Parliament Security Breach: ಸಂಸತ್‌ನಲ್ಲಿ ಮತ್ತೆ ಭದ್ರತಾ ವೈಫಲ್ಯ- ಗೋಡೆ ಹಾರಿ ಎಂಟ್ರಿ ಕೊಟ್ಟ ಅನಾಮಿಕ
Security Breach: ಸಂಸತ್‌ನಲ್ಲಿ ಭಾರೀ ಭದ್ರತ ವೈಫಲ್ಯ ಸಂಭವಿಸಿದ್ದು, ಅನಾಮಿಕೋರ್ವ ಅಕ್ರಮವಾಗಿ ಪ್ರವೇಶ ಮಾಡಿದ್ದಾರೆ. ಮರ ಏರಿ ಗೋಡೆ ಹಾರಿ ಸಂಸತ್‌ನೊಳಗೆ ಎಂಟ್ರಿ ಕೊಟ್ಟಿದ್ದ ಆಗಂತುಕ ಕೆಲ ಕಾಲ ಆತಂಕ ಸೃಷ್ಟಿಸಿದ್ದ. ಸದ್ಯ ಆತನನ್ನು ವಶಕ್ಕೆ ಪಡೆಯಲಾಗಿದೆ.


ನವದೆಹಲಿ: ಸಂಸತ್‌ನಲ್ಲಿ ಶುಕ್ರವಾರ ಬೆಳಿಗ್ಗೆ ಭಾರೀ ಭದ್ರತಾ ವೈಫಲ್ಯ(Security Breach At Parliament) ಸಂಭವಿಸಿದೆ. ವ್ಯಕ್ತಿಯೊಬ್ಬ ಮರ ಹತ್ತಿ ಗೋಡೆ ಏರುವ ಮೂಲಕ ಸಂಸತ್ ಭವನದೊಳಗೆ ಪ್ರವೇಶಿಸಿದ್ದಾನೆ. ಬೆಳಿಗ್ಗೆ 6:30 ರ ಸುಮಾರಿಗೆ ಈ ಘಟನೆ ನಡೆದಿದೆ. ರೈಲ್ ಭವನ ಕಡೆಯಿಂದ ಗೋಡೆ ಹಾರಿ ಒಳನುಗ್ಗಿದ ವ್ಯಕ್ತಿ ಹೊಸ ಸಂಸತ್ ಭವನದ ಗರುಡ ದ್ವಾರವನ್ನು ತಲುಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಆತನನ್ನು ವಶಕ್ಕೆ ಪಡೆಯಲಾಗಿದೆ.
ಮೂಲಗಳ ಪ್ರಕಾರ, ಆ ವ್ಯಕ್ತಿ ಬೆಳಿಗ್ಗೆ 6.30 ರ ಸುಮಾರಿಗೆ ಮರದ ಸಹಾಯದಿಂದ ಗೋಡೆ ಹತ್ತಿ ಸಂಸತ್ತಿಗೆ ಪ್ರವೇಶಿಸಿದ್ದಾನೆ. ಅವನು ರೈಲ್ ಭವನ ಕಡೆಯಿಂದ ಗೋಡೆ ಹತ್ತಿ ಹೊಸ ಸಂಸತ್ತಿನ ಕಟ್ಟಡದ ಗರುಡ ಗೇಟ್ ತಲುಪಿದನು. ಸಂಸತ್ತಿನೊಳಗೆ ಇದ್ದ ಭದ್ರತಾ ಸಿಬ್ಬಂದಿ ಆತನನ್ನು ಸೆರೆ ಹಿಡಿದ್ದು, ಅವನ ವಿಚಾರಣೆ ನಡೆಯುತ್ತಿದೆ.
ಸಂಸತ್ತಿನ ಮಳೆಗಾಲದ ಅಧಿವೇಶನ ಮುಗಿದ ಒಂದು ದಿನದ ನಂತರ ಈ ಘಟನೆ ನಡೆದಿದೆ. ಇನ್ನು ಎರಡು ವರ್ಷಗಳ ಹಿಂದೆ ಇಂತಹದ್ದೇ ಒಂದು ಘಟನೆ ನಡೆದಿತ್ತು. ಅಧಿವೇಶನ (Session) ನಡೆಯುತ್ತಿರುವಾಗಲೇ ಸಂಸತ್‌ನಲ್ಲಿ ಭದ್ರತಾ ಲೋಪ ನಡೆದಿತ್ತು. ಲೋಕಸಭಾ ವೀಕ್ಷಕರ ಗ್ಯಾಲರಿಯಿಂದ ಇಬ್ಬರು ವ್ಯಕ್ತಿ ಮೇಲಿನಿಂದ ಜಿಗಿದಿದ್ದು, ಬಣ್ಣದ ಬಾಂಬ್ ಅನ್ನು ಸ್ಫೋಟಿಸಿದ್ದರು. ಕೂಡಲೇ ಭದ್ರತಾ ಸಿಬ್ಬಂದಿ ಅವರನ್ನು ಹಿಡಿದಿದ್ದರು. ಇನ್ನು ಪ್ರಕರಣಕ್ಕೆ ಮೈಸೂರು ಮೂಲದ ಯುವಕ ಸೇರಿದಂತೆ ಸಂಬಂಧಿಸಿದಂತೆ ನಾಲ್ವರನ್ನು ಅರೆಸ್ಟ್ ಮಾಡಲಾಗಿತ್ತು.
ಈ ಸುದ್ದಿಯನ್ನೂ ಓದಿ: CM Siddaramaiah: ನಮ್ಮ ಸರ್ಕಾರ ʼಬಂಡೆʼಯಂತೆ ಐದು ವರ್ಷ ಭದ್ರವಾಗಿರುತ್ತದೆ-ಸಿದ್ದರಾಮಯ್ಯ
ಶೂನ್ಯ ವೇಳೆಯಲ್ಲಿ ಸಾರ್ವಜನಿಕ ಗ್ಯಾಲರಿಯಿಂದ ಸದನದ ಒಳಗೆ ಜಿಗಿದಿದ್ದ ಸಾಗರ್ ಶರ್ಮಾ ಮತ್ತು ಮನೋರಂಜನ್ ಡಿ ಎಂಬ ಯುವಕರು ಹಳದಿ ಅನಿಲವನ್ನು ಬಿಡುಗಡೆ ಮಾಡಿ ಘೋಷಣೆಗಳನ್ನು ಕೂಗಿದ್ದರು. ಇತರ ಇಬ್ಬರು ಆರೋಪಿಗಳಾದ ಅಮೋಲ್ ಶಿಂಧೆ ಮತ್ತು ಆಜಾದ್ ಸಂಸತ್ತಿನ ಆವರಣದ ಹೊರಗೆ "ತನಶಾಹಿ ನಹಿ ಚಲೇಗಿ" ಎಂದು ಕೂಗುತ್ತಾ ಡಬ್ಬಿಗಳಿಂದ ಬಣ್ಣದ ಅನಿಲವನ್ನು ಸಿಂಪಡಿಸಿದ್ದರು. ಈ ನಾಲ್ವರನ್ನು ಸ್ಥಳದಿಂದಲೇ ವಶಕ್ಕೆ ಪಡೆಯಲಾಗಿತ್ತು.