Amruthavarshini actress Rajini: ಜಿಮ್ ಟ್ರೈನರ್ ಅರುಣ್ ಜೊತೆ ನಟಿ ರಜಿನಿ ಮದುವೆ: ಫೋಟೋಸ್ ಇಲ್ಲಿದೆ!
Actress Rajini: ಸಿನಿಮಾ, ಧಾರಾವಾಹಿ, ರಿಯಾಲಿಟಿ ಶೋ ನಿಂದ ಪ್ರಸಿದ್ಧರಾದ ನಟಿ ರಜಿನಿ ಸೋಶಿಯಲ್ ಮೀಡಿಯಾದಲ್ಲಿ ಕೂಡ ಬಹಳ ಆ್ಯಕ್ಟಿವ್ ಇದ್ದಾರೆ. ಜಿಮ್ ಟ್ರೇನರ್ ಅರುಣ್ ಅವರ ಜೊತೆಗೆ ಆಗಾಗ ಫನ್ನಿ ವಿಡಿಯೋ, ಪ್ರಮೋಶನಲ್ ವಿಡಿಯೋ ಮಾಡುತ್ತಿರುತ್ತಾರೆ. ಹೀಗಾಗಿ ಇವರಿಬ್ಬರು ಮದುವೆ ಆಗುತ್ತಾರೆ ಎಂದೆ ಹೇಳಲಾಗಿತ್ತು. ಇದೀಗ ಇಬ್ಬರು ವಿವಾಹವಾಗಿದ್ದು ಇವರ ಮದುವೆ ಫೋಟೊಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಅಮೃತ ವರ್ಷಿಣಿ ಧಾರಾವಾಹಿಯಲ್ಲಿ ಅಭಿನಯಿಸುವ ಮೂಲಕ ಕಿರುತೆರೆ ಲೋಕದಲ್ಲಿ ಖ್ಯಾತಿ ಪಡೆದ ನಟಿ ರಜಿನಿ ಅವರು ಅಪಾರ ಅಭಿಮಾನಿಗಳ ಮನಗೆದ್ದಿದ್ದಾರೆ. ಈ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದ ಅವರು ಬಳಿಕ ಹಿರಿತೆರೆಯಲ್ಲಿಯೂ ಕೂಡ ನಟಿಸುವ ಅವಕಾಶ ಪಡೆದಿದ್ದಾರೆ. ಸಿನಿಮಾ, ಧಾರಾವಾಹಿ, ರಿಯಾಲಿಟಿ ಶೋ ನಿಂದ ಪ್ರಸಿದ್ಧರಾದ ಇವರು ಸೋಶಿಯಲ್ ಮಿಡಿಯಾದಲ್ಲಿ ಕೂಡ ಬಹಳ ಆ್ಯಕ್ಟಿವ್ ಇದ್ದಾರೆ. ಜಿಮ್ ಟ್ರೇನರ್ ಅರುಣ್ ಅವರ ಜೊತೆಗೆ ಆಗಾಗ ಫನ್ನಿ ವಿಡಿಯೋ, ಪ್ರಮೋಶನಲ್ ವಿಡಿಯೋ ಮಾಡುತ್ತಿರುತ್ತಾರೆ. ಹೀಗಾಗಿ ಇವರಿಬ್ಬರು ಮದುವೆ ಆಗುತ್ತಾರೆ ಎಂದೆ ಹೇಳಲಾಗಿತ್ತು. ಇದೀಗ ಇಬ್ಬರು ವಿವಾಹವಾಗಿದ್ದು, ಇವರ ಮದುವೆ ಫೋಟೊಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ರಜಿನಿ ಅವರು ತಮ್ಮ ಜಿಮ್ ಟ್ರೈನರ್ ಅರುಣ್ ವೆಂಕಟೇಶ್ ಜೊತೆಗೆ ರೀಲ್ಸ್ ಅಪ್ಲೋಡ್ ಮಾಡುವ ಮೂಲಕವು ಸಾಕಷ್ಟು ಫ್ಯಾನ್ಸ್ ಫಾಲೋವರ್ಸ್ ಅನ್ನು ಹೊಂದಿದ್ದಾರೆ. ಅಭಿಮಾನಿಗಳಿಗೂ ಇವರಿಬ್ಬರ ನಡುವೆ ಏನೊ ಇದೆ ಎಂಬ ಸಂಶಯ ಉಂಟಾಗಿದ್ದು, ಹೀಗಾಗಿ ಈ ಹಿಂದೆಯೇ ಇದರ ಕುರಿತು ರಜಿನಿ ಅವರನ್ನು ಪ್ರಶ್ನಿಸಲಾಗಿತ್ತು. ಆದರೆ ಅವರು ನಾವು ಒಳ್ಳೆ ಸ್ನೇಹಿತರಷ್ಟೇ ಎಂದು ವದಂತಿಗಳನ್ನು ತಳ್ಳಿಹಾಕಿದ್ದಾರೆ. ಈಗ ಸದ್ದಿಲ್ಲದೇ ಇಬ್ಬರು ಹಸೆಮಣೆ ಏರಿದ್ದಾರೆ.
ಬೆಂಗಳೂರಿನಲ್ಲಿ ನವೆಂಬರ್ 10ರಂದು ಬೆಳಗ್ಗೆ ಇವರಿಬ್ಬರ ಮದುವೆ ಬಹಳ ಸರಳವಾಗಿ ನಡೆದಿದೆ. ಮದುವೆಗೆ ಹೆಚ್ಚು ಪ್ರಚಾರ ನೀಡಲಿಲ್ಲ. ಹೀಗಾಗಿ ಸ್ನೇಹಿತರು, ಕುಟುಂಬದವರು ಮತ್ತು ಆಪ್ತರಷ್ಟೇ ಈ ಮದುವೆಯಲ್ಲಿ ಭಾಗಿಯಾಗಿದ್ದಾರೆ. ಅಮೃತವರ್ಷಿಣಿ ಧಾರವಾಹಿಯ ಸೀರಿಯಲ್ ಸೆಲೆಬ್ರಿಟಿಗಳು ಕೂಡ ಮದುವೆಗೆ ಬಂದಿದ್ದು ನವದಂಪತಿಗಳಿಗೆ ಶುಭ ಕೋರಿದ್ದಾರೆ.
ಕ್ರೀಮ್ ಮತ್ತು ಗೋಲ್ಡ್ ಸೀರೆಗೆ ಪರ್ಪಲ್ ಕಲರ್ ಕಾಂಬಿನೇಶನ್ ಇರುವ ಸೀರೆಯಲ್ಲಿ ನಟಿ ಅಮೃತಾ ಅವರು ಟ್ರೆಡಿಶನಲ್ ಲುಕ್ ನಲ್ಲಿ ಕಂಗೊಳಿಸಿದ್ದಾರೆ. ಅರುಣ್ ಕೂಡ ಪೇಟ, ಪಂಚೆ, ಶಲ್ಯ ಬಟ್ಟೆ ಯಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಡಿಫರೆಂಟ್ ಆಗಿ ಕಂಡಿದ್ದಾರೆ. ಇವರ ಫೋಟೊ ಇನ್ ಸ್ಟಾಗ್ರಾಮ್ ನಲ್ಲಿ ವೈರಲ್ ಆಗಿದ್ದು ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ನವ ಮದುಮಕ್ಕಳಿಗೆ ಶುಭಕೋರಿದ್ದಾರೆ. ಈ ಮೂಲಕ ಇಷ್ಟು ದಿನ ಹಬ್ಬಿದ್ದ ಗಾಳಿಸುದ್ದಿಯ ವದಂತಿಗಳು ನಿಜವೆಂದು ಕೂಡ ಕೆಲವರು ಫೋಟೊಗೆ ಕಾಮೆಂಟ್ ಹಾಕಿದ್ದಾರೆ.
