ಲಖನೌ: ಧಾರ್ಮಿಕ ಮತಾಂತರ ಗ್ಯಾಂಗ್‌ನ ಮಾಸ್ಟರ್‌ಮೈಂಡ್ ಛಂಗೂರ್ ಬಾಬಾ (Changoora Baba) ಅಲಿಯಾಸ್ ಜಮಾಲುದ್ದೀನ್ 106 ಕೋಟಿ ರೂಪಾಯಿ ವಿದೇಶಿ ನಿಧಿಯನ್ನು ಹೊಂದಿದ್ದಾರೆಂದು ಬಹಿರಂಗವಾದ ಕೆಲವು ದಿನಗಳ ನಂತರ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ತನಿಖೆಯಲ್ಲಿ 'ರೆಡ್ ಡೈರಿ' ಒಂದು ಸಿಕ್ಕಿದೆ. ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ನಡೆಸಿದ ದಾಳಿಯ ಸಮಯದಲ್ಲಿ ವಶಪಡಿಸಿಕೊಂಡ ಈ ದಾಖಲೆಯಲ್ಲಿ, 2022 ರ ರಾಜ್ಯ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಛಂಗೂರ್ ಬಾಬಾನಿಂದ ಹಣಕಾಸಿನ ಬೆಂಬಲ ಪಡೆದಿದ್ದಾರೆ ಎಂದು ಹೇಳಲಾದ ಹಲವಾರು ರಾಜಕಾರಣಿಗಳು ಮತ್ತು ಮಾಜಿ ಅಧಿಕಾರಿಗಳ ಹೆಸರುಗಳಿವೆ ಎಂದು ಹೇಳಲಾಗಿದೆ.
ಎಟಿಎಸ್, ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಮತ್ತು ಜಾರಿ ನಿರ್ದೇಶನಾಲಯ (ಇಡಿ) ಸೇರಿದಂತೆ ಹಲವಾರು ಸಂಸ್ಥೆಗಳು ಈಗ ಈ ಡೈರಿಯ ಮೇಲೆ ಕೇಂದ್ರೀಕರಿಸಿದ್ದು, ಇದು ಛಂಗೂರ್ ಬಾಬಾನ ಹಣಕಾಸಿನ ಅವ್ಯವಹಾರವನ್ನು ಮತ್ತಷ್ಟು ತೆರೆದಿಡಲಿದೆ. ನಿನ್ನೆಯಷ್ಟೇ ಛಂಗೂರ್ ಬಾಬಾ ಧಾರ್ಮಿಕ ಮತಾಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಉತ್ತರ ಪ್ರದೇಶದ ಬಲರಾಂಪುರ್‌ನ 12 ಕಡೆಗೆ ಮುಂಬೈನ ಎರಡು ಸೇರಿದಂತೆ 14 ಸ್ಥಳಗಳಲ್ಲಿ ಶೋಧ ನಡೆಸಿತ್ತು. ಬಲರಾಂಪುರ್‌ನ ಉತ್ರೌಲಾ ಮತ್ತು ಮುಂಬೈನ ಬಾಂದ್ರಾ ಮತ್ತು ಮಾಹಿಮ್‌ನಲ್ಲಿ ಬೆಳಿಗ್ಗೆ 5 ಗಂಟೆಗೆ ದಾಳಿ ಪ್ರಾರಂಭವಾಯಿತು. ಮತಾಂತರ ದಂಧೆಯ ಆರೋಪಿ ನವೀನ್ ಅವರ ಬ್ಯಾಂಕ್ ಖಾತೆಯಿಂದ ಸುಮಾರು 2 ಕೋಟಿ ರೂ.ಗಳನ್ನು ಶೆಹಜಾದ್ ಶೇಖ್ ಎಂಬ ವ್ಯಕ್ತಿಗೆ ವರ್ಗಾಯಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.
ಕೆಲವು ವರ್ಷಗಳಲ್ಲಿ ಛಂಗೂರ್ ಬಾಬಾ 100 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಗಳಿಸಿದ್ದಾನೆ ಎಂದು ಆರೋಪಿಸಲಾಗಿದೆ. ಹಿಂದೂ ಯುವತಿಯರನ್ನು ಟಾರ್ಗೆಟ್ ಮಾಡಿ, ಲವ್ ಜಿಹಾದ್ (Love Jihad) ನಡೆಸಿ ಮತಾಂತರ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ. ಇದಕ್ಕಾಗಿ ಭರ್ಜರಿ ಹಣವನ್ನು ಕೂಡ ಪಡೆದುಕೊಂಡಿದ್ದಾನೆ ಎಂದು ಇ.ಡಿ.ಯ ಪ್ರಾಥಮಿಕ ಸಂಶೋಧನೆಗಳು ತಿಳಿಸಿವೆ. ಈ ಹಣದ ಬಹುಪಾಲು ಮಧ್ಯಪ್ರಾಚ್ಯದ ದೇಶಗಳಿಂದ ಬಂದಿದೆ ಎಂದು ವರದಿಯಾಗಿದೆ. ಭಾರತದ ವಿವಿಧ ಭಾಗಗಳಲ್ಲಿ ಛಂಗೂರ್‌ಗೆ ಸಂಬಂಧಿಸಿದ ಅಕ್ರಮ ಆಸ್ತಿಗಳನ್ನು ಸಹ ಸಂಸ್ಥೆ ಪತ್ತೆ ಹಚ್ಚಿದೆ.
ಈ ಸುದ್ದಿಯನ್ನೂ ಓದಿ: Love Jihad: ಮುಸ್ಲಿಂ ಯುವತಿಯಿಂದ ಹಿಂದೂ ಗಂಡನ ಮತಾಂತರ, ಲವ್ ಜಿಹಾದ್ ನಡೆಸಿದ ವಿಚಿತ್ರ ಆರೋಪ
ಛಂಗೂರ್ ಬಾಬಾ ಅಥವಾ ಪೀರ್ ಬಾಬಾ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಜಮಾಲುದ್ದೀನ್, ನೇಪಾಳದ ಗಡಿಯಲ್ಲಿರುವ ಬಲರಾಂಪುರದ ರೆಹ್ರಾ ಮಾಫಿ ಗ್ರಾಮದ ನಿವಾಸಿ. ಈತ ಸೈಕಲ್‌ನಲ್ಲಿ ಉಂಗುರಗಳು ಮತ್ತು ತಾಯತಗಳನ್ನು ಮಾರಾಟ ಮಾಡುವ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದ ಎಂದು ತಿಳಿದು ಬಂದಿದೆ.