೇಳಿಕೆಗಳು ಸಂಬಂಧಗಳ ಮೇಲೆ ಪರಿಣಾಮ ಬೀರಿತ್ತು. ಆದರೂ ಭಾರತ ತಾಳ್ಮೆಯನ್ನು ಕಾಯ್ದುಕೊಂಡಿದ್ದು, ಇದರಿಂದ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವು ಸಮತೋಲನದಲ್ಲಿದೆ. ಕೃಷಿ ಮತ್ತು ಡೈರಿ ಮಾರುಕಟ್ಟೆಗಳಿಗೆ ವ್ಯಾಪಕ ಪ್ರವೇಶವನ್ನು ಅಮೆರಿಕ ಬಯಸುತ್ತದೆ ಎನ್ನಲಾಗುತ್ತಿದೆ.

ತಿಂಗಳ ಆರಂಭದಲ್ಲಿ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯ ಫೋಟೋಗಳಲ್ಲಿ ಪ್ರಧಾನಿ ಮೋದಿ ಕ್ಸಿ ಜಿನ್‌ಪಿಂಗ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನೋಡಿದ ಮೇಲೆ ಟ್ರಂಪ್ ಇದನ್ನು ಟೀಕಿಸಿದ್ದರು. ಆದರೆ ಇದೀಗಾ ಮತ್ತೆ ಅವರು ತಮ್ಮ ಮೃದು ಧೋರಣೆಯನ್ನು ತಾಳಿ ಭಾರತದೊಂದಿಗಿನ ಸಂಬಂಧಗಳನ್ನು ವಿಶೇಷ ಎಂದು ಬಣ್ಣಿಸಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author