Viral News: ಹೆಣ್ಣಾಗುವ ಬಯಕೆಗೆ ಬಿದ್ದು ಜನನಾಂಗ ಕತ್ತರಿಸಿಕೊಂಡ ಭೂಪ! ಆಮೇಲೆ ನಡೆದಿದ್ದು ಘನಘೋರ
Man Hospitalized: ಹೆಣ್ಣಾಗುವ ಬಯಕೆಯಿಂದ ಮನೆಯಲ್ಲೇ ತನ್ನ ಖಾಸಗಿ ಅಂಗವನ್ನು ಕತ್ತರಿಸಿಕೊಂಡ 20 ವರ್ಷದ ಯುವಕನೊಬ್ಬ ಆಸ್ಪತ್ರೆಗೆ ದಾಖಲಾಗಿದ್ದಾನೆ. ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಯಾರೋ ನೀಡಿದ ಸಲಹೆಯನ್ನು ಅನುಸರಿಸಿ ಆ ವ್ಯಕ್ತಿ ಸರ್ಜಿಕಲ್ ಬ್ಲೇಡ್ ಬಳಸಿ ತನ್ನ ಖಾಸಗಿ ಅಂಗವನ್ನು ಕತ್ತರಿಸಿದ್ದಾನೆ.

-

ಲಖನೌ: 20 ವರ್ಷದ ಯುವಕನೊಬ್ಬನಿಗೆ ಹೆಣ್ಣಾಗುವ ಬಯಕೆಯಿಂದ ತನ್ನ ಜನನಾಂಗವನ್ನು ಕತ್ತರಿಸಿಕೊಂಡ ಆಘಾತಕಾರಿ ಘಟನೆ ಉತ್ತರ ಪ್ರದೇಶ (Uttar Pradesh) ದ ಪ್ರಯಾಗ್‌ರಾಜ್‌ನಲ್ಲಿ ನಡೆದಿದೆ. ಮನೆಯಲ್ಲೇ ತನ್ನ ಖಾಸಗಿ ಅಂಗ (Viral News) ವನ್ನು ಕತ್ತರಿಸಿದ ಪರಿಣಾಮ ತೀವ್ರ ರಕ್ತಸ್ರಾವ ಉಂಟಾಗಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸರ್ಕಾರಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅಮೇಥಿ ಜಿಲ್ಲೆಯ ಮೂಲದ ಈ ವ್ಯಕ್ತಿ ಆನ್‌ಲೈನ್‌ನಲ್ಲಿ ಸಿಕ್ಕ ಸ್ಥಳೀಯ ವೈದ್ಯರ ಸಲಹೆಯ ಮೇರೆಗೆ ಈ ಕಠಿಣ ಹೆಜ್ಜೆ ಇಟ್ಟಿದ್ದಾನೆ ಎನ್ನಲಾಗಿದೆ. ಸ್ವರೂಪ್ ರಾಣಿ ನೆಹರು (ಎಸ್‌ಆರ್‌ಎನ್) ಆಸ್ಪತ್ರೆಯ ಡಾ. ಸಂತೋಷ್ ಸುದ್ದಿಗಾರರೊಂದಿಗೆ ಮಾತನಾಡಿ, ಯಾರೋ ನೀಡಿದ ಸಲಹೆಯನ್ನು ಅನುಸರಿಸಿ ಆ ವ್ಯಕ್ತಿ ಸರ್ಜಿಕಲ್ ಬ್ಲೇಡ್ ಬಳಸಿ ತನ್ನ ಖಾಸಗಿ ಅಂಗವನ್ನು ಕತ್ತರಿಸಿದ್ದಾನೆ ಎಂದು ಹೇಳಿದ್ದಾರೆ.
ತನ್ನ ಕೈಯಾರೆ ಖಾಸಗಿ ಅಂಗವನ್ನು ಕತ್ತರಿಸಿಕೊಂಡ ಕಾರಣ ಸಾಕಷ್ಟು ರಕ್ತ ನಷ್ಟವಾಗಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ಆತನಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಾ. ಸಂತೋಷ್ ಹೇಳಿದರು. ವೈದ್ಯರೊಂದಿಗೆ ಮಾತನಾಡುವಾಗ ಆ ಯುವಕ ಪುರುಷ ದೇಹವನ್ನು ಹೊಂದಿದ್ದರೂ, ತನಗೆ ಹೆಣ್ಮಕ್ಕಳ ಹಾಗೆ ಭಾವನೆಯನ್ನು ಹೊಂದಿದ್ದೇನೆ. ಧ್ವನಿ, ನಡವಳಿಕೆ, ನಡಿಗೆ ಹೆಣ್ಮಕ್ಕಳ ಹಾಗೆ ಇದು ಎಂದು ಹೇಳಿಕೊಂಡಿದ್ದಾಗಿ ವರದಿಯಾಗಿದೆ.
