PM Naredra Modi: ಪ್ರಾಣಿಪ್ರಿಯರಿಗೆ ದನಗಳ ಮೇಲೆ ಏಕೆ ಪ್ರೀತಿ ಇರಲ್ಲ? ಪ್ರಧಾನಿ ನರೇಂದ್ರ ಮೋದಿ ಖಡಕ್ ಪ್ರಶ್ನೆ
PM Modi on Animal Lovers: ದೆಹಲಿಯ ವಿಜ್ಞಾನ ಭವನದಲ್ಲಿ ಇತ್ತೀಚೆಗೆ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಪ್ರಾಣಿ ಪ್ರಿಯರ ಏಕಪಕ್ಷೀಯ ನಡೆಯನ್ನು ಟೀಕಿಸಿದರು. ದೇಶದ ಅನೇಕ ಪ್ರಾಣಿ ಪ್ರಿಯರು ಹಸುವನ್ನು ಪ್ರಾಣಿ ಎಂದು ಪರಿಗಣಿಸುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

-

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಬೀದಿ ನಾಯಿಗಳನ್ನು ಸ್ಥಳಾಂತರಿಸುವ ಬಗ್ಗೆ ನಡೆಯುತ್ತಿರುವ ಚರ್ಚೆಯ ಮಧ್ಯೆ ಪ್ರಧಾನಿ ನರೇಂದ್ರ ಮೋದಿ(PM Naredra Modi) ಪ್ರಾಣಿ ಪ್ರಿಯರ ವಿರುದ್ಧ ತಮಾಷೆಯ ವಾಗ್ದಾಳಿ ನಡೆಸಿದ್ದಾರೆ. ದೆಹಲಿಯ ವಿಜ್ಞಾನ ಭವನದಲ್ಲಿ ಇತ್ತೀಚೆಗೆ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಪ್ರಾಣಿ ಪ್ರಿಯರ(Animal Lovers) ಏಕಪಕ್ಷೀಯ ನಡೆಯನ್ನು ಟೀಕಿಸಿದರು. ದೇಶದ ಅನೇಕ ಪ್ರಾಣಿ ಪ್ರಿಯರು ಹಸುವನ್ನು ಪ್ರಾಣಿ ಎಂದು ಪರಿಗಣಿಸುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಪ್ರಾಣಿ ಪ್ರಿಯರ ಗುಂಪನ್ನು ಭೇಟಿಯಾದ ಘಟನೆಯನ್ನು ಹಂಚಿಕೊಳ್ಳುತ್ತಾ, ಇತ್ತೀಚೆಗೆ, ನಾನು ಕೆಲವು ಪ್ರಾಣಿ ಪ್ರಿಯರನ್ನು ಭೇಟಿಯಾದೆ ಎಂದು ಹೇಳಿದರು. ಇದು ಪ್ರೇಕ್ಷಕರಿಂದ ನಗುವನ್ನು ಹುಟ್ಟುಹಾಕಿತು. ಪ್ರಧಾನಿ ಮೋದಿ ಅವರು ನೀವು ಯಾಕೆ ನಗುತ್ತಿದ್ದೀರಿ? ನಮ್ಮ ದೇಶದಲ್ಲಿ ಅನೇಕ ಪ್ರಾಣಿ ಪ್ರಿಯರಿದ್ದಾರೆ ಮತ್ತು ಅವರಲ್ಲಿ ಹೆಚ್ಚಿನವರು ಹಸುವನ್ನು ಪ್ರಾಣಿ ಎಂದು ಪರಿಗಣಿಸುವುದಿಲ್ಲ ಎಂದರು.
