ರಾಂಚಿ: ಟೆಲಿಕಮ್ಯೂನಿಕೇಷನ್ ಮೂಲಸೌಕರ್ಯಗಳಿಗೆ ಪ್ರಮುಖ ಉತ್ತೇಜನ ನೀಡುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಬಿಎಸ್ಎಲ್ಎನ್ ಸ್ವದೇಶಿ 4ಜಿ ನೆಟ್‌ವರ್ಕ್ ಸೇವೆ ಸೇರಿದಂತೆ ವಿವಿಧ ಪ್ರಮುಖ ಕ್ಷೇತ್ರಗಳಲ್ಲಿ 60,000 ಕೋಟಿ ರೂ.ಗಳಿಗೆ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು. ಅಮ್ಲಿಪಾಲಿ ಮೈದಾನದಲ್ಲಿ ಮಾತನಾಡಿದ ಅವರು, ಡಬಲ್ ಎಂಜಿನ್ ಸರ್ಕಾರವು ರಾಜ್ಯದಲ್ಲಿ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಲು ಬದ್ಧವಾಗಿದೆ. ಒಡಿಶಾವನ್ನು ಸಮೃದ್ಧಿಯತ್ತ ಕೊಂಡೊಯ್ಯಲು ನಮ್ಮ ಸರ್ಕಾರ ಬದ್ಧವಾಗಿದೆ. ಒಡಿಶಾವು ನೈಸರ್ಗಿಕವಾಗಿ ಅಪಾರ ಕೊಡುಗೆಯನ್ನು ಪಡೆದಿದೆ.
ಹಲವು ದಶಕಗಳ ಕಾಲ ರಾಜ್ಯವು ಬಳಲಿದೆ. ಆದರೆ, ಕಳೆದ ಕೆಲವು ದಿನದಿಂದ ಸಮೃದ್ಧಿ ಕಡೆಗೆ ಕೆಲಸ ಮಾಡುತ್ತಿದ್ದು, ಇತ್ತೀಚಿಗೆ ಕೇಂದ್ರ ಸರ್ಕಾರವು ಎರಡು ಸೆಮಿಕಂಡಕ್ಟರ್ ಘಟಕಗಳ ಸ್ಥಾಪನೆಗೆ ಅನುಮೋದಿಸಿದ್ದು, ಒಡಿಶಾದಲ್ಲಿ ಸೆಮಿಕಂಡಕ್ಟರ್ ಪಾರ್ಕ್ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು. ಇದೆ ವೇಳೆ ಪ್ರಧಾನಿ ಬರ್ಹಾಂಪುರ-ಉದ್ನಾ ಅಮೃತ್ ಭಾರತ್ ರೈಲಿಗೆ ಚಾಲನೆ ನೀಡಿದ್ದು, ಇದು ಗುಜರಾತ್‌ನ ಒಡಿಯಾ ಜನರಿಗೆ ಪ್ರಯೋಜನವನ್ನು ನೀಡಲಿದೆ ಎಂದರು.
ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ನ ಬೆಳ್ಳಿ ಮಹೋತ್ಸವದ ಸಂದರ್ಭದಲ್ಲಿ 97,500 ಕ್ಕೂ ಹೆಚ್ಚು ಮೊಬೈಲ್ 4ಜಿ ಟವರ್‌ಗಳನ್ನು ಕಾರ್ಯಾರಂಭ ಮಾಡಿದರು. ಇದರಲ್ಲಿ ಟೆಲಿಕಾಂ ಸೇವಾ ಪೂರೈಕೆದಾರರ 92,600 4ಜಿ ತಂತ್ರಜ್ಞಾನ ತಾಣಗಳು ಇದೆ. ಈ ಟವರ್ಗನ್ನು ಸ್ವದೇಶಿ ತಂತ್ರಜ್ಞಾನದ ಜೊತೆಯಲ್ಲಿ 37 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.
ಈ ಸುದ್ದಿಯನ್ನೂ ಓದಿ: Raghav Sharma Nidle Column: ಎನ್‌ಡಿಎಗೆ ತಲೆನೋವಾದ ಮೋದಿ-ನಿತೀಶರ ಹಳೆಯ ಮಿತ್ರ
ಸ್ವದೇಶಿ 4ಜಿ ಸ್ಟಾಕ್ ಉದ್ಘಾಟನೆ ಮೂಲಕ ಭಾರತವು ಟೆಲಿಕಾಂ ಉತ್ಪಾದಿಸುವ ಮತ್ತು ತಯಾರಿಸುವ ದೇಶಗಳ ಸಾಲಿಗೆ ಸೇರಲಿದೆ. ಈಗಾಗಲೇ ಡೆನ್ಮಾರ್ಕ್, ಸ್ವೀಡನ್, ದಕ್ಷಿಣ ಕೊರಿಯಾ ಮತ್ತು ಚೀನಾ ಸ್ವದೇಶಿ ಟೆಲಿಕಾಂ ಉಪಕರಣಗಳನ್ನು ಹೊಂದಿದ್ದು, ಭಾರತ ಕೂಡ ಇದಕ್ಕೆ ಸೇರ್ಪಡನೆಗೊಳ್ಳಲಿದೆ.. ಭಾರತದ ನೆಟ್ವರ್ಕ್ಗಳು ಕ್ಲೌಡ್ ಆಧಾರಿತ, ಭವಿಷ್ಯ ಸಿದ್ಧತೆ ಮತ್ತು 5ಜಿಗೆ ಅಪ್ಗ್ರೇಡ್ ಮಾಡಬಹುದಾಗಿದೆ ಎಂದು ಪ್ರಧಾನಿ ತಿಳಿಸಿದ್ದಾರೆ. ಪ್ರಧಾನಮಂತ್ರಿಯವರು ಡಿಜಿಟಲ್ ಭಾರತ್ ನಿಧಿ ಮೂಲಕ ಭಾರತದ 100 ಪ್ರತಿಶತ 4G ಸ್ಯಾಚುರೇಶನ್ ನೆಟ್‌ವರ್ಕ್ ಅನ್ನು ಅನಾವರಣಗೊಳಿಸಿದರು, ಅಲ್ಲಿ 29,000 ರಿಂದ 30,000 ಹಳ್ಳಿಗಳನ್ನು ಮಿಷನ್-ಮೋಡ್ ಯೋಜನೆಯಲ್ಲಿ ಸಂಪರ್ಕಿಸಲಾಗಿದೆ.