Chaitra Achar: ಮತ್ತೊಮ್ಮೆ ಬೋಲ್ಡ್ ಫೋಟೊಶೂಟ್ ಮೂಲಕ ಯುವಕರ ಎದೆ ಬಡಿತ ಹೆಚ್ಚಿಸಿದ ʼಟೋಬಿʼ ನಟಿ ಚೈತ್ರಾ ಆಚಾರ್
'ಮಹಿರಾ', 'ಟೋಬಿ','ಸಪ್ತ ಸಾಗರದಾಚೆ ಎಲ್ಲೋʼ ಸೈಡ್ ಬಿ ಸಿನಿಮಾ ಮೂಲಕ ಗಮನ ಸೆಳೆದ ನಟಿ ಚೈತ್ರಾ ಆಚಾರ್ ಅವರಿಗೆ ಸ್ಯಾಂಡಲ್ವುಡ್ ಮಾತ್ರವಲ್ಲದೆ ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿಯೂ ಬೇಡಿಕೆ ಇದೆ. ಸಿನಿಮಾದ ನಟನೆಯಷ್ಟೇ ಅವರಿಗೆ ಮಾಡೆಲಿಂಗ್ ಕ್ಷೇತ್ರವೆಂದರೂ ಇಷ್ಟ. ಹೀಗಾಗಿ ನಟಿ ಚೈತ್ರಾ ಆಗಾಗ ವಿಭಿನ್ನ ವಿನ್ಯಾಸದ ಡ್ರೆಸ್ ತೊಟ್ಟು ಫೋಟೊಶೂಟ್ ಕೂಡ ಮಾಡಿಸಿ ಕೊಳ್ಳುತ್ತಿರುತ್ತಾರೆ. ಈ ಬಾರಿ ಕೂಡ ಮಾಡರ್ನ್ ಡ್ರೆಸ್ ಧರಿಸಿ ಹಾಟ್ ಆಗಿ ಪೋಸ್ ನೀಡಿದ್ದಾರೆ.

ಚೈತ್ರಾ ಆಚಾರ್ -


ನಟಿ ಚೈತ್ರಾ ಆಚಾರ್ ವೈಟ್ ಕಲರ್ ವೆಸ್ಟರ್ನ್ ಔಟ್ ಫಿಟ್ನಲ್ಲಿ ಗ್ಲಾಮರಸ್ ಆಗಿ ಕಂಡು ಬಂದಿದ್ದು ವಿಂಡೊ ಸೈಡ್ ನಿಂತು ಫೋಟೊ ತೆಗೆಸಿಕೊಂಡಿದ್ದಾರೆ. ಮೋಹಕ ನೋಟದಲ್ಲಿ ಮಾದಕ ನಗು ಬೀರುತ್ತಿರುವ ಈ ಫೋಟೊದಲ್ಲಿ ಅವರು ಸಖತ್ ಹಾಟ್ ಆಗಿ ಕಂಡಿದ್ದಾರೆ.

ವೈರಲ್ ಆದ ಮತ್ತೊಂದು ಫೋಟೊದಲ್ಲಿ ನಟಿ ಚೈತ್ರಾ ಮೇಕ್ ಓವರ್ ಮಾಡಿಸುತ್ತಿರುವುದು ಕಂಡುಬಂದಿದೆ. ವೈಟ್ ಕಲರ್ ಕಾಟನ್ ಪ್ಲಾಝಾ ಹಾಗೂ ಸ್ಲೀವ್ ಲೆಸ್ ಸ್ಪೋರ್ಟ್ಸ್ ಬ್ರಾ ಮಾದರಿಯ ಬಟ್ಟೆಯನ್ನು ಅವರು ತೊಟ್ಟಿದ್ದಾರೆ. ಅವರ ಡ್ರೆಸ್ ಹಾಗೂ ಮೇಕಪ್ ಅನ್ನು ಮಾಡಿಸಿಕೊಳ್ಳುತ್ತಿರುವ ಈ ಫೋಟೊ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನಟಿ ಚೈತ್ರಾ ಆಚಾರ್ ಅವರ ಬ್ಲ್ಯಾಕ್ ಆ್ಯಂಡ್ ವೈಟ್ ಫೋಟೊ ಕೂಡ ವೈರಲ್ ಆಗಿದೆ. ರೆಟ್ರೋ ಕಾಲದ ಹೀರೋಯಿನ್ನಂತೆ ಈ ಫೋಟೊದಲ್ಲಿ ನಟಿ ಚೈತ್ರಾ ಕಾಣಿಸಿಕೊಂಡಿದ್ದಾರೆ. ಬ್ಲ್ಯಾಕ್ ಆ್ಯಂಡ್ ವೈಟ್ನಲ್ಲಿ ಈ ಫೋಟೊ ತೆಗೆಸಿಕೊಂಡ ಕಾರಣ ಬ್ಯಾಕ್ ಗ್ರೌಂಡ್ ಬ್ಲರ್ ಎಫೆಕ್ಟ್ನಲ್ಲಿ ಅವರು ಸಖತ್ ಕ್ಯೂಟ್ ಹಾಗೂ ಗ್ಲಾಮರಸ್ ಆಗಿ ಕಂಡಿದ್ದಾರೆ.

ವೈರಲ್ ಆದ ಇನ್ನೊಂದು ಫೋಟೊದಲ್ಲಿ ನಟಿ ಚೈತ್ರಾ ಆಚಾರ್ ಸ್ಲಿಮ್ ಆ್ಯಂಡ್ ಟ್ರಿಮ್ ಆಗಿ ಕಂಡಿದ್ದಾರೆ. ಸಿಂಪಲ್ ಮೇಕಪ್ ಹಾಗೂ ಯಾವುದೆ ಆಭರಣ ತೊಡದ ಇವರ ಈ ಲುಕ್ ಪಡ್ಡೆ ಹುಡುಗರ ನಿದ್ದೆ ಕದಿಯುವಂತಿದೆ. ಅವರ ಹೇರ್ ಸ್ಟೈಲ್ ಕೂಡ ಸೂಟ್ ಆಗುವಂತಿದೆ.

ನಟಿ ಚೈತ್ರಾ ಆಚಾರ್ ಇನ್ನೊಂದು ಫೋಟೊದಲ್ಲಿ ಕ್ಯಾಂಡಿಡ್ ಆಗಿ ಪೋಸ್ ನೀಡಿದ್ದಾರೆ. ಈ ಫೋಟೊದಲ್ಲಿ ಅವರ ಬ್ಯಾಕ್ ಗ್ರೌಂಡ್ ಥೀಂ ಕೂಡ ಹೈಲೈಟ್ ಆಗಿದೆ. ಅವರು ವಿಂಡೋ ಸೈಡ್ನಲ್ಲಿ ಈ ಫೋಟೊ ತೆಗೆಸಿಕೊಂಡಿದ್ದು ಸುತ್ತಲಿನ ಹಸುರು, ನಗರ ಪರಿಸರದ ನಡುವೆ ನದಿ ತೀರ, ಪ್ರಕೃತಿ ಎಲ್ಲವೂ ಸುಂದರವಾಗಿ ಕಂಡಿದೆ.