ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

WTC Final: ಭಾರತ ತಂಡದ 14 ವರ್ಷಗಳ ಹಳೆಯ ವಿಶ್ವ ದಾಖಲೆಯನ್ನು ಮುರಿದ ದಕ್ಷಿಣ ಆಫ್ರಿಕಾ!

ಆಸ್ಟ್ರೇಲಿಯಾ ತಂಡವನ್ನು 5 ವಿಕೆಟ್‌ಗಳಿಂದ ಮಣಿಸುವ ಮೂಲಕ ದಕ್ಷಿಣ ಆಫ್ರಿಕಾ ತಂಡ ಚೊಚ್ಚಲ ಟೆಸ್ಟ್‌ ಚಾಂಪಿಯನ್‌ಷಿಪ್‌ ಮುಡಿಗೇರಿಸಿಕೊಂಡಿದೆ. ಆ ಮೂಲಕ ಬರೋಬ್ಬರಿ 27 ವರ್ಷಗಳ ಬಳಿಕ ಹರಿಣ ಪಡೆ ಐಸಿಸಿ ಟೂರ್ನಿಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಈ ಗೆಲುವಿನ ಮೂಲಕ ದಕ್ಷಿಣ ಆಫ್ರಿಕಾ ತಂಡ ಭಾರತ ತಂಡದ ವಿಶ್ವ ದಾಖಲೆಯನ್ನು ಮುರಿದಿದೆ.

1/6

ದಕ್ಷಿಣ ಆಫ್ರಿಕಾ ಚಾಂಪಿಯನ್‌

2023-25ರ ಸಾಲಿನ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನಲ್ಲಿ ತೆಂಬಾ ಬವೂಮ ನಾಯಕತ್ವದ ದಕ್ಷಿಣ ಆಫ್ರಿಕಾ ತಂಡ ಚಾಂಪಿಯನ್‌ ಆಗಿದೆ. ಜೂನ್‌ 14 ರಂದು ಅಂತ್ಯವಾದ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ದ ದಕ್ಷಿಣ ಆಫ್ರಿಕಾ ತಂಡ 5 ವಿಕೆಟ್‌ ಜಯ ಗಳಿಸಿತು.

2/6

282 ರನ್‌ಗಳ ಚೇಸ್‌ ಮಾಡಿದ ಹರಿಣ ಪಡೆ

ಆಸ್ಟ್ರೇಲಿಯಾ ನೀಡಿದ್ದ 282 ರನ್‌ಗಳ ಗುರಿಯನ್ನು ದಕ್ಷಿಣ ಆಫ್ರಿಕಾ ತಂಡ 5 ವಿಕೆಟ್‌ಗಳನ್ನು ಕಳೆದುಕೊಂಡು ತಲುಪಿತು. ಏಡೆನ್‌ ಮಾರ್ಕ್ರಮ್‌ 136 ರನ್‌ಗಳನ್ನು ಕಲೆ ಹಾಕಿದರೆ, ತೆಂಬಾ ಬವೂಮ 66 ರನ್‌ಗಳನ್ನು ಗಳಿಸಿದ್ದರು.

3/6

27 ವರ್ಷಗಳ ಬಳಿಕ ಐಸಿಸಿ ಟ್ರೋಫಿ

ದಕ್ಷಿಣ ಆಫ್ರಿಕಾ ತಂಡ 1998ರಲ್ಲಿ ಕೊನೆಯ ಬಾರಿ ಐಸಿಸಿ ನಾಕ್‌ಔಟ್‌ ಟ್ರೋಫಿಯನ್ನು ಗೆದ್ದಿತ್ತು. ಇದೀಗ ಬರೋಬ್ಬರಿ 27 ವರ್ಷಗಳ ಬಳಿಕ ಐಸಿಸಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ.

4/6

ಭಾರತದ ವಿಶ್ವ ದಾಖಲೆ ಮುರಿದ ಆಫ್ರಿಕಾ

282 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಚೇಸ್‌ ಮಾಡುವ ಮೂಲಕ ದಕ್ಷಿಣ ಆಫ್ರಿಕಾ ತಂಡ ಭಾರತ ತಂಡದ 14 ವರ್ಷಗಳ ವಿಶ್ವ ದಾಖಲೆಯನ್ನು ಮುರಿದಿದೆ.

5/6

ನೂತನ ದಾಖಲೆ ಬರೆದ ಹರಿಣ ಪಡೆ

ಐಸಿಸಿ ಟೂರ್ನಿಯ ಫೈನಲ್‌ನಲ್ಲಿ ಅತಿ ಹೆಚ್ಚು ರನ್‌ಗಳ ಗುರಿಯನ್ನು ಯಶಸ್ವಿಯಾಗಿ ತಲುಪಿದ ಮೊದಲ ತಂಡ ಎಂಬ ವಿಶ್ವ ದಾಖಲೆಯನ್ನು ತೆಂಬಾ ಬವೂಮ ನಾಯಕತ್ವದ ದಕ್ಷಿಣ ಆಫ್ರಿಕಾ ತಂಡ ಬರೆದಿದೆ.

6/6

275 ರನ್‌ಗಳನ್ನು ಚೇಸ್‌ ಮಾಡಿದ್ದ ಭಾರತ

2021ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಶ್ರೀಲಂಕಾ ನೀಡಿದ್ದ 275 ರನ್‌ಗಳ ಗುರಿಯನ್ನು ಎಂಎಸ್‌ ಧೋನಿ ನಾಯಕತ್ವದ ಭಾರತ ತಂಡ ಯಶಸ್ವಿಯಾಗಿ ಚೇಸ್‌ ಮಾಡಿತ್ತು.