ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Actor Vishnuvardhan Birthday: ಸಾಹಸಸಿಂಹ ಡಾ. ವಿಷ್ಣುವರ್ಧನ್ 75ನೇ ಹುಟ್ಟುಹಬ್ಬ: ಈ ಇಂಟ್ರಸ್ಟಿಂಗ್ ವಿಚಾರ ನೀವು ತಿಳಿಯಲೇ ಬೇಕು

ಸ್ಯಾಂಡಲ್‌ವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ಸಾಹಸಸಿಂಹ ಎಂದಾಗ ನಮಗೆಲ್ಲ ಡಾ. ವಿಷ್ಣುವರ್ಧನ್ ಅವರು ನೆನಪಾಗುತ್ತಾರೆ. ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳ, ಹಿಂದಿ ಭಾಷೆಗಳಲ್ಲಿ ನಟಿಸಿ ಅಪಾರ ಅಭಿಮಾನಿಗಳ ಪಾಲಿಗೆ ಸಾಹಸಸಿಂಹನಾಗಿ ಮನೆ ಮಾತಾಗಿದ್ದಾರೆ. ಇಂದು ಅವರ ಹುಟ್ಟುಹಬ್ಬ ಸಂಭ್ರಮವಾಗಿದೆ. ಈ ಮೂಲಕ ನಟ ವಿಷ್ಣುವರ್ಧನ್ ಅವರ ಕೆಲವು ಅಪರೂಪದ ಸಂಗತಿಗಳ ಬಗ್ಗೆ ತಿಳಿಯಲು ಈ ಲೇಖನ ಪೂರ್ತಿ ಓದಿ.

Vishnuvardhan
1/8

ಸಿನಿಮಾ ಮಾತ್ರವಲ್ಲದೇ ಸಮಾಜ ಸೇವಾ ಕಾರ್ಯದಲ್ಲಿಯೂ ವಿಷ್ಣುವರ್ಧನ್ ಅವರು ಮುಂಚುಣಿ ಯಲ್ಲಿದ್ದರು. ಇಷ್ಟೆಲ್ಲ ಸಾಧನೆ ಮಾಡಿರುವ ಅವರು ಇಂದು ಬದುಕಿದ್ದರೆ ತಮ್ಮ 75ನೇ ಹುಟ್ಟುಹಬ್ಬವನ್ನು ತಮ್ಮ ಅಭಿಮಾನಿಗಳ ಜೊತೆಗೆ ಅತ್ಯಂತ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದರು. ಅವರು ನಮ್ಮೊಂದಿಗಿಲ್ಲವಾದರೂ ಅವರು ನಟಿಸಿದ್ದ ಸಿನಿಮಾ ಮೂಲಕ ಇಂದಿಗೂ ಜೀವಂತವಾಗಿದ್ದಾರೆ.

2/8

ಹೆಚ್.ಎಲ್. ನಾರಾಯಣರಾವ್ ಮತ್ತು ಕಾಮಾಕ್ಷಮ್ಮ ದಂಪತಿಯ ಮಗನಾಗಿ ವಿಷ್ಣುವರ್ಧನ್ ಮೈಸೂರಿನಲ್ಲಿ ಸೆಪ್ಟಂಬರ್ 18, 1950ರಂದು ಜನಿಸಿದರು. ಸಂಪತ್ ಕುಮಾರ್ ಇವರ ಮೂಲ ಹೆಸರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮೈಸೂರಿನಲ್ಲಿ ಮತ್ತು ಹಿರಿಯ ಪ್ರಾಥಮಿಕ , ಪ್ರೌಢ, ಪದವಿಯನ್ನು ಬೆಂಗಳೂರಿನಲ್ಲಿ ಪಡೆದರು. ಚಿಕ್ಕಂದಿನಿಂದಲೂ ನಟನೆಯ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಇವರು ಶಿವಶರಣ ನಂಬೆಯಕ್ಕ ಎಂಬ ಸಿನೆಮಾದಲ್ಲಿ 1955ರಲ್ಲಿ ಬಾಲ ನಟನಾಗಿ ನಟಿಸಿದ್ದರು. ಈ ಸಿನೆಮಾ ಮೂಲಕ ಅವರ ಹೆಸರು ಸಂಪತ್ ಕುಮಾರ್ ನಿಂದ ಬದಲಾಗಿ ವಿಷ್ಣು ಎಂದು ಬದಲಾಯಿತು. .

