ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Actress Sreeleela: ನಟಿ ಶ್ರೀಲೀಲಾ ಹೊಸ ಫೋಟೋ ಶೂಟ್‌; ಹೇಗಿವೆ ನೋಡಿ ಗ್ಲಾಮರ್‌ ಗೊಂಬೆಯ ಫೋಟೋಸ್‌

Actress Sreeleela: ಶ್ರೀಲೀಲಾ ಪ್ರಸ್ತುತ ಟಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ. ಸ್ಯಾಂಡಲ್‌ವುಡ್‌ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿಗೆ ತೆಲುಗು ಸಿನಿ ವಲಯದಲ್ಲಿ ಸಖತ್‌ ಡಿಮ್ಯಾಂಡ್‌ ಇದೆ. ಸದ್ಯ ಈ ನಟಿ ಐದಾರು ಚಿತ್ರಗಳೊಂದಿಗೆ ಬ್ಯುಸಿಯಾಗಿದ್ದು, ಜೂನಿಯರ್ಸ್‌, ಮಾಸ್‌ ಜಾತರ, ಲೆನಿನ್‌ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

1/7

ಟಾಲಿವುಡ್‌ ಹಾಗೂ ಬಾಲಿವುಡ್‌ನಲ್ಲಿ ಬಹು ಬೇಡಿಕೆಯ ನಟಿಯಾಗಿರುವ ಶ್ರೀಲೀಲಾ ಇತ್ತೀಚೆಗೆ ಫೋಟೋ ಶೂಟ್‌ಗಳ ಮೂಲಕ ಮಿಂಚುತ್ತಿದ್ದಾರೆ. ಪರಭಾಷೆಗಳ ಪ್ರಮುಖ ಚಿತ್ರಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿರುವ ಈ ಕನ್ನಡದ ನಟಿ, ಇದೀಗ ಮತ್ತೊಂದು ಫೋಟೋ ಶೂಟ್‌ನೊಂದಿಗೆ ಗಮನ ಸೆಳೆದಿದ್ದಾರೆ.

2/7

ಸದ್ಯ ಇವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಅಭಿಮಾನಿಗಳ ಕಡೆಯಿಂದ ಭರ್ಜರಿ ಲೈಕ್‌ಗಳು ಸಿಗುತ್ತಿವೆ. ಫೋಟೋ ಶೂಟ್‌ನಲ್ಲಿ ಹಾಫ್‌ ಶೋಲ್ಡರ್‌ ಫ್ರಾಕ್‌ನಲ್ಲಿ ಕಾಣಿಸಿಕೊಂಡಿರುವ ಶ್ರೀಲೀಲಾ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ.

3/7

ಶ್ರೀಲೀಲಾ ಪ್ರಸ್ತುತ ಟಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ. ಸ್ಯಾಂಡಲ್‌ವುಡ್‌ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿಗೆ ತೆಲುಗು ಸಿನಿ ವಲಯದಲ್ಲಿ ಸಖತ್‌ ಡಿಮ್ಯಾಂಡ್‌ ಇದೆ.

4/7

ಸದ್ಯ ಈ ನಟಿ ಐದಾರು ಚಿತ್ರಗಳೊಂದಿಗೆ ಬ್ಯುಸಿಯಾಗಿದ್ದು, ಜೂನಿಯರ್ಸ್‌, ಮಾಸ್‌ ಜಾತರ, ಲೆನಿನ್‌ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

5/7

ಮತ್ತೊಂದೆಡೆ ಬಾಲಿವುಡ್‌ ನಟ ಕಾರ್ತಿಕ್‌ ಆರ್ಯನ್ ನಟನೆಯ ಚಿತ್ರದಲ್ಲಿ ಇವರು ನಾಯಕಿಯಾಗಿದ್ದು, ಕಾರ್ತಿಕ್‌ ಆರ್ಯನ್ ಜತೆ ಡೇಟಿಂಗ್‌ನಲ್ಲಿದ್ದಾರೆ ಎನ್ನಲಾಗುತ್ತಿದೆ. ಪರಾಶಕ್ತಿ ಎಂಬ ತಮಿಳು ಚಿತ್ರದಲ್ಲೂ ಇವರು ನಟಿಸುತ್ತಿದ್ದಾರೆ.

6/7

ಇನ್ನು ಕನ್ನಡದ ʻಕಿಸ್‌ʼ ಸಿನಿಮಾ ಮೂಲಕ ಪಡ್ಡೆಹುಡುಗರ ಹಾರ್ಟ್‌ ಕದ್ದ ಚೆಲುವೆ ನಟಿ ಶ್ರೀಲೀಲಾ, ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳಲ್ಲಿ ನಟಿ ಶ್ರೀಲೀಲಾ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಅವರ ಹಳದಿ ಶಾಸ್ತ್ರದ ಫೊಟೋಗಳು ವೈರಲ್‌ ಆಗಿದ್ದವು. ಮದುವೆ ಹಾಗೂ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದೆಲ್ಲಾ ಹೇಳಲಾಗುತ್ತಿತ್ತು. ಶ್ರೀಲೀಲಾ ಅರಿಶಿನ ಶಾಸ್ತ್ರ ಮಾಡಿಕೊಂಡಿದ್ದು ನಿಜಾ. ಆದರೆ ಇದು ಅವರ ಹುಟ್ಟುಹಬ್ಬದ ಸೆಲೆಬ್ರೇಷನ್ ಆಗಿತ್ತು.

7/7

ಜೂನ್‌ 14 ರಂದು ಶ್ರೀಲೀಲಾ ಹುಟ್ಟುಹಬ್ಬ. ಹೀಗಾಗಿ ಅವರ ತಾಯಿ ಹುಟ್ಟುಹಬ್ಬಕ್ಕೂ ಮುಂಚಿತವಾಗಿಯೇ ಶ್ರೀಲೀಲಾ ಅವರ ಪ್ರೀ-ಬರ್ತ್‌ ಡೇಯನ್ನು ಅದ್ಧೂರಿಯಾಗಿ ಇತ್ತೀಚೆಗೆ ಆಚರಿಸಿದ್ದರು. ಶ್ರೀಲೀಲಾ ಕೆನ್ನೆಗೆ ಅರಿಶಿನ ಹಚ್ಚಿಕೊಂಡು, ಥೇಟ್‌ ವಧುವಿನಂತೆ ಕಂಗೊಳಿಸಿದ್ದರು.