ನಟಿ ರಜನಿ ಅವರು ಈ ಹಿಂದೆ ಮದುವೆ ವಿಚಾರದ ಬಗ್ಗೆ ಸಂದರ್ಶನ ಒಂದರಲ್ಲಿ ಮಾತನಾಡಿದ್ದು ಕೂಡ ಇದೆ ಸಂದರ್ಭದಲ್ಲಿ ಹೈಲೈಟ್ ಆಗುತ್ತಿದೆ. ನಮ್ಮನ್ನು ಅರ್ಥ ಮಾಡಿಕೊಳ್ಳುವ ಒಳ್ಳೆಯ ಸ್ನೇಹಿತರನ್ನು ಮದುವೆಯಾಗುವುದು ತಪ್ಪಲ್ಲ.. ನಾವು ಅವರ ಜೊತೆಗೆ ಲೈಫ್ ಲಾಂಗ್ ಖುಷಿಯಿಂದ ಜೀವನ ಮಾಡಬಹುದು ಎಂದು ಹೇಳಿದ್ದರು. ಇದೀಗ ಅವರು ಕೂಡ ತಮ್ಮ ಸ್ನೇಹಿತನನ್ನೆ ಮದುವೆಯಾಗಿದ್ದಾರೆ. ಈ ಮೂಲಕ ಅವರು ಅಂದುಕೊಂಡ ಲೈಫ್ ಪಾರ್ಟ್ ನರ್ ಅವರಿಗೆ ಸಿಕ್ಕಿದ್ದಾರೆ ಎಂದು ಕೂಡ ಅಭಿಮಾನಿಯೊಬ್ಬರು ಫೋಟೊಗೆ ಪ್ರತಿಕ್ರಿಯೆ ನೀಡಿದ್ದಾರೆ.
2012ರಲ್ಲಿ ತೆರೆ ಕಂಡ 'ಅಮೃತವರ್ಷಿಣಿ’ ಸೀರಿಯಲ್ ಇವರ ಪ್ರತಿಭೆಗೆ ಸೂಕ್ತ ಅವಕಾಶ ನೀಡಿತ್ತು. ಬಳಿಕ ‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯಲ್ಲಿಯೂ ಇವರು ಅಭಿನಯಿಸಿದರು. ಅನಂತರ ಡ್ಯಾನ್ಸ್ ರಿಯಾಲಿಟಿ ಶೋ ಹಾಗೂ 'ಮಜಾ ಟಾಕೀಸ್' ಶೋನಲ್ಲಿ ಕಾಣಿಸಿಕೊಂಡರು. ಇತರೆ ಕಾರ್ಯಕ್ರಮ ನಿರೂಪಣೆ ಕೂಡ ಮಾಡಿದ್ದಾರೆ. ಆತ್ಮಬಂಧನ ಧಾರವಾಹಿಯಲ್ಲಿ ಮುಖ್ಯ ಪಾತ್ರ ಮಾಡಿದ್ದಾರೆ. ಇತ್ತೀಚೆಗಷ್ಟೇ ನೀ ಇರಲು ಜೊತೆಯಲ್ಲಿ ಹೆಸರಿನ ಧಾರವಾಹಿಯಲ್ಲಿ ನೆಗೆಟಿವ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದರು. ಇವರ ಪತಿ ಅರುಣ್ ಗೌಡ ಅವರು ಜಿಮ್ ಟ್ರೇನರ್ ಆಗಿದ್ದಾರೆ ಅದರ ಜೊತೆಗೆ ಕೆಲವು ಆ್ಯಡ್ ಪ್ರಮೋಶನಲ್ ವಿಡಿಯೋ ಕೂಡ ಇವರು ಮಾಡುತ್ತಿರುತ್ತಾರೆ.