3/8

1956ರಲ್ಲಿ ಕೋಕಿಲವಾಣಿ ಎಂಬ ಮತ್ತೊಂದು ಸಿನೆಮಾದಲ್ಲಿ ಕೂಡ ವಿಷ್ಣು ನಟಿಸಿದ್ದರು. ಬಳಿಕ ಎಸ್ ಎಲ್ ಭೈರಪ್ಪನವರ ಕಾದಂಬರಿಯಾಧಾರಿತ ವಂಶವೃಕ್ಷ ಇದರಲ್ಲಿ ಸಣ್ಣ ಪಾತ್ರವನ್ನು ಕೂಡ ವಿಷ್ಣುವರ್ಧನ್ ಅವರು ಅಭಿನಯಿಸಿದ್ದರು. ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು ಸಿನಿಮಾದಲ್ಲಿ 1972ರಲ್ಲಿ ನಟಿಸುವ ಮೂಲಕ ನಾಯಕನಾಗಿ ನಟಿಸಿ ತೆರೆ ಮೇಲೆ ಮಿಂಚಿದರು. ಸಂಪತ್ ಕುಮಾರ (ವಿಷ್ಣು) ಎಂದು ಬಂದಿದ್ದ ಹುಡುಗನಿಗೆ ‘ವಿಷ್ಣುವರ್ಧನ್’ ಎಂದು ಹೆಸರಿಟ್ಟಿದ್ದು ಹೆಸರಾಂತ ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್ ಎನ್ನಬಹುದು. ನೂರು ದಿನ ಪೂರೈಸಿದ ಮೊದಲ ಸಿನೆಮಾವೆಂಬ ಹೆಗ್ಗಳಿಕೆ ಪಡೆದ ಈ ಸಿನಿಮಾ ರಾಷ್ಟ್ರಪ್ರಶಸ್ತಿ ಗೆದ್ದುಕೊಂಡಿತು..

4/8

ನಾಗರಹಾವು ಸಿನಿಮಾ ಯಶಸ್ಸಿನ ಬಳಿಕ ಅವರಿಗೆ ಸಾಲು ಸಾಲು ಸಿನಿಮಾ ಆಫರ್ ಬರಲಾರಂಭಿಸಿತು. ಸೀತೆಯಲ್ಲ ಸಾವಿತ್ರಿ, ಮನೆ ಬೆಳಗಿದ ಸೊಸೆ, ಗಂಧದ ಗುಡಿ, ಬೂತಯ್ಯನ ಮಗ ಅಯ್ಯು, ಕಳ್ಳ ಕುಳ್ಳ, ದೇವರ ಗುಡಿ, ಸೊಸೆ ತಂದ ಸೌಭಾಗ್ಯ, ಬಯಸದೆ ಬಂದ ಭಾಗ್ಯ, ಕಿಟ್ಟು ಪುಟ್ಟು , ಗಲಾಟೆ ಸಂಸಾರ, ಕಿಲಾಡಿ ಜೋಡಿ, ಮದುವೆ ಮಾಡು ತಮಾಷೆ ನೋಡು, ಪೆದ್ದ ಗೆದ್ದ, ಸಾಹಸ ಸಿಂಹ, ಮುತ್ತೈದೆ ಭಾಗ್ಯ, ನೀರೆದ ಕಾದಂಬರಿ, ಜೀವನ ಚಕ್ರ, ನನ್ನ ಪ್ರತಿಜ್ಞೆ, ಜಯಸಿಂಹ, ಹೃದಯ ಗೀತೆ, ಮುತ್ತಿನ ಹಾರ, ಮತ್ತೆ ಹಾಡಿತು ಕೋಗಿಲೆ, ಸಂಘರ್ಷ, ರಾಯರು ಬಂದರು ಮಾವನ ಮನೆಗೆ, ಹಾಲುಂಡ ತವರು, ಮೋಜುಗಾರ ಸೊಗಸುಗಾರ, ನಿಶ್ಯಬ್ಧ, ದಿಗ್ಗಜರು, ಕೋಟಿಗೊಬ್ಬ, ಸಿಂಹಾದ್ರಿಯ ಸಿಂಹ, ಯಜಮಾನ, ಜ್ಯೇಷ್ಠ, ಈ ಬಂಧನ, ಆಪ್ತಮಿತ್ರ, ಆಪ್ತ ರಕ್ಷಕ ಸೇರಿದಂತೆ ಅನೇಕ ಕನ್ನಡ ಸಿನಿಮಾದಲ್ಲಿ ಅವರು ಅಭಿನಯಿಸಿದ್ದಾರೆ..

