ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Pranitha Subhash: ಮುಖ್ಯಮಂತ್ರಿಯನ್ನು ಭೇಟಿಯಾದ ನಟಿ ಪ್ರಣಿತಾ ಸುಭಾಷ್‌

Pranitha Meets Siddaramaiah: ದರ್ಶನ್‌ ಅಭಿನಯದ 'ಪೊರ್ಕಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ ಪ್ರವೇಶಿಸಿ ಸದ್ಯ ಪಂಚಭಾಷಾ ತಾರೆ ಎನಿಸಿಕೊಂಡಿರುವ ಪ್ರಣಿತಾ ಸುಭಾಷ್‌ ತಾಯ್ತನದ ಖುಷಿಯಲ್ಲಿದ್ದಾರೆ. ಇತ್ತೀಚೆಗೆ ಗಂಡು ಮಗುವಿಗೆ ಜನ್ಮ ನೀಡಿದ ಅವರು ಸದ್ಯ ಚಿತ್ರರಂಗಕ್ಕೆ ಕಂಬ್ಯಾಕ್‌ ಮಾಡುವ ಸಿದ್ಧತೆಯಲ್ಲಿದ್ದಾರೆ. ಈ ಮಧ್ಯೆ ತಮ್ಮ ಮಗನ ನಾಮಕರಣ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಹ್ವಾನ ಪತ್ರಿಕೆ ನೀಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪ್ರಣಿತಾ ಸುಭಾಷ್‌.
1/5

ಮುಖ್ಯಮಂತ್ರಿಯನ್ನೂ ಭೇಟಿಯಾದ ಪ್ರಣಿತಾ

ಬೆಂಗಳೂರು: ಬಹುಭಾಷಾ ಕಲಾವಿದೆ, ಸ್ಯಾಂಡಲ್‌ವುಡ್‌ ನಟಿ ಪ್ರಣಿತಾ ಸುಭಾಷ್‌ ಸದ್ಯ ನಟನೆಗೆ ಬ್ರೇಕ್‌ ಕೊಟ್ಟು ಇಬ್ಬರು ಮಕ್ಕಳ ಲಾಲನೆ-ಪಾಲನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ನಟಿಸದಿದ್ದರೂ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಆ್ಯಕ್ಟಿವ್‌ ಆಗಿದ್ದಾರೆ. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ.

2/5

ಕಾರಣವೇನು?

ಸಿದ್ದರಾಮಯ್ಯ ಅವರನ್ನು ಭೇಟಿಯಾದ ಪ್ರಣಿತಾ ಈ ವಿಚಾರವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಅವರು ಮುಖ್ಯಮಂತ್ರಿಯನ್ನು ಭೇಟಿಯಾಗಿದ್ದೇಕೆ? ಅವರು ರಾಜಕೀಯಕ್ಕೆ ಬರುತ್ತಾರ? ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ. ರಾಜಕೀಯ ಕಾರಣಕ್ಕಾಗಿ ಅವರ ಈ ಭೇಟಿ ನಡೆದಿಲ್ಲ.

3/5

ನಾಮಕರಣ ಸಮಾರಂಭಕ್ಕೆ ಆಹ್ವಾನ

ಪ್ರಣಿತಾ ಅವರ ಮಗನ ನಾಮಕರಣ ಸಭಾರಂಭ ಏ. 20ರಂದು ನಡೆದಿದೆ. ಈ ಹಿನ್ನೆಲೆಯಲ್ಲಿ ಅವರು ಖುದ್ದಾಗಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಆಹ್ವಾನ ಪತ್ರಿಕೆ ನೀಡಿದ್ದಾರೆ. ಈ ವೇಳೆ ಮಂಡಿ ನೋವಿನಿಂದ ಬಳಲುತ್ತಿರುವ ಮುಖ್ಯಮಂತ್ರಿ ಅವರ ಆರೋಗ್ಯವನ್ನೂ ನಟಿ ವಿಚಾರಿಸಿದ್ದಾರೆ.

4/5

ಇಬ್ಬರು ಮಕ್ಕಳು

ಚಿತ್ರರಂಗದ ಉತ್ತುಂಗದಲ್ಲಿರುವಾಗಲೇ ಪ್ರಣಿತಾ 2021ರಲ್ಲಿ ಹಸೆಮಣೆಗೇರಿದರು. ನಿತಿನ್‌ ರಾಜು ಎಂಬವರನ್ನು ವರಿಸಿದ ಪ್ರಣಿತಾ ಅವರಿಗೆ ಈಗ ಇಬ್ಬರು ಮಕ್ಕಳಿದ್ದಾರೆ. 2022ರ ಜೂನ್‌ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಪ್ರಣಿತಾ-ನಿತಿನ್‌ ದಂಪತಿಗೆ ಗಂಡು ಮಗು ಜನಿಸಿತ್ತು.

5/5

ಪ್ಯಾರಿಸ್‌ ಫ್ಯಾಷನ್‌ ವೀಕ್‌ನಲ್ಲಿ ಮಿಂಚು

ಪ್ರಣಿತಾ 2 ಮಕ್ಕಳ ತಾಯಿಯಾದರೂ ಫಿಟ್‌ನೆಸ್‌ ಕಾಯ್ದುಕೊಂಡಿದ್ದಾರೆ. ಇದೇ ಕಾರಣಕ್ಕೆ ಅವರನ್ನು ಸಂತೂರ್‌ ಮಮ್ಮಿ ಎಂದೇ ಕರೆಯಲಾಗುತ್ತದೆ. ಇತ್ತೀಚೆಗೆ ಅವರು ಫ್ರಾನ್ಸ್‌ನಲ್ಲಿ ನಡೆದ ಜಗತ್ತಿನ ಪ್ರತಿಷ್ಠಿತ ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ಭಾಗಿಯಾಗಿದ್ದರು. ಈ ಪ್ರತಿಷ್ಠಿತ ಫ್ಯಾಷನ್ ವೀಕ್‌ನಲ್ಲಿ ಭಾಗವಹಿಸಿದ ಕನ್ನಡದ ಮೊದಲ ನಟಿ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದ್ದ ಅವರು ಸಖತ್‌ ಹಾಟ್‌ ಆಗಿ ಕಾಣಿಸಿಕೊಂಡಿದ್ದರು.

Ramesh Ballamoole

View all posts by this author