Allu Arjun: ಸೆಟ್ಟೇರುತ್ತಿದೆ ಅಲ್ಲು ಅರ್ಜುನ್- ಅಟ್ಲೀ ಕಾಂಬಿನೇಶನ್‌ನಲ್ಲಿ ಫ್ಯಾನ್ ಇಂಡಿಯಾ ಚಿತ್ರ- ಯಾರಾಗ್ತಾರೆ ʻಪುಷ್ಪಾʼಗೆ ಜೋಡಿ?
Allu Arjun Next Movie: ಐಕಾನಿಕ್ ಸ್ಟಾರ್ ಅಲ್ಲು ಅರ್ಜುನ್ ದಕ್ಷಿಣ ಭಾರತ ಸಕ್ಸೆಸ್‌ಫುಲ್ ನಿರ್ದೇಶಕ ಅಟ್ಲೀ ಜೊತೆ ಕೈಜೋಡಿಸಲು ಸಜ್ಜಾಗಿದ್ದಾರೆ. ಏ.8ರಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡ ಅಲ್ಲು ಅರ್ಜುನ್ ತಮ್ಮ ಮುಂದಿನ ಬಿಗ್ ಬಜೆಟ್ ಚಿತ್ರವನ್ನು ಘೋಷಿಸಿದ್ದರು. ಚಿತ್ರದ ಟೈಟಲ್ ಇನ್ನೂ ಘೋಷಣೆಯಾಗಿಲ್ಲ. ಟೈಟಲ್‌ನಷ್ಟೇ ಕುತೂಹಲ ಕೆರಳಿಸಿದ ವಿಚಾರವೆಂದರೆ ಅಲ್ಲು ಅರ್ಜುನ್‌ಗೆ ಈ ಸಿನಿಮಾದಲ್ಲಿ ಜೋಡಿ ಯಾರೆಂಬುದು. ಈಗಾಗಲೇ ಕೆಲವು ಸ್ಟಾರ್ ನಟಿಯರ ಹೆಸರು ಕೇಳಿಬರುತ್ತಿದೆ.
ಪ್ರಿಯಾಂಕ ಚೋಪ್ರಾ
ಸುದ್ದಿಯಲ್ಲಿ ಬಂದ ಮೊದಲ ಹೆಸರು ಪ್ರಿಯಾಂಕಾ ಚೋಪ್ರಾ. ವರದಿಯ ಪ್ರಕಾರ, ಚಿತ್ರದಲ್ಲಿ ಹಲವಾರು ನಟಿಯರು ಇರುತ್ತಾರೆ ಮತ್ತು ಅಟ್ಲೀ ಪ್ರಿಯಾಂಕಾ ಅವರನ್ನು ನಾಯಕಿಯರಲ್ಲಿ ಒಬ್ಬರಾಗಿ ನಟಿಸಲು ಸಂಪರ್ಕಿಸಿದ್ದಾರೆ. ಆದರೆ, ವರದಿಗಳ ಪ್ರಕಾರ, ಅವರು ಆ ಆಫರ್ ಅನ್ನು ತಿರಸ್ಕರಿಸಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ.
ಸಮಂತಾ
ಪ್ರಿಯಾಂಕಾ ನಂತರ, ಈ ಚಿತ್ರಕ್ಕಾಗಿ ಸಮಂತಾ ಅವರನ್ನು ಸಂಪರ್ಕಿಸಲಾಗುತ್ತಿದೆ ಎಂಬ ವರದಿಗಳು ಹೊರ ಬರುತ್ತಿವೆ. ಕೆಲವು ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ ಸಮಂತಾ ಅವರನ್ನು ಪ್ರಬಲ ಪಾತ್ರಕ್ಕಾಗಿ ಸಂಪರ್ಕಿಸಲಾಗಿದೆಯೇ ಹೊರತು ನಾಯಕಿಯ ಪಾತ್ರಕ್ಕಲ್ಲ.
ಜಾನ್ವಿ ಕಪೂರ್
ಜಾನ್ವಿ ಕಪೂರ್ ಖಂಡಿತವಾಗಿಯೂ ದಕ್ಷಿಣ ಭಾರತ ಚಲನಚಿತ್ರ ನಿರ್ಮಾಪಕರ ಫೇವರಿಟ್ ಸ್ಟಾರ್ ನಟಿ ಎಂದೆನಿಸಿಕೊಂಡಿದ್ದಾರೆ. ದೇವರ ಮತ್ತು ಪೆಡ್ಡಿ ನಂತರ, ಅಲ್ಲು ಅರ್ಜುನ್ ಅವರ ಚಿತ್ರಕ್ಕೂ ಅವರನ್ನು ಸಂಪರ್ಕಿಸಲಾಗಿದೆ ಎಂದು ವರದಿಯಾಗಿದೆ.
ಶ್ರದ್ಧಾ ಕಪೂರ್
ಪ್ರಭಾಸ್‌ರಂತಹ ಪ್ಯಾನ್-ಇಂಡಿಯಾ ತಾರೆಯೊಂದಿಗೆ ಕೆಲಸ ಮಾಡಿದ ನಂತರ, ಶ್ರದ್ಧಾ ಅಲ್ಲು ಅರ್ಜುನ್ ಅವರೊಂದಿಗೆ ಸಿನಿ ಪ್ರಣಯಕ್ಕೆ ಮುಂದಾಗುತ್ತಾರಾ ಎಂಬ ಸುದ್ದಿಗಳು ಬಹಳಷ್ಟು ಕೇಳಿಬರುತ್ತಿವೆ. ಚಿತ್ರದಲ್ಲಿ ನಾಯಕ ನಟಿಯಾಗಿ ನಟಿಸಲು ಸಂಪರ್ಕಿಸಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ದಿಶಾ ಪಟಾನಿ
ದಿಶಾ ಪಟಾನಿ ಈ ಹಿಂದೆ ತೆಲುಗು ಚಿತ್ರಗಳಲ್ಲೂ ಕೆಲಸ ಮಾಡಿದ್ದಾರೆ. ವರದಿಯ ಪ್ರಕಾರ, ಅಟ್ಲೀ ಮತ್ತೊಬ್ಬ ಮಹಿಳಾ ನಾಯಕಿಯಾಗಿ ಶ್ರದ್ಧಾ ಅಥವಾ ದಿಶಾ ಅವರನ್ನು ಪರಿಗಣಿಸುತ್ತಿದ್ದಾರೆ. ಈಗ, ಯಾವ ನಟಿ ಈ ಪಾತ್ರವನ್ನು ನಿರ್ವಹಿಸುತ್ತಾರೆ ಎಂಬುದೇ ಕುತೂಹಲಕಾರಿ ಸಂಗತಿಯಾಗಿದೆ. ಅಲ್ಲು ಅರ್ಜುನ್-ಅಟ್ಲೀ ಕಾಂಬಿನೇಶನ್ ಚಿತ್ರದಲ್ಲಿ ನೀವು ಯಾವ ನಟಿಯರನ್ನು ನೋಡಲು ಬಯಸುತ್ತೀರಿ?