ಈ ಕಾರ್ಯಕ್ರಮದಲ್ಲಿ ಹಾಜರಿದ್ದ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಕೂಡ ಈ ಹೇಳಿಕೆಗಳಿಗೆ ನಕ್ಕರು, ಪ್ರೇಕ್ಷಕರು ಚಪ್ಪಾಳೆ ತಟ್ಟಿದರು. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ದೆಹಲಿಯ ಬೀದಿಗಳಿಂದ ಬೀದಿ ನಾಯಿಗಳನ್ನು ತೆಗೆದುಹಾಕಲು ಸುಪ್ರೀಂ ಕೋರ್ಟ್ ಆದೇಶಿಸಿದ ಕೆಲವು ದಿನಗಳ ನಂತರ ಪ್ರಧಾನಿ ಮೋದಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಕೋರ್ಟ್ ಆದೇಶ ಮಾನವ ಸುರಕ್ಷತೆ ಮತ್ತು ಪ್ರಾಣಿ ಕಲ್ಯಾಣವನ್ನು ಸಮತೋಲನಗೊಳಿಸುವ ಬಗ್ಗೆ ರಾಷ್ಟ್ರವ್ಯಾಪಿ ಚರ್ಚೆಯನ್ನು ಹುಟ್ಟುಹಾಕಿತು. ನಾಯಿ ಕಡಿತದ ಘಟನೆಗಳು ಮತ್ತು ರೇಬೀಸ್ ಸಂಬಂಧಿತ ಸಾವುಗಳಲ್ಲಿ ಹೆಚ್ಚಳವಾಗಿದೆ. ಅದರಲ್ಲೂ ಬೀದಿ ನಾಯಿ ಕಡಿತದಿಂದ ಸಾವನ್ನಪ್ಪಿರುವವರಲ್ಲಿ ಮಕ್ಕಳು ಮತ್ತು ವೃದ್ಧರ ಸಂಖ್ಯೆ ಹೆಚ್ಚಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್, ದೆಹಲಿ ಸರ್ಕಾರಕ್ಕೆ ಎಂಟು ವಾರಗಳಲ್ಲಿ ಬೀದಿ ನಾಯಿಗಳನ್ನು ಸಂಗ್ರಹಿಸಿ, ಸಂತಾನಹರಣ ಮಾಡಿ ಮತ್ತು ಶಾಶ್ವತವಾಗಿ ಆಶ್ರಯ ತಾಣಗಳಿಗೆ ಸ್ಥಳಾಂತರಿಸುವಂತೆ ನಿರ್ದೇಶಿಸಿದೆ.
ಈ ಸುದ್ದಿಯನ್ನೂ ಓದಿ: Digital Arrest: ಅಶ್ಲೀಲ ಫೋಟೋ ವೈರಲ್ ಮಾಡುವ ಬೆದರಿಕೆ; 3 ತಿಂಗಳಲ್ಲಿ 19 ಕೋಟಿ ರೂ ಕಳೆದುಕೊಂಡ ವೈದ್ಯೆ
ಆದಾಗ್ಯೂ, ಪ್ರಾಣಿ ದಯಾ ಸಂಘದ ಕಾರ್ಯಕರ್ತರು ಮತ್ತು ಸೆಲೆಬ್ರಿಟಿಗಳು ಇದನ್ನು ಅವೈಜ್ಞಾನಿಕ ಮತ್ತು ಪ್ರಾಣಿ ಜನನ ನಿಯಂತ್ರಣ (ಎಬಿಸಿ) ನಿಯಮಗಳು 2023 ಕ್ಕೆ ವಿರುದ್ಧವಾಗಿದೆ ಎಂದು ಕರೆದರು. ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ಪ್ರಕರಣವನ್ನು ತ್ರಿಸದಸ್ಯ ಪೀಠಕ್ಕೆ ವರ್ಗಾಯಿಸಿದರು. ಸುಪ್ರೀಂ ಕೋರ್ಟ್‌ನ ಹೊಸ ಪೀಠವು ಹಿಂದಿನ ಆದೇಶವನ್ನು ಬದಲಾಯಿಸಿತು. ಲಸಿಕೆ ನೀಡಿದ ನಂತರ ಶ್ವಾನಗಳನ್ನು ಅದೇ ಪ್ರದೇಶಕ್ಕೆ ಬಿಡಬೇಕೆಂದು ನಿರ್ದೇಶಿಸಿತು.