5/8

ಅಷ್ಟು ಮಾತ್ರವಲ್ಲದೆ ಖಾಖಿ ವರ್ಧಿ, ಜಾಲೀಮ್ ಸೇರಿದಂತೆ ಅನೇಕ ಹಿಂದಿ ಸಿನಿಮಾದಲ್ಲಿ, ವಿಡುದಲೈ, ಅಲೈಗಳ್, ಈಟಿ ಸೇರಿದಂತೆ ಅನೇಕ ತಮಿಳು ಸಿನಿಮಾದಲ್ಲಿ ಕೂಡ ಅಭಿನಯಿಸಿದ್ದಾರೆ. ಲಕ್ಷ್ಮಿ ನಿರ್ದೋಶಿ, ಒಕ್ಕಡು ಚಾಲು ಇತರ ತೆಲುಗು ಹಾಗೂ ಮಲಯಾಳಂ ಸಿನಿಮಾದಲ್ಲಿ ಕೂಡ ನಟ ವಿಷ್ಣುವರ್ಧನ್ ಅಭಿನಯಿಸಿದ್ದಾರೆ. ಕಿಲಾಡಿ ಕಿಟ್ಟು, ಕಿಟ್ಟು ಪುಟ್ಟು, ನಾಗ ಕಾಳ, ಭೈರವ, ಸಾಹಸಸಿಂಹ , ಜಿಮ್ಮಿಗಲ್ಲು, ಖೈದಿ, ಮೋಜುಗಾರ ಸೊಗಸುಗಾರ, ವಿಷ್ಣುಸೇನಾ ಇವೇ ಮೊದಲಾದ ಕೆಲವು ಚಿತ್ರಗಳಲ್ಲಿ ಹಿನ್ನೆಲೆ ಗಾಯನವನ್ನೂ ಕೂಡ ಮಾಡಿದ್ದಾರೆ.

6/8

ನಟ ವಿಷ್ಣುವರ್ಧನ್ ಅವರಿಗೆ 2005ರಲ್ಲಿ ಗೌರವ ಡಾಕ್ಟರೇಟ್ , 6 ಸೌಂತ್ ಇಂಡಿಯಾ ಫಿಲ್ಮ್‌ಫೇರ್ ಪ್ರಶಸ್ತಿಗಳು , 8 ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕಾರ ವನ್ನು ಅವರು ಪಡೆದಿದ್ದಾರೆ. ರಾಜ್ಯ ಸರ್ಕಾರ ವಾರ್ಷಿಕ ಜೀವಮಾನದ ಸಾಧನೆ ಪ್ರಶಸ್ತಿಯನ್ನು ಡಾ. ವಿಷ್ಣುವರ್ಧನ್ ಅವರ ಹೆಸರಿನಲ್ಲಿ 'ಕರ್ನಾಟಕ ರಾಜ್ಯ ಡಾ. ವಿಷ್ಣುವರ್ಧನ್ ಪ್ರಶಸ್ತಿ' ಎಂದು ಮರು ನಾಮಕರಣ ಮಾಡಿ ವಿತರಿಸುವ ಮೂಲಕ ಅವರ ಕಲಾ ಸೇವೆಗೆ ಗೌರವ ಸಲ್ಲಿಸಿದೆ. ಅಷ್ಟೇ ಅಲ್ಲದೆ ಕರ್ನಾಟಕ ರಾಜ್ಯ ಸರ್ಕಾರವು ನೀಡುವ ಡಾ. ವಿಷ್ಣುವರ್ಧನ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ಕೂಡ ಇತ್ತೀಚೆಗಷ್ಟೇ ನೀಡಿದೆ.