ಇದನ್ನೂ ಓದಿ: Viral Video: ಆಕಾಶದಲ್ಲಿ ತೇಲಾಡಿದ ವಿಚಿತ್ರ ಆಕೃತಿ! ವೈರಲಾಗ್ತಿರುವ ವಿಡಿಯೊ ನೋಡಿ ಜನ ಫುಲ್ ಶಾಕ್
ತನ್ನ 14ನೇ ವಯಸ್ಸಿನಲ್ಲಿ ಕುಟುಂಬದ ಕಾರ್ಯಕ್ರಮವೊಂದರಲ್ಲಿ ಹುಡುಗಿಯರೊಂದಿಗೆ ನೃತ್ಯ ಮಾಡುವಾಗ ತಾನು ಮೊದಲು ವಿಭಿನ್ನವಾಗಿ ಭಾವಿಸಿದೆ ಎಂದು ಯುವಕ ವೈದ್ಯರಿಗೆ ತಿಳಿಸಿದ್ದಾನೆ. ಹುಡುಗನಾಗಿದ್ದರೂ, ತಾನು ಹುಡುಗಿಯಿರಬಹುದು ಎಂದು ಅನಿಸುತ್ತಿತ್ತಂತೆ. ಒಬ್ಬನೇ ಮಗನಾಗಿದ್ದರಿಂದ, ಅವನು ತನ್ನ ಹೆತ್ತವರೊಂದಿಗೆ ಇದನ್ನು ಎಂದಿಗೂ ಹಂಚಿಕೊಳ್ಳಲಿಲ್ಲ. ನಂತರ, ಪದವಿ ಸಮಯದಲ್ಲಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಅವನು ಪ್ರಯಾಗ್‌ರಾಜ್‌ಗೆ ತೆರಳಿದನು.
ಪ್ರಯಾಗ್‌ರಾಜ್‌ನ ಬಾಡಿಗೆ ಕೋಣೆಯಲ್ಲಿ ವಾಸಿಸುತ್ತಿದ್ದ ಆ ವ್ಯಕ್ತಿ, ಆನ್‌ಲೈನ್‌ನಲ್ಲಿ ವಿಡಿಯೊಗಳನ್ನು ವೀಕ್ಷಿಸುತ್ತಿದ್ದ ಮತ್ತು ಲಿಂಗ ಬದಲಾವಣೆಯ ಶಸ್ತ್ರಚಿಕಿತ್ಸಾ ಪ್ರಕ್ರಿಯೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಸ್ಥಳೀಯ ವೈದ್ಯರನ್ನು ಸಂಪರ್ಕಿಸಿದ್ದ ಎನ್ನಲಾಗಿದೆ. ಸ್ವತಃ ತನಗೆ ತಾನೇ ಅರಿವಳಿಕೆ ಚುಚ್ಚುಮದ್ದು ನೀಡಿ, ಶಸ್ತ್ರಚಿಕಿತ್ಸಾ ಬ್ಲೇಡ್ ಬಳಸಿ ಲಿಂಗ ಕತ್ತರಿಸಿಕೊಂಡಿದ್ದಾನೆ. ಆದರೆ, ಅರಿವಳಿಕೆ ಕಡಿಮೆಯಾದ ತಕ್ಷಣ ಅವನಿಗೆ ಅಸಹನೀಯ ನೋವು ಕಾಣಿಸಿತು. ಆತನ ಸ್ಥಿತಿ ಹದಗೆಟ್ಟಾಗ ತಮ್ಮ ಮನೆ ಮಾಲೀಕರ ಸಹಾಯವನ್ನು ಕೋರಿದ್ದಾನೆ. ಕೂಡಲೇ ಅವರು ಆತನನ್ನು ಆಸ್ಪತ್ರೆಗೆ ಕರೆದೊಯ್ದರು.
ಅರಿವಳಿಕೆ ಚುಚ್ಚುಮದ್ದಿನ ಪ್ರಭಾವ ಇದ್ದ ವೇಳೆ ನನಗೆ ಹೆಚ್ಚು ನೋವು ಅನಿಸಲಿಲ್ಲ. ಆದರೆ, ಅದರ ಪರಿಣಾಮ ಕಡಿಮೆಯಾದಂತೆ, ನೋವು ಅಸಹನೀಯವಾಯಿತು, ಇದರಿಂದ ರಕ್ತಸ್ರಾವವು ಉಲ್ಬಣಗೊಂಡಿತು. ನಂತರ ನಾನು ಮನೆ ಮಾಲೀಕರ ಸಹಾಯವನ್ನು ಕೋರಿದೆ, ಅವರು ನನ್ನನ್ನು ಆಸ್ಪತ್ರೆಗೆ ಕರೆತಂದರು ಎಂದು ಯುವಕ ಹೇಳಿದ್ದಾನೆ.
ಇನ್ನು ವಿಚಾರ ತಿಳಿದ ಕೂಡಲೇ ಆತನ ತಾಯಿ ಗೋಗರೆಯುತ್ತಾ ಆಸ್ಪತ್ರೆ ತಲುಪಿದ್ದಾರೆ. ಅವನು ನಮ್ಮ ಒಬ್ಬನೇ ಮಗ. ನಾವು ಹೆಚ್ಚು ವಿದ್ಯಾವಂತರಲ್ಲ. ಅವನು ಐಎಎಸ್ ಅಧಿಕಾರಿಯಾಗುತ್ತಾನೆಂದು ಆಶಿಸಿ ಅವನನ್ನು ಪ್ರಯಾಗ್‌ರಾಜ್‌ಗೆ ಕಳುಹಿಸಿದೆವು. ಅವನು ಈ ರೀತಿ ಭಾವಿಸುತ್ತಾನೆಂದು ನನಗೆ ತಿಳಿದಿರಲಿಲ್ಲ ಎಂದು ಅಳುತ್ತಾ ಹೇಳಿದ್ದಾರೆ.