Crime News: ಜಾಮೀನಿನ ಮೇಲೆ ಬಂದು ಕೊಲೆ ಆರೋಪಿ ಅತ್ತಿಗೆಯನ್ನು ಕೊಂದ; ಕಾರಣವೇನು?
ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ತನ್ನ ಸಹೋದರನ ಹತ್ಯೆ ಮಾಡಿದ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ವ್ಯಕ್ತಿಯೊಬ್ಬ ಸಹೋದರನ ಪತ್ನಿ ಸುಮನ್ ಮತ್ತು ಆಕೆಯ ಮೂವರು ಹೆಣ್ಣುಮಕ್ಕಳನ್ನು ನದಿಗೆ ತಳ್ಳಿ ಕೊಲೆ ಮಾಡಿದ್ದಾರೆ. ಈಗಾಗಲೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಲಖನೌ: ಉತ್ತರ ಪ್ರದೇಶದ (Uttar Pradesh) ಬಹ್ರೈಚ್‌ನಲ್ಲಿ (Bahraich) ತನ್ನ ಸಹೋದರನ (Brother) ಹತ್ಯೆ ಮಾಡಿದ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ವ್ಯಕ್ತಿಯೊಬ್ಬ ಸಹೋದರನ ಪತ್ನಿ ಸುಮನ್ ಮತ್ತು ಆಕೆಯ ಮೂವರು ಹೆಣ್ಣುಮಕ್ಕಳನ್ನು ನದಿಗೆ ತಳ್ಳಿ ಕೊಲೆ ಮಾಡಿದ್ದಾನೆ. ಈಗಾಗಲೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಆರೋಪಿಯನ್ನು ಬಹ್ರೈಚ್‌ನ ರಾಮೈಪುರ್ವ ಗ್ರಾಮದ ಅನಿರುದ್ಧ್ ಕುಮಾರ್ ಎಂದು ಗುರುತಿಸಲಾಗಿದೆ. 2018ರಲ್ಲಿ ಆಸ್ತಿ ವಿವಾದದಿಂದಾಗಿ ತನ್ನ ಸಹೋದರ ಸಂತೋಷ್ ಕುಮಾರ್‌ನನ್ನು ಕೊಲೆ ಮಾಡಿದ್ದ ಪ್ರಕರಣದಲ್ಲಿ ಅವನು ಜೈಲು ಶಿಕ್ಷೆಗೆ ಒಳಗಾಗಿದ್ದ ಎಂದು ಎಎಸ್‌ಪಿ ದುರ್ಗಾ ಪ್ರಸಾದ್ ತಿವಾರಿ ಹೇಳಿದ್ದಾರೆ.
ಕೊಲೆಯ ನಂತರ ಕೆಲವು ತಿಂಗಳಲ್ಲಿ ಜಾಮೀನು ಪಡೆದ ಅನಿರುದ್ಧ್, ತನ್ನ ಸಹೋದರನ ಪತ್ನಿ ಸುಮನ್ (36) ಜತೆಗೆ ಬಲವಂತವಾಗಿ ಸಂಬಂಧ ಬೆಳೆಸಲು ಆರಂಭಿಸಿದ್ದು ಇವರಿಗೆ ಆಂಶಿಕ (6) ಮತ್ತು ಲಾಡೊ (3) ಎಂಬ ಇಬ್ಬರು ಹೆಣ್ಣುಮಕ್ಕಳಿದ್ದರು. ಸುಮನ್‌ಗೆ ತನ್ನ ಮೊದಲ ಪತಿ ಸಂತೋಷ್‌ನಿಂದ 12 ವರ್ಷದ ಮಗಳೊಬ್ಬಳು ಇದ್ದಳು. ಸುಮನ್ ತನ್ನ ಪತಿಯ ಕೊಲೆ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದ್ದಳು. ಆದರೆ ಅನಿರುದ್ಧ್ ತನ್ನ ಸಾಕ್ಷಿ ಹೇಳದಂತೆ ಒತ್ತಾಯಿಸುತ್ತಿದ್ದ. ಆದರೆ ಸುಮನ್ ಅದಕ್ಕೆ ಒಪ್ಪಲಿಲ್ಲ. ಅಲ್ಲದೆ ಇತ್ತೀಚೆಗೆ ಸುಮನ್ ತನ್ನ ಮೂವರು ಹೆಣ್ಣುಮಕ್ಕಳೊಂದಿಗೆ ತಾಯಿಯ ಮನೆಗೆ ತೆರಳಿದ್ದಳು.