7/8

ನಟಿ ಭಾರತಿ ಅವರನ್ನು 1975ರ ಫೆಬ್ರವರಿ 27ರಂದು ಬೆಂಗಳೂರಿನಲ್ಲಿ ಪ್ರೀತಿಸಿ ವಿಷ್ಣುವರ್ಧನ್ ಅವರು ಮದುವೆಯಾಗಿದ್ದಾರೆ. ಅವರ ಮದುವೆಯಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳು ಸೇರಿದ್ದರಿಂದ ಗಲಾಟೆ ನಡೆದಿದ್ದು ಆಗ ಇವರ ಪ್ರಾಣ ಸ್ನೇಹಿತ ಅಂಬರೀಶ್ ನೆರವಿಗೆ ಬಂದಿದ್ದರು. ಅವರಿಗೆ ಕೀರ್ತಿ ಮತ್ತು ಚಂದನಾ ಎಂಬ ಇಬ್ಬರು ದತ್ತು ಪುತ್ರಿಯರಿದ್ದಾರೆ. ಅವರ ಪುತ್ರಿ ಕೀರ್ತಿ ಅವರು ನಟ ಅನಿರುದ್ಧ್ ಅವರನ್ನು ವಿವಾಹವಾಗಿದ್ದಾರೆ. ಆಪ್ತ ರಕ್ಷಕ ಸಿನಿಮಾ ಶೂಟಿಂಗ್ ಮುಗಿಸಿದ್ದ ಬಳಿಕ ವಿಷ್ಣುವರ್ಧನ್ ಅವರು 2009 ರ ಡಿಸೆಂಬರ್ 30 ರಂದು ಮೈಸೂರಿನ ಕಿಂಗ್ಸ್ ಕೋರ್ಟ್ ಹೋಟೆಲ್‌ನಲ್ಲಿ ತಂಗಿದ್ದರು. ಆಗ ಅವರಿಗೆ ಹೃದಯಾಘಾತವಾಗಿ ಅವರು ನಿಧನರಾದರು.

8/8

ಅವರ ಸಮಾಧಿ ಇದ್ದ ಅಭಿಮಾನ್ ಸ್ಟೂಡಿಯೋ ಜಾಗವು ವಿವಾಧ ಇದ್ದ ಕಾರಣ 2025 ರ ಆಗಸ್ಟ್ 8 ರಂದು ಅದನ್ನು ತೆರವುಗೊಳಿಸಲಾಯಿತು. ಇದಕ್ಕೆ ಸಂಬಂಧಿಸಿದಂತೆ ಅಭಿಮಾನಿಗಳು ತೀವ್ರ ಪ್ರತಿ ಭಟನೆ ನಡೆಸಿದ್ದರು. ಮೈಸೂರಿನಲ್ಲಿ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣಗೊಂಡಿದ್ದು ಇದೀಗ ದೊಡ್ಡ ಸ್ಮಾರಕ ಮಾಡಲು ಕೂಡ ಅಭಿಮಾನಿಗಳು ಚಿಂತಿಸಿದ್ದಾರೆ..