ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ayodhya Ram Temple: ಕಳೆಗಟ್ಟಿದ ಅಯೋಧ್ಯೆ; ರಾಮ ಮಂದಿರದಲ್ಲಿ ನಾಳೆ ಧ್ವಜಾರೋಹಣ: ಪ್ರಧಾನಿ ನರೇಂದ್ರ ಮೋದಿ ಭಾಗಿ

ಕಳೆದ ವರ್ಷ ಪ್ರಾಣ ಪ್ರತಿಷ್ಠೆಯ ಮೂಲಕ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಉತ್ತರ ಪ್ರದೇಶದ ಅಯೋಧ್ಯೆ ರಾಮ ಮಂದಿರ ಇದೀಗ ಮತ್ತೊಮ್ಮೆ ಜಗತ್ತಿನ ಗಮನ ಸೆಳೆಯಲು ಸಜ್ಜಾಗಿದೆ. ರಾಮ ಮಂದಿರದ ನಿರ್ಮಾನ ಕಾರ್ಯ ಪೂರ್ಣಗೊಂಡಿದ್ದು, ಅದರ ಭಾಗವಾಗಿ ನವೆಂಬರ್‌ 25ರಂದು ಧ್ವಜಾರೋಹರಣ ಕಾರ್ಯಕ್ರಮ ನಡೆಯಲಿದೆ. ಇದಕ್ಕಾಗಿ ಸಕಲ ಸಿದ್ಧತೆ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ಮಾಡಲಿದ್ದಾರೆ. ಸದ್ಯ ಇಡೀ ನಗರ ಕೇಸರಿ ಬಣ್ಣದಲ್ಲಿ ಕಂಗೊಳಿಸುತ್ತಿದೆ.

ಅಯೋಧ್ಯೆ ರಾಮ ಮಂದಿರ.
1/5

22 ಅಡಿಯ ಧ್ವಜ

ಅಯೋಧ್ಯೆಯಲ್ಲಿ 22 ಅಡಿಯ ಧಾರ್ಮಿಕ ಧ್ವಜವನ್ನು ಆರೋಹಣ ಮಾಡಲು ಸಿದ್ಧತೆ ನಡೆಸಲಾಗಿದೆ. ಧಾರ್ಮಿಕವಾಗಿ ಬಹಳ ಮಹತ್ವ ಹೊಂದಿದ ಈ ಕಾರ್ಯಕ್ರಮಕ್ಕೆ ಪೂರಕವಾಗಿ ಹೋಮ-ಹವನ ಹಲವು ದಿನಗಳಿಂದ ನಡೆಯುತ್ತಿದೆ.

2/5

ಪ್ರಧಾನಿ ಕಚೇರಿ ಹೇಳಿದ್ದೇನು?

"ಈ ಕಾರ್ಯಕ್ರಮವು ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಶುಭ ಪಂಚಮಿಯಂದು, ಶ್ರೀ ರಾಮ ಮತ್ತು ಸೀತಾ ಮಾತೆಯ ವಿವಾಹ ಪಂಚಮಿಯ ಅಭಿಜಿತ್ ಮುಹೂರ್ತದಲ್ಲಿ ನಡೆಯಲಿದೆ. ಜತೆಗೆ ಇದು 9ನೇ ಸಿಖ್ ಗುರು ಗುರು ತೇಜ್ ಬಹದ್ದೂರ್ ಜಿ ಅವರ ಹುತಾತ್ಮ ದಿನವೂ ಹೌದು. ಅವರು 17ನೇ ಶತಮಾನದಲ್ಲಿ ನಿರಂತರವಾಗಿ 48 ಗಂಟೆಗಳ ಕಾಲ ಅಯೋಧ್ಯೆಯಲ್ಲಿ ಧ್ಯಾನ ಮಾಡಿದ್ದರುʼʼ ಎಂದು ಪ್ರಧಾನಿ ಮೋದಿ ಅವರ ಕಚೇರಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

3/5

ಧರ್ಮದ ಜಯದ ಸಂಕೇತ

ಹಿಂದೂ ನಂಬಿಕೆಯ ಪ್ರಕಾರ ಧ್ವಜ ಏರಿಸುವುದು ಅಧರ್ಮದ ವಿರುದ್ಧ ಧರ್ಮದ ಜಯದ ಸಂಕೇತ. ಈ ಧ್ವಜವು ಭಗವಾನ್ ರಾಮನ ತೇಜಸ್ಸು ಮತ್ತು ಶೌರ್ಯವನ್ನು ಸಂಕೇತಿಸುವ ಸೂರ್ಯನ ಚಿತ್ರವನ್ನು ಹೊಂದಿದೆ. ಅದರ ಮೇಲೆ 'ಓಂ' ಅನ್ನು ಕೆತ್ತಲಾಗಿದೆ.

4/5

ಏಕತೆಯ ಸಂದೇಶ

"ಪವಿತ್ರ ಕೇಸರಿ ಧ್ವಜವು ಘನತೆ, ಏಕತೆ ಮತ್ತು ಸಾಂಸ್ಕೃತಿಕ ಸಂದೇಶವನ್ನು ರವಾನಿಸುತ್ತದೆ. ಇದು ರಾಮ ರಾಜ್ಯದ ಆದರ್ಶಗಳನ್ನು ಸಾಕಾರಗೊಳಿಸಲು ನೆರವಾಗುತ್ತದೆ" ಎಂದು ಪ್ರಧಾನಿ ಮೋದಿ ಅವರ ಕಚೇರಿ ತಿಳಿಸಿದೆ. ಸಾಂಪ್ರದಾಯಿಕ ಉತ್ತರ ಭಾರತದ ನಾಗರ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾದ ದೇಗುಲದ 'ಶಿಖರ'ದ ಮೇಲೆ ಧ್ವಜವನ್ನು ಅಳವಡಿಸಲಾಗುತ್ತದೆ.

5/5

ಭಾರಿ ವಾಹನಗಳಿಗೆ ನಿಷೇಧ

ಈಗಾಗಲೇ ಭಾರಿ ವಾಹನಗಳು ಅಯೋಧ್ಯೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ದೇವಸ್ಥಾನದ ಸಮೀಪ ವಾಹನಗಳ ದಟ್ಟಣೆ ನಿಯಂತ್ರಿಸಲು ಹಲವು ಕಡೆ ಸಂಚಾರ ಮಾರ್ಗವನ್ನು ಬದಲಾಯಿಸಲಾಗಿದೆ. ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ತಿಳಿಸಿದೆ.