ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Anjana Arjun: ವಿದೇಶಿ ಹುಡುಗನ ಜತೆ ಸಪ್ತಪದಿ ತುಳಿಯಲು ಅರ್ಜುನ್ ಸರ್ಜಾ ಪುತ್ರಿ ಸಜ್ಜು; ಇಲ್ಲಿವೆ ಭಾವಿ ದಂಪತಿಯ ಫೋಟೋಸ್‌

Anjana Arjun: ನಟ ಅರ್ಜುನ್ ಸರ್ಜಾ ಅವರ ದ್ವಿತೀಯ ಪುತ್ರಿ ಅಂಜನಾ ಅರ್ಜುನ್ ಅವರು ವಿದೇಶಿ ಯುವಕನೊಡನೆ ಎಂಗೇಜ್ ಆಗಿದ್ದಾರೆ. ಅರ್ಜುನ್ ಸರ್ಜಾ ದಂಪತಿಯೂ ಉಂಗುರ ಬದಲಿಸುವ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ಭಾವಿ ದಂಪತಿಯ ಫೋಟೋಸ್‌ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿವೆ.

1/6

ಖ್ಯಾತ ನಟ ಅರ್ಜುನ್ ಸರ್ಜಾ ಅವರ ದ್ವಿತೀಯ ಪುತ್ರಿ ಅಂಜನಾ ಅರ್ಜುನ್ ಅವರು ವಿದೇಶಿ ಹುಡುಗನ ಜತೆ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ. 13 ವರ್ಷದಿಂದ ಪ್ರೀತಿಸುತ್ತಿದ್ದ ಹುಡುಗನ ಜತೆ ಹಸೆಮಣೆ ಏರಲು ಅಂಜನಾ ನಿರ್ಧರಿಸಿದ್ದು, ಇಟಲಿಯಲ್ಲಿ ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಎಂಗೇಜ್‌ಮೆಂಟ್‌ ನಡೆದಿದೆ.

2/6

ಇತ್ತೀಚೆಗೆ ಅರ್ಜುನ್ ಸರ್ಜಾ ಅವರ ಮೊದಲ ಪುತ್ರಿ ಐಶ್ವರ್ಯಾ ಅವರ ವಿವಾಹ ಅದ್ಧೂರಿಯಾಗಿ ನೆರವೇರಿತ್ತು. ಇದೀಗ ಎರಡನೇ ಪುತ್ರಿ ತಮ್ಮ ಗೆಳೆಯನ ಜತೆ ಫೋಟೋ ಶೂಟ್‌ ಮಾಡಿಸಿಕೊಂಡು, ಗುಡ್‌ನ್ಯೂಸ್‌ ಹಂಚಿಕೊಂಡಿದ್ದಾರೆ.

3/6

ಅಂಜನಾ ವಿದೇಶಿ ಹುಡುಗ ಐಸೇಯ್ (Isaiah) ಜೊತೆ 13 ವರ್ಷದಿಂದ ಪ್ರೀತಿಯಲ್ಲಿದ್ದರು. 13 ವರ್ಷದ ಲವ್ ಸ್ಟೋರಿಯನ್ನ ಮನೆಯವರಿಗೆ ತಿಳಿಸಿದ್ದು, ಆ ಹುಡುಗನ ಜೊತೆ ಅಂಜನಾ ಪ್ರೀತಿಗೆ ಮನೆಯವರು ಒಪ್ಪಿಗೆ ಸೂಚಿಸಿದ್ದಾರೆ.

4/6

ಅಂಜನಾ ಮುದ್ದಿನ ಹುಡುಗನಿಗೆ ಶುಭಾಶಯ ತಿಳಿಸಿರುವ ಅರ್ಜುನ್ ಸರ್ಜಾ ಕುಟುಂಬ ಕೂಡ ಫೋಟೋ ಶೂಟ್‌ನಲ್ಲಿ ಭಾಗಿಯಾಗಿ ಸಖತ್ ಪೋಸ್ ನೀಡಿದೆ. ಗೆಳೆಯನ ಫೋಟೋ ಬಿಡುಗಡೆ ಮಾಡಿರುವ ಅಂಜನಾ ಅವರು, ಸದ್ಯದಲ್ಲೇ ಗುಡ್‌ನ್ಯೂಸ್‌ ಬಗ್ಗೆ ಕೂಡ ಅಪ್ಡೇಟ್ ನೀಡಲಿದ್ದಾರೆ.

5/6

ಅರ್ಜುನ್ ಸರ್ಜಾ ಮಾತ್ರವೇ ಅಲ್ಲದೆ ಅರ್ಜುನ್ ಅವರ ಮೊದಲ ಪುತ್ರಿ ಐಶ್ವರ್ಯಾ ಸರ್ಜಾ ಮತ್ತು ಅವರ ಪತಿ ಸಹ ಈ ಎಂಗೇಜ್​ಮೆಂಟ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

6/6

ಅಂಜನಾ ಅರ್ಜುನ್ ಈ ಹಿಂದೆ ಅವರ ಅಕ್ಕನ ಮದುವೆಗೂ ತಮ್ಮ ಬಾಯ್​ಫ್ರೆಂಡ್ ಅನ್ನು ಕರೆದುಕೊಂಡು ಬಂದಿದ್ದರು. ಅವರೊಟ್ಟಿಗೆ ಚಿತ್ರ, ವಿಡಿಯೋಗಳನ್ನು ಹಂಚಿಕೊಂಡಿದ್ದರು. ಈಗ ಅಧಿಕೃತವಾಗಿ ಮದುವೆ ಆಗಲಿದ್ದಾರೆ.