ಈ ಸುದ್ದಿಯನ್ನು ಓದಿ: Viral Video: ತಾಜ್ ಮಹಲ್ ಒಳಗಿನ ಯಾರೂ ಕಂಡಿರದ ದೃಶ್ಯ ರೆಕಾರ್ಡ್! ಶಹಜಹಾನ್- ಮುಮ್ತಾಜ್ ಸಮಾಧಿಗಳ ವಿಡಿಯೊ ವೈರಲ್
ಆಗಸ್ಟ್ 14ರಿಂದ ಸುಮನ್ ಮತ್ತು ಆಕೆಯ ಮಕ್ಕಳು ಕಾಣೆಯಾಗಿದ್ದಾರೆ ಎಂದು ಸುಮನ್ ಅವರ ತಾಯಿ ದೂರು ದಾಖಲಿಸಿದ್ದರು. ಅನಿರುದ್ಧ್ ಮತ್ತು ಆತನ ಸಹಾಯಕ ಕೊಲೆ ಮಾಡಲು ಅವರನ್ನು ಅಪಹರಿಸಿದ್ದಾರೆ ಎಂದು ಆಕೆ ಆರೋಪಿಸಿದ್ದರು. ಈ ಮಾಹಿತಿಯ ಆಧಾರದ ಮೇಲೆ ಪೊಲೀಸರು ಮೋತಿಪುರ ಪ್ರದೇಶದ ಗಾಯಘಾಟ್‌ನಲ್ಲಿ ಅನಿರುದ್ಧ್‌ನನ್ನು ಬಂಧಿಸಿದರು.
ವಿಚಾರಣೆಯ ವೇಳೆ ಆಗಸ್ಟ್ 14ರಂದು ತನ್ನ ಸಹಾಯಕನೊಂದಿಗೆ ಸುಮನ್ ಮತ್ತು ಮೂವರು ಹೆಣ್ಣು ಮಕ್ಕಳನ್ನು ಕರೆದಿದ್ದೇನೆ ಎಂದು ಅನಿರುದ್ಧ್ ಒಪ್ಪಿಕೊಂಡ. ಲಖಿಂಪುರ್ ಖೇರಿ ಜಿಲ್ಲೆಯ ಖಂಹಾರಿಯಾ ಪ್ರದೇಶದ ಶಾರದಾ ನದಿಯ ಸೇತುವೆಗೆ ಕರೆದೊಯ್ದು ಅವರನ್ನು ನದಿಗೆ ತಳ್ಳಿದ್ದಾಗಿ ತಿಳಿಸಿದ್ದಾನೆ. ಪೊಲೀಸರು ಸುಮನ್ ಮತ್ತು ಮಕ್ಕಳ ಬಟ್ಟೆಗಳು, ಒಬ್ಬ ಮಗಳ ಶೂಗಳು ಮತ್ತು ಅಪರಾಧಕ್ಕೆ ಬಳಸಿದ ಬೈಕ್ ಅನ್ನು ಹತ್ತಿರದ ಪೊದೆಗಳಿಂದ ವಶಪಡಿಸಿಕೊಂಡಿದ್ದಾರೆ. ಆದರೆ ಶವಗಳು ಇನ್ನೂ ಪತ್ತೆಯಾಗಿಲ್ಲ. ಇನ್ನು ಅನಿರುದ್ಧ್‌ಗೆ ಸಹಾಯ ಮಾಡಿದ್ದ ವ್ಯಕ್ತಿ ತಲೆಮರೆಸಿಕೊಂಡಿದ್ದು, ಅವನನ್ನು ಬಂಧಿಸಲು ಶೋಧ ಕಾರ್ಯಾಚರಣೆ ನಡೆಯುತ್ತಿದೆ.